Asianet Suvarna News Asianet Suvarna News

Vir Chakra: ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ ಇಂದು ಪ್ರಶಸ್ತಿ ಪ್ರದಾನ!

*F-16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್
*ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದ ಅಭಿನಂದನ್‌
*ಅಭಿನಂದನ್​ ರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದ ಭಾರತ
*ಈ ಹಿಂದೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿದ್ದ ಭಾರತ ಸರ್ಕಾರ
 

Wing Commander Abhinandan to get Vir Chakra today mnj
Author
Bengaluru, First Published Nov 22, 2021, 11:31 AM IST

ನವದೆಹಲಿ(ನ.22): ಫೆಬ್ರವರಿ 2019 ರಲ್ಲಿ ವೈಮಾನಿಕ ಯುದ್ಧದಲ್ಲಿ ಪಾಕಿಸ್ತಾನದ ಎಫ್ -16 (F-16) ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ (Wing Commander Abhinandan Varthaman) ಅವರಿಗೆ ಸೋಮವಾರ, ನವೆಂಬರ್ 22 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರು ವೀರ ಚಕ್ರವನ್ನು (Vir Chakra) ಪ್ರದಾನ ಮಾಡಿದ್ದಾರೆ. ಅಭಿನಂದನ್  ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್ (Mig-21) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತೀಯ ವಾಯುಪಡೆಯು ಈ ಹಿಂದೆ ಯುದ್ಧ ವೀರ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿತ್ತು.

ಅವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ F-16 ಅನ್ನು ಹೊಡೆದುರುಳಿಸಿದರು ಆದರೆ ಅವರ ವಿಮಾನವನ್ನು ಶತ್ರು ಪಡೆಗಳು ಹೊಡೆದುರುಳಿಸಿದ ನಂತರ ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಪಡೆಗಳು ವಾಯುದಾಳಿ ನಡೆಸಿದ ಮರುದಿನವೇ, ವಾಯುಪಡೆ ವಿಮಾನದ ಪತನದ ಕಾರಣ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರು ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದರು. ಇಂತಹ ಬಂಧನದಿಂದ ಅಭಿನಂದನ್‌ ಅವರನ್ನು ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆಯ ಅನ್ವಯ ಅಂದಿನ ಭಾರತೀಯ ಗುಪ್ತಚರ ದಳದ (ರಾ) ಮುಖ್ಯಸ್ಥ ಅನಿಲ್‌ ಧಸ್ಮಾನಾ ನೀಡಿದ ಒಂದು ಖಡಕ್‌ ಸಂದೇಶ.

 

 

2019 ಫೆಬ್ರವರಿ 26ರಂದು ಬಾಲಾಕೋಟ್‌ ವಾಯುದಾಳಿ 

2019 ಫೆಬ್ರವರಿ 26ರಂದು ಬಾಲಾಕೋಟ್‌ ವಾಯುದಾಳಿ ನಡೆಯಿತು. ಮರುದಿನ ಅಭಿನಂದನ್‌ ಅವರಿದ್ದ ಮಿಗ್‌-21 ಬೈಸನ್‌ ಯುದ್ಧವಿಮಾನವನ್ನು ಪಾಕಿಸ್ತಾನವು ಗಡಿ ನಿಯಂತ್ರಣ ರೇಖೆಯಲ್ಲಿ ಹೊಡೆದುರುಳಿಸಿತು. ಆಗ ಅಭಿನಂದನ್‌ ಅವರು ವಿಮಾನದಿಂದ ಹಾರಿದಾಗ ಅಚಾನಕ್ಕಾಗಿ ಪಾಕಿಸ್ತಾನದ ನೆಲದ ಮೇಲೆ ಹೋಗಿ ಬಿದ್ದರು. ಇವರನ್ನು ಪಾಕಿಸ್ತಾನದ ಜನರು ಹಿಡಿದು ಪಾಕಿಸ್ತಾನದ ಸೇನೆಗೆ ಒಪ್ಪಿಸಿದ್ದರು. ಅಭಿನಂದನ್‌ ತನ್ನ ವಶದಲ್ಲಿರುವಾಗ ಪಾಕಿಸ್ತಾನವು ಅವರ ವಿಡಿಯೋವೊಂದನ್ನು ಬಿಡುಗಡೆ ಮಾಡಿತು. ದೃಶ್ಯವೊಂದರಲ್ಲಿ ಅವರ ಕಣ್ಣಿಗೆ ಬಟ್ಟೆಕಟ್ಟಲಾಗಿತ್ತು. ಅವರು ರಕ್ತಸಿಕ್ತ ಸ್ಥಿತಿಯಲ್ಲಿದ್ದರು. ಈ ವೇಳೆ ಪಾಕಿಸ್ತಾನದ ಸೇನಾಧಿಕಾರಿಗಳು ಕೆಲವು ಪ್ರಶ್ನೆ ಕೇಳಿದಾಗ ಅಭಿನಂದನ್‌ ತಾಳ್ಮೆಯಿಂದಲೇ ಉತ್ತರಿಸಿದ್ದುದು ಕಂಡುಬಂತ್ತು. ಆದರೆ ಪಾಕಿಸ್ತಾನದ ಮೇಲೆ ಭಾರತ ಜಾಗತಿಕವಾಗಿ ಒತ್ತಡ ಹೇರಿದ್ದರಿಂದ ಅಭಿನಂದನ್​ ರನ್ನು ಸುರಕ್ಷಿತವಾಗಿ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿತ್ತು.

Wing Commander Abhinandan to get Vir Chakra today mnj

ಮಿಗ್‌ನಿಂದ ಎಫ್‌-16 ಉರುಳಿಸಿ ಅಭಿನಂದನ್‌ ‘ವಿಶ್ವ ದಾಖಲೆ’!

ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ದಾಟಿ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಅತ್ಯಾಧುನಿಕ ಎಫ್‌-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಬಗ್ಗೆ ನಿವೃತ್ತ ವಾಯುಪಡೆ ಅಧಿಕಾರಿಗಳು ಗುಣಗಾನ ಮಾಡಿದ್ದರು. ಎಫ್‌-16ನಂತಹ ವಿಮಾನವನ್ನು ಮಿಗ್‌ನಂತಹ ಹಳೆಯ ವಿಮಾನ ಪತನಗೊಳಿಸಿದ ನಿದರ್ಶನ ವಿಶ್ವದಲ್ಲಿ ಪ್ರಾಯಶಃ ಇದೇ ಮೊದಲು ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್‌ ಆಕ್ರೋಶ!

ಭಾರತೀಯ ವಾಯುಪಡೆಯಲ್ಲಿರುವ ಮಿಗ್‌-21 ವಿಮಾನಗಳು 1960ರ ದಶಕದ ಮಾಡೆಲ್‌ಗಳು. ಅವನ್ನು ಭಾರತ ಮೇಲ್ದರ್ಜೆಗೇರಿಸಿ ಇನ್ನೂ ಬಳಸುತ್ತಿದೆ. ಆದರೆ ಪಾಕಿಸ್ತಾನದ ಬತ್ತಳಿಕೆಯಲ್ಲಿರುವ ಎಫ್‌-16 ಅತ್ಯಾಧುನಿಕ ಸೌಲಭ್ಯ ಹೊಂದಿದ ವಿಮಾನಗಳು. ಅಂತಹ ವಿಮಾನವನ್ನೇ ಅಭಿನಂದನ್‌ ಅವರು ಹೊಡೆದುರುಳಿಸಿದ್ದರು. ಭಾರತದ ವಾಯುಪಡೆಯಲ್ಲಿ ಮಹತ್ವದ ಸ್ಥಾನ ಪಡೆದಿದ್ದ ಮಿಗ್‌ 27 ಯುದ್ಧ ವಿಮಾನಗಳು ಅಧಿಕೃತವಾಗಿ ಸೇವೆಯಿಂದ 2019ರ ಡಿಸೆಂಬರ್‌ 27ಕ್ಕೆ ತಮ್ಮ ಅಂತಿಮ ಹಾರಾಟ ನಡೆಸಿವೆ.

Follow Us:
Download App:
  • android
  • ios