ದಿನಕ್ಕೆ ಒಂದು ಲಕ್ಷ ಗಳಿಸೋ ಯೋಜನೆ ತಿಳಿಸಿದ್ರಾ ಸುಧಾ ಮೂರ್ತಿ? ವೈರಲ್‌ ವಿಡಿಯೋದಲ್ಲಿ ಅವ್ರು ಹೇಳಿದ್ದೇನು?

ದಿನಕ್ಕೆ ಒಂದು ಲಕ್ಷ ಗಳಿಸೋ ಯೋಜನೆ ತಿಳಿಸಿದ್ರಾ ಸುಧಾ ಮೂರ್ತಿ? ವೈರಲ್‌ ಆಗ್ತಿರೋ ವಿಡಿಯೋದ ಅಸಲಿಯತ್ತೇನು? ನಿಜವಾಗಿಯೂ ಅದರಲ್ಲಿ ಇರುವುದು ಏನು? 
 

Fact Check: Sudha Murthy Deepfake Video Shared To Promote Fraudulent Investment Scheme suc

ಇತ್ತೀಚಿನ ದಿನಗಳಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗುವ ಫೋಟೋಗಳು, ವಿಡಿಯೋಗಳನ್ನು ನಂಬುವುದೇ ಕಷ್ಟವಾದಂಥ ಸ್ಥಿತಿ ನಿರ್ಮಾಣವಾಗಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲಾ, ಅದರ ದುರುಪಯೋಗಗಳೇ ಆಗುತ್ತಿರುವುದು ಕಂಡು ಬರುತ್ತಿದೆ. ವೈರಲ್‌ ಆಗುವುದನ್ನೆಲ್ಲಾ ನಂಬುವ ದೊಡ್ಡ ವರ್ಗವೇ ಇದೆ. ಅದು ಫೇಕ್ ಎಂದು ಕೆಲವೊಮ್ಮೆ ತಿಳಿದಿದ್ದರೂ, ಆ ವಿಡಿಯೋದಲ್ಲಿ ಇರುವವರನ್ನು ಕಂಡರೆ ಆಗಿಬರುವುದಿಲ್ಲ ಎಂದ ತಕ್ಷಣ, ಉದ್ದೇಶಪೂರ್ವಕವಾಗಿ ಅದನ್ನು ವೈರಲ್‌ ಮಾಡುವ ವರ್ಗವೂ ಇದೆ. ಆದ್ದರಿಂದ ಏನೇ ವಿಡಿಯೋ ನೋಡುವ ಮುನ್ನ, ಅದರ ಸತ್ಯಾಂಶವನ್ನು ಅರಿತು ಮುಂದೆ ಹೆಜ್ಜೆ ಇಡುವ ಅಗತ್ಯವಿದೆ. ಅದರಲ್ಲಿಯೂ ದುಡ್ಡು ಮಾಡುವ ವಿಡಿಯೋ ನೋಡಿ ಮೋಸ ಹೋಗುವವರೇ ಹೆಚ್ಚು. ಇನ್ನು ಖುದ್ದು ಸುಧಾ ಮೂರ್ತಿಯಂಥವರೇ ಇದನ್ನು ಹೇಳಿದ್ದಾರೆ ಎಂದುಬಿಟ್ಟರೆ? ಅದನ್ನು ಯಾರಾದರೂ ನಂಬುತ್ತಾರೆ.ಕೆಲ ದಿನಗಳ ಹಿಂದೆ ನಾರಾಯಣ ಮೂರ್ತಿ ಅವರ ಡೀಪ್ ಫೇಕ್ ವಿಡಿಯೋ ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ ಜನರು. 

ಆದ್ದರಿಂದ ವಿಡಿಯೋಗಳನ್ನು ನಂಬುವ ಮೊದಲು ವಿಡಿಯೋದಲ್ಲಿ ಇರುವ ವ್ಯಕ್ತಿಗಳ ತುಟಿಗಳನ್ನು ನೋಡಿ. ಅವರು ಹೇಳುವ ಮಾತಿಗೂ ಅವರ ತುಟಿಗಳ ಚಲನೆಗೂ ಮ್ಯಾಚ್‌ ಆಗತ್ತಾ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ಏಕೆಂದರೆ, ಈಗ ಯಾವುದೇ ಗಣ್ಯರ ಧ್ವನಿಗಳನ್ನು ಎಐ ಮೂಲಕ ಅನುಸರಿಸುವುದು ಸುಲಭ. ಆದರೆ ತುಟಿಯ ಚಲನ ವಲನವನ್ನು ಫೇಕ್‌ ಮಾಡಲು ಬರುವುದಿಲ್ಲ. ಇದೀಗ ಸುಧಾ ಮೂರ್ತಿ ಅವರ ಫೇಕ್‌ ವಿಡಿಯೋ ಒಂದು ವೈರಲ್ ಆಗುತ್ತಿದೆ. ಅದರಲ್ಲಿ ಅವರು,  ದಿನವೊಂದಕ್ಕೆ ಒಂದು ಲಕ್ಷ ರೂಪಾಯಿ ಹೇಗೆ ಗಳಿಸಬಹುದು ಎನ್ನುವುದನ್ನು ಹೇಳಿರುವಂತಿದೆ. ಈ ವಿಡಿಯೋ ಸಕತ್‌ ವೈರಲ್ ಆಗುತ್ತಿದೆ.  ಫೇಸ್‌ಬುಕ್‌ ಖಾತೆದಾರರರೊಬ್ಬರು 3.34 ಸೆಕೆಂಡ್‌ಗಳನ್ನು ಒಳಗೊಂಡಿರುವ  ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಆತನಿಗೆ ಶೇಕ್‌ಹ್ಯಾಂಡ್‌ ಮಾಡ್ದೆ: ನನ್ನ ಕೈಯಿಂದ ಬಳ ಬಳ ಎಂದು ರಕ್ತ ಸೋರಲು ಶುರುವಾಯ್ತು! ಆ ಘಟನೆ ನೆನೆದ ಅಕ್ಷಯ್ 

 ಇದರಲ್ಲಿ ಸುಧಾ ಮೂರ್ತಿ ಅವರ ದನಿಯೂ ಇದೆ. ದಿನವೊಂದಕ್ಕೆ ಕನಿಷ್ಠ  ಒಂದು ಲಕ್ಷ ರೂಪಾಯಿ ಗಳಿಸಲು ‘ಕ್ವಾಂಟ್ರಮ್‌ ಎಐ’ ಪ್ರೋಗ್ರಾಂನ್ನು ಅಭಿವೃದ್ಧಿ ಪಡೆಸಿರುವುದಾಗಿ ಇವರು ಹೇಳಿದಂತೆ ಇದೆ.  ಈ ಯೋಜನೆಯನ್ನು ಉಪಯೋಗ ಮಾಡಿಕೊಳ್ಳಿ. ಇದರ ಪ್ರತಿಯಾಗಿ ನಾವು ಏನನ್ನೂ ಬಯಸಿವುದಿಲ್ಲ. ಇದು ಮೋಸವಲ್ಲ ಎಂದಿದ್ದಾರೆ.  ಸಾಫ್ಟ್‌ವೇರ್‌ ಬಗ್ಗೆ ಮಾತನಾಡಲಾಗಿದ್ದು,  ಕ್ವಾಂಟ್ರಮ್‌ ಎಐ ಪ್ರೋಗ್ರಾಂನ್ನು ಫೋನ್‌ ಅಥವಾ ಕಂಪ್ಯೂಟರ್‌ನಿಂದ ಮಾಡಬಹುದು. ಇದು ಕೃತಕ ಬುದ್ಧಿಮತ್ತೆ  ಆಧರಿತ ತಂತ್ರಜ್ಞಾನವನ್ನು ಒಳಗೊಂಡಿದೆ.  ಇದು ನಿಮ್ಮನ್ನು ಯಶಸ್ಸಿನ ಪಥದತ್ತ ಕೊಂಡೊಯ್ಯುತ್ತದೆ.  ಈ ಸೌಲಭ್ಯವನ್ನು ಪಡೆಯಲು ನೀವು ಮೊದಲು ಕ್ವಾಂಟ್ರಮ್‌ ಎಐ ವೆಬ್‌ಸೈಟ್‌ಗೆ ಹೋಗಿ ನಿಮ್ಮ ಅಗತ್ಯ ವಿವರಗಳನ್ನು ನಮೂದಿಸಬೇಕಾಗುತ್ತದೆ. ನಂತರ ಕಂಪನಿಯ ವೈಯಕ್ತಿಕ ವ್ಯವಸ್ಥಾಪಕರು ನಿಮ್ಮನ್ನು ಸಂಪರ್ಕಿಸಿ ನಿಮಗಿರುವ ಎಲ್ಲಾ ಸಂದೇಹಗಳಿಗೆ ಉತ್ತರಿಸಿ ನಿಮಗೆ ಫ್ಲಾಟ್‌ಫಾಮ್‌ಗೆ ಆಕ್ಸಿಸ್‌ ನೀಡುತ್ತಾರೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ.

ದನಿ ಕೂಡ ಸುಧಾ ಮೂರ್ತಿ ಅವರದ್ದೇ ಇದ್ದುದರಿಂದ ಇದನ್ನು ಹಲವರು ನಂಬಿದ್ದಾರೆ. ಆದರೆ ನೀವು ಇದರಲ್ಲಿ ಅವರ ತುಟಿಗಳ ಚಲನೆಯನ್ನು ನೋಡಿದರೆ ಇದು ಫೇಕ್ ವಿಡಿಯೋ ಎನ್ನುವುದು ಸುಲಭದಲ್ಲಿ ತಿಳಿಯುತ್ತದೆ. ಎಐ ಯಿಂದಲೇ ಈ ಡೀಪ್‌ ಫೇಕ್‌ ವಿಡಿಯೋ ರಚಿಸಲಾಗಿದೆ.  ನಿಜವಾದ ವಿಡಿಯೋ ಎಂದರೆ, ಇದು 2017ರದ್ದಾಗಿದೆ.  ಶ್ರೀಮತಿ ಜಮ್ನಾಬಾಯಿ ನರ್ಸೀ ಕ್ಯಾಂಪಸ್‌ನಲ್ಲಿ ಸುಧಾ ಮೂರ್ತಿ ಅವರು,  ಮಕ್ಕಳನ್ನು ಆಡಂಬರದಿಂದ ಬೆಳೆಸಿದರೆ ಏನೆಲ್ಲ ತೊಂದರೆ ಆಗುತ್ತದೆ ಎಂಬ ಕುರಿತು ಮಾತನಾಡಿದ್ದಾರೆ. ಅದನ್ನೇ ಬಳಸಿಕೊಂಡು, ಅವರ ಮಾತನ್ನು ಮ್ಯಾಚ್‌ ಮಾಡುವಂಥ ಸುಳ್ಳು ವಿಡಿಯೋ ಸೃಷ್ಟಿ ಮಾಡಲಾಗಿದೆ. ಆದ್ದರಿಂದ ಹಣಕ್ಕೆ ಸಂಬಂಧಿಸಿದ್ದೂ ಸೇರಿದಂತೆ ಯಾವುದೇ ವಿಡಿಯೋ - ಫೋಟೋ ನಂಬುವ ಮುನ್ನ ಇರಲಿ ಎಚ್ಚರ!

ಎಂಟು ವರ್ಷ ಕಿರಿಯ ಹಿಂದೂ ಯುವಕನ ಮದ್ವೆಯಾದ ನಟಿ ಕಿಶ್ವೆರ್‍‌: ಹೇಗಿದೆ ಲೈಫ್‌? ಅವರ ಬಾಯಲ್ಲೇ ಕೇಳಿ...

Latest Videos
Follow Us:
Download App:
  • android
  • ios