ರಿಪೇರಿಗೆ 90,000 ಬಿಲ್: ಶೋ ರೂಮ್ ಮುಂದೆಯೇ ಓಲಾ ಸ್ಕೂಟರ್‌ಗೊಂದು ಗತಿ ಮಾಡಿದ ಗ್ರಾಹಕ
ಓಲಾ ಸ್ಕೂಟರ್‌ನ ದುಬಾರಿ ರಿಪೇರಿ ಬಿಲ್‌ನಿಂದ ಕೋಪಗೊಂಡ ಗ್ರಾಹಕನೊಬ್ಬ ಶೋರೂಂ ಮುಂದೆಯೇ ಸ್ಕೂಟರ್‌ಗೆ ಹ್ಯಾಮರ್‌ನಿಂದ ಹೊಡೆದು ನಾಶಪಡಿಸಿದ್ದಾನೆ.
ಓಲಾ ಸ್ಕೂಟರ್ ಬಿಡುಗಡೆಯಾಗಿ ಸುಮಾರು 4 ತಿಂಗಳುಗಳೇ ಕಳೆದಿವೆ. ಕೆಲವರು ಓಲಾ ಸ್ಕೂಟರ್ ಕಾರ್ಯಕ್ಷಮತೆಯನ್ನು ಹೊಗಳಿದರೆ ಮತ್ತೆ ಕೆಲವರು ಓಲಾ ಸ್ಕೂಟರ್‌ನ ಬ್ಯಾಟೆರಿ ಹಾಗೂ ಕಳಪೆ ಕಸ್ಟಮರ್ ಸೇವೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಂದು ಕಡೆ ಓಲಾ ಇಲೆಕ್ಟ್ರಿಕ್ ಸ್ಕೂಟರ್ ಕಸ್ಟಮರ್ ಒಬ್ಬರು ಸ್ಕೂಟರ್‌ನ ಕಾರ್ಯಕ್ಷಮತೆಯ ವೈಫಲ್ಯದಿಂದ ಮನನೊಂದು ಒಲಾ ಇಲೆಕ್ಟ್ರಿಕ್ ಸ್ಕೂಟರ್‌ನ ಶೋ ರೂಮ್ ಮುಂದೆಯೇ ಹ್ಯಾಮರ್‌ನಿಂದ ಹೊಡೆದು ಓಲಾ ಇಲೆಕ್ಟ್ರಿಕ್ ಸ್ಕೂಟರ್‌ನ್ನು ನಜ್ಜುಗುಜ್ಜು ಮಾಡಿ ಹಾನಿ ಮಾಡಿದ ಘಟನೆ ನಡೆದಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ವಿಟ್ಟರ್‌ನಲ್ಲಿ ಇದರ ವೀಡಿಯೋ ವೈರಲ್ ಆಗಿದ್ದು, ಯುವಕ ಹಾಗೂ ಆತನ ಮೂವರು ಸ್ನೇಹಿತರು ಸೇರಿಕೊಂಡು ಹ್ಯಾಮರ್ (ಗುದ್ದಲಿ)ನಿಂದ ಹೊಡೆದು ಓಲಾ ಸ್ಕೂಟರ್‌ನ್ನು ಹುಡಿ ಹುಡಿ ಮಾಡಿದ್ದಾರೆ. ರಿಪೇರಿಗೆ ಬಂದ ಓಲಾ ಇಲೆಕ್ಟ್ರಿಕ್ ಸ್ಕೂಟರನ್ನು ರಿಪೇರಿ ಮಾಡಿದ ಶೋ ರೂಮ್ ಅದಕ್ಕೆ 90 ಸಾವಿರ ರೂಪಾಯಿ ಬಿಲ್ ಮಾಡಿದೆ. 90 ಸಾವಿರ ರೂಪಾಯಿಗೆ ಇನ್ನು ಕೆಲ ಸಾವಿರ ಸೇರಿಸಿದರೆ ಹೊಸ ಓಲಾ ಇಲೆಕ್ಟ್ರಿಕ್ ಸ್ಕೂಟರನ್ನೇ ಕೊಳ್ಳಬಹುದು, ಹೀಗಿರುವಾಗ ರಿಪೇರಿಗೆಯೇ ಓಲಾ ಶೋರೂಮ್ ಇಷ್ಟೊಂದು ದುಬಾರಿ ಶುಲ್ಕ ವಿಧಿಸಿದ್ದನ್ನು ನೋಡಿ ಸಿಟ್ಟಿಗೆದ್ದ ಓಲಾ ಸ್ಕೂಟರ್‌ನ ಗ್ರಾಹಕ ಓಲಾ ಇಲೆಕ್ಟ್ರಿಕ್ ಶೋ ರೂಮ್ ಮುಂದೆಯೇ ಓಲಾ ಸ್ಕೂಟರನ್ನು ಅಡ್ಡ ಮಲಗಿಸಿ ಅದನ್ನು ಹ್ಯಾಮರ್‌ನಿಂದ ಬಡಿದು ಹುಡಿ ಹುಡಿ ಮಾಡಿದ್ದಾರೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 9 ಲಕ್ಷಕ್ಕೂ ಹೆಚ್ಚು ಜನ ಈ ವೀಡಿಯೋ ವೀಕ್ಷಿಸಿದ್ದಾರೆ. ಅಲ್ಲದೇ ಅನೇಕರು ಓಲಾ ಸ್ಕೂಟರ್ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ.
ಓಲಾದ ಕಳಪೆ ಗ್ರಾಹಕ ಸೇವಾ ಸೌಲಭ್ಯದ ಬಗ್ಗೆ ಇತ್ತೀಚೆಗಷ್ಟೇ ಖ್ಯಾತ ಕಾಮಿಡಿಯನ್ ಕುನಾಲ್ ಕಮ್ರಾ ಅವರು ಓಲಾ ಸಿಇಒ ಭವಿಷ್ ಅಗರ್ವಾಲ್ ಅವರನ್ನು ಟೀಕಿಸಿ ಗಮನ ಸೆಳೆದಿದ್ದರು. ಓಲಾ ಸರ್ವೀಸ್ ಕೇಂದ್ರದಲ್ಲಿ ನಿಲುಗಡೆ ಮಾಡಿರುವ ಸ್ಕೂಟರ್‌ಗಳ ಸಮೂಹದ ಚಿತ್ರವನ್ನು ಕಮ್ರಾ ಹಂಚಿಕೊಂಡಿದ್ದು, ಮಾರಾಟದ ನಂತರ ಸಂಸ್ಥೆ ನೀಡುವ ಬೆಂಬಲದ ಗುಣಮಟ್ಟವನ್ನು ಪ್ರಶ್ನೆ ಮಾಡಿದ್ದರು. ಭಾರತೀಯ ಗ್ರಾಹಕರು ಈ ವಿಚಾರದ ಬಗ್ಗೆ ತಮ್ಮ ಧ್ವನಿ ಎತ್ತುವರೆ?, ಅವರು ಇದಕ್ಕೆ ಅರ್ಹರೇ ಬುತೇಕ ದ್ವಿಚಕ್ರ ವಾಹನಸವಾರರು ದಿನಗೂಲಿ ಕೆಲಸ ಮಾಡುವವರಾಗಿದ್ದಾರೆ ಎಂದು ಕುನಾಲ್ ಕಮ್ರಾ ಟ್ವಿಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಒಲಾ ಸಿಇಒ ಭವಿಷ್ ಅಗರ್ವಾಲ್, ಕುನಾಲ್ ಕಮ್ರಾ ಪೇಯ್ಡಿ ಪ್ರಮೋಷನ್ ಮಾಡ್ತಿದ್ದಾರೆ ಎಂದು ಅವರನ್ನು ಟೀಕೆ ಮಾಡಿದ್ದರು. ನೀವು ತುಂಬಾ ಕಾಳಜಿ ವಹಿಸುತ್ತಿರುವುದರಿಂದ ಬನ್ನಿ ನಮಗೆ ಸಹಾಯ ಮಾಡಿ, ಪೇಯ್ಡ್ ಟ್ವಿಟ್‌ಗಳಿಗೆ ನಿಮಗೆ ಸಿಗುವುದಕ್ಕಿಂತ ಹೆಚ್ಚು ಹಣವನ್ನು ನಾನು ನೀಡುತ್ತೇನೆ ಅಥವಾ ನಿಮ್ಮ ವಿಫಲವಾದ ಕಾಮಿಡಿ ಕೆರಿಯರ್‌ಗಿಂತಲೂ ಹೆಚ್ಚು ಹಣವನ್ನು ನಾನು ನಿಮಗೆ ಕೊಡುತ್ತೇನೆ ಅಥವಾ ಬಾಯಿಮುಚ್ಚಿ ಸುಮ್ಮನೇ ಕುಳಿತುಕೊಳ್ಳಿ ಹಾಗೂ ನಾವು ನಮ್ಮ ನಿಜವಾದ ಗ್ರಾಹಕರ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಗಮನ ನೀಡಲು ಬಿಡಿ ಎಂದೆಲ್ಲಾ ಉದ್ಧಟತನದ ಮಾತನಾಡಿದ್ದರು.
ಆದರೆ ಈಗ ಈ ವೀಡಿಯೋದಿಂದ ಕಾಮಿಡಿಯನ್ ಕುನಾಲ್ ಕಮ್ರಾ ಹೇಳಿದ್ದು, ಸತ್ಯ ಎಂಬುದು ಸಾಬೀತಾಗಿದೆ. ಇನ್ನು ಈ ವೈರಲ್ ಆದ ವೀಡಿಯೋ ನೋಡಿದ ಅನೇಕರು ಓಲಾ ಸ್ಕೂಟರ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ. ಅನೇಕರು ಓಲಾ ಸ್ಕೂಟರನ್ನು ಕೊಳ್ಳದೇ ಇರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೇ ಸರಿಯಾದ ರಿವಿವ್ ನೀಡುತ್ತಿರುವ ಎಲ್ಲರನ್ನು ಕಳ್ಳರು, ಪೇಯ್ಡ್ ಪ್ರಮೋಷನ್ ಮಾಡುವವರು ಎಂದು ಕರೆಯದಿರುವಂತೆ ಜನ ಸೂಚಿಸಿದ್ದಾರೆ. ಜನರ ಹಣದ ಮೇಲೆ ನಿಮಗೆ ನಿಜವಾಗಿಯೂ ಕಾಳಜಿ ಇದೆಯೇ ಎಂದು ಮತ್ತೆ ಕೆಲವರು ಪ್ರಶ್ನೆ ಮಾಡಿದ್ದಾರೆ.