Asianet Suvarna News Asianet Suvarna News

New Car Launch: ಅಪ್‌ಡೇಟ್‌ಗಳೊಂದಿಗೆ ರಸ್ತೆಗಿಳಿಯಲಿದೆ ಹೊಸ ಮಾರುತಿ ವಿಟಾರಾ ಬ್ರೆಜಾ

ಮಾರುತಿ ಕಂಪನಿಯ ಜನಪ್ರಿಯ ಎಸ್‌ಯುವಿ ವಿಟಾರಾ ಬ್ರೆಜಾ ಹೊಸ ಅಪ್‌ಡೇಟ್‌ಗಳೊಂದಿಗೆ ಮುಂದಿನ ವರ್ಷ ಲಾಂಚ್ ಆಗಲಿದೆ. ಈಗ ಲೀಕ್ ಆಗಿರುವ ಕೆಲವು ಫೋಟೋಗ್ರಾಫ್‌ಗಳ ಪ್ರಕಾರ, ಕಂಪನಿಯ ಸಾಕಷ್ಟು ಪರಿಷ್ಕೃತ ವಿನ್ಯಾಸವನ್ನು ಬ್ರೆಜಾಗೆ ನೀಡುತ್ತಿದ್ದು, ಹೊಸ ಲುಕ್‌ನಲ್ಲಿ ಅದು ಕಂಗೊಳಿಸಲಿದೆ.

Maruti is working on a new Vitara Brezza SUV and photos leaked
Author
Bengaluru, First Published Nov 22, 2021, 4:06 PM IST
  • Facebook
  • Twitter
  • Whatsapp

ಮಾರುತಿ ಸುಜುಕಿ ಇಂಡಿಯಾ (Maruti Suzuki India) ಭಾರತದ ಅತಿ ದೊಡ್ಡ ಕಾರ್ ತಯಾರಿಕಾ ಕಂಪನಿಯಾಗಿದೆ.ಕಾರಿನ ಮೈಲೇಜ್ ಹಾಗೂ ಕಡಿಮೆ ದರಕ್ಕೆ ಕಾರುಗಳು ಸಿಗುವುದರಿಂದ ಹೆಚ್ಚಿನ ಜನರು ಮಾರುತಿ ಕಾರುಗಳಿಗೆ ಭಾರತದಲ್ಲಿ ಮಾರು ಹೋಗಿದ್ದಾರೆ. ಹಾಗಾಗಿಯೇ ಕಂಪನಿ, ಭಾರತದ ಅತಿ ದೊಡ್ಡ ಕಾರು ತಯಾರಿಕಾ ಕಂಪನಿಯಾಗಿ ಹೊರ ಹೊಮ್ಮಿದೆ. ಈ ಕಂಪನಿಯ ವಿಟಾರಾ ಬ್ರೆಜಾ (Vitara Brezza) ಅತ್ಯಂತ ಯಶಸ್ವಿ ಎಸ್‌ಯುವಿ (SUV) ಕಾರ್ ಆಗಿದ್ದು, ಸಾಕಷ್ಟು ಜನರು ಈ ಕಾರನ್ನು ಬಳಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ವಿಟಾರಾ ಬ್ರೆಜಾ ಕಾರಿನ ಫೇಸ್‌ಲಿಫ್ಟ್ ವರ್ಷನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈಗಾಗಲೇ ಕಂಪನಿಯು ಈ ಹೊಸ ಬ್ರೆಜಾ ಎಸ್‌ಯುವಿ ಸಂಬಂಧ ಕೆಲಸಮ ಮಾಡುತ್ತಿದ್ದ, ಕಾರಿನ ಕೆಲವು ಫೋಟೋಗ್ರಾಫ್‌ಗಳು ಆನ್‌ಲೈನ್‌ನಲ್ಲಿ ಸೋರಿಕೆಯಾಗಿದ್ದು, ಗಮನ ಸೆಳೆಯುತ್ತಿವೆ. ಈ ಫೋಟೋಗ್ರಾಫ್‌ಗಳ ಪ್ರಕಾರ, ಹೊಸ ವಿಟಾರಾ ಬ್ರೆಜಾ ಸಂಪೂರ್ಣವಾಗಿ ಹೊಸ ರೂಪವನ್ನು ಪಡೆದುಕೊಂಡಿರುವ ಸಾಧ್ಯತೆ ಇದೆ. ಬಹಳಷ್ಟು ಬದಲಾವಣೆಗಳನ್ನು ಗುರುತಿಸಬಹುದು. ಹೊಸ  ಮಾರುತಿ ಸುಜುಕಿ ವಿಟಾರಾ ಬ್ರೆಜಾ (Maruti Suzuki Vitara Brezza) ಮುಂದಿನ ವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಮುಂಬರುವ ವರ್ಷದಲ್ಲಿ ಮಾರುತಿ ಕಂಪನಿ ಈ ಹೊಸ ವಿಟಾರಾ ಬ್ರೆಜಾ ಕಾರನ್ನು ಲಾಂಚ್ ಮಾಡಿದರೆ, ಅದು ಖಂಡಿತವಾಗಿಯೂ ಹುಂಡೈ ವೆನ್ಯು (Hyundai Venue), ಕಿಯಾ ಸೊನೆಟ್ (Kia Sonet), ಟಾಟಾ ನೆಕ್ಸಾನ್ (Tata Nexon), ನಿಸ್ಸಾನ್ ಮ್ಯಾಗ್ನೈಟ್ (Nissan Magnite), ರೆನೋ ಕೈಗರ್‌ (Renault Kiger) ಕಾರುಗಳಿಗೆ ಸಖತ್ ಪೈಪೋಟಿ ನೀಡಲಿದೆ ಎಂಬುದರಲ್ಲಿ ಯಾವುದೇ ಅನುಮಾನವೇ ಬೇಡ.

ಇತ್ತೀಚೆಗಷ್ಟೇ ಪ್ರಯೋಗಾರ್ಥವಾಗಿ ಈ ಹೊಸ ವಿಟಾರಾ ಬ್ರೆಜಾ (Vitara Brezza) ಎಸ್‌ಯುವಿ ರಸ್ತೆಗಳಲ್ಲಿ ಕಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಹೊಸ 2022ರ ವಿಟಾರ ಬ್ರೆಜಾ ಕಾರ್ ಮಾರುತಿ ಸುಜುಕಿ ಗ್ಲೋಬಲ್ ಸಿ ಪ್ಲಾಟ್‌ಫಾರ್ಮ್‌ನಲ್ಲಿ ತಯಾರಾಗುತ್ತಿದೆ ಎನ್ನಲಾಗಿದೆ. ಈ ಹೊಸ ತಲೆಮಾರಿನ  ಬ್ರೆಜಾ, ಹೈಬ್ರಿಡ್ ಟೆಕ್ನಾಲಜಿಯನ್ನು ಒಳಗೊಂಡಿರಲಿದೆ ಮತ್ತು ಪ್ರೀಮಿಯಂ ವೆರಿಯೆಂಟ್‌ನಲ್ಲಿ ಪೆಡಲ್ ಶಿಫ್ಟರ್ಸ್‌ಗಳನ್ನು ಪಡೆದುಕೊಳ್ಳಬಹುದು. ಕಾರಿನ ಬಾಡಿ ಪ್ಯಾನೆಲ್‌ ಮತ್ತು ಶೀಟ್ ಮೆಟಲ್ ಬದಲಾವಣೆ ಮೂಲಕ ಬ್ರೆಜಾ ಎಸ್‌ಯುವಿಗೆ ಹೊಸ ಲುಕ್ ನೀಡುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂಬುದು ಈ ಫೋಟೋಗ್ರಾಫ್‌ಗಳು ಖಚಿತಪಡಿಸುತ್ತವೆ. 

Toyota ಸಬ್ ಕಾಂಪಾಕ್ಟ್ ಕಾರ್ Aygo X ಅನಾವರಣ, ಪಂಚ್‌ಗೆ ಠಕ್ಕರ್

ಹೊಸ ಬ್ರೆಜಾ ಎಸ್‌ಯುವಿ ಮುಂಭಾಗದ ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಪರಿಷ್ಕೃತ ಹೊಸ ಫೆಂಡರ್ಸ್ ಮತ್ತು ಬಾನೆಟ್‌ ನೋಡಬಹುದು. ಹೆಡ್‌ಲ್ಯಾಂಪ್ಸ್(Headlamps) ಮತ್ತು  ಗ್ರಿಲ್‌ಗಳನ್ನು ಒಂದೇ ಘಟಕದಲ್ಲಿ ಸೇರ್ಪಡೆ ಮಾಡಿರುವುದನ್ನು ಕಾಣಬಹುದಾಗಿದ್ದು, ಅವುಗಳ ಮಧ್ಯೆ ಮ್ಯಾಟ್‌ಬ್ಲ್ಯಾಕ್‌ನ ಕೆಲವು  ಸಂಗತಿಗಳನ್ನು ಸೇರಿಸಲಾಗಿದೆ. ಮತ್ತೊಂದು ಗಮನಿಸಬೇಕಾದರ ಸಂಗತಿ ಎಂದರೆ, ಸುಜುಕಿ ಲೋಗೋ ಸುತ್ತ ಎರಡು ಕ್ರೋಮ್ ಪಟ್ಟಿಗಳಿರುವುದನ್ನು ನೋಡಬಹುದು. ಈ ಎಲ್ಲ ಸಂಗತಿಗಳು ಸೋರಿಕೆಯಾಗಿರುವ ಫೋಟೋಗಳಿಂದ ತಿಳಿದು ಬರುತ್ತದೆ.  ಹೊಸ ವಿಟಾರಾ ಬ್ರೆಜಾ ಕಾರಿನ ಮುಂಭಾಗದ ಬಂಪರ್‌ ಬುಲ್‌ಬಾರ್ ಕಾಣಬಹುದು.

Maruti is working on a new Vitara Brezza SUV and photos leaked

ಹೊಸ ಕಾರಿನ ಹಿಂಭಾಗದಲ್ಲಿ ಸುತ್ತುವ ಟೈಲ್ ಲ್ಯಾಂಪ್‌ಗಳನ್ನು ಈಗ ಬದಲಾದ ಟೈಲ್‌ಗೇಟ್‌ಗೆ ವಿಸ್ತರಿಸಲಾಗಿದೆ. ಬ್ರೆಜಾ ಎಂದು ಬರೆದಿರುವ ಲ್ಯಾಂಪ್‌ಗಳ ಕೆಳಗೆ ನಂಬರ್ ಪ್ಲೇಟ್ ಅನ್ನು ಅಳವಡಿಸಲಾಗಿದೆ ಮತ್ತು ಇದರಿಂದ ಕಾರಿನ ರಿಯರ್ ಪ್ರೊಫೈಲ್ ಹೆಚ್ಚು ಆಕರ್ಷಕವಾಗಿ ಕಾಣಲು ಕಾರಣವಾಗಿದೆ. ಹೊಸ ವಿಟಾರಾ ಬ್ರೆಜಾ ಹಿಂಭಾಗದ ಬಂಪರ್ ಕೂಡ ಹೊಸದು. ಜೊತೆಗೆ ಇದು ಸನ್‌ರೂಫ್ ಕೂಡ ಪಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಕಂಪನಿ ಯಾವುದೇ ಖಚಿತ ಮಾಹಿತಿಯನ್ನು ಈ ಸಂಬಂಧ ನೀಡಿಲ್ಲ. ಈಗ ಗೊತ್ತಾಗಿರುವ ಪ್ರಕಾರ, 2022ರ ಬ್ರೆಜಾ ಹೊಸ ಮಾದರಿ, ಅಪ್‌ಡೇಟ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯಲಿದೆ.

Haryana: ಸೋನಿಪತ್‌ ಜಿಲ್ಲೆಯಲ್ಲಿ ಮಾರುತಿಯ ಮತ್ತೊಂದು ಹೊಸ ಫ್ಯಾಕ್ಟರಿ

Follow Us:
Download App:
  • android
  • ios