ಪಂಜಾಬ್‌ನ 18 ವರ್ಷದ ಸೋಹಲ್‌ಪ್ರೀತ್ ಸಿಂಗ್ ಸಿಧು, ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಬದಲು ಹೈನುಗಾರಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ತಮ್ಮ 15ನೇ ವಯಸ್ಸಿನಲ್ಲಿ ಡೈರಿ ಫಾರ್ಮ್ ಆರಂಭಿಸಿದ ಅವರು, ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ವಿದೇಶದಲ್ಲಿ ಶಿಕ್ಷಣದ ಬದಲು ಹೈನುಗಾರಿಕೆಯಲ್ಲಿ ಆಸಕ್ತಿ
ಅನೇಕ ಯುವ ಸಮೂಹಕ್ಕೆ ಶಿಕ್ಷಣದ ನಂತರ ಮುಂದೇನು ಎಂಬ ಕಲ್ಪನೆಯೂ ಇರುವುದಿಲ್ಲ. ಇನ್ನೂ ಕೆಲವರು ಶಿಕ್ಷಣದ ನಂತರ ವಿದೇಶದಲ್ಲಿ ಉದ್ಯೋಗ ಅರಸುವ ಆಸೆಯಲ್ಲಿ ಇರುತ್ತಾರೆ. ಆದರೆ ಈ 18 ವರ್ಷದ ಹುಡುಗ ಇಂಜಿನಿಯರ್ ಡಾಕ್ಟರ್ ಆಗುವ ಕನಸು ಬಿಟ್ಟು ಹೈನುಗಾರಿಕೆಯಲ್ಲಿಯೇ ಜೀವನ ಕಂಡು ಕೊಂಡಿದ್ದು, 18ರ ಹರೆಯದಲ್ಲೇ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾನೆ. ಹೌದು ಪಂಜಾಬ್‌ನ ಸೋಹಲ್‌ಪ್ರೀತ್ ಸಿಂಗ್ ಸಿಧು ಅವರಿಗೆ ಈಗ 18ರ ಹರೆಯ. ಪಂಜಾಬ್‌ನ ಬಹುತೇಕ ಹರೆಯದ ಮಕ್ಕಳ ಆಸೆಯಂತೆ ಅವರೇನು ವಿದೇಶಿ ವಿವಿಗಳಿಗೆ ಅರ್ಜಿಯಾಗಲಿ, ಶಿಕ್ಷಣಕ್ಕಾಗಿ ಸಾಲವನ್ನಾಗಲಿ ಮಾಡಿಲ್ಲ. ಅದರ ಬದಲು ಅವರು ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳನ್ನು ಕೇವಲ ಎಮ್ಮೆಗಳ ಸಾಕಾಣೆಯಿಂದಲೇ ಗಳಿಸುತ್ತಿದ್ದಾರೆ. ತಮ್ಮ 15ರ ಹರೆಯದಲ್ಲೇ ಎಮ್ಮೆಗಳನ್ನು ಅವಲಂಬಿಸಿದೆ ಡೈರಿ ಫಾರ್ಮ್ ಆರಂಭಿಸಿರುವ ಅವರು ಅದರಿಂದ ಬಂದ ಪ್ರತಿ ಹಣವನ್ನು ಅದಕ್ಕೆ ವಿನಿಯೋಗಿಸಿ ಪಂಜಾಬ್‌ನ ಗ್ರಾಮೀಣ ಪ್ರದೇಶದ ದೊಡ್ಡ ಹೈನೋದ್ಯಮಿಯಾಗುವ ಕನಸಿನಲ್ಲಿ ಇದ್ದಾರೆ.
ತಿಂಗಳಿಗೆ 6 ಲಕ್ಷ ಆದಾಯ ಗಳಿಸುತ್ತಿರುವ ಯುವಕ
ಬರ್ನಲಾದ ಸೆಹ್ನಾ ಗ್ರಾಮದವರಾಗಿರುವ ಬಲ್ಬೀರ್ ಸಿಂಗ್ ಸಿಧು ಅವರ ಏಕೈಕ ಪುತ್ರನಾಗಿರುವ ಸೋಹಲ್‌ಪ್ರೀತ್ ಅವರು ಮುಕ್ತ ಶಾಲೆಯಲ್ಲಿ ಓದಿ 12 ನೇ ತರಗತಿ ಉತ್ತೀರ್ಣರಾಗಿದ್ದು,, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಪಶು ವೈದ್ಯಕೀಯ ಕೋರ್ಸ್‌ಗೆ ಸೇರಲು ನಿರ್ಧರಿಸಿದ್ದಾರೆ. ಸೋಹಲ್‌ಪ್ರೀತ್ ಅವರು ಆರಂಭದಲ್ಲಿ ಒಂದು ಹಸುವನ್ನು ಖರೀದಿಸುವುದಕ್ಕೆ ಮೊದಲಿಗೆ ಮನೆಯವರ ಮನವೊಲಿಸಿದರು. ಆ ಸಮಯದಲ್ಲಿ ಅವರ ಮನೆಯವರು ತಮ್ಮ ಸಣ್ಣ ಡೈರಿಯ ಭಾಗವಾಗಿ ಐದು ಎಮ್ಮೆಗಳನ್ನು ಹೊಂದಿದ್ದರು. 1.20 ಲಕ್ಷ ರೂಪಾಯಿ ನೀಡುವುದರೊಂದಿಗೆ ಅವರ ಮೊದಲ ಎಮ್ಮೆ ಖರೀದಿ ಆರಂಭವಾಯ್ತು. ಅವರು ತಾವಾಗಿಯೇ ಇದನ್ನು ನಿರ್ವಹಣೆ ಮಾಡುವುದಕ್ಕೆ ಶುರು ಮಾಡಿದರು. ಮೊದಲ ವರ್ಷದಲ್ಲಿ ಅವರು ಅದರಿಂದ ಗಳಿಸಿದ ಹಣವನ್ನು ಅವರು ಮತ್ತೆ ಅದರಲ್ಲೇ ಹೂಡಿಕೆ ಮಾಡುವ ಮೂಲಕ ಮತ್ತಷ್ಟು ಜಾನುವಾರುಗಳನ್ನು ಖರೀದಿ ಮಾಡಿದರು.
ಇದನ್ನೂ ಓದಿ: ಜೆಫ್ರಿ ಎಪ್‌ಸ್ಟೀನ್ ಫೈಲ್ಸ್‌ನಲ್ಲಿ ಕೇಳಿ ಬಂದಿರುವ ಭಾರತೀಯ ಮೂಲದ ಧಾರ್ಮಿಕ ಗುರು ಯಾರು?
ನಾನು ಬಾಲ್ಯದಿಂದಲೂ ಡೈರಿ ಫಾರ್ಮಿಂಗ್‌ನಲ್ಲಿ ಬಹಳ ಆಸಕ್ತಿ ಹೊಂದಿದ್ದೆ. ನನ್ನ ಕುಟುಂಬದವರು ಮನೆ ಖರ್ಚಿಗಾಗಿ ಹಸುಗಳನ್ನು ಸಾಕುತ್ತಿದ್ದರು. ಈಗ ಮೂರು ವರ್ಷಗಳ ನಂತರ ನಮ್ಮ ಬಳಿ 55 ಎಮ್ಮೆಗಳು, 15 ಹಸುಗಳು, 50 ಸಣ್ಣ ಕರುಗಳು ಇವೆ. ಒಟ್ಟು 120 ಪ್ರಾಣಿಗಳು ನಮ್ಮ ಬಳಿ ಇವೆ. ಅ 53 ಮುರ್ರಾ ಎಮ್ಮೆಗಳು, ಎರಡು ನೀಲಿ ರವಿ ಎಮ್ಮೆಗಳು, 12 ಹೋಲ್‌ಸ್ಟೈನ್ ಫ್ರೀಸಿಯನ್ (HF) ಹಸುಗಳು, ಎರಡು ಜೆರ್ಸಿ ಹಸುಗಳು ಮತ್ತು ಒಂದು ಸಹಿವಾಲ್ ಮುಂತಾದ ಪ್ರೀಮಿಯಂ ತಳಿಗಳಿವೆ, ಇವೆಲ್ಲವೂ ಹಾಲು ನೀಡುವ ಪ್ರಾಣಿಗಳು. ಮುಂದಿನ ವರ್ಷ ಹಲವಾರು ಎಮ್ಮೆಗಳು ಕರು ಹಾಕುವ ನಿರೀಕ್ಷೆಯಿದೆ ಮತ್ತು ಸೋಹಲ್‌ಪ್ರೀತ್ ಅಂದಾಜಿನ ಪ್ರಕಾರ ಆ ಹೊತ್ತಿಗೆ ಸುಮಾರು 100 ಪ್ರಾಣಿಗಳು ಹಾಲು ನೀಡಲು ಶುರು ಮಾಡುತ್ತವೆ. 500 ರಿಂದ 550 ಎಮ್ಮೆಗಳನ್ನು ಸಾಕುವುದು ನನ್ನ ಕನಸು ಎಂದು ಅವರು ಹೇಳಿದರು.
ಇದನ್ನೂ ಓದಿ: ಗಂಡನನ್ನು ಹಾಸಿಗೆಗೆ ತಳ್ಳಿ ಆತನ ಮೇಲೇರಿ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ
ಈ ಫಾರ್ಮ್‌ನಲ್ಲಿ ಪ್ರಸ್ತುತ ಯಾವುದೇ ಸಮಯದಲ್ಲಿ 50ರಿಂದ 55 ಎಮ್ಮೆಗಳು ಹಾಲು ಕರೆಯುವುದಕ್ಕೆ ಇರುತ್ತವೆ. 15 ರಿಂದ 20 ಎಮ್ಮೆಗಳು ಗರ್ಭ ಧರಿಸಿವೆ. ಜೊತೆಗೆ ಸೋಹಲ್‌ಪ್ರೀತ್ ಶೀಘ್ರದಲ್ಲೇ ತಮ್ಮ ಗಳಿಕೆಯಿಂದ ಇನ್ನೂ 30 ಎಮ್ಮೆಗಳನ್ನು ಖರೀದಿಸಲು ಯೋಜನೆ ರೂಪಿಸಿದ್ದಾರೆ. ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಲು ಬಯಸುವ ಅನೇಕ ಕುಟುಂಬಗಳಿಗಿಂತ ಭಿನ್ನವಾಗಿ, ಸೋಹಲ್‌ಪ್ರೀತ್ ತಮ್ಮ ನಿಲುವನ್ನು ಪೋಷಕರಿಗೆ ಮೊದಲೇ ಸ್ಪಷ್ಟಪಡಿಸಿದರು. ನಾನು ನನ್ನ ಹೆತ್ತವರಿಗೆ ಹೇಳಿದ್ದೆ, ನನ್ನನ್ನು ವಿದೇಶಕ್ಕೆ ಕಳುಹಿಸಲು ಹಣ ಖರ್ಚು ಮಾಡಬೇಡಿ. ನನ್ನ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೂಲಕ ಇಲ್ಲಿ ನನಗೆ ಬೆಂಬಲ ನೀಡಿ ಎಂದು ಅವರಿಗೆ ಹೇಳಿದ್ದೆ ಎಂದು ಹೇಳಿದರು.
ಆರಂಭದಲ್ಲಿ ಆತನ ಮಾತನ್ನು ನಾವು ನಂಬಲಿಲ್ಲ, ಆದರೆ ಆತನ ಆಸಕ್ತಿ ನಮಗೆ ಅವನೇನು ಎಂಬುದನ್ನು ಮನವರಿಕೆ ಮಾಡಿತು ಎಂದು ಆತನ ಪೋಷಕರು ಹೇಳಿದ್ದಾರೆ. ಪ್ರಸ್ತುತ ಇವರ ಫಾರ್ಮ್‌ನಲ್ಲಿ ದಿನಕ್ಕೆ 650ರಿಂದ 700 ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದನ್ನು ಅವರು ಬರ್ನಲ್‌ನಲ್ಲಿರುವ ಖಾಸಗಿ ಸಂಸ್ಥೆಗೆ ಮಾರುತ್ತಿದ್ದಾರೆ. ಎಮ್ಮೆ ಹಾಲನ್ನು ಲೀಟರ್‌ಗೆ 65ರಿಂದ 70 ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಹಾಗೂ ಹಸುವಿನ ಹಾಲಿಗೆ 28 ರಿಂದ 42 ರೂಪಾಯಿ ಸಿಗುತ್ತಿದೆ. ಬರೀ ಎಮ್ಮೆಗಳ ಹಾಲೇ ದಿನಕ್ಕೆ 400 ಲೀಟರ್ ಸಿಗುತ್ತದೆ. ಹೀಗಾಗಿ ತಿಂಗಳಿಗೆ 10 ಲಕ್ಷ ಮೌಲ್ಯದ ಹಾಲು ಮಾರಾಟವಾಗುತ್ತದೆ. ಅದರಲ್ಲಿ ಶೇಕಡಾ 40 ವೆಚ್ಚವಾಗಿದ್ದರೆ ಶೇಕಡಾ 60ರಷ್ಟು ಆದಾಯ ಬರುತ್ತದೆ.
ಆ ಆದಾಯವನ್ನು ನೇರವಾಗಿ ಡೈರಿಯಲ್ಲಿ ಮರು ಹೂಡಿಕೆ ಮಾಡಲಾಗಿದೆ ಈ ಕೆಲಸಗಳಿಗಾಗಿ ಆರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಮತ್ತು ಕೈಯಿಂದ ಮತ್ತು ಯಂತ್ರದಿಂದ ಹಾಲು ಕರೆಯಲಾಗುತ್ತದೆ. ಹಾಲು ಕರೆಯಲು ಮಾತ್ರ ದಿನಕ್ಕೆ ಸುಮಾರು ಮೂರು ಗಂಟೆಗಳು ಬೇಕಾಗುತ್ತದೆ ಎಂದು ಅವರು ಹೇಳಿದರು. ಆಹಾರ ಹಾಗೂ ಕಾರ್ಮಿಕರಿಗೆ ಮಾತ್ರ ಇಲ್ಲಿ ವೆಚ್ಚ ತಗುಲುತ್ತದೆ. ಅವುಗಳಿಗೆ ಬೇಕಾದ ಆಹಾರ ಮನೆಯಲ್ಲೇ ಸಿದ್ಧಗೊಂಡರೆ ಬಂದ ಹಣದಲ್ಲಿ ಶೇಕಡಾ 60 ಆದಾಯ ಸಂಪೂರ್ಣವಾಗಿ ನಿಮ್ಮದಾಗಿರುತ್ತದೆ ಎಂದು ಅವರು ಹೇಳಿದರು.


