ಮಧ್ಯಪ್ರದೇಶದಲ್ಲಿ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ದೈಹಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಪತಿಯೇ ರಹಸ್ಯವಾಗಿ ಚಿತ್ರೀಕರಿಸಿದ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪುರುಷರ ಮೇಲಿನ ಕೌಟುಂಬಿಕ ದೌರ್ಜನ್ಯದ ಬಗ್ಗೆ ಚರ್ಚೆಗೆ ಕಾರಣವಾಗಿದೆ.

ಗಂಡನ ಮೇಲೇರಿ ಕುಳಿತು ಹಲ್ಲೆ:

ಪುರುಷರು ಮಹಿಳೆಯರ ಮೇಲೆ ಮಾಡುವ ದೌರ್ಜನ್ಯದ ಬಗ್ಗೆ ಆಗಾಗ ವರದಿಯಾಗುತ್ತಿರುತ್ತದೆ. ಆದರೆ ಇಲ್ಲೊಂದು ಕಡೆ ಮಹಿಳೆಯೊಬ್ಬಳು ತನ್ನ ಗಂಡನ ಮೇಲೆ ಮಾರಣಾಂತಿಕವಾಗಿ ದೈಹಿಕ ಹಲ್ಲೆ ನಡೆಸಿದ್ದಾಳೆ. ಪತಿ ರಹಸ್ಯವಾಗಿ ಆಕೆಗೆ ತಿಳಿಯದೇ ಚಿತ್ರೀಕರಿಸಿದ ವೀಡಿಯೋದಲ್ಲಿ ಈ ದೃಶ್ಯ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಗಂಡನ ಮೇಲೆ ಅನುಕಂಪ ವ್ಯಕ್ತಪಡಿಸಿದ್ದು, ಮಹಿಳೆ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದ್ದು, ವೀಡಿಯೋ ನೋಡಿದ ಅನೇಕರು ದೌರ್ಜನ್ಯಕ್ಕೆ ಗಂಡು ಹೆಣ್ಣು ಎಂಬ ಬೇಧವಿಲ್ಲ, ಕೆಲವೊಮ್ಮೆ ಸಂತ್ರಸ್ತರು ಪುರುಷರು ಕೂಡ ಆಗಿರುತ್ತಾರೆ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ವೈರಲ್ ಆದ ವೀಡಿಯೋದಲ್ಲಿ ಮಧ್ಯಪ್ರದೇಶದ ಸತ್ನಾದ ವ್ಯಕ್ತಿ ತನ್ನ ಮೇಲೆ ನಡೆಯುತ್ತಿರುವ ಕೌಟುಂಬಿಕ ದೌರ್ಜನ್ಯದ ಕೃತ್ಯವನ್ನು ರಹಸ್ಯ ಕ್ಯಾಮರಾದ ಮೂಲ ಚಿತ್ರಿಸಿದ್ದಾನೆ. ವೀಡಿಯೋದಲ್ಲಿ ಗಂಡನನ್ನು ಹಾಸಿಗೆ ಮೇಲೆ ಕಡೆವಿದ ಹೆಂಡತಿ ಆತನ ಮೇಲೆ ಹೆಮ್ಮಾರಿಯಂತೆ ಕುಳಿತಿದ್ದು, ನಂತರ ಆತನ ಕೆನ್ನೆಗೆ ಹಿಗ್ಗಾಮುಗ್ಗಾ ಬಾರಿಸಿದ್ದಾಳೆ. ತನ್ನ ಎರಡು ಕೈಗಳನ್ನು ಬಳಸಿಕೊಂಡು ಆಕೆ ಅತನ ಎರಡು ಕೆನ್ನೆಗಳಿಗೆ ಏಕಕಾಲಕ್ಕೆ ಬಾರಿಸಿದ್ದು, ಒಂದು ಸಮಯದಲ್ಲಂತೂ ಆತ ಪ್ರಜ್ಞೆ ಕಳೆದುಕೊಂಡಂತೆ ಕಾಣುತ್ತಾನೆ.

ಸಾಮಾನ್ಯವಾಗಿ ಗಂಡ ಹೆಂಡತಿಗೆ ಹೊಡೆದರೆ ಬಿಡಿಸುವುದಕ್ಕೆ ಮನೆಯಲ್ಲಿ ಇದ್ದವರೆಲ್ಲರೂ ಓಡಿ ಬರುತ್ತಾರೆ. ಆದರೆ ದುರಾದೃಷ್ಟವಶಾತ್ ಇಲ್ಲಿ ಮಹಿಳೆ ಭೀಕರವಾಗಿ ಹಲ್ಲೆ ಮಾಡಿದರು ಆತನ ಸಹಾಯಕ್ಕೆ ಯಾರೂ ಬಂದಿಲ್ಲ, ಮಹಿಳೆಯೊಬ್ಬರು ಮೊದಲಿಗೆ ಆಕೆಯನ್ನು ಬಿಡಿಸುವುದಕ್ಕೆ ಪ್ರಯತ್ನಿಸಿದ್ದಾರೆ. ಅದರೆ ಉಗ್ರ ಸ್ವರೂಪಿಯಾದ ಆಕೆಯ ಅವತಾರ ನೋಡಿ ಅವರು ಅಲ್ಲಿಂದ ಸೀದಾ ಹೋಗಿದ್ದಾರೆ. ನಂತರ ಒಬ್ಬರು ಪುರುಷ ಮಗುವನ್ನು ಎತ್ತಿಕೊಂಡು ಅಲ್ಲಿಗೆ ಬಂದಿದ್ದು, ಅವರು ಕೂಡ ಈ ಹಲ್ಲೆಯನ್ನು ಮೂಕ ಪ್ರೇಕ್ಷಕರಂತೆ ನೋಡಿದ್ದಾರೆ.

ಇದನ್ನೂ ಓದಿ: ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ

ಸೋಶಿಯಲ್ ಮೀಡಿಯಾ ಪೋಸ್ಟ್ ಪ್ರಕಾರ, ಆ ವ್ಯಕ್ತಿ ತಾನು ದೀರ್ಘಕಾಲದಿಂದ ಅನುಭವಿಸಿಕೊಂಡು ಬಂದಂತಹ ದೈಹಿಕ ಮತ್ತು ಭಾವನಾತ್ಮಕ ದೌರ್ಜನ್ಯದಿಂದ ಬೇಸತ್ತು ಕಡೆಗೂ ಈ ವೀಡಿಯೋವನ್ನು ರೆಕಾರ್ಡ್ ಮಾಡುವುದಕ್ಕೆ ಮುಂದಾದರು. ತನಗೆ ಹೆಂಡತಿ ಬೆದರಿಕೆ ಹಾಕುತ್ತಾಳೆ, ತಾನು ಮಾತನಾಡಿದರೆ ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸುವುದಾಗಿ ಅವಳು ಹೆದರಿಸುತ್ತಾಳೆ ಎಂದು ಆತ ಹೇಳಿದ್ದಾಗಿ ವರದಿಯಾಗಿದೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅನೇಕರು ಆಗ್ರಹಿಸಿದರು. ಸಂತ್ರಸ್ತ ಪುರುಷನಾದಾಗ ಯಾರೂ ಸಹಾಯಕ್ಕೆ ಬರುವುದಿಲ್ಲ ಎಂಬುದು ವಿಚಿತ್ರ ಎಂದು ವೀಡಿಯೊ ನೋಡಿದವರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಲ್ಲಿ ಸ್ತ್ರಿ ಬದಲು ಪುರುಷ ಹಲ್ಲೆ ಮಾಡಿದ್ದರೆ ಗಂಟೆಗಳಲ್ಲಿ ಆತನ ಬಂಧನ ಆಗಿರುತ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ಕೌಡುಂಬಿಕ ದೌರ್ಜನ್ಯ ಅಲ್ಲ, ಇಲ್ಲಿ ರೆಫರಿ ಒಬ್ಬರು ಇಲ್ಲ ಅಷ್ಟೇ ಇದೊಂದು WWE ಸ್ಮ್ಯಾಕ್ ಡೌನ್ ಎಂದು ಒಬ್ಬರು ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ:ಮಗಳಿಗೆ ಮುಖ ತೋರಿಸಲು ಭಯ ಆಗ್ತಿದೆ: ನಾಯಿ ದಾಳಿಯಿಂದಾಗಿ ಮುಖ ಗುರುತಿಸದಷ್ಟು ಬದಲಾಯ್ತು ತಾಯಿಯ ನೋವಿನ ನೋಡಿ

Scroll to load tweet…