ಅಮೆರಿಕಾದ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಜಗತ್ತಿನ ಹಲವು ಖ್ಯಾತನಾಮರು ಭಾಗಿಯಾಗಿದ್ದಾರೆ ಎನ್ನಲಾದ ಜೆಫ್ರಿ ಎಪ್‌ಸ್ಟೀನ್ ಸೆ*ಕ್ಸ್ ಹಗರಣದ ದಾಖಲೆಗಳು ಒಂದೊಂದಾಗಿ ಬಿಡುಗಡೆಯಾಗುತ್ತಿದೆ ಈಗ ಭಾರತೀಯ ಮೂಲದ ಅಮೆರಿಕನ್ ಧಾರ್ಮಿಕ ಗುರು, ದೀಪಕ್ ಚೋಪ್ರಾ ಹೆಸರು ಕೂಡ ಈ ಎಪ್‌ಸ್ಟೀನ್ ಹಗರಣದಲ್ಲಿ ಕೇಳಿ ಬಂದಿದೆ
ಎಪ್‌ಸ್ಟೀನ್ ಫೈಲ್‌ನಲ್ಲಿ ಭಾರತೀಯ ಮೂಲದ ಗುರುವಿನ ಹೆಸರು
ಅಮೆರಿಕಾದ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ ಜಗತ್ತಿನ ಹಲವು ಖ್ಯಾತನಾಮರು ಭಾಗಿಯಾಗಿದ್ದಾರೆ ಎನ್ನಲಾದ ಜೆಫ್ರಿ ಎಪ್‌ಸ್ಟೀನ್ ಸೆ*ಕ್ಸ್ ಹಗರಣದ ದಾಖಲೆಗಳು ಒಂದೊಂದಾಗಿ ಬಿಡುಗಡೆಯಾಗುತ್ತಿದ್ದು, ಒಬ್ಬೊಬ್ಬರ ಹೆಸರು ಹೊರಬರುತ್ತಿದ್ದಂತೆ ಜನ ಇವರೂ ಹೀಗೆ ನಾ ಎಂದು ಅಚ್ಚರಿಯಿಂದಲೇ ನೋಡುತ್ತಿದ್ದಾರೆ. ಈ ಹಗರಣದಲ್ಲಿ ಹಲವು ಭಾರತೀಯರ ಹೆಸರುಗಳು ಇವೆ ಎಂದು ವರದಿಯಾಗಿದ್ದು, ಈಗ ಭಾರತೀಯ ಮೂಲದ ಅಮೆರಿಕನ್ ಆಗಿರುವ ಧಾರ್ಮಿಕ ಗುರು, ದೀಪಕ್ ಚೋಪ್ರಾ ಅವರ ಹೆಸರು ಕೂಡ ಈ ಎಪ್‌ಸ್ಟೀನ್ ಹಗರಣದಲ್ಲಿ ಕೇಳಿ ಬಂದಿದೆ. ಎಪ್‌ಸ್ಟೀನ್ ಆಪ್ತ ಗಿಸ್ಲೇನ್ ಮ್ಯಾಕ್ಸ್‌ವೆಲ್ ಅವರನ್ನು ಒಳಗೊಂಡ ಅಮೆರಿಕಾದಲ್ಲಿ ದೀರ್ಘಕಾಲ ನಡೆದ ಸಿವಿಲ್ ಕೇಸ್‌ನ ಭಾಗವಾಗಿರುವ ಈ ದಾಖಲೆಗಳು, ವಿವಿಧ ಉನ್ನತ ಮಟ್ಟದ ಅಂತರರಾಷ್ಟ್ರೀಯ ವ್ಯಕ್ತಿಗಳ ಹೆಸರನ್ನು ಒಳಗೊಂಡಿದೆ. ಈ ಫೈಲ್‌ಗಳಲ್ಲಿ ಈಗ ಭಾರತೀಯ ಮೂಲದ ದೀಪಕ್ ಚೋಪ್ರಾ ಅವರ ಹೆಸರು ಕೇಳಿ ಬಂದಿದ್ದರೂ ಕೂಡ ಅವರು ಕಾನೂನುಬಾಹಿರ ಚಟುವಟಿಕೆ ಅಥವಾ ಎಪ್ಸ್ಟೀನ್ ಅವರೊಂದಿಗಿನ ನಿಕಟ ವೈಯಕ್ತಿಕ ಸಂಬಂಧವನ್ನು ಹೊಂದಿಲ್ಲ ಎಂದು ಅಲ್ಲಿನ ಕಾನೂನು ತಜ್ಞರು ಹೇಳಿದ್ದಾರೆ.
ಈ ಎಪ್‌ಸ್ಟೀನ್ ಫೈಲ್ ಹಗರಣವು2000ನೇ ದಶಕದ ಮಧ್ಯಭಾಗದಲ್ಲಿ ವಿನಿಮಯವಾದ ಸರಣಿ ಇಮೇಲ್‌ಗಳ ಮೇಲೆ ಕೇಂದ್ರಿಕೃತವಾಗಿದೆ. ವರದಿಗಳ ಪ್ರಕಾರ ಎಪ್‌ಸ್ಟೀನ್ ಕಚೇರಿಯು ದೀಪಕ್ ಚೋಪ್ರಾ ಅವರ ಪ್ರತಿನಿಧಿಗಳನ್ನು ಸಂಪರ್ಕಿಸಿ ಚೋಪ್ರಾ ಅವರ ಆರೋಗ್ಯ/ಧಾರ್ಮಿಕ ಯಾತ್ರೆಗಳು ಮತ್ತು ಉಪನ್ಯಾಸಗಳಿಗೆ ಸಂಬಂಧಿಸಿದ ಸಂಭಾವ್ಯ ಸಭೆಗಳು ಅಥವಾ ಕಾರ್ಯಕ್ರಮಗಳ ಕುರಿತು ಚರ್ಚಿಸಿದೆ ಎಂದು ಸಂವಹನಗಳು ಸೂಚಿಸುತ್ತವೆ. ಎಪ್ಸ್ಟೀನ್ ಶಿಕ್ಷೆಗೊಳಗಾದ ಈ ಅಕ್ರಮ ಚಟುವಟಿಕೆಗಳಲ್ಲಿ ದೀಪಕ್ ಚೋಪ್ರಾ ಭಾಗಿಯಾಗಿದ್ದಾರೆ ಎಂಬುದಕ್ಕೆ ದಾಖಲೆಗಳು ಯಾವುದೇ ಸಾಕ್ಷ್ಯ ಒದಗಿಸುವುದಿಲ್ಲ, ಆದರೆ ಎಪ್‌ಸ್ಟೀನ್ ತನ್ನ ಸಾರ್ವಜನಿಕ ಇಮೇಜ್ ಅನ್ನು ಕಾಪಾಡಿಕೊಳ್ಳಲು ಬಳಸಿಕೊಂಡ ಇತರ ಸಾಮಾಜಿಕ ವಲಯಗಳ ಬಗ್ಗೆ ಅವು ವಿಶಾಲವಾದ ಸಂಭಾಷಣೆಯನ್ನು ಹುಟ್ಟುಹಾಕಿವೆ.
ದೀಪಕ್ ಚೋಪ್ರಾ ಯಾರು?
ದೀಪಕ್ ಚೋಪ್ರಾ ಒಬ್ಬ ವಿಶ್ವಪ್ರಸಿದ್ಧ ವೈದ್ಯ, ಲೇಖಕ ಮತ್ತು ರೋಗಕ್ಕೆ ಔಷಧಿಗಳಿಗೆ ಪರ್ಯಾಯವಾಗಿ ಮಾಡುವ ಆರೋಗ್ಯ ಪ್ರಯೋಗಗಳ ಬಗ್ಗೆ ತಮ್ಮ ಒಲವು ತೋರುತ್ತಾ ಬಂದವರು. 1990 ರ ದಶಕದಲ್ಲಿ ಅವರು ತಮ್ಮ ಈ ಆರೋಗ್ಯ ಚಿಂತನೆಗಳಿಂದ ಹೆಚ್ಚು ಪ್ರಸಿದ್ಧಿ ಪಡೆದರು. ಭಾರತದ ರಾಜಧಾನಿ ದೆಹಲಿಯಲ್ಲಿ ಜನಿಸಿದ ಅವರು 1970 ರಲ್ಲಿ ಆಂತರಿಕ ಔಷಧ ಮತ್ತು ಅಂತಃಸ್ರಾವಶಾಸ್ತ್ರದಲ್ಲಿ ವೈದ್ಯಕೀಯ ವೃತ್ತಿಜೀವನವನ್ನು ಮುಂದುವರಿಸಲು ಅಮೆರಿಕಾಗೆ ಹೋದವರು. ಆದರೆ ಅವರು ಅಂತಿಮವಾಗಿ ಸಾಂಪ್ರದಾಯಿಕ ಪಾಶ್ಚಿಮಾತ್ಯ ಔಷಧದಿಂದ ದೂರ ಸರಿದು, ಆಧ್ಯಾತ್ಮಿಕ ತತ್ವಶಾಸ್ತ್ರವನ್ನು ಆರೋಗ್ಯದೊಂದಿಗೆ ಬೆರೆಸುವ ಸಮಗ್ರ ಔಷಧದತ್ತ ಗಮನಹರಿಸಿದರು.
ಇದನ್ನೂ ಓದಿ: ಗಂಡನನ್ನು ಹಾಸಿಗೆಗೆ ತಳ್ಳಿ ಆತನ ಮೇಲೇರಿ ಕುಳಿತು ಹಿಗ್ಗಾಮುಗ್ಗಾ ಥಳಿಸಿದ ಮಹಿಳೆ
ದೀಪಕ್ ಚೋಪ್ರಾ ಅವರು ಹಲವಾರು ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪುಸ್ತಕಗಳು ಸೇರಿದಂತೆ 90 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಅಮೆರಿಕಾದ ನಿರೂಪಕಿ ಓಪ್ರಾ ವಿನ್‌ಫ್ರೇ ಅವರಂತಹ ವ್ಯಕ್ತಿಗಳಿಂದ ಉನ್ನತ ಮಟ್ಟದ ಪ್ರಚಾರದಿಂದ ಮನೆ ಮಾತಾಗಿದ್ದಾರೆ. ಪಶ್ಚಿಮಾತ್ಯ ದೇಶಗಳಲ್ಲಿ ಮನಸ್ಸಿನಿಂದ ದೇಹದ ರೋಗ ಗುಣಪಡಿಸುವಿಕೆಯ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿದವರಲ್ಲಿ ದೀಪಕ್ ಚೋಪ್ರಾ ಪ್ರಮುಖರು. ಚೋಪ್ರಾ ಸೆಂಟರ್ ಫಾರ್ ವೆಲ್‌ಬೀಯಿಂಗ್ ಅನ್ನು ಸ್ಥಾಪಿಸಿ ಮುಂದೆ ಬಹು ಶತಕೋಟಿ ಡಾಲರ್ ಜಾಗತಿಕ ಆರೋಗ್ಯ ಕ್ಷೇಮ ಉದ್ಯಮದ ಕೇಂದ್ರ ವ್ಯಕ್ತಿಯಾದವರು.
ಇತ್ತ ಎಪ್‌ಸ್ಟೀನ್ ಫೈಲ್ಸ್‌ಗೆ ಸಂಬಂಧಿಸಿದಂತೆ ಅಮೆರಿಕಾ ನ್ಯಾಯಾಲಯವು ಜೆಫ್ರಿ ಎಪ್‌ಸ್ಟೈನ್‌ಗೆ ಸಂಬಂಧಿಸಿ ದಾಖಲೆಗಳ ಅತಿದೊಡ್ಡ ಬ್ಯಾಚ್ ಅನ್ನು ಬಿಡುಗಡೆ ಮಾಡಿದೆ. ಈ ದಾಖಲೆ ಒಟ್ಟು 3 ಮಿಲಿಯನ್ ಪುಟಗಳನ್ನು ಹೊಂದಿದೆ ಎಂಬ ಮಾಹಿತಿ ಇದೆ. ಸೀಲ್ ಮಾಡದ ಈ ಎಪ್‌ಸ್ಟೀನ್ ಸೆ*ಕ್ಸ್ ಫೈಲ್‌ಗಳಲ್ಲಿ ದೀಪಕ್ ಚೋಪ್ರಾ ಅವರ ಹೆಸರು ಡಿಜಿಟಲ್ ರೋಲೋಡೆಕ್ಸ್ ಮತ್ತು ನಿರ್ದಿಷ್ಟ ಇಮೇಲ್ ಸರಣಿಗಳಲ್ಲಿ ಕಂಡು ಬಂದಿದೆ. ಒಂದು ನಿದರ್ಶನದಲ್ಲಿ, ಎಪ್ಸ್ಟೀನ್‌ನ ಸಹಾಯಕರು ಇಮೇಲ್‌ನಲ್ಲಿ ಸಮ್ಮೇಳನವೊಂದಕ್ಕೆ ಚೋಪ್ರಾ ಅವರ ಸಿಗುವ ಬಗ್ಗೆ ವಿಚಾರಿಸಲಾಯಿತು. ಬಿಡುಗಡೆಯಾದ ಫೈಲ್‌ಗಳಲ್ಲಿ ದೀಪಕ್ ಚೋಪ್ರಾ ಅವರು ಎಪ್‌ಸ್ಟೀನ್ ಅವರ ದ್ವೀಪದಲ್ಲಿ ಖಾಸಗಿ ಸಭೆಗಳಿಗೆ ಹಾಜರಾಗಿದ್ದರು ಅಥವಾ ಈ ವಿಚಾರಣೆಗಳ ಸಮಯದಲ್ಲಿ ಎಪ್ಸ್ಟೀನ್‌ನ ಅಪರಾಧ ನಡವಳಿಕೆಯ ಬಗ್ಗೆ ತಿಳಿದಿದ್ದರು ಎಂಬುದಕ್ಕೆ ಯಾವುದೇ ದಾಖಲೆಗಳಿಲ್ಲ. ಭಾರತೀಯ ಮೂಲದ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಸೇರಿದಂತೆ ಇತರ ಭಾರತೀಯ ವ್ಯಕ್ತಿಗಳನ್ನು ಸಹ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದೆ, ಸಾಮಾನ್ಯವಾಗಿ ಎಪ್‌ಸ್ಟೀನ್ ತಾನು ಹೊಂದಿದ್ದ ಸಾಮಾಜಿಕ ಮತ್ತು ವೃತ್ತಿಪರ ಸಂಪರ್ಕಗಳ ವಿಶಾಲ ಜಾಲದಿಂದಾಗಿ ಆ ಸಂದರ್ಭದಲ್ಲಿ ಅವರು ಸಂಪರ್ಕಿಸಿದ ಸಾರ್ವಜನಿಕ ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದರು ಎಂದು ಸಮರ್ಥಿಸಲಾಗುತ್ತಿದೆ.
ಇದನ್ನೂ ಓದಿ: ಕರ್ಮದ ಕಲ್ಲನ್ನು ಎಡವಿದ ಮನುಜನು... ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಪಾಪಿ
ಎಪ್‌ಸ್ಟೀನ್ ದಾಖಲೆಗಳಲ್ಲಿ ಚೋಪ್ರಾ ಅವರಂತಹ ಆಧ್ಯಾತ್ಮಿಕ ನಾಯಕನ ಸೇರ್ಪಡೆಯು ಗುರು ಸಂಸ್ಕೃತಿ ಮತ್ತು ಅಧಿಕಾರ ಮತ್ತು ಸಂಪತ್ತಿಗೆ ಆಧ್ಯಾತ್ಮಿಕ ಗುರುಗಳ ಸಾಮೀಪ್ಯದ ಬಗ್ಗೆ ಚರ್ಚೆಗಳನ್ನು ಹುಟ್ಟುಹಾಕಿದೆ.


