ಹೈನುಗಾರಿಕೆ ನಂಬಿದರೆ ಆರ್ಥಿಕ ಸುಭದ್ರತೆ
ರೈತರು ರಾಸುಗಳಿಗೆ ಉತ್ತಮ ಮೇವು ನೀಡಿ ಹಾಲಿನ ಗುಣಮಟ್ಟಸದಾ ಸ್ಥಿರವಾಗಿರುವಂತೆ ನೋಡಿಕೊಂಡಾಗ, ಹೈನುಗಾರಿಕೆ ನಂಬಿದ ಕುಟುಂಬಗಳ ಆರ್ಥಿಕ ಸುಭದ್ರತೆಯಾಗಲಿದೆ ಎಂದು
ಶಿರಾ: ರೈತರು ರಾಸುಗಳಿಗೆ ಉತ್ತಮ ಮೇವು ನೀಡಿ ಹಾಲಿನ ಗುಣಮಟ್ಟಸದಾ ಸ್ಥಿರವಾಗಿರುವಂತೆ ನೋಡಿಕೊಂಡಾಗ, ಹೈನುಗಾರಿಕೆ ನಂಬಿದ ಕುಟುಂಬಗಳ ಆರ್ಥಿಕ ಸುಭದ್ರತೆಯಾಗಲಿದೆ ಎಂದು
ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರು ಹಾಗೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕರಾದ ಎಸ್.ಆರ್.ಗೌಡ ಹೇಳಿದರು.
ತಾಲೂಕಿನ ಹುಲಿಕುಂಟೆ ಹೋಬಳಿಯ, ದೊಡ್ಡಬಾಣಗೆರೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವು ಮಾಡುವಂತ ಕೆಲಸ ಪ್ರಾಮಾಣಿಕವಾಗಿ ಇದ್ದರೆ, ಯಾವುದೇ ವೃತ್ತಿಯಲ್ಲಿ ಆರ್ಥಿಕ ಪ್ರಗತಿ ಸಾಧಿಸಲು ಸಾಧ್ಯ. ಡೇರಿಯಲ್ಲಿ ಬರುವಂತಹ ಹಾಲಿನ ಹಣದ ಬಗ್ಗೆ ಹೆಚ್ಚು ಆಸಕ್ತಿ ತೋರುವುದರ ಜೊತೆಗೆ, ಸರ್ಕಾರ ನೀಡುವಂತಹ ಹಾಲಿನ ಪ್ರೋತ್ಸಾಹ ಧನದ ಬಗ್ಗೆ ಹೆಚ್ಚು ಮಾಹಿತಿ ಪಡೆಯಬೇಕು, ಹೈನುಗಾರಿಕೆ ರೈತನ ಶ್ರಮಕ್ಕೆ ತಕ್ಕ ಪ್ರತಿಫಲ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ದೊಡ್ಡಬಾಣಗೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಪಾಂಡಪ್ಪ, ತುಮಕೂರು ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಮಧುಸೂದನ್, ವಿಸ್ತರಣಾಧಿಕಾರಿ ದಿವಾಕರ್, ಮುಖಂಡರಾದ ದಯಾನಂದ ಗೌಡ, ಶ್ರೀನಿವಾಸ್, ಸಮಾಲೋಚಕ ಪುರುಷೋತ್ತಮ, ಸಂಘದ ಉಪಾಧ್ಯಕ್ಷ, ಕಾರ್ಯಕಾರಿ ಮಂಡಳಿಯ ಸದಸ್ಯರು, ಹಾಲು ಉತ್ಪಾದಕರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೈಗೆ ಒಲಿದ ಅಧ್ಯಕ್ಚ ಗಾದಿ
ಮಂಡ್ಯ (ಜು.24): ರಾಜ್ಯದಲ್ಲಿ ಕರ್ನಾಟಕ ಹಾಲು ಮಹಾಮಂಡಳದ ವಿಭಾಗವಾದ ಮಂಡ್ಯ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟ ನಿಯಮಿತ (MANMUL) ಅಧ್ಯಕ್ಷ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಅಭ್ಯರ್ಥಿ ಜಯಗಳಿಸಿದ್ದಾರೆ. ಮಂಡ್ಯ ಜಿಲ್ಲಾ ರಾಜಕಾರಣಿಗಳ ಪ್ರತಿಷ್ಠಿತ ಕಣವಾದ ಮನ್‌ಮುಲ್ ಅನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂದಿದೆ.
ಮಂಡ್ಯದ ಪ್ರತಿಷ್ಠಿತ ಸಹಕಾರ ಸಂಸ್ಥೆ ಮನ್ ಮುಲ್ (Mandya District Co-operative Milk Producers Society's Union Limited- MANMUL) ಕಾಂಗ್ರೆಸ್ ತೆಕ್ಕೆಗೆ ಒಲಿದಿದೆ. ತೀವ್ರ ಪೈಪೋಟಿಯ ನಡುವೆಯೂ ಕಾಂಗ್ರೆಸ್ ಮನ್ಮುಲ್ ಅಧಿಕಾರ ಹಿಡಿದಿದೆ. ಜೆಡಿಎಸ್, ಬಿಜೆಪಿ ಮೈತ್ರಿಗೆ ಸೆಡ್ಡು ಹೊಡೆದು ಕಾಂಗ್ರೆಸ್ ಅಧಿಕಾರ ಹಿಡಿದಿದ್ದು, ಪ್ರಭಲ ಪೈಪೋಟಿ ಒಡ್ಡಿದ್ದ ಜೆಡಿಎಸ್‌ಗೆ ಭಾರಿ ಹಿನ್ನಡೆ ಉಂಟಾಗಿದೆ. ಜೊತೆಗೆ, ಆಡಳಿತಾರೂಢ ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಸಿಕ್ಕಂತಾಗಿದೆ. ಬರೋಬ್ಬರಿ 9 ಮತಗಳನ್ನ ಪಡೆದ ಬೋರೇಗೌಡ ಅವರು ಮನ್ಮುಲ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
Breaking: ಕಾಂಗ್ರೆಸ್ ಸರ್ಕಾರ ಬೀಳಿಸಲು ವಿದೇಶದಲ್ಲಿ ಷಡ್ಯಂತ್ರ; ಡಿಸಿಎಂ ಡಿ.ಕೆ. ಶಿವಕುಮಾರ್
ಮತದಾನದಿಂದ ದೂರ ಉಳಿದ ಜೆಡಿಎಸ್ ನಿರ್ದೇಶಕರು: ಇನ್ನು ಮನ್‌ಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಸೋಲಿನ ಸುಳಿವು ಅರಿತು ಜೆಡಿಎಸ್ ನಿರ್ದೇಶಕರು ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿದ್ದರು. ಬಿಜೆಪಿಯ ಬೆಂಬಲಿತ ಅಭ್ಯರ್ಥಿ ಎಸ್.ಪಿ.ಸ್ವಾಮಿ ಮತದಾನ ಪ್ರಕ್ರಿಯೆಗೆ ಭಾಗಿಯಾಗಿದ್ದರು. ಉಳಿದಂತೆ ಮೂವರು ಅಧಿಕಾರಿಗಳು, ಓರ್ವ ನಾಮ ನಿರ್ದೇಶಕ ಸದಸ್ಯ ಹಾಗೂ 5 ಮಂದಿ ಚುನಾಯಿತ ನಿರ್ದೇಶಕರು ಸೇರಿ 9 ಮಂದಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ನಾಮಪತ್ರ ಸಲ್ಲಿಸಿಯೂ ಮತದಾನ ಪ್ರಕ್ರಿಯೆಗೆ ಜೆಡಿಎಸ್ ನಿರ್ದೇಶಕರು ಗೈರಾಗಿದ್ದಾರೆ. ಇಬ್ಬರು ಜೆಡಿಎಸ್ ನಿರ್ದೇಶಕನ್ನ ಅನರ್ಹಗೊಳಿಸಿದ್ದ ಹಿನ್ನೆಲೆಯಲ್ಲಿ ಮತದಾನಕ್ಕೆ ಗೈರಾಗಿದ್ದಾರೆ. ಚುನಾವಣೆಯ ಮತದಾನದ ಯುದ್ಧಕ್ಕೂ ಮುನ್ನವೇ ಜೆಡಿಎಸ್ ನಿರ್ದೇಶಕರು ಶಸ್ತ್ರತ್ಯಾಗ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಹಾಲು ದರ ಹೆಚ್ಚಳ, ಸಿಎಂ ತೀರ್ಮಾನವೇ ಅಂತಿಮ: ಸಚಿವ ಚಲುವರಾಯಸ್ವಾಮಿ