ಸಿಎಂ ವಿಜಯ್ ಜೊಸೆಫ್ ನಾಡಿನಲ್ಲಿ ಇದೀಗ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳ ಸಾಗಾಣೆಗಾರರನ್ನು ಹಿಡಿದಿದ್ದಾರೆ. ಬರೋಬ್ಬರಿ 40 ಕಿಲೋಮೀಟರ್ ಕಾರಿನ ರೂಫ್ ಮೇಲೆ ಪೊಲೀಸ್ ಧೈರ್ಯವಾಗಿ ಹಿಡಿದು ಸಾಗಿದರೆ, ಇತ್ತ ಪೊಲೀಸರು ಚೇಸ್ ಮಾಡಿ ಕಳ್ಳರ ಹಿಡಿದಿದ್ದಾರೆ.
ಚೆನ್ನೈ (ಸೆ.27) ಗುಟ್ಕಾ ಸ್ಮಗ್ಲರ್ಸ್ ಹಿಡಿಯಲು ಪೊಲೀಸರು ತೋರಿದ ಧೈರ್ಯ ಹಾಗೂ ಸಾಹಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. 300ಕೆಜಿಗೂ ಹೆಚ್ಚು ನಿಷೇಧಿತ ಗುಟ್ಕಾ ಹಾಗೂ ಇತರ ಟೊಬ್ಯಾಕೋಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಳ್ಳಸಾಗಾಣೆಗಾರರನ್ನು ಪೊಲೀಸರು ಸಿನಿಮೀಯ ರೀತಿಯಲ್ಲಿ ಹಿಡಿದ ಘಟನೆ ತಮಿಳುನಾಡಿನ ಕೊಯಂಬತ್ತೂರಿನಲ್ಲಿ ನಡೆದಿದೆ. ಮುಖ್ಯಮಂತ್ರಿ ಹಾಗೂ ನಟ ವಿಜಯ್ ಜೊಸೆಫ್ ಆಡಳಿತದ ತಮಿಳುನಾಡಿನಲ್ಲಿ ಇದೀಗ ಪೊಲೀಸರು ಸಿನಿಮೀಯ ರೀತಿಯಲ್ಲಿ ಕಳ್ಳರ ಹಿಡಿದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕಾರು ತಪಾಸಣೆ ವೇಳೆ ಕಳ್ಳ ಸಾಗಾಣೆ ಪತ್ತೆ
ಕೊಯಂಬತ್ತೂರಿನ ಸಮೀಪ ಪೊಲೀಸರು ಕಾರು ತಪಾಸಣೆ ನಡೆಸುತ್ತಿದ್ದ ವೇಳೆ ಅನುಮಾನಸ್ಪದ ಕಾರು ಪತ್ತೆಯಾಗಿದೆ. ಕಾರಿನಲ್ಲಿ 300ಕೆಜಿಗೂ ಹೆಚ್ಚು ನಿಷೇಧಿ ಗುಟ್ಕಾ ಸೇರಿದಂತೆ ಇತರ ತಂಬಾಕು ಕಳ್ಳ ಸಾಗಾಣೆ ಮಾಡುತ್ತಿರುವುದು ಪತ್ತೆಯಾಗಿದೆ. ಪೊಲೀಸರು ತಪಾಸಣೆ ನಡೆಸುತ್ತಿದ್ದಂತೆ ಕಾರಿನಲ್ಲಿದ್ದ ಕಳ್ಳರು ತಕ್ಷಣವೇ ಕಾರನ್ನು ವಿರುದ್ಧ ದಿಕ್ಕಿನಲ್ಲಿ ತಿರುಗಿಸಿದ್ದಾರೆ. ತಕ್ಷಣವೇ ಹೆಡ್‌ಕಾನ್ಸ್‌ಸ್ಟೇಬಲ್ ವೇಲುಮುರುಗನ್ ಕಾರಿನ ರೂಫ್ ಗಟ್ಟಿಯಾಗಿ ಹಿಡಿದಿದ್ದಾರೆ. ಕಾರು ಸ್ಥಳದಿಂದ ವೇಗವಾಗಿ ಬೇರೆ ರಸ್ತೆಯತ್ತ ತಿರುಗಿದೆ.
ಕಾರಿನ ರೂಫ್‌ನಲ್ಲಿ ಗಟ್ಟಿಯಾಗಿ ಹಿಡಿದು ಸಾಗಿದ ಪೊಲೀಸ್
ವೇಲುಮುರುಗನ್ ಹಿಡಿತ ಬಿಗಿಗೊಳಿಸಿದ್ದಾರೆ. ಕಾರು ಸಾಗಲು ಆರಂಭಿಸಿದೆ. ಅಷ್ಟರಲ್ಲೇ ಇತರ ಪೊಲೀಸರು ಪೊಲೀಸ್ ಕಾರು ಹತ್ತಿ ಚೇಸಿಂಗ್ ಆರಂಭಿಸಿದ್ದಾರೆ. ಇತ್ತ ಅಪಾಯಕಾರಿ ಸ್ಥಿತಿಯಲ್ಲಿದ್ದ ವೇಲುಮುರುಗನ್ ಕಾರಿನ ರೂಫ್ ಹತ್ತಿ ಗಟ್ಟಿಯಾಗಿ ಹಿಡಿದಿದ್ದಾರೆ. ಇತ್ತ ಕಳ್ಳರು ಕಾರು ನಿಲ್ಲಿಸದೆ ಸಾಗಿದ್ದಾರೆ. ಹೆದ್ದಾರಿ ಮೂಲಕ ಅತೀ ವೇಗವಾಗಿ ಸಾಗಿದ್ದಾರೆ. ವೇಲುಮುರುಗನ್ ಧೈರ್ಯದಿಂದ ಗಟ್ಟಿಯಾಗಿ ರೂಫ್ ಹಿಡಿದಿದ್ದಾರೆ.
ಬರೋಬ್ಬರಿ 40 ಕಿಲೋಮೀಟರ್ ಚೇಸಿಂಗ್
ಸಿನಿಮಾ ದೃಶ್ಯಗಳಲ್ಲಿ ಕಾಣುವಂತೆ ಹೆದ್ದಾರಿಯಲ್ಲಿ ಚೇಸಿಂಗ್ ಆರಂಭಗೊಂಡಿತು. ಒಂದೆಡೆ ವೇಲುಮುರುಗನ್ ಕಾರಿನ ಮೇಲೆ ಗಟ್ಟಿಯಾಗಿ ಹಿಡಿದಿದ್ದರೆ, ಇತ್ತ ಇತರ ಪೊಲೀಸರು ಕಾರನ್ನು ಚೇಸ್ ಮಾಡಿದ್ದಾರೆ. ಈ ಚೇಸಿಂಗ್ ಹೆದ್ದಾರಿಯಲ್ಲಿ ಬರೋಬ್ಬರಿ 40 ಕಿಲೋಮೀಟರ್ ಸಾಗಿದೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಚೆಕ್‌ಪೋಸ್ಟ್ ಬಳಿ ಇರುವ ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸರು ಹಾಗೂ ಆ್ಯಂಬುಲೆನ್ಸ್ ಸಿಬ್ಬಂದಿಗಳ ನೆರವಿನಿಂದ ಕಳ್ಳರ ಕಾರು ತಡೆಯಲಾಗಿದೆ.
ಮೂವರು ಸ್ಮಗ್ಲರ್ಸ್ ಅರೆಸ್ಟ್
ಕಾರು ತಡೆದ ಪೊಲೀಸರು ಕಾರಿನಲ್ಲಿದ್ದ ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಹೆಡ್ ಕಾನ್ಸ್‌ಸ್ಟೇಬಲ್ ವೇಲುಮುರುಗನ್ 40 ಕಿಲೋಮೀಟರ್ ಕಾರಿನ ರೂಫ್ ಮೇಲೆ ಸಾಗಿದ್ದಾರೆ. ನಿಷೇಧಿತ ಗುಟ್ಕಾವನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಹಿಡಿಯಲು ಪೊಲೀಸ್ ವೇಲುಮುರುಗನ್ ತೋರಿದ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.


