ಬೆಂಗಳೂರಲ್ಲಿ ಇವತ್ತು ಸಿಕ್ಕಾಪಟ್ಟೆ ಬಿಸಿಲು. ಬೆಳಗ್ಗೆಯಿಂದಲೇ ಬಿಸಿಲಿನ ಆರ್ಭಟ ಜೋರಾಗಿದೆ. ಆದರೆ ಹಾವಾಮಾನ ಇಲಾಖೆ ಪ್ರಕಾರ ಸಂಜೆ ವೇಳೆಗೆ ಮಳೆ ಬರಲಿದೆಯಂತೆ. ಕರ್ನಾಟಕ ಸೇರಿ 7 ರಾಜ್ಯಗಳಿಗೆ ಹಾವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಂಪ್ಲೀಟ್ ಮಾಹಿತಿಗಾಗಿ ಸ್ಟೋರಿ ಓದಿ..
ಬೆಂಗಳೂರು: ಹವಾಮಾನ ಇಲಾಖೆಯಿಂದ ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ. ನಾಳೆಯ ದಿನ ಭಾರೀ ಮಳೆಯಾಗಲಿದ್ದು, ಮುಂಜಾಗೃತ ಕ್ರಮವಹಿಸಬೇಕು ಎಂದು ಸೂಚಿಸಿದೆ. ಸೆಪ್ಟೆಂಬರ್ 28 ರಂದು ಅಂದರೆ ನಾಳೆ ಆಂಧ್ರ ಪ್ರದೇಶ, ಕರ್ನಾಟಕ, ತಮಿಳುನಾಡು, ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಹಾಗೂ ಮಹಾರಾಷ್ಟ್ರ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.
ಇನ್ನು, ದೆಹಲಿಯಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಹಿಮಾಚಲ ಪ್ರದೇಶದ ಶಿಮ್ಲಾ ಹವಾಮಾನ ಕೇಂದ್ರವು ಆ ಭಾಗದಲ್ಲಿ ಸೆಪ್ಟೆಂಬರ್ 29ವರೆಗೆ ನಿರಂತರವಾಗಿ ಮಳೆ ಬರುವ ಸಾಧ್ಯತೆ ಇದೆ. ನಂತರ ಮಳೆಯ ತೀವ್ರತೆ ಕೊಂಚ ಕಡಿಮೆ ಆಗಲಿದೆ. ಬೆಟ್ಟ, ತಗ್ಗು ಪ್ರದೇಶ ಹಾಗೂ ಬಯಲು ಪ್ರದೇಶಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇರಲಿದೆ. ಆದರೆ ಸೆಪ್ಟೆಂಬರ್ 28 ರಂದು ಮಾತ್ರ ರಾಜ್ಯದಲ್ಲಿ ಭಾರೀ ಮಳೆ ಆಗಲಿದೆ ಎಂದಿದೆ.
ಪಶ್ಚಿಮ ಬಂಗಾಳ ಹವಾಮಾನ
ಇಲ್ಲಿ ಸೆಪ್ಟೆಂಬರ್ 29 ರಿಂದ ಅಕ್ಟೋಬರ್ ಒಂದರವರೆಗೆ ನಿರಂತರವಾಗಿ ಮಳೆ ಸುರಿಯಲಿದೆ. ದಕ್ಷಿಣ ಬಂಗಾಳದಲ್ಲಿ ಮಳೆಯ ಚಟುವಟಿಕೆ ಕಡಿಮೆ ಇದೆ. ರಾಜ್ಯದ ವಿವಿಧ ಭಾಗಳಲ್ಲಿ ಮಳೆ ಬೀಳೋದ್ರಿಂದ ಅಲ್ಲಲ್ಲಿ ಮಳೆ ಸುರಿಯಲಿದೆ. ಇನ್ನು ಛತ್ತೀಸಗಢ ಹಾಗೂ ಮಧ್ಯಪ್ರದೇಶ ನಡುವೆ ಉಂಟಾಗಿದ್ದ ವಾಯಭಾರ ಕುಸಿತದಿಂದ ಪಶ್ಚಿಮ ಬಂಗಾಳ ಸೇಫ್ ಆಗಿದೆ ಎಂದು ಹಾವಮಾನ ಇಲಾಖೆ ಹೇಳಿದೆ.
ಏಳು ರಾಜ್ಯಗಳಿಗೆ ಆರೆಂಜ್ ಅಲರ್ಟ್
ಇದರ ಹೊರತಾಗಿಯೂ 7 ರಾಜ್ಯಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು, ಉತ್ತರಾಖಾಂಡ, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶಗಳಲ್ಲಿ ಮಳೆ ಜೋರಾಗಿದ್ರೊಂದ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಇನ್ನು, ಆಂಧ್ರದ ಕರಾವಳಿ ಭಾಗದಲ್ಲಿ ಜೋರಾದ ಗಾಳಿ ಬೀಸಲಿದೆ. ಕರಾವಳಿ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ.
ಬೆಂಗಳೂರಲ್ಲಿ ಮಳೆ ಸುರಿಯುತ್ತಾ?
ಇನ್ನು ಬೆಂಗಳೂರಿನ ವೆದರ್ ಬಗ್ಗೆ ನೋಡೋದಾದ್ರೆ.. accuweather ಪ್ರಕಾರ, ಇಂದು ಸಂಜೆ ಅಲ್ಲಲ್ಲಿ ಚದುರಿದ ಮಳೆ ಬೀಳುವ ಸಾಧ್ಯತೆ ಇದೆ. ಬಿಸಿಲಿನಿಂದ ಬಳಲಿದ್ದ ಜನರಿಗೆ ಸಂಜೆ ವೇಳೆ ನಗರ ಕೂಲ್ ಕೂಲ್ ಆಗಲಿದೆ. ಆದರೆ ನಾಳೆ ಅಂದರೆ ಸೆಪ್ಟೆಂಬರ್ 28 ರಂದು ಗುಡುಗು ಸಹಿತ ಮಳೆ ಬರಲಿದೆ ಎಂದಿದೆ. ಸೆಪ್ಟೆಂಬರ್ 29 ರಂದು ಕೂಡ ಮಳೆ ಬೀಳಲಿದೆ. ಎರಡು ಗಂಟೆಗಳ ಕಾಲ ಅಲ್ಲಲ್ಲಿ ಮಳೆ ಬೀಳುವ ಸೂಚನೆ ಇದೆ ಎಂದು ಹೇಳಿದೆ. ಇನ್ನು ಕರ್ನಾಟಕದಲ್ಲಿ ಮಳೆ ಸುರಿಯಲಿದೆ. ವಿಶೇಷವಾಗಿ ಕರಾವಳಿ ಭಾಗ, ಮಲೆನಾಡು, ಒಳನಾಡು ಜಿಲ್ಲೆಗಳಲ್ಲಿ ಮಳೆ ಬೀಳುವ ಸಾಧ್ಯತೆ ಇದೆ. ನಾಳೆಯಿಂದ ಸುಮಾರು 17 ಜಿಲ್ಲೆಗಳಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನೂ ಎಲ್ಲೆಲ್ಲಿ ಮಳೆ ಸುರಿಯಲಿದೆ?
ಜಮ್ಮು-ಕಾಶ್ಮೀರದಲ್ಲಿ ಸೆಪ್ಟೆಂಬರ್ 28 ರಂದು ಮಳೆಯಾದರೆ, ಆಂಧ್ರದಲ್ಲಿ ಸೆಪ್ಟೆಂಬರ್ 29 ರಂದು ಜೋರು ಮಳೆ ಬೀಳಲಿದೆ. 28 ರಿಂದ 30ವರೆಗೆ ಅಲ್ಲಿನ ಕರಾವಳಿ ಭಾಗದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದೆ. ಇನ್ನು ಗಾಳಿಯು 30-40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆ. ಇನ್ನು, ಈಶಾನ್ಯ ರಾಜ್ಯಗಳಲ್ಲೂ ಮಳೆ ಸುರಿಯಲಿದೆ.


