ಪಾಕಿಸ್ತಾನದಲ್ಲಿ ಕಳೆದ ವರ್ಷ ಭಾರಿ ಸದ್ದು ಮಾಡಿದ್ದ ಅಪರಿಚಿತ ಇದೀಗ ಮತ್ತೆ ಕಾಣಿಸಿಕೊಂಡಿದ್ದಾನೆ. ಈ ಅಪರಿಚಿತನ ಗುಂಡಿನ ದಾಳಿಗೆ ಭಾರತಕ್ಕೆ ಬೇಕಾಗಿದ್ದ, ಭಾರತದಲ್ಲಿ 3 ಉಗ್ರ ದಾಳಿ ನಡೆಸಿದ್ದ ಲಷ್ಕರ್ ಉಗ್ರ ಹತನಾಗಿದ್ದಾನೆ. ಸಿಂಧ್ ಪ್ರಾಂತ್ಯದಲ್ಲಿ ಹತ್ಯೆ ಮಾಡಲಾಗಿದೆ.
- Home
- News
- India News
- Operation Sindoor Live : ಪಾಕಿಸ್ತಾನದಲ್ಲಿ ಮತ್ತೆ ಕಾಣಿಸಿಕೊಂಡ ಅಪರಿಚಿತ, ಭಾರತದಲ್ಲಿ 3 ದಾಳಿ ನಡೆಸಿದ ಉಗ್ರನ ಹತ್ಯೆ
Operation Sindoor Live : ಪಾಕಿಸ್ತಾನದಲ್ಲಿ ಮತ್ತೆ ಕಾಣಿಸಿಕೊಂಡ ಅಪರಿಚಿತ, ಭಾರತದಲ್ಲಿ 3 ದಾಳಿ ನಡೆಸಿದ ಉಗ್ರನ ಹತ್ಯೆ

ನವದೆಹಲಿ: ಪಾಕಿಸ್ತಾನದ ಉಗ್ರ ನೆಲೆ, ಸೇನಾ ನೆಲೆಗಳ ಮೇಲೆ ಆಪರೇಷನ್ ಸಿಂದೂರ ದಾಳಿ ನಡೆಸಿದ್ದ ಭಾರತ, ಇದೀಗ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ದಾಳಿಗೆ ಸಪ್ತಾಸ್ತ್ರ ಬಳಸಲು ನಿರ್ಧರಿಸಿದೆ. ವಿವಿಧ ರಾಜಕೀಯ ಪಕ್ಷಗಳಿಗೆ ಸೇರಿದ 7 ನಾಯಕರ ನೇತೃತ್ವದಲ್ಲಿ ಸಂಸದರ ನಿಯೋಗವೊಂದನ್ನು ಹಲವು ದೇಶಗಳಿಗೆ ರವಾನಿಸುವ ಮೂಲಕ ಪಾಕಿಸ್ತಾನದ ಉಗ್ರವಾದದ ಮುಖವಾಡ ಬಯಲು ಮಾಡುವ ದಾಳ ಉರುಳಿಸಿದೆ. ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಆಯ್ಕೆ ಮಾಡಿದ ವಿಷಯವು ಇದೀಗ ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ವಾಕ್ಸಮರಕ್ಕೆ ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್ನೊಳಗೂ ದೊಡ್ಡ ಆಕ್ರೋಶಕ್ಕೆ ನಾಂದಿ ಹಾಡಿದೆ.
ಪಾಕಿಸ್ತಾನದಲ್ಲಿ ಮತ್ತೆ ಕಾಣಿಸಿಕೊಂಡ ಅಪರಿಚಿತ, ಭಾರತದಲ್ಲಿ 3 ದಾಳಿ ನಡೆಸಿದ ಉಗ್ರನ ಹತ್ಯೆ
IMF ನಿಧಿ ಉಗ್ರ ಚಟುವಟಿಕೆಗೆ ಸೇರುವ ಬಗ್ಗೆ ಭಾರತದ ಕಳವಳ : ಪಾಕಿಸ್ತಾನಕ್ಕೆ 11 ಹೊಸ ಷರತ್ತು ವಿಧಿಸಿದ ಐಎಂಎಫ್
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಪಾಕಿಸ್ತಾನಕ್ಕೆ IMF ತನ್ನ ಬೇಲ್‌ಔಟ್ ಕಾರ್ಯಕ್ರಮವನ್ನು ವಿಸ್ತರಿಸಿದೆ. ಆದರೆ ಹಣಕಾಸು ನೆರವು ನೀಡುವುದಕ್ಕೆ 11 ಹೊಸ ಷರತ್ತುಗಳು ಮತ್ತು 50 ರಚನಾತ್ಮಕ ಮಾನದಂಡಗಳನ್ನು ವಿಧಿಸಿದೆ.
ಪೂರ್ತಿ ಓದಿಆಪರೇಶನ್ ಸಿಂದೂರ್ ಕುರಿತು ವಿವಾದಾತ್ಮಕ ಪೋಸ್ಟ್, ಪ್ರೊಫೆಸರ್ ಅಲಿ ಖಾನ್ ಅರೆಸ್ಟ್
ಆಪರೇಶನ್ ಸಿಂದೂರ್ ಹಾಗೂ ಮಹಿಳಾ ಸೇನಾಧಿಕಾರಿಗಳ ಕುರಿತು ವಿವಾದಾತ್ಮಕ ಪೋಸ್ಟ್ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್ ಮೊಹಮ್ಮದಾಬಾದ್ ಅರೆಸ್ಟ್ ಆಗದ್ದಾರೆ.
ರಾಯಚೂರು: ಇಡ್ಲಿ ಬಂಡಿ ಇಡುವ ವಿಚಾರಕ್ಕೆ ವಾಗ್ವಾದ ಕೊ ಲೆಯಲ್ಲಿ ಅಂತ್ಯ!
ರಾಯಚೂರಿನಲ್ಲಿ ಇಡ್ಲಿ ಬಂಡಿ ಇಡುವ ವಿಚಾರಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಸಾದಿಕ್ ಎಂಬ ಯುವಕನಿಗೆ ಆರೋಪಿ ಕರೀಮ್ ಚಾಕುವಿನಿಂದ ಇರಿದು ಕೊಲೆಗೈದಿದ್ದಾನೆ. ಘಟನೆ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪೂರ್ತಿ ಓದಿಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ಶಂಕಿತ ಐಸಿಸ್ ಉಗ್ರರ ಬಂಧನ
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಇಬ್ಬರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದೆ. ಬಂಧಿತರು ಐಸಿಸ್ ಸ್ಲೀಪರ್ ಸೆಲ್‌ನ ಭಾಗವಾಗಿದ್ದು, ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದರು. ಇವರ ಬಂಧನದೊಂದಿಗೆ ಈ ಪ್ರಕರಣದಲ್ಲಿ ಒಟ್ಟು 10 ಮಂದಿ ಬಂಧಿತರಾಗಿದ್ದಾರೆ.
ಪೂರ್ತಿ ಓದಿಛಿದ್ರಗೊಂಡ ವಾಯುನೆಲೆ ರಿಪೇರಿಗೆ ಟೆಂಡರ್ ಆಹ್ವಾನಿಸಿದ ಪಾಕಿಸ್ತಾನ; ದಾಳಿ ಆಗಿದ್ದ ನಿಜ ಎಂದ ಪಾಕ್ ಪ್ರಧಾನಿ
ಭಾರತದ ದಾಳಿಯಲ್ಲಿ ಪಾಕಿಸ್ತಾನದ ವಾಯುನೆಲೆ ಹಾನಿಗೊಳಗಾಗಿದೆ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಒಪ್ಪಿಕೊಂಡಿದ್ದಾರೆ. ಛಿದ್ರಗೊಂಡ ವಾಯುನೆಲೆಗಳ ದುರಸ್ತಿಗೆ ಪಾಕಿಸ್ತಾನ ಟೆಂಡರ್ ಆಹ್ವಾನಿಸಿದೆ.
ಪೂರ್ತಿ ಓದಿರಣಬೀರ ಕಾಲುವೆ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಲು ಮುಂದಾದ ಭಾರತ
ಸಿಂಧೂ ನದಿ ಒಪ್ಪಂದವನ್ನು ಅಮಾನತಿನಲ್ಲಿಟ್ಟಿರುವ ಭಾರತ, ರಣಬೀರ್ ಕಾಲುವೆಯನ್ನು ವಿಸ್ತರಿಸುವ ಚಿಂತನೆ ನಡೆಸುತ್ತಿದೆ. ಚಿನಾಬ್ ನದಿಯಿಂದ ಜಲವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ಕಾಲುವೆಯ ಉದ್ದವನ್ನು ದ್ವಿಗುಣಗೊಳಿಸುವುದು ಯೋಜನೆಯ ಭಾಗವಾಗಿದೆ.
ಪೂರ್ತಿ ಓದಿಸಪ್ತಾಸ್ತ್ರಕ್ಕೆ ತರೂರ್ ಆಯ್ಕೆ, ಕಾಂಗ್ರೆಸ್ಸಲ್ಲಿ ಅತೃಪ್ತಿ ಸ್ಫೋಟಕ್ಕೆ ಕಾರಣಗಳೇನು?
ಪಾಕಿಸ್ತಾನದ ಉಗ್ರ ಮುಖವಾಡ ಬಯಲು ಮಾಡುವ ಕೇಂದ್ರ ಸರ್ಕಾರದ ನಿಯೋಗಕ್ಕೆ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಆಯ್ಕೆ ಮಾಡಿರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ತರೂರ್ ಆಯ್ಕೆಗೆ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದರೆ, ಬಿಜೆಪಿ ವ್ಯಂಗ್ಯವಾಡಿದೆ.
ಪೂರ್ತಿ ಓದಿ