ಆಪರೇಷನ್ ಸಿಂದೂರ್ ಮತ್ತು ಮಹಿಳಾ ಸೇನಾಧಿಕಾರಿಗಳ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕಾಗಿ ಅಶೋಕಾ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್ ಮೊಹಮ್ಮದಾಬಾದ್ ಬಂಧಿತರಾಗಿದ್ದಾರೆ. ಬಿಜೆಪಿ ಯುವ ಮೋರ್ಚಾ ದೂರಿನ ಮೇರೆಗೆ ದೆಹಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಶ್ವವಿದ್ಯಾಲಯವು ತನಿಖೆಗೆ ಸಹಕರಿಸುವುದಾಗಿ ತಿಳಿಸಿದೆ. ಪ್ರೊಫೆಸರ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ನವದೆಹಲಿ(ಮೇ.18) ಭಾರತೀಯ ಸೇನೆ ನಡೆಸಿದ ಆಪರೇಶನ್ ಸಿಂದೂರ್ ಕುರಿತು ರಾಜಕೀಯ ನಾಯಕರು ಅಪಸ್ವರ ಎತ್ತಿ ಮಂಗಳಾರಾತಿ ಮಾಡಿಸಿಕೊಂಡಿದ್ದಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಪಾಕಿಸ್ತಾನ ಷಡ್ಯಂತ್ರದ ಪ್ರಕಾರ ಸುಳ್ಳು ಮಾಹಿತಿ ಹರಡುತ್ತಿದ್ದಾರೆ. ಇದರ ನಡುವೆ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಖಾನ್ ಮೊಹಮ್ಮದಾಬಾದ್ ಇದೀಗ ಆಪೇರಶನ್ ಸಿಂದೂರ್ ಹಾಗೂ ಮಹಿಳಾ ಸೇನಾಧಿಕಾರಿಗಳ ವಿರುದ್ದ ವಿವಾದಾತ್ಮಕ ಪೋಸ್ಟ್ ಮಾಡಿ ಬೆಲೆ ತೆತ್ತಿದ್ದಾರೆ. ವಿವಾದಾತ್ಮಕ ಪೋಸ್ಟ್ ಕುರಿತು ಬಿಜೆಪಿ ಯುವ ಮೋರ್ಚಾ ಭಾರಿ ಪ್ರತಿಭಟನೆ ನಡೆಸಿ ದೂರು ದಾಖಲಿಸಿದೆ. ಇದರ ಬೆನ್ನಲ್ಲೇ ಪೊಲೀಸರು ಫ್ರೊಪೆಸರ್ ಅಲಿ ಖಾನ್ ಮೊಹಮ್ಮದಾಬಾದ್ ಅರೆಸ್ಟ್ ಆಗಿದ್ದಾರೆ.

ಮಹಿಳಾ ಸೇನಾಧಿಕಾರಿಗಳ ಕುರಿತು ಅವಹೇಳನಕಾರಿ ಪೋಸ್ಟ್
ದೆಹಲಿ ಅಶೋಕಾ ವಿಶ್ವವಿದ್ಯಾಲಯದ ಪ್ರೊಫೆಸರ್ ಅಲಿ ಕಾನ್ ಮೊಮ್ಮದಾಬಾದ್ ಇದೀಗ ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆಪರೇಶನ್ ಸಿಂದೂರ್ ಹಾಗೂ ಮಹಿಳಾ ಸೇನಾಧಿಕಾರಿಗಳ ವಿರುದ್ಧ ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಭಾರಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಯುವ ಮೋರ್ಚಾ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ದೆಹಲಿ ಪೊಲೀಸರು ಅಲಿ ಖಾನ್ ಮೊಹಮ್ಮದಾಬಾದ್‌ನ ಅರೆಸ್ಟ್ ಮಾಡಿದ್ದಾರೆ.

ಅಶೋಕಾ ವಿಶ್ವವಿದ್ಯಾಲಯ ಹೇಳುತ್ತಿರುವುದೇನು?
ತಮ್ಮ ವಿಶ್ವಿವಿದ್ಯಾಲಾಯದ ಪ್ರೊಫೆಸರ್ ಭಾರತೀಯ ಸೇನೆ, ಹಾಗೂ ಸೇನಾಧಿಕಾರಿಗಳ ಕುರಿತು ಮಾಡಿದ ವಿವಾದಾತ್ಮಕ ಪೋಸ್ಟ್‌ನಿಂದ ಅರೆಸ್ಟ್ ಆದ ಬೆನ್ನಲ್ಲೇ ಅಶೋಕಾ ವಿಶ್ವವಿದ್ಯಾಲಯ ಪ್ರತಿಕ್ರಿಯೆ ನೀಡಿದೆ. ಈ ಘಟನೆ ಕುರಿತು ಮಾಹಿತಿ ಕಲೆಹಾಕುತ್ತಿದ್ದೇವೆ. ಸದ್ಯ ಸುದ್ದಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಪೊಲೀಸರ ಎಲ್ಲಾ ತನಿಖೆಗೆ ವಿಶ್ವವಿದ್ಯಾಲಯ ಸಂಪೂರ್ಣ ನೆರವು ನೀಡಲಿದೆ. ಭಾರತೀಯ ಸೇನೆ ಹಾಗೂ ಸೇನಾಧಿಕಾರಿಗಳ ಅವಹೇಳನ ಸಹಿಸುವುದಿಲ್ಲ. ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಪ್ರೊಫೆಸರ್ ಮಾಡಿದ ಕಮೆಂಟ್ ವಿರುದ್ದಧ ಹರ್ಯಾಣ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇದರ ಬೆನ್ನಲ್ಲೇ ಪೊಲೀಸರು ಅಲಿ ಖಾನ್ ಬಂಧಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಅಲಿ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ತನ್ನ ಪೋಸ್ಟ್ ಹಾಗೂ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಇದು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.