ಶಾಲಾ ಕಾರ್ಯಕ್ರಮವೊಂದರಲ್ಲಿ, ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುವಾಗ ಸ್ಟೆಪ್ಸ್ ಮರೆಯಬಾರದೆಂದು ಶಿಕ್ಷಕಿಯೊಬ್ಬರು ಪ್ರೇಕ್ಷಕರಿಗೆ ಕಾಣದಂತೆ ಮರೆಯಲ್ಲಿ ನಿಂತು ನೃತ್ಯ ಮಾಡಿ ಮಾರ್ಗದರ್ಶನ ನೀಡಿದ್ದಾರೆ. ಮಕ್ಕಳ ಯಶಸ್ಸಿಗಾಗಿ ಅವರು ಪಟ್ಟ ಶ್ರಮದ ಈ ವೀಡಿಯೋ ವೈರಲ್ ಆಗಿದೆ.
ಪುಟ್ಟ ಮಕ್ಕಳ ಶಾಲಾ ಕಾರ್ಯಕ್ರಮವೇ ಒಂದು ಮೋಜಿನಿಂದ ಕೂಡಿರುವಂತಹದ್ದು, ಏನೂ ಅರಿಯದ ಪುಟ್ಟ ಮಕ್ಕಳ ಕೈಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿಸುವುದೇ ಒಂದು ದೊಡ್ಡ ಸಾಹಸ. ಅದು ಎಷ್ಟು ಕಷ್ಟ ಎಂದು ಪ್ರಾಥಮಿಕ ಶಾಲಾ ಅಥವಾ ನರ್ಸರಿ ಶಾಲೆಯ ಶಿಕ್ಷಕರಾದವರಿಗೆ ಚೆನ್ನಾಗಿ ಅರಿವಿರುತ್ತದೆ. ಏಕೆಂದರೆ ಮಕ್ಕಳು ಅವರದ್ದೇ ಲೋಕದಲ್ಲಿ ಇರುತ್ತಾರೆ. ಹೀಗಿರುವಾಗ ಒಂದು 5ರಿಂದ ಹತ್ತು ನಿಮಿಷದ ಡಾನ್ಸ್ ಕಾರ್ಯಕ್ರಮವನ್ನು ಯಾವುದೇ ತಪ್ಪಿಲ್ಲದಂತೆ ಆ ಮಕ್ಕಳ ಕೈಯಿಂದ ಮಾಡಿಸಿ ಪೋಷಕರ ಮುಂದೆ ಪ್ರಸ್ತುತಪಡಿಸುವುದೇ ಒಂದು ಸಾಹಸ ಹೀಗಿರುವಾಗ ಮಕ್ಕಳು ತುಂಬಿದ ಸಭೆಯಲ್ಲಿ ಸ್ಟೇಜ್ ಮೇಲೆ ಎಲ್ಲರ ಮುಂದೆ ಸರಿಯಾಗಿ ಡಾನ್ಸ್ ಮಾಡಬೇಕು ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಮಾಡಿರುವ ಸಾಹಸವೊಂದು ಭಾರಿ ವೈರಲ್ ಆಗಿದೆ.
ಅನೇಕ ಪುಟಾಣಿ ಮಕ್ಕಳಿಗೆ ಸ್ಟೇಜ್ ಎಂದರೆ ಸಾಕಷ್ಟು ಭಯವಿರುತ್ತದೆ. ಅದರ ಜೊತೆಗೆ ಜನರು ಎಂದರೂ ಸಾಕಷ್ಟು ಭಯವಿರುತ್ತದೆ. ಟೀಚರ್ ಮುಂದೆ ಚೆನ್ನಾಗಿಯೇ ಡಾನ್ಸ್ ಮಾಡುವ ಮಕ್ಕಳು ವೇದಿಕೆ ಮೇಲೆ ಬಂದಾಗ ಕೆಲ ಮಕ್ಕಳಿಗೆ ಕಾಲು ನಡುಕ ಶುರುವಾಗುತ್ತದೆ. ಕಲಿತಂತಹ ಸ್ಟೆಪ್‌ಗಳು ಹೇಳಬೇಕಾದ ಮಾತುಗಳು ಹಾಡುಗಳು ಮರೆತು ಹೋಗುತ್ತದೆ. ಹೀಗಾಗಿ ಮಕ್ಕಳು ಕೆಲವೊಮ್ಮೆ ಸ್ಟೇಜ್ ಮೇಲೆ ಬರುತ್ತಿದ್ದಂತೆ ಅಳುವುದಕ್ಕೆ ಶುರು ಮಾಡುತ್ತಾರೆ. ಹೀಗಿರುವಾಗ ಶಾಲಾ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಮಕ್ಕಳು ಸ್ಟೆಪ್ ಮರೆಯದಂತೆ ಶಿಕ್ಷಕಿ ಮಕ್ಕಳಿಗೆ ಮಾತ್ರ ಕಾಣುವಂತೆ ಮರೆಯಲ್ಲಿ ನಿಂತು ಅವರಿಗೆ ಸ್ಟೇಜ್ ಮೇಲೆ ಹೇಗೆ ಡಾನ್ಸ್ ಮಾಡಬೇಕು ಎಂದು ಹೇಳಿಕೊಡುತ್ತಿರುವ ವಿಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.
ವೀಡಿಯೋ ನೋಡಿದ ಅನೇಕರು ಮಕ್ಕಳ ಗೆಲುವಿಗಾಗಿ ಶ್ರಮ ಪಡುವ ಈ ಶಿಕ್ಷಕಿಯ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Ekta Munjal ಎಂಬುವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕಾಣುವಂತೆ ದೊಡ್ಡದಾದ ಸ್ಟೇಜ್ ಮೇಲೆ 20ಕ್ಕೂ ಹೆಚ್ಚು ಮಕ್ಕಳು ಡಾನ್ಸ್ ಮಾಡುತ್ತಿದ್ದರೆ, ವೇದಿಕೆಯ ಕೆಳಗೆ ಆದರೆ ಮಕ್ಕಳಿಗೆ ಕಾಣುವಂತೆ ಆದರೆ ವೇದಿಕೆಯ ಮುಂದಿರುವ ಜನರಿಗೆ ಕಾಣದಂತಿರುವ ಜಾಗದಲ್ಲಿ ನಿಂತು ನೃತ್ಯವನ್ನು ಮಾಡುತ್ತಾ ಮಕ್ಕಳಿಗೆ ಅದೇ ರೀತಿ ಮಾಡುವಂತೆ ಗೈಡ್ ಮಾಡುತ್ತಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ. ವೇದಿಕೆಯ ಮುಂಭಾಗದ ವೀಕ್ಷಕರಿಗೆ ಈ ಶಿಕ್ಷಕಿಯ ಶ್ರಮ ಕಾಣುತ್ತಿಲ್ಲ. ಆದರೆ ವೇದಿಕೆ ಮೇಲಿರುವ ಮಕ್ಕಳಿಗೆ ಶಿಕ್ಷಕಿ ನೃತ್ಯ ಮಾಡುತ್ತಿರುವುದು ಕಾಣುತ್ತಿದೆ. ಮಕ್ಕಳು ಟೀಚರ್ ಮಾಡುವುದನ್ನು ನೋಡಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸುಳಿವು ಬಿಡದೇ ಎಲ್ಲವನ್ನೂ ಸರಿಯಾಗಿ ಮಾಡಿದ್ದ ಹಂತಕ ಮಾಡಿದ್ದು ಒಂದೇ ಒಂದು ತಪ್ಪು
ಶಿಕ್ಷಕಿಯ ಈ ನಿಸ್ವಾರ್ಥ ಶ್ರಮ ನೋಡಿದ ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದಾರೆ. ಇವರು ಗುರು ಎಂಬುದಕ್ಕೆ ಸರಿಯಾದ ಉದಾಹರಣೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಶಿಕ್ಷಕಿಯ ಕಠಿಣಶ್ರಮ ಸಾರ್ಥಕವಾಯ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಮಕ್ಕಳ ಯಶಸ್ಸಿನ ಕೀರ್ತಿ ಈ ಶಿಕ್ಷಕಿಗೆ ಸಲ್ಲಬೇಕು ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಪ್ರತಿಯೊಬ್ಬರ ಜೀವನದಲ್ಲಿಯೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದು, ಗುರಿ ತಲುಪಬೇಕಾದರೆ ಹಿಂದೆ ಗುರು ಮುಂದೆ ಗುರಿ ಇರಬೇಕು ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲಿ ಶಿಕ್ಷಕರು ಮುಂದೆ ನಿಂತು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಇದನ್ನೂ ಓದಿ: ಅಳುತ್ತಲೇ ತನ್ನ 11 ವರ್ಷಗಳ ಅಂತರ್ಜಾತಿ ಪ್ರೀತಿಯ ಹೇಳಿಕೊಂಡ ಮಗಳಿಗೆ ತಂದೆ ಹೇಳಿದ್ದೇನು? : ವೀಡಿಯೋ


