ಕಾಲ ಎಷ್ಟೇ ಮುಂದುವರೆದಿದ್ದರೂ, ವಿಚಾರಗಳು ಎಷ್ಟೋ ಬದಲಾಗಿದ್ದರು. ಮಕ್ಕಳ ಮದುವೆ ಸಂಬಂಧದ ವಿಚಾರ ಬಂದಾಗ ಬಹುತೇಕ ಪೋಷಕರು ಹುಡುಗ/ಹುಡುಗಿ ಒಂದೇ ಜಾತಿ ಆಗಿರಬೇಕು ಎಂದು ಹೇಳುವುದು ಸಾಮಾನ್ಯವಾಗಿದೆ. ಹೀಗಿರುವಾಗ ಇಲ್ಲೊಂದು ಕಡೆ ಮಗಳ ಪ್ರೀತಿ ಕೇಳಿದ ತಂದೆ ಏನು ಹೇಳಿದ್ದಾರೆ ನೋಡಿ…
ಕಾಲ ಎಷ್ಟೇ ಮುಂದುವರೆದಿದ್ದರೂ, ವಿಚಾರಗಳು ಎಷ್ಟೋ ಬದಲಾಗಿದ್ದರು. ಮಕ್ಕಳ ಮದುವೆ ಸಂಬಂಧದ ವಿಚಾರ ಬಂದಾಗ ಬಹುತೇಕ ಪೋಷಕರು ಹುಡುಗ/ಹುಡುಗಿ ಒಂದೇ ಜಾತಿ ಆಗಿರಬೇಕು ಎಂದು ಹೇಳುವುದು ಸಾಮಾನ್ಯವಾಗಿದೆ. ಮಕ್ಕಳು ಪ್ರೀತಿಸುತ್ತಿದ್ದಾರೆ ಎಂಬ ವಿಚಾರ ಪೋಷಕರ ಗಮನಕ್ಕೆ ಬಂದಾಗಲೂ ಅಷ್ಟೇ ಮೊದಲು ಕೇಳುವುದೇ ಹುಡುಗನ ಜಾತಿಯನ್ನು ಪ್ರೀತಿಸಿದ, ಪ್ರೀತಿಯನ್ನು ಪೋಷಕರ ಮುಂದೆ ಹೇಳಲೆತ್ನಿಸಿದ ಅನೇಕರಿಗೆ ಇದರ ಅನುಭವ ಆಗಿರುತ್ತದೆ. ಅನೇಕರು ಇದೇ ಕಾರಣಕ್ಕೆ ಪೋಷಕರ ಮುಂದೆ ತಮ್ಮ ಪ್ರೀತಿಯನ್ನು ಹೇಳುವುದಕ್ಕೆ ಆಗಾದೇ ಏನೇನೋ ಮಾಡಿಕೊಂಡು ಬದುಕನ್ನು ಹಾಳು ಮಾಡಿಕೊಂಡು ಬಿಡುತ್ತಾರೆ. ಜಾತಿಯ ಭೂತವೆಂಬುದು ನಮ್ಮ ಸಮಾಜದಲ್ಲಿ ಇನ್ನೂ ಕರಾಳವಾಗಿದೆ ಎಂಬುದಕ್ಕೆ ನಮ್ಮ ಸಮಾಜದಲ್ಲಿ ನಡೆಯುತ್ತಿರುವಂತಹ ಹಲವು ಘಟನೆಗಳು ಸಾಕ್ಷಿಯಾಗಿವೆ. ಬೇರೆ ಜಾತಿಯವನನ್ನು ಪ್ರೀತಿಸಿದಳು/ಪ್ರೀತಿಸಿದನು ಎಂಬ ಕಾರಣಕ್ಕೆ ಮಕ್ಕಳ ಉಸಿರನ್ನೇ ನಿಲ್ಲಿಸಿದ ಅನೇಕ ಪೋಷಕರು ಇದ್ದಾರೆ. ಮಕ್ಕಳ ಪ್ರೀತಿಯನ್ನು ಬಹಳ ಸಹಜವೆಂಬಂತೆ ಒಪ್ಪಿಕೊಳ್ಳುವವರು ಬಹಳ ಕಡಿಮೆ. ಹೀಗಿರುವಾಗ ಇಲ್ಲೊಬ್ಬ ತಂದೆ ಮಗಳ ಪ್ರೀತಿಯನ್ನು ಬಹಳ ಸಹಜವಾಗಿ ಒಪ್ಪಿಕೊಂಡಿದ್ದು, ಈ ಅಪ್ಪ ಮಗಳ ಸಂಭಾಷಣೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
IndieBuzz Official ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಅನೇಕರು ಮಗಳ 11 ವರ್ಷಗಳ ಅಂತರ್ಜಾತಿಯ ಪ್ರೀತಿಯನ್ನು ಬಹಳ ಸಹಜವೆಂಬಂತೆ ಒಪ್ಪಿಕೊಂಡು ಅಳುತ್ತಿದ್ದ ಮಗಳನ್ನು ಸಮಾಧಾನಿಸಿದ ತಂದೆಯ ತಾಯಿ ಹೃದಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಮಗಳು ತನ್ನ ತಂದೆಯ ಬಳಿ ಕೊನೆಗೂ ತನ್ನ 11 ವರ್ಷಗಳ ಪ್ರೇಮ ಸಂಬಂಧವನ್ನು ಬಯಲು ಮಾಡುತ್ತಿದ್ದಾಳೆ. ತಂದೆ ತಮ್ಮ ಅಂತರ್ಜಾತಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಭಯದಿಂದಲೇ ಆ ಯುವತಿ ಬಹಳ ಭಯ ಹಾಗೂ ಆತಂಕದಿಂದಲೇ ಕಣ್ಣೀರಿಡುತ್ತಲೇ ತನ್ನ ಪ್ರೀತಿಯನ್ನು ಪೋಷಕರ ಮುಂದೆ ಅದರಲ್ಲೂ ತನ್ನ ತಂದೆಯ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: 4 ಲಕ್ಷ ಸ್ಟೈಫಂಡ್ ಕೊಟ್ಟು ಇಂಟರ್ನ್‌ಶಿಪ್‌ಗೆ ಅವಕಾಶ ನೀಡುತ್ತದೆ ಈ ಕಾಲೇಜು ವಾಸ ವೀಸಾ ಎಲ್ಲವೂ ಫ್ರೀ
ಈ ವೇಳೆ ಮಗಳು ಅಂತರ್ಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಕೋಪಗೊಳ್ಳದೇ ತಂದೆ ಬಹಳ ಶಾಂತವಾಗಿಯೇ ಆಕೆಯನ್ನು ಸಮಾಧಾನಿಸಿ ಆಕೆಯ ಪ್ರೇಮ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಮಗಳು ಹೇಳುವ ಮಾತುಗಳನ್ನೆಲ್ಲಾ ನಿಧಾನವಾಗಿ ಕೇಳುವ ತಂದೆ ಆಕೆಯನ್ನು ಅಳು ನಿಲ್ಲಿಸುವಂತೆ ಕೇಳುತ್ತಾರೆ. ಅಲ್ಲದೇ ಸಮಾಧಾನಿಸುತ್ತಾರೆ. ತಂದೆ ಮಗಳನ್ನು ಅರ್ಥ ಮಾಡಿಕೊಂಡಿರುವುದಕ್ಕೆ ಅವಳನ್ನು ಸಮಾಧಾನಿಸಿ ಶಾಂತವಾಗಿರುವುದಕ್ಕೆ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅನೇಕರು ಪ್ರತಿ ಹುಡುಗಿಗೂ ಇದೇ ರೀತಿಯ ತಂದೆ ಸಿಗಬೇಕು. ಮಕ್ಕಳ ಪ್ರೀತಿಯನ್ನು ಸಹಜವಾಗಿ ಒಪ್ಪಿಕೊಳ್ಳುವ ಪೋಷಕರು ಸಿಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ನನ್ನ ತಂದೆಯೂ ಹೀಗೆ ಇರಬೇಕಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಒಬ್ಬರು ಫೋಟೊಗ್ರಾಫರ್ ಈ ಜೋಡಿಗೆ ನಾನು ಉಚಿತವಾಗಿ ಫ್ರೀ ವೆಡ್ಡಿಂಗ್ ಫೋಟೋ ಶೂಟ್ ಮಾಡಿಕೊಡುವೆ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರತಿ ಹುಡುಗಿಗೂ ಹೀಗೆ ತಂದೆಯಿಂದ ಒಪ್ಪಿಗೆ ಸಿಗಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಂತೆಯೇ ನನ್ನ ತಂದೆಯೂ ಕೂಡ ನಾನು 13 ವರ್ಷಗಳ ಕಾಲ ಪ್ರೀತಿಸಿ ಮದ್ವೆಯಾಗಿದ್ದು, ಇಂದು ಎರಡೂ ಕುಟುಂಬಗಳು ಚೆನ್ನಾಗಿಯೇ ಇವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಸಮಾಜದಲ್ಲಿ ಇಂತಹ ತಂದೆಯರೇ ಹೆಚ್ಚು ಹೆಚ್ಚು ಇರಲಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಾಮೆಂಟ್ ಮಾಡಿ..


