Asianet Suvarna News Asianet Suvarna News

ಚಂದ್ರಯಾನ-3 ಉಡಾವಣೆ ಕೌಂಟ್‌ಡೌನ್ ಧ್ವನಿ ನೀಡಿದ್ದ ಇಸ್ರೋ ವಿಜ್ಞಾನಿ ಇನ್ನಿಲ್ಲ: ಹೃದಯಾಘಾತದಿಂದ ನಿಧನ

ಇಸ್ರೋ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಇಸ್ರೋ ವಿಜ್ಞಾನಿ ವಲರ್ಮತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 

n valarmathi isro scientist the voice behind chandrayaan 3 launch countdown dies due to heart attack ash
Author
First Published Sep 4, 2023, 8:33 AM IST

ಚೆನ್ನೈ (ಸೆಪ್ಟೆಂಬರ್ 4, 2023): ಚಂದ್ರಯಾನ - 3 ಯೋಜನೆ ವೇಳೆ ರಾಕೆಟ್ ಉಡಾವಣೆಗಾಗಿ ಕೌಂಟ್‌ಡೌನ್‌ಗೆ ಧ್ವನಿ ನೀಡಿದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿ ವಲರ್ಮತಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿ ಕ್ಷಣಗಣನೆಯಲ್ಲಿ  ಧ್ವನಿ ನೀಡಿದ ವಲರ್ಮತಿ ಅವರು ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಚಂದ್ರಯಾನ-3 ಉಡಾವಣೆ ವೇಲೆ ಇವರು ಕೊನೆಯ ಬಾರಿಗೆ ಕ್ಷಣಗಣನೆ ಅಥವಾ ಕೌಂಟ್‌ಡೌನ್‌ ನೀಡಿದ್ದರು.

ಇಸ್ರೋದ ಮಾಜಿ ನಿರ್ದೇಶಕ ಡಾ.ಪಿ.ವಿ.ವೆಂಕಟಕೃಷ್ಣನ್ ಅವರು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ ಮತ್ತು ಚಂದ್ರಯಾನ - 3 ಅವರ ಅಂತಿಮ ಕೌಂಟ್‌ಡೌನ್‌ ಘೋಷಣೆಯಾಗಿದೆ ಎಂದು ಹೇಳಿದರು.

ಇದನ್ನು ಓದಿ: Chandrayaan - 3: ವಿಕ್ರಮ್ ಲ್ಯಾಂಡರ್‌ ಇಳಿಸಲು ಅಸ್ಸಾಂನ ಈ ಯುವ ವಿಜ್ಞಾನಿಗಳ ಪಾತ್ರವೇನು ನೋಡಿ..!

“ಶ್ರೀಹರಿಕೋಟಾದಿಂದ ಇಸ್ರೋದ ಭವಿಷ್ಯದ ಮಿಷನ್‌ಗಳ ಕ್ಷಣಗಣನೆಗೆ ವಲರಮತಿ ಮೇಡಂ ಅವರ ಧ್ವನಿ ಇರುವುದಿಲ್ಲ. ಚಂದ್ರಯಾನ 3 ಅವರ ಅಂತಿಮ ಕ್ಷಣಗಣನೆ ಘೋಷಣೆಯಾಗಿತ್ತು. ಅನಿರೀಕ್ಷಿತ ನಿಧನ. ತುಂಬಾ ದುಃಖವಾಗುತ್ತಿದೆ. ಪ್ರಣಾಮ್ಸ್!" ಎಂದು ಡಾ. ವೆಂಕಟಕೃಷ್ಣನ್ X ನಲ್ಲಿ ಬರೆದಿದ್ದಾರೆ.

ಇನ್ನು, ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಇಸ್ರೋ ವಿಜ್ಞಾನಿ ನಿಧನಕ್ಕೆ ಹಲವು ಸಾಮಾಜಿಕ ಜಾಲತಾಣ ಬಳಕೆದಾರರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

"ಇದನ್ನು ಕೇಳಲು ತುಂಬಾ ದುಃಖವಾಗಿದೆ. ಕಳೆದ ವರ್ಷ ನಮ್ಮ ವಿಕ್ರಮ್-ಎಸ್ ಉಡಾವಣೆಗಾಗಿ ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದೇವೆ, ಇದಕ್ಕಾಗಿ ಅವರು ಉಡಾವಣಾ ಕೌಂಟ್‌ಡೌನ್‌ಗೆ ಧ್ವನಿಯಾಗಿದ್ದರು" ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: Chandrayaan-3 ಯಶಸ್ಸಿನ ಬಳಿಕ ಕೇರಳದ ಭದ್ರಕಾಳಿ ದೇಗುಲದಲ್ಲಿ ಇಸ್ರೋ ಅಧ್ಯಕ್ಷರ ಪ್ರಾರ್ಥನೆ: ಸೂರ್ಯ ಶಿಕಾರಿಗೆ ರೆಡಿ!

ಮತ್ತೊಬ್ಬ ಬಳಕೆದಾರರು  “ಜೈ ಹಿಂದ್ ....ಅವರ ಕೌಂಟ್‌ಡೌನ್‌ ಮೂಲಕವೇ ಅವರು ನೆನಪಿನಲ್ಲಿರುತ್ತಾರೆ. ....ಅಂತಿಮವಾಗಿ ಕೊನೆಗೊಂಡಿತು ಮತ್ತು ನಮಗೆ ಚಂದ್ರನಲ್ಲಿ ಶಿವಶಕ್ತಿ ಬಿಂದುವನ್ನು ನೀಡಿತು’’ ಎಂದು ಪೋಸ್ಟ್‌ ಮಾಡಿದ್ದಾರೆ.

“#AdityaL1 ಉಡಾವಣೆ ಸಂದರ್ಭದಲ್ಲಿ ಅವರ ಅನುಪಸ್ಥಿತಿಯನ್ನು ನಾನು ಗಮನಿಸಿದೆ. ಅವರು ಆಫೀಸಿನಿಂದ ಹೊರಗಿರಬಹುದು ಅಥವಾ ಇನ್ನೇನಾದರೂ ಇರಬಹುದು ಎಂದುಕೊಂಡೆ. ಆದರೆ ಈ ದುಃಖದ ಸುದ್ದಿಯನ್ನು ನಾನು ನಿರೀಕ್ಷಿಸಿರಲಿಲ್ಲ. ನಾನು ಅವರನ್ನು ನಿಜವಾಗಿಯೂ ಮಿಸ್‌ ಮಾಡಿಕೊಳ್ತೇನೆ. ಓಂ ಶಾಂತಿ" ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಇದನ್ನು ಓದಿ: Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಜುಲೈ 14 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-3 ಅನ್ನು ಉಡಾವಣೆ ಮಾಡಲಾಯಿತು. ಆಗಸ್ಟ್ 23 ರಂದು, ವಿಕ್ರಮ್ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಅನ್ನು ಒಳಗೊಂಡಿರುವ ಚಂದ್ರಯಾನ-3  ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿತು. ಈ ಮೂಲಕ ಈ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ.  

ಇದನ್ನೂ ಓದಿ: ಯಾರಪ್ಪಾ ಇವ್ನು ಪುಂಗಿದಾಸ! ನಾನೇ CHANDRAYAAN 3 ಲ್ಯಾಂಡರ್‌ ಡಿಸೈನರ್; ನಾಸಾ ಜತೆಗೂ ಕೆಲಸ ಮಾಡ್ತೀನಿ ಎಂದ ಭೂಪ

Follow Us:
Download App:
  • android
  • ios