Asianet Suvarna News Asianet Suvarna News

Mann ki baat: ಚಂದ್ರಯಾನ ಮಿಷನ್ ನವ ಭಾರತದ ಸ್ಪೂರ್ತಿ, ನಾರಿ ಶಕ್ತಿಯ ಜೀವಂತ ಉದಾಹರಣೆ: ಪ್ರಧಾನಿ ಮೋದಿ

ಚಂದ್ರಯಾನ 3 ಮಿಷನ್‌ನಲ್ಲಿ ಇಸ್ರೋ ವಿಜ್ಞಾನಿಗಳ ಶ್ಲಾಘನೀಯ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಹಾಗೂ, ಈ ಮಿಷನ್‌ ಭಾರತದ ಮಹಿಳಾ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದೂ ಮೋದಿ ಹೇಳಿದರು.

mann ki baat highlights pm modi talks on chandrayaan 3 g20 meet raksha bandhan ash
Author
First Published Aug 27, 2023, 12:36 PM IST

ನವದೆಹಲಿ (ಆಗಸ್ಟ್‌ 27, 2023): ಭಾನುವಾರ ಮನ್ ಕಿ ಬಾತ್ ಕಾರ್ಯಕ್ರಮದ 104 ನೇ ಸಂಚಿಕೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಈ ವೇಳೆ, ಚಂದ್ರಯಾನ 3 ಮಿಷನ್‌ನಲ್ಲಿ ಇಸ್ರೋ ವಿಜ್ಞಾನಿಗಳ ಶ್ಲಾಘನೀಯ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಹಾಗೂ, ಈ ಮಿಷನ್‌ ಭಾರತದ ಮಹಿಳಾ ಶಕ್ತಿಗೆ ಜೀವಂತ ಉದಾಹರಣೆಯಾಗಿದೆ ಎಂದೂ ಮೋದಿ ಹೇಳಿದರು. ಅಲ್ಲದೆ, ಜಿ20ಗೆ ಭಾರತ ಸಿದ್ಧವಾಗಿದೆ ಎಂದೂ ಪ್ರಧಾನಿ ತಿಳಿಸಿದ್ದಾರೆ. 

ಸೆಪ್ಟೆಂಬರ್ 8-10 ರವರೆಗೆ ದೆಹಲಿಯಲ್ಲಿ ನಡೆಯಲಿರುವ ಮುಂಬರುವ ಜಿ 20 ಶೃಂಗಸಭೆಗೆ ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಭಾನುವಾರ ಮನ್‌ ಕಿ ಬಾತ್‌ನಲ್ಲಿ ಹೇಳಿದ್ದಾರೆ. 
G20 ಅಥವಾ 20 ರಾಷ್ಟ್ರಗಳ ಗುಂಪು 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿರುವ ಅಂತರಸರ್ಕಾರಿ ವೇದಿಕೆಯಾಗಿದ್ದು, ಈ ವರ್ಷ, ಭಾರತವು ಬಹು-ರಾಷ್ಟ್ರೀಯ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಶ್ರೀನಗರದಲ್ಲಿಜಿ - 20 ಸಭೆಯ ಬಳಿಕ ಪ್ರವಾಸೋದ್ಯಮಕ್ಕೆ ಮತ್ತಷ್ಟು ಕಳೆ ಬಂದಿದೆ ಎಂದೂ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Mann Ki Baat: ಹುತಾತ್ಮರ ಸ್ಮರಣೆಗೆ ಶೀಘ್ರದಲ್ಲೇ 'ಮೇರಿ ಮಾತಿ ಮೇರಾ ದೇಶ್' ಅಭಿಯಾನ: ಮೋದಿ ಘೋಷಣೆ

ಅಲ್ಲದೆ, ವರ್ಲ್ಡ್ ಯೂನಿವರ್ಸಿಟಿ ಗೇಮ್ಸ್ 2023 ರ ವಿಜೇತರನ್ನು ಪ್ರಧಾನಿ ಮೋದಿ ಈ ವೇಳೆ ಶ್ಲಾಘಿಸಿದ್ದಾರೆ. ಈ ವೇಳೆ, ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕೆಲವು ಆಟಗಾರರೊಂದಿಗೆ ಸಂವಾದ ನಡೆಸಿದರು. ಇನ್ನೊಂದೆಡೆ, ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ಆಯೋಜನೆಯಾದ ಹರ್‌ ಘರ್‌ ತಿರಂಗಾ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಕಂಡುಬಂದಿದ್ದು, ತಿರಂಗಾ ಜೊತೆ 10 ಕೋಟಿಗೂ ಹೆಚ್ಚು ಸೆಲ್ಫಿ ಸಲ್ಲಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ಮಧ್ಯೆ, ಸಂಸ್ಕೃತ ಭಾಷೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಪ್ರಧಾನಿ ಮೋದಿ ತಮ್ಮ ರೇಡಿಯೋ ಭಾಷಣದಲ್ಲಿ ಶ್ಲಾಘಿಸಿದ್ದಾರೆ. “ಸಂಸ್ಕೃತವು ವಿಶ್ವದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಇದನ್ನು ಅನೇಕ ಆಧುನಿಕ ಭಾಷೆಗಳ ತಾಯಿ ಎಂದೂ ಕರೆಯುತ್ತಾರೆ. ಸಂಸ್ಕೃತವು ಅದರ ಪ್ರಾಚೀನತೆ ಮತ್ತು ಅದರ ವೈಜ್ಞಾನಿಕತೆ ಮತ್ತು ವ್ಯಾಕರಣಕ್ಕೆ ಹೆಸರುವಾಸಿಯಾಗಿದೆ ಎಂದೂ ತಿಳಿಸಿದ್ದಾರೆ. ಮುಂಬರುವ ಆಗಸ್ಟ್ 31 ರಂದು ಆಚರಿಸಲಾಗುವ ‘ವಿಶ್ವ ಸಂಸ್ಕೃತ ದಿನ’ದಂದು ಎಲ್ಲರಿಗೂ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ: Mann Ki Baat: ತುರ್ತು ಪರಿಸ್ಥಿತಿ ಭಾರತ ಇತಿಹಾಸದ ಕರಾಳ ದಿನ; ಸಂವಿಧಾನವೇ ಸರ್ವೋಚ್ಚ: ಪ್ರಧಾನಿ ಮೋದಿ

ಈ ವೇಳೆ,, ತೆಲುಗು ಭಾಷೆಯ ಮಹತ್ವದ ಕುರಿತು ಪ್ರಧಾನಿ ಮೋದಿ ಮಾತನಾಡಿದ್ದು, ಸಂಸ್ಕೃತದಂತೆಯೇ ತೆಲುಗು ಭಾರತದ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದೆ. ಆಗಸ್ಟ್ 29 ರಂದು ತೆಲುಗು ಭಾಷಾ ದಿನವನ್ನು ಆಚರಿಸಲಾಗುತ್ತದೆ ಎಂದೂ ಹೇಳೀದ್ದಾರೆ. ಇನ್ನೊಂದೆಡೆ, ದೇಶದ ಜನತೆಗೆ ರಕ್ಷಾ ಬಂಧನದ ಶುಭಾಶಯಗಳನ್ನು ಪ್ರಧಾನಿ ಮೋದಿ ಕೋರಿದ್ದಾರೆ. 

ಇದನ್ನೂ ಓದಿ: Mann Ki Baat: ವೀರ್ ಸಾವರ್ಕರ್, ಎನ್‌ಟಿ ರಾಮರಾವ್ ಅವರಿಗೆ ಮೋದಿ ನಮನ

Follow Us:
Download App:
  • android
  • ios