Asianet Suvarna News Asianet Suvarna News

ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ 'ತ್ರಿನಯನಿ' ನಟ ಚಂದು ಆತ್ಮಹತ್ಯೆ!

ಇಂದು ಆತ್ಮಹತ್ಯೆ ಮಾಡಿಕೊಂಡಿರುವ ನಟ ಚಂದು ಅವರು ಇತ್ತೀಚೆಗೆ ಅಪಘಾತದಲ್ಲಿ ತೀರಿಕೊಂಡ ನಟಿ ಪವಿತ್ರಾ ಜಯರಾಮ್ ಅವರ ಸ್ನೇಹಿತರಾಗಿದ್ದರು ಎನ್ನಲಾಗಿದೆ.

 Karthika Deepam and Trinayani Serial actor Chandu death srb
Author
First Published May 18, 2024, 8:03 AM IST

ಧಾರಾವಾಹಿ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಟ ಚಂದು ಅವರು ಮಣಿಕೊಂಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನಟ ಚಂದು ಅವರು 'ತ್ರಿನಯನಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಚಂದು ಅವರು ಪತ್ನಿ ಶಿಲ್ಪಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಚಂದು 2015 ರಲ್ಲಿ ಶಿಲ್ಪಾ ಪ್ರೇಮಾ ಅವರನ್ನು ವಿವಾಹವಾಗಿದ್ದರು. ಸದ್ಯ ಚಂದು ಅವರು 'ರಾಧಮ್ಮ ಪೆಳ್ಳಿ' ಮತ್ತು 'ಕಾರ್ತಿಕ ದೀಪಂ' ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. 

ಇಂದು ಆತ್ಮಹತ್ಯೆ ಮಾಡಿಕೊಂಡಿರುವ ನಟ ಚಂದು ಅವರು ಇತ್ತೀಚೆಗೆ ಅಪಘಾತದಲ್ಲಿ ತೀರಿಕೊಂಡ ನಟಿ ಪವಿತ್ರಾ ಜಯರಾಮ್ ಅವರ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಚಂದು ಆತ್ಮಹತ್ಯೆಗೆ ನಿಖರ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. 

ನಾಲ್ಕು ದಿನಗಳ ಹಿಂದೆ ನಟಿ ಪವಿತ್ರಾ ಜಯರಾಮ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಅದೇ ಕಾರಿನಲ್ಲಿದ್ದ ಚಂದ್ರಕಾಂತ್​ ಅಲಿಯಾಸ್​ ಚಂದು ಈಗ ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಕಣ್ಣೆದುರೇ ಪವಿತ್ರಾ ಜಯರಾಮ್ ಸಾವನ್ನಪ್ಪಿದ್ದನ್ನು ನೋಡಿ ನಟ ಚಂದು ಆಘಾತಕ್ಕೊಳಗಾಗಿದ್ದರು. ಅದೇ ನೋವಿನಲ್ಲಿ ಶುಕ್ರವಾರ ನೇಣಿಗೆ ಶರಣಾಗಿದ್ದಾರೆ.

ಪವಿತ್ರಾ ಜಯರಾಮ್ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ತೆಲಂಗಾಣದ ಮಣಿಕೊಂಡದಲ್ಲಿರುವ ತಮ್ಮ ಫ್ಲಾಟ್ ನಲ್ಲಿ ನೇಣಿಗೆ ಶರಣಾಗಿದ್ದಾರೆ. ಪವಿತ್ರಾ-ಚಂದು ತೆಲುಗಿನ ತ್ರಿನಯನಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಜೊತೆಯಲ್ಲೇ ವಾಸಿಸುತ್ತಿದ್ದರು, ಮದುವೆಯಾಗಿದ್ದರು ಎಂಬ ಮಾತುಗಳು ಹೇಳಿ ಬಂದಿದ್ದವು.

4 ದಿನಗಳ ಹಿಂದೆ ನಡೆದ ಕಾರು ಅಪಘಾತದಲ್ಲಿ ಚಂದು ಗಾಯಗೊಂಡಿದ್ದರು. ಗೆಳತಿಯ ಸಾವಿನಿಂದ ಸಾಕಷ್ಟು ನೊಂದಿದ್ದರು. ಯೂಟ್ಯೂಬ್ ಚಾನೆಲ್ ಗೆ ನೀಡಿದ ಸಂದರ್ಶನದಲ್ಲಿ ಅವರೇ ಇದನ್ನು ಹೇಳಿಕೊಂಡಿದ್ದರು. ಇದೀಗ ಚಂದು ಆತ್ಮಹತ್ಯೆಗೆ ಶರಣಾಗಿರುವುದು ಎಲ್ಲರಿಗೂ ಆಘಾತ ತಂದಿದೆ. ಪ್ರೀತಿ ಮದುವೆ ಬಗ್ಗೆ ಅವ್ರೇ ಹೇಳಿಕೊಂಡಿದ್ದಾರೆ. 

ಪವಿತ್ರ ಸಾವನ್ನು ಹತ್ತಿರದಿಂದ ನೋಡಿದ್ದ ಅವರಿಗೆ ದುಃಖ ತಡೆಯಲಾಗದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ 
ಚಂದು ಸಂಜೆ ವೇಳೆ ಜಿಮ್ ಕೋಚ್ ಗೆ ಕರೆ ಮಾಡಿದ್ದರಂತೆ. ಜಿಮ್ ಗೆ ಹೋಗೋಣ ಎಂದು ಹೇಳಿದ್ದರಂತೆ ಕೂಡ. ಆದರೆ ಆ ನಂತರ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಪವಿತ್ರಾ ಜಯರಾಮ್ ನಿಧನರಾದ ನಂತರ ಅವರ ಜತೆಗೆ ಕೊನೆಯದಾಗಿ ಕ್ಲಿಕ್ಕಿಸಿಕೊಂಡ ಫೋಟೋವನ್ನು ಚಂದ್ರಕಾಂತ್‌ ಅವರು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು. ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದೆಯಲ್ಲಾ ನಾನು ಹೇಗಿರಲಿ ಎಂಬರ್ಥದಲ್ಲಿ ಅವರು ಫೋಟೋಗೆ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಅವರನ್ನು ಅಗಲಿದ ನೋವು ಭಾದಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದರು.


ರಾಧಮ್ಮ ಪೆಳ್ಳಿ ಮತ್ತು ಕಾರ್ತಿಕ ದೀಪಂ,  ತ್ರಿನಯನಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಆತ್ಮಹತ್ಯೆಗೆ ಕಾರಣವೇನು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Latest Videos
Follow Us:
Download App:
  • android
  • ios