‘ಪುತ್ರ ರಾಹುಲ್ ಗಾಂಧಿಯನ್ನು ನಿಮ್ಮ ಸೇವೆಗೆ ಕಳುಹಿಸುತ್ತಿದ್ದೇನೆ. ಆತ ನಿಮ್ಮನ್ನು ನಿರಾಶೆ ಮಾಡುವುದಿಲ್ಲ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದಾರೆ.
ರಾಯ್‌ಬರೇಲಿ (ಮೇ.18): ‘ಪುತ್ರ ರಾಹುಲ್ ಗಾಂಧಿಯನ್ನು ನಿಮ್ಮ ಸೇವೆಗೆ ಕಳುಹಿಸುತ್ತಿದ್ದೇನೆ. ಆತ ನಿಮ್ಮನ್ನು ನಿರಾಶೆ ಮಾಡುವುದಿಲ್ಲ’ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಯ್‌ಬರೇಲಿಯಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದಾರೆ.
ಲೋಕಸಭೆ ಚುನಾವಣೆ ನಿತ್ಯತ್ತ ತಾವು ಬಿಟ್ಟು ಕೊಟ್ಟಿರುವ ಕ್ಷೇತ್ರದಲ್ಲಿ ರಾಹುಲ್(Rahul gandhi) ಪರ ಪ್ರಚಾರ ಮಾಡಿದ ಸೋನಿಯಾ(Soniya gandhi), ‘ಅತ್ತೆ ಇಂದಿರಾ ಗಾಂಧಿ ಕಲಿಸಿದ ಪಾಠವನ್ನೇ ನಾನು ಮಕ್ಕಳಾದ ರಾಹುಲ್ ಮತ್ತು ಪ್ರಿಯಾಂಕಾರಿಗೆ ಬೋಧಿಸಿದ್ದೇನೆ. ನನ್ನ ಜೀವನದಲ್ಲಿ ನನಗೆ ಎಲ್ಲವನ್ನು ನೀಡಿದ ನಿಮ್ಮ (ರಾಯ್‌ಬರೇಲಿ ಮತದಾರರ) ಸುಪರ್ದಿಗೆ ನನ್ನ ಪುತ್ರ ರಾಹುಲ್ ಗಾಂಧಿಯನ್ನು ಸೇವೆ ಮಾಡುವಂತೆ ಒಪ್ಪಿಸುತ್ತಿದ್ದೇನೆ. ಆತ ನಿಮಗೆ ಎಂದಿಗೂ ನಿರಾಶೆ ಮಾಡುವುದಿಲ್ಲ. ನನ್ನನ್ನು ಆಶೀರ್ವದಿಸಿದಂತೆ ರಾಹುಲ್‌ಗೂ ಬೆಂಬಲಿಸಿ’ ಎಂದು ಮನವಿ ಮಾಡಿದರು.
ರಶ್ಮಿಕಾ ಅಟಲ್ ಸೇತು ಜಾಹೀರಾತಿಗೆ ಕಾಂಗ್ರೆಸ್ ಕಿಡಿ
