ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತ್ನಿಗೆ ನೀಡಲಾಗುವ ಮಧ್ಯಂತರ ಜೀವನಾಂಶವು ಪತಿಯ ಆರ್ಥಿಕ ಶಕ್ತಿಯನ್ನು ಮೀರಬಾರದು ಎಂದು ದೆಹಲಿ ನ್ಯಾಯಾಲಯವೊಂದು ಸ್ಪಷ್ಟಪಡಿಸಿದೆ. ತಿಂಗಳಿಗೆ ₹1,840 ಜೀವನಾಂಶವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ಕೋರ್ಟ್ ವಜಾಗೊಳಿಸಿದೆ. ಪ್ರಕರಣ ವಿವರ ತಿಳಿಯಿರಿ

ಪತಿಯಿಂದ ಬೇರ್ಪಟ್ಟ ಪತ್ನಿಗೆ ನೀಡುವ ಜೀವನಾಂಶದ ಮೊತ್ತವು ಪತಿಯ ಆರ್ಥಿಕ ಸಾಮರ್ಥ್ಯವನ್ನು ಮೀರಬಾರದು ಎಂದು ದೆಹಲಿಯ ನ್ಯಾಯಾಲಯವೊಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಪತ್ನಿಗೆ ನೀಡಲಾಗಿದ್ದ ಮಧ್ಯಂತರ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಕೋರ್ಟ್ ಈ ಮಾತು ಹೇಳಿದೆ.

ಜೀವನಾಂಶ ನಿಗದಿಪಡಿಸುವಾಗ ಪತಿ ಆರ್ಥಿಕ ಸ್ಥಿತಿ ನೋಡುವುದ ಮುಖ್ಯ

ಮಹಿಳೆಯೊಬ್ಬರು ತಮಗೆ ನೀಡಲಾಗಿದ್ದ ತಿಂಗಳಿಗೆ ₹1,840 ಮಧ್ಯಂತರ ಜೀವನಾಂಶದ ಮೊತ್ತವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಜೀವನಾಂಶ ನಿಗದಿಪಡಿಸುವಾಗ ಪತಿಯ ಆದಾಯ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸುವುದು ಅತ್ಯಗತ್ಯ ಎಂದು ಸ್ಪಷ್ಟಪಡಿಸಿದೆ.

ಪತಿಯ ಸಂಪಾದನೆ ಮೀರಿ ಜೀವನಾಂಶ ನೀಡಲಾಗದು

ಜೀವನಾಂಶದ ಉದ್ದೇಶ ಪತ್ನಿಗೆ ಆರ್ಥಿಕ ಭದ್ರತೆ ನೀಡುವುದೇ ಹೊರತು, ಪತಿಯ ಮೇಲೆ ಅನಗತ್ಯ ಹೊರೆ ಹಾಕುವುದು ಅಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಪತಿಯ ಸಂಪಾದನೆಯನ್ನು ಮೀರಿ ಜೀವನಾಂಶವನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದ ನ್ಯಾಯಾಧೀಶರು.. ಈ ಮೂಲಕ, ಕೆಳ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಕಾರಣಗಳಿಲ್ಲ ಎಂದು ಸ್ಪಷ್ಟಪಡಿಸಿತು.

ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ಈ ಮಧ್ಯಂತರ ಜೀವನಾಂಶವನ್ನು ಮಂಜೂರು ಮಾಡಲಾಗಿತ್ತು. ಆದರೆ, ಈ ಮೊತ್ತವು ತೀರಾ ಕಡಿಮೆಯಾಗಿದೆ ಎಂದು ವಾದಿಸಿ ಮಹಿಳೆ ಮೇಲಿನ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಪತಿಯ ಆರ್ಥಿಕ ಸ್ಥಿತಿಗತಿಯನ್ನು ಪರಿಗಣಿಸಿಯೇ ಈ ಆದೇಶ ನೀಡಲಾಗಿದೆ ಎಂಬುದನ್ನು ಮನಗಂಡ ನ್ಯಾಯಾಲಯ, ಮೇಲ್ಮನವಿಯನ್ನು ತಿರಸ್ಕರಿಸಿದೆ.

ಅಂತಿಮವಾಗಿ, ಮಹಿಳೆಯ ಮನವಿಯನ್ನು ಪುರಸ್ಕರಿಸಲು ನಿರಾಕರಿಸಿದ ನ್ಯಾಯಾಲಯ, ಕೆಳ ನ್ಯಾಯಾಲಯದ ಆದೇಶವನ್ನೇ ಎತ್ತಿಹಿಡಿಯಿತು. ಈ ಮೂಲಕ, ಜೀವನಾಂಶದ ಪ್ರಕರಣಗಳಲ್ಲಿ ಪತಿಯ ಆರ್ಥಿಕ ಶಕ್ತಿಯು ಒಂದು ಪ್ರಮುಖ ಮಾನದಂಡ ಎಂಬುದನ್ನು ಮತ್ತೊಮ್ಮೆ ದೃಢಪಡಿಸಿದಂತಾಗಿದೆ.