ದಕ್ಷಿಣ ಭಾರತದ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಬಾವನೆ ಪಡೆಯುವ ನಟ ಯಾರು? ಪ್ರಭಾಸ್, ಅಲ್ಲೂ ಅರ್ಜುನ್, ಯಶ್, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ರಾಮ ಚರಣ್ ಸೇರಿದಂತೆ ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆದ ನಟ ಬೇರೊಬ್ಬರು ಇದ್ದಾರೆ. ಅವರು ಯಾರು ಗೊತ್ತಾ? ಇಲ್ಲಿದೆ ನೋಡಿ ಉತ್ತರ..
ದಕ್ಷಿಣ ಭಾರತದ ಸೂಪರ್ ಸ್ಟಾರ್ ಯಾರು?
ಸದ್ಯಕ್ಕೆ ಪ್ರಭಾಸ್ (Darling Prabhas) ಭಾರತದ ಚಿತ್ರರಂಗದಲ್ಲಿ ಅತಿ ದೊಡ್ಡ ಪ್ಯಾನ್-ಇಂಡಿಯಾ ಸ್ಟಾರ್ (Pan Indian Star) ಎನ್ನಲಾಗುತ್ತಿದೆ. ನಟ ಡಾರ್ಲಿಂಗ್ ಪ್ರಭಾಸ್ ಪ್ರತಿ ಚಿತ್ರಕ್ಕೆ 150 ಕೋಟಿಯಿಂದ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತದೆ. ಪ್ರಭಾಸ್ ನಂತರ ಈ ಪಟ್ಟ ಅಲ್ಲು ಅರ್ಜುನ್‌ಗೆ ಹೋಗುತ್ತದೆ. "ಪುಷ್ಪ 2" ಚಿತ್ರದ ಮೂಲಕ ಕಲೆಕ್ಷನ್ ಸುನಾಮಿ ಸೃಷ್ಟಿಸಿದ ನಟ ಅಲ್ಲೂ ಅರ್ಜುನ್ (Allu Arjun) ಈಗ ಸೂಪರ್ ಸ್ಟಾರ್ ಪಟ್ಟಕ್ಕೆ ಏರಿದ್ದಾರೆ ಎನ್ನಲಾಗುತ್ತಿದೆ.
ಜೊತೆಗೆ, ಕನ್ನಡದ ಪ್ಯಾನ್ ಇಂಡಿಯಾ ನಟ, ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೂಡ ಈ ರೇಸ್‌ನಲ್ಲಿ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮಿಳಿನ ದಳಪತಿ ವಿಜಯ್ ಕೂಡ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಟ. ಮುಂಬರಲಿರುವ 'ಅಟ್ಲಿ' ನಿರ್ದೇಶನದ ಚಿತ್ರಕ್ಕೆ ನಟ ದಳಪತಿ ವಿಜಯ್ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವದಂತಿ ಇದೆ.
ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಸಕ್ರಿಯ
ಕಾಲಿವುಡ್ ಸ್ಟಾರ್ ದಳಪತಿ ವಿಜಯ್ (Thalapathy Vijay) ಕೂಡ ಅತಿ ಹೆಚ್ಚು ಸಂಭಾವನೆ ಪಡಯುವ ನಟರಾದರೂ ಅವರು ಸದ್ಯಕ್ಕೆ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಅವರ ಮುಂದಿನ ಸಿನಿಮಾಜೀವನದ ಬಗ್ಗೆ ಈಗಲೇ ಏನೂ ಹೇಳೋದಕ್ಕೆ ಆಗಲ್ಲ. ಆದರೆ, ಪ್ರಭಾಸ್, ಅಲ್ಲೂ ಅರ್ಜುನ್, ಯಶ್, ಮಹೇಶ್ ಬಾಬು, ಜೂನಿಯರ್ ಎನ್‌ಟಿಆರ್, ರಾಮ ಚರಣ್ ಸೇರಿದಂತೆ ಎಲ್ಲರಿಗಿಂತ ಹೆಚ್ಚು ಸಂಭಾವನೆ ಪಡೆದ ನಟ ಬೇರೊಬ್ಬರು ಇದ್ದಾರೆ. ಅವರು ಯಾರು ಗೊತ್ತಾ?
ಇಲ್ಲಿಯವರೆಗೆ ಇಡೀ ಭಾರತದ ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆದ ನಟರೊಬ್ಬರಿದ್ದಾರೆ.. ಅವರೇ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಪ್ರಸ್ತುತ ಅವರು 150 ರಿಂದ 200 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದ್ದರೂ "ಜೈಲರ್" ಚಿತ್ರಕ್ಕಾಗಿ ಅವರು ಪಡೆದ ಸಂಭಾವನೆ ಬರೋಬ್ಬರಿ 250 ಕೋಟಿ ಎನ್ನಲಾಗುತ್ತದೆ. ಹೌದು, ತಲೈವಾ ರಜನಿಗೆ ಗೆ 150 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿತ್ತು.

ಸನ್ ಪಿಕ್ಚರ್ಸ್
ಆದರೆ ಆ ಚಿತ್ರ ಭರ್ಜರಿ ಯಶಸ್ಸಿನ ನಂತರ, ಸನ್ ಪಿಕ್ಚರ್ಸ್ ಮುಖ್ಯಸ್ಥರು ಅವರಿಗೆ ಇನ್ನೂ ನೂರು ಕೋಟಿ ರೂಪಾಯಿ ಹೆಚ್ಚುವರಿ ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ, ನಟ ರಜನಿಕಾಂತ್ ಅವರು 'ಜೈಲರ್' ಸಿನಿಮಾಗೆ ಪಡೆದ ಒಟ್ಟೂ ಸಂಭಾವನೆ 250 ಕೋಟಿ ರೂಪಾಯಿ ಎನ್ನಲಾಗಿದೆ. ಹೀಗಾಗಿ, ದಕ್ಷಿಣದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಾಯಕರಾಗಿ ರಜನಿಕಾಂತ್ ಅವರು ಇಡೀ ಭಾರತೀಯ ಸಿನಿಮಾರಂಗದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದ್ದಾರೆ.


