ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವಿನ ಕದನವಿರಾಮದ ಅನ್ವಯ, ಹೋರ್ಮುಜ್ ಜಲಸಂಧಿಯಲ್ಲಿ ದಿನಕ್ಕೆ 15 ಹಡಗುಗಳಿಗೆ ಇರಾನ್ ಅನುಮತಿಯೊಂದಿಗೆ ಸಾಗಲು ಅವಕಾಶ ನೀಡಲಾಗಿದೆ. ಆದರೆ, ಜಲಸಂಧಿಯ ರಕ್ಷಣೆಗೆ ಮುಂದಾಗುವಂತೆ ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪಿಯನ್ ಒಕ್ಕೂಟಕ್ಕೆ ಕರೆ ನೀಡಿದ್ದಾರೆ.
- Home
- News
- India News
- India latest news live: ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ
India latest news live: ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ

ಕೋಲ್ಕತಾ: ಪ.ಬಂಗಾಳದಲ್ಲಿ ಚುನಾವಣಾಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ 7ನೇ ವೇತನ ಆಯೋಗ ಜಾರಿ ಸೇರಿ 6 ಗ್ಯಾರಂಟಿಗಳನ್ನು ಗುರುವಾರ ಘೋಷಿಸಿದ್ದಾರೆ. ಹಲ್ಲಿಯಾದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, 'ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಾನೂನು ಸುವ್ಯವಸ್ಥೆ ಸ್ಥಾಪಿಸುತ್ತೇವೆ. ಒಳನುಸುಳುಕೋರರನ್ನು ಹೊರಹಾಕುತ್ತೇವೆ, 7ನೇ ವೇತನ ಆಯೋಗ ಜಾರಿಗೆ ತರುತ್ತೇವೆ, ಮಹಿಳಾ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ. ಇವು ಮೋದಿಯ ಗ್ಯಾರಂಟಿ' ಎಂದು ಹೇಳಿದರು.
India latest news live:ಹೋರ್ಮುಜ್ ಮೂಲಕ ನಿತ್ಯ 15 ಹಡಗು ಸಾಗಲು ಇರಾನ್ ಅಸ್ತು - ಹೋರ್ಮುಜ್ ಜಲಸಂಧಿ ರಕ್ಷಣೆಗೆ ಧಾವಿಸಿ - ಇ.ಯು.ಗೆ ಟ್ರಂಪ್ ಕರೆ
India latest news live:ಪಂಚರಾಜ್ಯ ಚುನಾವಣೆ - ಕೇರಳ, ಪುದುಚೇರಿ, ಅಸ್ಸಾಂನಲ್ಲಿ ದಾಖಲೆಯ ಮತದಾನ
India latest news live:ಸ್ವಂತ ಕಾರೂ ಇಲ್ಲದ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ - ದೀದಿ ಆಸ್ತಿ ಬರೀ 15.4 ಲಕ್ಷ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎನಿಸಿಕೊಂಡಿದ್ದು, ಕಳೆದ 5 ವರ್ಷಗಳಲ್ಲಿ ಅವರ ಆಸ್ತಿ 1.35 ಲಕ್ಷ ರು. ಇಳಿಕೆಯಾಗಿದೆ. ಚುನಾವಣಾ ಅಫಿಡವಿಟ್ ಪ್ರಕಾರ, ಅವರ ಪ್ರಸ್ತುತ ಆಸ್ತಿ ಕೇವಲ 15.37 ಲಕ್ಷ ರು. ಅವರ ಬಳಿ ಸ್ವಂತ ವಾಹನವಿಲ್ಲ ಮತ್ತು ಯಾವುದೇ ಹೂಡಿಕೆ ಇಲ್ಲ.
India latest news live:Supreme Court on temple entry - ಕೆಲವು ಪಂಗಡಗಳಿಗೆ ದೇಗುಲ ಪ್ರವೇಶ ನಿರ್ಬಂಧ ಹಿಂದೂ ಧರ್ಮಕ್ಕೆ ಮಾರಕ - ಸುಪ್ರೀಂ
ಎಲ್ಲಾ ದೇವಾಲಯ ಮತ್ತು ಮಠಗಳಿಗೆ ಪ್ರತಿಯೊಬ್ಬರಿಗೂ ಪ್ರವೇಶವಿರಬೇಕು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಶಬರಿಮಲೆ ಸೇರಿದಂತೆ ದೇಗುಲ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ, ಯಾವುದೇ ಪಂಗಡವನ್ನು ಹೊರಗಿಡುವುದು ಹಿಂದೂ ಧರ್ಮಕ್ಕೆ ಹಾನಿಕಾರಕ ಎಂದು ಸಾಂವಿಧಾನಿಕ ಪೀಠ ಹೇಳಿದೆ.