ಹಣ ಕಂಡ್ರೆ ಹೆಣ ಕೂಡ ಬಾಯಿಬಿಡುತ್ತೆ ಎಂಬ ಮಾತಿದೆ. ಹೀಗಿರುವಾಗ 500 ರೂಪಾಯಿ ನೋಟು ಕಾಲ ಕೆಳಗೆ ಬಿದ್ದಿದ್ದರೆ ಯಾರು ಸುಮ್ಮನಿರುತ್ತಾರೆ. ಅತ್ತಿತ್ತ ನೋಡಿ ಮೆಲ್ಲನೇ ಎತ್ತಿ ಜೇಬಿಗಿಳಿಸಿ ಬಿಡುತ್ತಾರೆ. ಹಿಗಿರುವಾಗ ಇಲ್ಲೊಂದು ಕಡೆ ವೃದ್ಧನ ಪ್ರಾಮಾಣಿಕತೆಯ ವೀಡಿಯೋವೊಂದು ಭಾರಿ ವೈರಲ್ ಆಗಿದೆ.

ಹಣ ಕಂಡ್ರೆ ಹೆಣ ಕೂಡ ಬಾಯಿಬಿಡುತ್ತೆ ಎಂಬ ಮಾತಿದೆ. ಹೀಗಿರುವಾಗ 500 ರೂಪಾಯಿ ನೋಟು ಕಾಲ ಕೆಳಗೆ ಬಿದ್ದಿದ್ದರೆ ಯಾರು ಸುಮ್ಮನಿರುತ್ತಾರೆ. ಅತ್ತಿತ್ತ ನೋಡಿ ಮೆಲ್ಲನೇ ಎತ್ತಿ ಜೇಬಿಗಿಳಿಸಿ ಬಿಡುತ್ತಾರೆ. ಹೀಗಿರುವಾಗ ಇಲ್ಲೊಬ್ಬರು ವೃದ್ಧರು ತಮ್ಮ ಕಾಲ ಕೆಳಗ 500 ರೂಪಾಯಿ ಬಿದ್ದಿದ್ದರು, ಅದನ್ನು ಪಕ್ಕದಲ್ಲಿದ್ದವರು ಅವರಿಗೆ ಎತ್ತಿ ಕೊಟ್ಟರೂ ಅವರು ಅದನ್ನು ತೆಗೆದುಕೊಳ್ಳದೇ ಅದು ತನ್ನದಲ್ಲ ಎಂದು ಸುಮ್ಮನಾಗಿದ್ದಾರೆ. ಈ ವೃದ್ಧನ ಪ್ರಾಮಾಣಿಕತೆಯನ್ನು ಸೆರೆ ಹಿಡಿದ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

oye_roaster05 ಎಂಬ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿರುವ Golu Yadav ಎಂಬುವವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಚಾಚಾ ರಾಕ್ಡ್ ಐ ಎಮ್ ಶಾಕ್ಡ್ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಅವರು ಚಾಚಾ ರಾಕ್ಡ್ ಐ ಆಮ್ ಶಾಕ್ಡ್ ಎಂದು ಬರೆದಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಕಾಣುವಂತೆ ಲುಂಗಿ ಉಟ್ಟುಕೊಂಡು ಟೀ ಶರ್ಟ್ ಧರಿಸಿ ಹೆಗಲ ಮೇಲೊಂದು ಟವೆಲ್ ಹಾಕಿಕೊಂಡಿರುವ ವೃದ್ಧರೊಬ್ಬರು ಬೀದಿಯ ಕಟ್ಟೆಯ ಮೇಲೆ ಕುಳಿತಿದ್ದಾರೆ, ಇವರ ಪ್ರಾಮಾಣಿಕತೆಯನ್ನು ಚೆಕ್ ಮಾಡುವುದಕ್ಕಾಗಿ ಯುವಕನೋರ್ವ ಅವರ ಒಂದು ಬದಿಯಲ್ಲಿ ಅವರಿಗೆ ತಿಳಿಯದಂತೆ 500 ರೂಪಾಯಿಯನ್ನು ಎಸೆಯುತ್ತಾನೆ ನಂತರ ಅವರ ಬಳಿ ಬಂದು ನಿಮ್ಮ 500 ರೂಪಾಯಿ ಬಿದ್ದಿದೆ ನೋಡಿ, ಇದು ನಿಮ್ಮದಾ ಎಂದು ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ನನ್ನದಲ್ಲ ಎಂದು ಹೇಳುತ್ತಾರೆ. ನಿಮ್ಮದಲ್ಲವೇ ಹಾಗಾದರೆ ಈ ಹಣವನ್ನು ನಾನು ತೆಗೆದುಕೊಳ್ಳಲೇ ನೀವು ಸುಳ್ಳು ಹೇಳುತ್ತಿಲ್ಲ ತಾನೆ ಎಂದು ಯುವಕ ಅಜ್ಜನ ಬಳಿ ಕೇಳುತ್ತಾನೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು ಹ ಸರಿ ಎಂದು ಹೇಳುತ್ತಾರೆ.

ಇದನ್ನೂ ಓದಿ: 2700 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಮಣಿಪುರ ಮಿಜೋರಾಂನಲ್ಲಿ ವಾಸಿಸುವ ಇಸ್ರೇಲಿಗರು ಮತ್ತೆ ತವರಿಗೆ

ಅಜ್ಜನ ಪ್ರಾಮಾಣಿಕತೆಗೆ ಆ ಯುವಕ ಫಿದಾ ಆಗಿದ್ದು, ಖುಷಿಯಿಂದ ಅವರ ಬೆನ್ನು ತಟ್ಟುತ್ತಾನೆ. ಅಜ್ಜ ನನಗೆ ಅಚ್ಚರಿ ನೀಡಿದರು ಎಂದು ಅವರು ಬರೆದುಕೊಂಡಿದ್ದಾರೆ. ಇಂದಿನ ಕಾಲದಲ್ಲಿ 1 ರೂಪಾಯಿ ಸಿಕ್ಕರೂ ಬಿಡುವುದಿಲ್ಲ. ಹೀಗಿರುವಾಗ ತಾತ 500 ರೂಪಾಯಿಯನ್ನು ನನದಲ್ಲ ಎಂದು ನಿರಾಕರಿಸಿದ್ದು, ಅನೇಕರನ್ನು ಅಚ್ಚರಿಗೊಳಿಸಿತು. ಈ ವೀಡಿಯೋ ನೋಡಿದ ಜನ ಪ್ರಪಂಚದಲ್ಲಿ ಇನ್ನೂ ಪ್ರಾಮಾಣಿಕತೆ ಇದೆ. ಇಂತಹ ಜನರಿಂದ ಮಳೆ ಬೆಳೆ ಇನ್ನೂ ಕೂಡ ಆಗುತ್ತಿದೆ ಎಂದೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. ಬಾಬಾ ಬಡವನಿರಬಹುದು ಆದರೆ ಮೋಸಗಾರನಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಮತ್ತೆ ಮತ್ತೆ ನಮ್ಮ ಹೃದಯ ಗೆದ್ದರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಡವರ ಮನಸ್ಸು ಶ್ರೀಮಂತವಾಗಿರುತ್ತದೆ ಎಂದು ಕೇಳಿದ್ದೆ. ಆದರೆ ಇವತು ನೋಡಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಜನರು ಜಗತ್ತಿನಲ್ಲಿ ಬಹಳ ಕಡಿಮೆ ಜನ ಇರ್ತಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಅದೇನೆ ಇರಲಿ ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.

ಇದನ್ನೂ ಓದಿ: 1997ರಲ್ಲಿ ಜನರ ಹೊಸ ವರ್ಷದ ರೆಸಲ್ಯೂಷನ್ ಹೀಗಿತ್ತು: ವೀಡಿಯೋ ಭಾರಿ ವೈರಲ್