ಭೂ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬದವರ ಜೊತೆ ಅಸಮಾಧಾನಗೊಂಡಿದ್ದ ನಿವೃತ್ತ ಯೋಧನೋರ್ವ ತನ್ನ ತಾಯಿ ಅಣ್ಣ ಅತ್ತಿಗೆ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಆಘಾತಕಾರಿ ಘಟನೆ ಹರ್ಯಾಣದ ಅಂಬಾಲಾದಲ್ಲಿ ನಡೆದಿದೆ. 

ಅಂಬಾಲಾ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಕುಟುಂಬದವರ ಜೊತೆ ಅಸಮಾಧಾನಗೊಂಡಿದ್ದ ನಿವೃತ್ತ ಯೋಧನೋರ್ವ ತನ್ನ ತಾಯಿ ಅಣ್ಣ ಅತ್ತಿಗೆ ಹಾಗೂ ಅವರ ಮೂವರು ಮಕ್ಕಳು ಸೇರಿದಂತೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡಿದ ಆಘಾತಕಾರಿ ಘಟನೆ ಹರ್ಯಾಣದ ಅಂಬಾಲಾದಲ್ಲಿ ನಡೆದಿದೆ. ಹೆತ್ತಮ್ಮ ಒಡಹುಟ್ಟಿದ ಅಣ್ಣ, ಮೂವರು ಪುಟ್ಟ ಮಕ್ಕಳು ಯಾರ ಮೇಲೂ ಕರುಣೆ ತೋರದ ಈತ ಎಲ್ಲರನ್ನು ಹತ್ಯೆ ಮಾಡಿ ಬಳಿಕ ಸುಟ್ಟು ಹಾಕಲು ಯತ್ನಿಸಿದ್ದಾನೆ. ಅಂಬಾಲದ ನರೈನ್‌ಗರ್‌ನ ರತೋರ್ ಗ್ರಾಮದ ಬಳಿ ಭಾನುವಾರ ರಾತ್ರಿ ಎಲ್ಲರೂ ನಿದ್ದೆಯಲ್ಲಿದ್ದಾಗಲೇ ಈತ ಕೃತ್ಯವೆಸಗಿದ್ದಾನೆ. ಕೊಲೆ ಮಾಡಿದ ನಂತರ ಆತ ಮನೆಯಲ್ಲೇ ಶವ ಸುಡಲು ಯತ್ನಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ಬಳಿಕ ನಿವೃತ್ತ ಯೋಧನನ್ನು ಪೊಲೀಸರು ಬಂಧಿಸಿದ್ದಾರೆ. 

ಈ ಅವಘಡದಲ್ಲಿ ಒಂದೇ ಕುಟುಂಬದ ಆರು ಜನ ಸಾವಿಗೀಡಾಗಿದ್ದಾರೆ. ಅಲ್ಲದೇ ಆತ ತನ್ನ ತಂದೆಯ ಮೇಲೂ ಕೊಡಲಿಯಿಂದ ಹಲ್ಲೆ ಮಾಡಿದ್ದಾನೆ. ಇದರಿಂದ ತಂದೆಗೂ ಗಾಯಗಳಾಗಿದ್ದು, ಜೀವಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಆತ ಸ್ಥಳದಿಂದ ಪರಾರಿಯಾಗಿದ್ದ ಆದರೆ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಭೂಷಣ್‌ ಕುಮಾರ್‌ ಎಂಬಾತನೇ ಹೀಗೆ ತನ್ನ ಇಡೀ ಕುಟುಂಬದವರನ್ನು ಹತ್ಯೆ ಮಾಡಿದ ವ್ಯಕ್ತಿ. ಕೊಲೆಯಾದವರನ್ನು ಭೂಷಣ್‌ಕುಮಾರ್‌ನ ತಾಯಿ 60 ವರ್ಷದ ಸರೂಪಿ ದೇವಿ, ಸೋದರ 35 ವರ್ಷದ ಹರೀಶ್‌ ಕುಮಾರ್, ಅತ್ತಿಗೆ 32 ವರ್ಷದ ಸೋನಿಯಾ, ಮಕ್ಕಳಾದ 7 ವರ್ಷದ ಪರಿ, 5 ವರ್ಷದ ಯಶಿಕಾ ಹಾಗೂ ಆರು ತಿಂಗಳ ಮಗು ಮಯಾಂಕ್ ಎಂದು ಗುರುತಿಸಲಾಗಿದೆ. 

ಅಮ್ಮನಿಗೆ ಸಾಲ ಕೊಟ್ಟು ಮಗಳನ್ನು ಪ್ರೀತಿಸಿದ; ಮದುವೆಯಾಗು ಎಂದಿದ್ದಕ್ಕೆ ಕೊಲೆ ಮಾಡಿ ಹೂತು ಹಾಕಿದನು!

ಸೋದರರ ನಡುವೆ ಆಸ್ತಿಗೆ ಸಂಬಂಧಿಸಿದಂತೆ ವಿವಾದವಿತ್ತು ಎಂದು ಪೊಲೀಸರು ಹೇಳಿದ್ದಾರೆ. ಆರೋಪಿ ಭೂಷಣ್‌ಕುಮಾರ್ ಘಟನೆ ಬಳಿಕ ಪರಾರಿಯಾಗಿದ್ದ. ಆತನ ಪತ್ತೆಗೆ ತಂಡ ರಚನೆ ಮಾಡಿ ಬಂಧಿಸಲಾಗಿದ್ದು, ಆತನ ವಿಚಾರಣೆ ನಡೆಯುತ್ತಿದೆ ಎಂದು ಅಂಬಲಾದ ಎಸ್‌ಎಸ್‌ಪಿ ಸುರೀಂದರ್ ಸಿಂಗ್ ಭೋರಿಯಾ ಹೇಳಿದ್ದಾರೆ. ಭೂಷಣ್‌ಕುಮಾರ್ ತಂದೆ ಓಂ ಪ್ರಕಾಶ್ ಆತನನ್ನು ಈ ಕೊಲೆ ನಡೆಯದಂತೆ ತಡೆಯಲು ಯತ್ನಿಸಿದ್ದು, ಗಂಭೀರ ಗಾಯಗೊಂಡಿದ್ದಾರೆ. ತಮ್ಮ ಗಾಯಗಳಾ ನಂತರವೂ ಸಮೀಪದ ಮನೆಯವರನ್ನು ಕರೆಯುವಲ್ಲಿ ಅವರು ಯಶಸ್ವಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ತಂದೆಯಿಂದಲೇ ಮಗ-ಸೊಸೆಗೆ ಕಿರುಕುಳ; ಮನನೊಂದು ಪುತ್ರ ಆತ್ಮಹತ್ಯೆ!