ಅಮ್ಮನಿಗೆ ಸಾಲ ಕೊಟ್ಟು ಮಗಳನ್ನು ಪ್ರೀತಿಸಿದ; ಮದುವೆಯಾಗು ಎಂದಿದ್ದಕ್ಕೆ ಕೊಲೆ ಮಾಡಿ ಹೂತು ಹಾಕಿದನು!

ಶಿವಮೊಗ್ಗದ ಯುವಕ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ತಾಯಿಗೆ ಸಾಲ ಕೊಟ್ಟು, ಆಕೆಯ ಮಗಳನ್ನೇ ಪ್ರೀತಿ ಮಾಡಿದನು. ಮದುವೆಯಾಗು ಎಂದಿದ್ದಕ್ಕೆ ಕೊಲೆ ಮಾಡಿ ಹೂತು ಹಾಕಿದನು.

Koppa young woman Soumya Murder Case Truth Revealed Shivamogga young man killed and buried sat

ಶಿವಮೊಗ್ಗ (ಜು.25): ಖಾಸಗಿ ಫೈನಾನ್ಸ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಸಾಗರ ಮೂಲದ ಸೃಜನ್ 2021ರಲ್ಲಿ ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಸಂಸ್ಥೆಯಿಂದ ಕೊಟ್ಟಿದ್ದ ಸಾಲದ ಹಣ ಸಂಗ್ರಹನೆ ಮಾಡುತ್ತಿದ್ದನು. ಆಗಾಗ, ಇದೇ ಬ್ರ್ಯಾಂಚ್ ವ್ಯಾಪ್ತಿಯ ಕೊಪ್ಪ ತಾಲೂಕಿಗೂ ಬಂದು ಹಣ ಕಲೆಕ್ಷನ್ ಮಾಡಿಕೊಂಡು ಹೋಗುತ್ತಿದ್ದನು. ಆಗ ಮೃತ ಯುವತಿ ಸೌಮ್ಯಳಿಗೂ ಸಾಲ ಕೊಟ್ಟಿದ್ದ ಫೈನಾನ್ಸ್ ಸಂಸ್ಥೆಯ ಪ್ರತಿನಿಧಿಯಾಗಿ ಹಣ ಪಾವತಿಸಿಕೊಳ್ಳಲು ಬರುತ್ತಿದ್ದ ಸೃಜನ್, ಅಲ್ಲಿ ಸೌಮ್ಯಾಳನ್ನು ಪರಿಚಯ ಮಾಡಿಕೊಂಡಿದ್ದಾನೆ. ನಂತರ ಆಕೆಯೊಂದಿಗೆ ಚಾಟಿಂಗ್ ಮಾಡುತ್ತಾ, ಸ್ನೇಹಿತರಾಗಿದ್ದಾರೆ. ಇವರಿಬ್ಬರ ಸ್ನೇಹ ಕೆಲವೇ ದಿನಗಳಲ್ಲಿ ಸಲುಗೆಗೆ ತಿರುಗಿ ಪ್ರೀತಿಯಾಗಿ ಬದಲಾಗಿದೆ.

ಸೃಜನ್ ಹಾಗೂ ಸೌಮ್ಯಾ ಇಬ್ಬರೂ ಪ್ರೀತಿಯಲ್ಲಿ ಮಿಂದೇಳುತ್ತಾ ಪ್ರಣಯ ಪಕ್ಷಿಗಳಾಗಿ ಹಾರಾಡುತ್ತಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ಸೌಮ್ಯಾಳ ತಾಯಿಗೂ ತಿಳಿದಿತ್ತು. ಜತೆಗೆ ಅವರು ಮದುವೆಗೆ ಒಪ್ಪಿದ್ದರು. ಆದರೆ, ಕೆಳ ಸಮುದಾಯದ ಸೌಮ್ಯಾಳನ್ನು ಮೇಲ್ವರ್ಗದ ಸೃಜನ್ ಮದುವೆ ಆಗುವುದಕ್ಕೆ ಒಪ್ಪಿರಲಿಲ್ಲ. ಈಗಲೇ ಮದುವೆ ಬೇಡ, ಮನೆಯ ಜವಾಬ್ದಾರಿ ನನಗಿದ್ದು, ಆ ಜವಾಬ್ದಾರಿ ಮುಗಿಸಿದ ಬಳಿಕ ಮದುವೆ ಮಾಡಿಕೊಳ್ಳುವುದಾಗಿ ಹೇಳಿ ಮದುವೆಯನ್ನು ಮುಂದೂಡಿದ್ದನು ಎಂದು ಪೊಲೀಸರ ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.

ಶಿವಮೊಗ್ಗ: ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಗಂಡನ ಮನೆಗೆ ಹೊರಟಿದ್ದ ಯುವತಿ ದಾರಿ ಮಧ್ಯದಲ್ಲೇ ಭೀಕರ ಹತ್ಯೆ!

ಇನ್ನು ಜು.2ರಂದು ಮನೆಯಿಂದ ಸೃಜನ್ ಜೊತೆಗೆ ಹೋಗಿದ್ದ ಸೌಮ್ಯಾ ರಾತ್ರಿಯಾದರೂ ವಾಪಸ್ ಮನೆಗೆ ಬಂದಿರಲಿಲ್ಲ. ಸೌಮ್ಯಾಳ ಪ್ರೀತಿ ವಿಷಯ ಗೊತ್ತಿದ್ದ ಆಕೆಯ ತಾಯಿ, ಮಗಳ ಮೊಬೈಲ್‌ಗೆ ಫೋನ್ ಮಾಡಿದ್ದರು. ಆದರೆ, ಆಕೆಯ ಮೊಬೈಲ್ ಸ್ವಿಚ್ ಆಫ್‌ ಆಗಿತ್ತು. ಬಳಿಕ ಸೃಜನ್‌ಗೆ ಫೋನ್ ಮಾಡಿದಾಗ ಮೊಬೈಲ್ ಬ್ಲೂಟೂತ್ ಕೊಡಿಸಿ ಬಸ್ ಹತ್ತಿಸಿದ್ದೆ ಎಂದು ಸುಳ್ಳು ಹೇಳಿದ್ದನು. ಆತಂಕದಿಂದ ಪಾಲಕರು ಜು.3ರಂದು ಕೊಪ್ಪ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಯುವತಿ ಪತ್ತೆಯ ಜಾಡು ಹಿಡಿದ ಪೊಲೀಸರಿಗೆ ಸೃಜನ್ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ.

ನನಗೆ ಆರೋಗ್ಯ ತರಬೇತಿಗೆ ಹೋಗುವುದಿದೆ ಎಂದು ಮನೆಯಲ್ಲಿ ಹೇಳಿದ್ದ ಸೌಮ್ಯಾ ಜು.2ರಂದು ತನ್ನ ಪ್ರಿಯತಮ ಸೃಜನ್‌ನನ್ನು ನೋಡಲು ಸಾಗರಕ್ಕೆ ಬಂದಿದ್ದಳು. ಈ ವೇಳೆ ಇಬ್ಬರ ನಡುವೆ ಮದುವೆ ವಿಚಾರದಲ್ಲಿ ವಾಗ್ವಾದ ನಡೆದಿತ್ತು. ಈ ವೇಳೆ ನೀನಿ ನನ್ನನ್ನು ಮದುವೆ ಮಾಡಿಕೊಳ್ಳಲೇಬೇಕು ಎಂದು ಯುವತಿ ಸೌಮ್ಯಾ ಒತ್ತಾಯಿಸಿದ್ದಾಳೆ. ಇದರಿಂದ ಕುಪಿತಗೊಂಡ ಸೃಜನ್, ಸೌಮ್ಯಾಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ, ಆಕೆಯ ಮೃತದೇಹವನ್ನು ಮುಚ್ಚಿಟ್ಟಿದ್ದನು. ಬಳಿಕ ತಾಳಗುಪ್ಪಕ್ಕೆ ತೆರಳಿ ತನ್ನ ಕಾರು ತೆಗೆದುಕೊಂಡು ಬಂದು ಮೃತದೇಹವನ್ನು ಸಾಗಿಸಿದ್ದನು. ನಂತರ ಮೃತದೇಹ ಸಾಗಿಸಿ ಆನಂದಪುರದ ರೈಲ್ವೆ ಟ್ರ್ಯಾಕ್ ಬಳಿಯ ಮುಂಬಾಳು ಕ್ರಾಸ್‌ ಬಳಿ ಜಲಜೀವನ್ ಮಿಷನ್ ಕಾಮಗಾರಿಗಾಗಿ ಪೈಪ್ ಅಳವಡಿಸಲು ತೆಗೆದಿದ್ದ ಗುಂಡಿಯಲ್ಲಿಯೇ ಸೌಮ್ಯಳ ಮೃತದೇಹವನ್ನು ಹೂತು ಹೋಗಿದ್ದಾನೆ.

ಶಿವಮೊಗ್ಗದಲ್ಲಿ ಶಾಲಾ ಗೋಡೆ ಕುಸಿತ; ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಲ್ಲೇ ವಿದ್ಯಾರ್ಥಿಗಳ ಪ್ರಾಣಕ್ಕೆ ಕಂಟಕ

ಮೊಬೈಲ್ ಸಿ ಡಿ ಆರ್ ನಿಂದ ಪ್ರಕರಣದ ಸತ್ಯಾಂಶ ಬೆಳಕಿಗೆ: ಯುವತಿ ಸೌಮ್ಯ ನಾಪತ್ತೆ ಪ್ರಕರಣದ ತನಿಖೆ ಕೈಗೊಂಡ ಕೊಪ್ಪ ಠಾಣೆ ಪೊಲೀಸರಿಗೆ ಸಣ್ಣ ಸುಳಿವು ಕೂಡ ಇರಲಿಲ್ಲ. ಜು.3ರಿಂದ 19ರವರೆಗೆ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದರೂ ಸೌಮ್ಯಾಳ ಸುಳಿವು ಸಿಕ್ಕಿರಲಿಲ್ಲ. ಕೊಪ್ಪ ಠಾಣೆ ಪೊಲೀಸರು ಸೌಮ್ಯಾಳ ಮೊಬೈಲ್ ಸಿಡಿಆರ್ (ಕಾಲ್ ರೇಕಾರ್ಡರ್) ಪರಿಶೀಲಿಸಿದಾಗ ಸೃಜನ್‌ಗೆ ಹಲವು ಬಾರಿ ಕರೆ ಮಾಡಿದ್ದು ತಿಳಿದಿತ್ತು. ಇದನ್ನು ಅರಿತ ಪೊಲೀಸರು ಸೃಜನ್‌ಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ವಿಚಾರಣೆಗೆ ಬಂದಿದ್ದ ಸೃಜನ್ ಪೊಲೀಸರ ಬಳಿ ಲಾಕ್ ಆಗಿದ್ದಾನೆ. ಕೊಲೆಯ ಸಂಪೂರ್ಣ ಮಾಹಿತಿ ಬಾಯಿ ಬಿಟ್ಟಿದ್ದಾನೆ.

Latest Videos
Follow Us:
Download App:
  • android
  • ios