ತಂದೆಯಿಂದ ವಿನಾಕಾರಣ ಕಿರುಕುಳಕ್ಕೆ ಬೇಸತ್ತು ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ.

ಹಾಸನ (ಜು.25): ತಂದೆಯಿಂದ ವಿನಾಕಾರಣ ಕಿರುಕುಳಕ್ಕೆ ಬೇಸತ್ತು ಮಗ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ಪಟ್ಟಣದ ಟಿಪ್ಪು ನಗರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಖಿಲ್ ಪಾಷ(25) ಮೃತ ಯುವಕ. ಸೈಯ್ಯದ್‌ಪಾಷಾ, ಮಗ-ಸೊಸೆಗೆ ದಿನನಿತ್ಯ ಕಿರುಕುಳ ನೀಡುತ್ತಿದ್ದ ತಂದೆ. ಮೂರು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಅಖಿಲ್ ಪಾಷಾ. ಎರಡು ವರ್ಷಗಳಿಂದ ಪತ್ನಿಯೊಂದಿಗೆ ಅರಸೀಕೆರೆಯ ಟಿಪ್ಪು ನಗರದಲ್ಲಿ ವಾಸವಿದ್ದರು. ಆದರೆ ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಇತರೆ ದಾಖಲಾತಿಗಳು ಹಾಸನದ ತಂದೆಯ ಮನೆಯಲ್ಲಿಟ್ಟಿದ್ದ ಯುವಕ. ತಂದೆಯ ಬಳಿ ದಾಖಲಾತಿಳನ್ನು ಕೇಳಿದರೆ ದಾಖಲಾತಿ ಕೊಡದೇ ಸತಾಯಿಸುತ್ತಿದ್ದ. ಇದರಿಂದ ತಂದೆ ಮಗನ ನಡುವೆ ಗಲಾಟೆಯಾಗಿತ್ತು. ರಾಜೀ ಸಂಧಾನ ಮಾಡಿ ಸಮಾಜದ ಮುಖಂಡರು, ಹಿರಿಯರು ಬಗೆಹರಿಸಿದ್ದರು. 

ಕವಿತಾಳ ಆಸ್ಪತ್ರೆಯ ಸ್ಟಾಫ್ ನರ್ಸ್ ಜೊತೆ ಅಕ್ರಮ ಸಂಬಂಧ, ಪತ್ನಿ ಕೈಗೆ ಸಿಕ್ಕಿಬಿದ್ದ ಪೊಲೀಸಪ್ಪ!

ಇದಾದ ಮೇಲೂ ದಾಖಲಾತಿ ಕೊಡದೇ ಕಿರುಕುಳ ಮುಂದುವರಿಸಿದ್ದ ತಂದೆ. ದಾಖಲಾತಿಗಳನ್ನು ಕೊಡದೇ ಇದ್ದಾಗ ಹಾಸನ ಪೆನ್ಷನ್ ಮೊಹಲ್ಲಾ ಠಾಣೆಗೆ ದೂರು ನೀಡಿದ್ದ ಮಗ. ಸೈಯದ್ ಪಾಷಾನ ಕರೆಸಿ ವಿಚಾರಿಸಿದ್ದ ಪೊಲೀಸರು. ಈ ವೇಳೆ ಯಾವುದೇ ದಾಖಲೆಗಳು ನನ್ನ ಬಳಿ ಇಲ್ಲ ಎಂದಿದ್ದ ಸೈಯದ್ ಪಾಷಾ. ಇದರಿಂದ ಮನನೊಂದ ಮಗ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಆತ್ಮಹತ್ಯೆ ಪ್ರಕರಣ ಸಂಬಂಧ ಅರಸೀಕೆರೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.