ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ, ಕೇರಳದಲ್ಲಿ ಆಪರೇಷನ್ ಶಕ್ತಿಗೆ ಥರಗುಟ್ಟಿದ ಎಡಪಕ್ಷ!
ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..
ಆಪರೇಷನ್ ಶಕ್ತಿ
ಕೇರಳದ ಕಮ್ಯುನಿಸ್ಟ್ ಪಕ್ಷದ ಕೆಂಪು ಭದ್ರಕೋಟೆಯ ಮೇಲೆ ನಡೀತಿರೋ ವಿಶೇಷ ಸರ್ಜಿಕಲ್ ಸ್ಟ್ರೈಕ್ ಅದರ ಮುಖವನ್ನು ಛಿದ್ರಗೊಳಿಸಿದೆ. ಈ ಹಿಂದೆ ಪಕ್ಷದ ಮುಖವಾಣಿ ದೇಶಾಭಿಮಾನಿ ಪತ್ರಿಕೆಯ ಸಂಪಾದಕೀಯ ಮಂಡಳಿಯಲ್ಲಿದ್ದ ಒಡನಾಡಿ ಮತ್ತು ಹಿರಿಯ ಪತ್ರಕರ್ತ ಜಿ ಶಕ್ತಿಧರನ್ ಅವರು ಸಿಪಿಎಂ ನಾಯಕರ ಮುಖವಾಡ ಕಿತ್ತು ಹಾಕುವ ಧ್ಯೇಯದಲ್ಲಿದ್ದಾರೆ.
ಹಲವು ದಶಕಗಳ ಹಿಂದೆ ನಡೆದ ಘಟನೆಯೊಂದನ್ನು ಸಾಮಾಜಿಕ ಜಾಲತಾಣದ ಮೂಲಕ ಬಿಚ್ಚಿಟ್ಟಿದ್ದಾರೆ. 2005ರಲ್ಲಿ ಎರ್ನಾಕುಲಂ ಜಿಲ್ಲೆಯ ವಿವಿಧ ಜನರಿಂದ ತಾನು ಸಂಗ್ರಹಿಸಿದ ಹಣದ ಬಂಡಲ್‌ಗಳನ್ನು ಎಣಿಸಲು ಕಾಮ್ರೇಡ್‌ಗೆ ಸಹಾಯ ಮಾಡಿದ್ದಾಗಿ ಶಕ್ತಿಧರನ್ ಹೇಳಿದ್ದಾರೆ.
`2 ಕೋಟಿಗೂ ಹೆಚ್ಚು ಮೌಲ್ಯದ ಕರೆನ್ಸಿ ನೋಟುಗಳನ್ನು ಎಣಿಸಲಾಗಿತ್ತು. ಇದನ್ನು ತಿರುವನಂತಪುರಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ನಮ್ಮಲ್ಲಿ ಇಬ್ಬರು ಸ್ಕ್ರೂ ಪೈನ್ ಮ್ಯಾಟ್‌ಗಳನ್ನು ಖರೀದಿಸಿ, ಹಣವನ್ನು ಈ ಮ್ಯಾಟ್‌ಗಳಲ್ಲಿ ಸುತ್ತಿ ಕಾರಿನಡಿ ಇರಿಸಲಾಗಿತ್ತು’’ ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಇದನ್ನು ಓದಿ; ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ
ಅಷ್ಟೇ ಅಲ್ಲ, ಎರಡನೇ ಪೋಸ್ಟ್ ಇನ್ನಷ್ಟು ಖಂಡನೀಯವಾಗಿತ್ತು. ಕ್ಯಾಬಿನೆಟ್‌ನಲ್ಲಿದ್ದ ಸಹೋದ್ಯೋಗಿಯೊಬ್ಬರು ಎರ್ನಾಕುಲಂನ ಐಷಾರಾಮಿ ಹೋಟೆಲ್‌ನಿಂದ ಮಹಿಳಾ ಕಾಮ್ರೇಡ್‌ನೊಂದಿಗೆ ಹೇಗೆ ತಪ್ಪಿಸಿಕೊಳ್ಳಬೇಕಾಯಿತು ಎಂದು ಅವರು ವಿವರಿಸಿದರು. ಪಕ್ಷದ ಕಾರ್ಯಕರ್ತರು ಹೋಟೆಲ್‌ಗೆ ಮುತ್ತಿಗೆ ಹಾಕಿದ ನಂತರ ಈ ನಾಯಕ ಅಗ್ನಿಶಾಮಕ ಮಾರ್ಗವನ್ನು ಬಳಸಬೇಕಾಯಿತು ಎಂದು ಹೇಳಿದರು.
ಇನ್ನು, ಹಾಲಿ ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಅವರನ್ನು ಸರ್ವನಾಶ ಮಾಡಲು ಪಕ್ಷವು ಪ್ರಯತ್ನಿಸುತ್ತಿದ್ದು, ಸಿಪಿಎಂನ ಹಿಟ್ ಲಿಸ್ಟ್‌ನಲ್ಲಿ ಸುಧಾಕರನ್ ಅಗ್ರಸ್ಥಾನದಲ್ಲಿದ್ದಾರೆ. ಅಲ್ಲದೆ, ಕಾಮ್ರೇಡ್‌ಗಳನ್ನು ಮತ್ತೆ ಹಿಂಸಿಸಿದರೆ ಸ್ನೋಡೆನ್ ಕೃತ್ಯವನ್ನು ಮುಂದುವರಿಸುವುದಾಗಿ ಶಕ್ತಿಧರನ್ ಬೆದರಿಕೆ ಹಾಕಿದ್ದಾರೆ. ಇದು ರೆಡ್ ಕಾರ್ಡ್ ಅಂದ್ರೆ ಅಲ್ವ.
ಇದನ್ನೂ ಓದಿ: From The India Gate: ಡಿಎಂಕೆ ವಾಷಿಂಗ್ ಮಷೀನ್‌ಗೆ ಸ್ವಚ್ಛವಾದ ಶಾಸಕ, ತಮಿಳ್ನಾಡಲ್ಲಿ IAS vs IPS ರಾಜಕೀಯ ತಂತ್ರಗಾರಿಕೆ!
ಪತ್ರಕರ್ತರಂದ್ರೆ ರಾಜ್ಯದ ಈ ರಾಜಕಾರಣಿಗೆ ಭಯ:
ಸಾವಿರಾರು ಉಳಿ ಎಟು ಬಿದ್ದ ಮೇಲೆಯೇ ಕಲ್ಲು ಶಿಲೆಯಾಗೋದು. ಅಂತೆಯೇ ಹಿಡಿತ ತಪ್ಪಿದ ನಾಲಿಗೆ ಹಾದಿಗೆ ಬರೋದು ವಯಸ್ಸು ಮಾಗಿದಾಗ. ಹತ್ತಾರು ಬೈಗುಳ, ನೂರಾರು ಆರೋಪ, ಮಾತೆಲ್ಲಾ ಸುಳ್ಳು. ಟಂಗ್ ಸ್ಲಿಪ್ ಇವೆಲ್ಲಾ ಆದಾಗ್ಲೆ ಅನುಭವಿ ರಾಜಕಾರಣಿಯಾಗೋದು ಅನ್ನೋ ಮಾತಿದೆ.
ಇತ್ತೀಚೆಗೆ ದೆಹಲಿಗೆ ಬಂದಿದ್ದ ಕರ್ನಾಟಕದ ಶಾಸಕರೊಬ್ಬರು ಬೆಂಗಳೂರಿನ ಪತ್ರಕರ್ತರಿಗೆ ಹೆದರಿದ ಪ್ರಸಂಗ ಹೇಳುತ್ತಿದ್ದರು. ಕ್ಯಾಮರಾ ಲೈವ್‌ನಲ್ಲಿದೆ ಅನ್ನೋದು ಮರೆತು ಪಕ್ಷದ ನಾಯಕರ ವಿರುದ್ದ ನಾಲಿಗೆ ಜಾರಿಸಿದ್ದರು. ಇದರ ಪರಿಣಾಮ ಇಡೀ ದಿನ ಚಾನಲ್‌ಗಳಲ್ಲಿ ನಾನಾ ರೀತಿಯಲ್ಲಿ ರಂಗು ರಂಗಾಗಿ ಸುದ್ದಿಯಾಗಿದ್ರು.
ಇದನ್ನೂ ಓದಿ: From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!
ದಿನಾಲು ಹಾಯ್..ಬಾಯ್.. ಅನ್ನೋ ಸ್ನೇಹಿತ ಪತ್ರಕರ್ತರು ಅವತ್ತು ನಿಜವಾಗ್ಲು ವಿಲನ್ ಆಗಿದ್ರು. ಸಣ್ಣ ಪಿಸು ಮಾತು ಎನ್ನುವ 'ದೊಡ್ಡ ಬಂಡೆ'ಗೆ ಅವರು ಡಿಚ್ಚಿ ಹೊಡೆದಿದ್ರು
ಆ ಸುದ್ದಿ ಬಂದ ಮೇಲಂತು ಬೆಂಗಳೂರಲ್ಲಿ ಪತ್ರಕರ್ತರು ಕಂಡರೆ ಓಡ್ತೀನಿ ಅಂದರು. ಸಾಲದ್ದ ವಿಷಕಂಠನಂತೆ ಈ ಬಾಡಿಗೆ ವಿಷ ನಿಗ್ರಹಿಸುವ ಕವಚ ಧರಿಸಿಕೊಂಡು ಬಿಟ್ಟಿದ್ದೇನೆ. ಯಾರು ಎಷ್ಟು ವಿಷ ಕಾರಿದ್ರೂ ಅದನ್ನು ತಡೆಯೋಕೆ ಪಾಯಿಸನ್ ಗಾಡ್೯ ಹಾಕಿಕೊಂಡಿದ್ದೇನೆ. ಸಾಕಪ್ಪ..ಸಾಕು ನಿಮ್ಮ ಸಹವಾಸ ಅಂಥ ಅವರ ಮಾತಿಗೆ ವಿರಾಮ ಹಾಕಿದ್ರು.
ಇದನ್ನೂ ಓದಿ: From the India Gate: ಸೈಲೆಂಟ್ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್!
ಎಷ್ಟು ಕೇಸ್ ಇದೆ..
ರಾಜಸ್ಥಾನದ ಈ ಬಿಜೆಪಿ ನಾಯಕ ಆ ರಾಜ್ಯದ ರಾಜಕೀಯ ವಿರೋಧಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಲೇ ಇದ್ದಾರೆ. ರಾಷ್ಟ್ರ ರಾಜಕಾರಣದಲ್ಲಿದ್ರೂ, ರಾಜ್ಯದಲ್ಲಿನ ಅವರ ಪಕ್ಷದ ಸಹೋದ್ಯೋಗಿಗಳಿಗಿಂತ ಹೆಚ್ಚಾಗಿ ರಾಜಸ್ಥಾನದ ಬೀದಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಮೆರವಣಿಗೆಯನ್ನು ತಡೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಇದುವರೆಗೆ 7 ಪ್ರಕರಣಗಳನ್ನು ಹಾಕಿದ್ದರೂ, ಪ್ರಯೋಜನವಾಗಿಲ್ಲ.
ಇತ್ತೀಚೆಗಷ್ಟೇ ಮುಖ್ಯಮಂತ್ರಿಯವರ ಆಪ್ತರೊಬ್ಬರು ಇವರನ್ನು ಕಡಿವಾಣ ಹಾಕಲು ಈ ಬಿಜೆಪಿ ನಾಯಕನ ಆಪ್ತರೊಂದಿಗೆ ರಹಸ್ಯ ಸಭೆ ನಡೆಸಿದರು ಮತ್ತು ಅವರನ್ನು ಹಿಡಿತದಲ್ಲಿಡಲು ಸಹಾಯವನ್ನು ಕೋರಿದರು ಎನ್ನಲಾಗಿದೆ. ಆಡಳಿತಾರೂಢ ಕಾಂಗ್ರೆಸ್‌ನಿಂದ ಈ ಎಸ್‌ಒಎಸ್ ಸಂದೇಶ ದೆಹಲಿ ಬಿಜೆಪಿಗೆ ಹೋಗಿದ್ದು, ನಂತರ ಅವರ ವಾಗ್ದಾಳಿಯಿಂದ ಸ್ವಲ್ಪ ಬಿಡುವು ಪಡೆದಿದೆ.
ಇದನ್ನೂ ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!
ರಾಜಕೀಯ ಜಾತ್ರೆ
ದೇಶದ ಯಾವುದೇ ಚುನಾವಣಾ ಕಾರ್ಯಕ್ರಮವನ್ನು ಹಳ್ಳಿ ಜಾತ್ರೆಗೆ ಸಮೀಕರಿಸಿದ್ರೂ ಯಾರನ್ನೂ ದೂಷಿಸಲಾಗಲ್ಲ. ಏಕೆಂದರೆ, ಅಂತಹ ಸಮಾರಂಭಕ್ಕೆ ಬರುವವರನ್ನು (ಈ ಸಂದರ್ಭದಲ್ಲಿ - ಮತದಾರರು) ಆಕ್ರಮಿಸಿಕೊಳ್ಳಲು ವಿನೋದ ಮತ್ತು ನಾಟಕದ ಪ್ರತಿಯೊಂದು ಅಂಶವಿದೆ. ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಈ ವ್ಯಾಖ್ಯಾನಕ್ಕೆ ಅನುಗುಣವಾಗಿದೆ. ಧ್ವನಿ ಮತ್ತು ಕೋಪವು ಎದುರಾಳಿಯನ್ನು ಅಪಹಾಸ್ಯ ಮಾಡುವ ಪ್ರತಿಯೊಂದು ಪ್ರಯತ್ನವೂ ಇದೆ.
ಹವಾಮಾನ ವೈಪರೀತ್ಯದಿಂದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವಿಚಾರದಲ್ಲೂ ರಾಜಕೀಯ ಬೆರೆಸಲಾಗಿದೆ. ಕಳೆದ ಬಾರಿಯ ಗಾಲಿಕುರ್ಚಿ ಪ್ರಚಾರದಂತೆ ಇದು ಸಹಾನುಭೂತಿ ಗಳಿಸುವ ಪ್ರಯತ್ನ ಎಂದು ವಿರೋಧಿಗಳು ಹೇಳುತ್ತಾರೆ. ಇದನ್ನು ಚುನಾವಣಾ ಸ್ಟಂಟ್ ಎಂದು ಕಾಂಗ್ರೆಸ್ ಕರೆಯುತ್ತಿದ್ದು, ಡೂಪ್ಲಿಕೇಟ್ ಮತಪತ್ರ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಅಧಿಕೃತ ಮತಪತ್ರಗಳಿಗೆ ಅನುಗುಣವಾದ ರಿಜಿಸ್ಟರ್ ಸಂಖ್ಯೆಗಳೊಂದಿಗೆ ನಕಲಿ ಮತಪತ್ರಗಳು ಸಿದ್ಧವಾಗಿವೆ ಎಂದು ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ.
ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್ ಡ್ಯೂಟಿಯದ್ದೇ ದೊಡ್ಡ ಚಿಂತೆ!
ಈ ನಕಲಿ ಮತಪತ್ರಗಳ ಮೂಲಕ ಟಿಎಂಸಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದೆಂದು ಹೇಳುತ್ತಾರೆ. ಬಿಜೆಪಿಯ ಸುವೇಂದು ಅಧಿಕಾರಿ ಹಾಗೂ ಇತರರು ಸಹ ಇದೇ ರೀತಿ ಭಯ ಪಡುತ್ತಿದ್ದಾರೆ.
ಡೇವಿಡ್ಸನ್ ರೈಡ್
ಹಾರ್ಲೆ-ಡೇವಿಡ್ಸನ್ ಅಂದ್ರೆ ಹಲವರಿಗೆ ಪಂಚಪ್ರಾಣ. ಆದರೆ ಎಂ. ಕೆ. ಸ್ಟಾಲಿನ್ ಅವರಂತಹ ಮಹಾನ್ ರಾಜಕೀಯ ಸ್ಟಾಲಿಯನ್ ಕೂಡ ಅವರ ಉನ್ನತ ಪೋಲೀಸ್ ಡೇವಿಡ್ಸನ್ ದೇವಾಶಿರ್ವತಮ್ ಅನ್ನು ನಿಭಾಯಿಸಲು ಸಾಧ್ಯವಾಗ್ತಿಲ್ಲ. ಇತ್ತೀಚಿನ ರೇಡ್‌ಗಳು ಮತ್ತು ನಂತರ ಸೆಂಥಿಲ್ ಬಾಲಾಜಿಯ ಬಂಧನದ ನಂತರ ಇಡಿ ಮತ್ತು ಸಿಬಿಐ ಸೇರಿದಂತೆ ಕೇಂದ್ರ ಸರ್ಕಾರದ ಏಜೆನ್ಸಿಗಳ ವಿರುದ್ಧ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ಟಾಲಿವುಡ್ ಶೈಲಿಯಲ್ಲಿ, ಸ್ಟಾಲಿನ್ ಅವರು "ನಾವು ತಿರುಗೇಟು ಕೊಟ್ಟರೆ ನೀವು ಅದನ್ನು ಸಹಿಸುವುದಿಲ್ಲ" ಎಂದಿದ್ದರು.
ಇದನ್ನೂ ಓದಿ: From the India Gate: ವಂದೇ ಭಾರತ್ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!
ಆದರೆ, ನಕಲಿ ಪಾಸ್‌ಪೋರ್ಟ್ ದಂಧೆಯನ್ನು ಕೇಂದ್ರ ಸರ್ಕಾರ ಸಂಪೂರ್ಣ ಪುರಾವೆಗಳೊಂದಿಗೆ ನೀಡಿದಾಗ ತಮಿಳುನಾಡು ಸಿಎಂ ಶರಣಾಗಬೇಕಾಯಿತು. ಏಕೆಂದರೆ,
ಮುಖ್ಯ ಗುಪ್ತಚರ ಅಧಿಕಾರಿಯಾಗಿದ್ದ ಅವರ ನಂಬಿಕಸ್ಥ ವ್ಯಕ್ತಿ ಡೇವಿಡ್‌ಸನ್ ದೇವಾಶಿರ್ವತಂ ಅವರು ಯಾವುದೇ ಪೂರ್ವ ಮಾಹಿತಿ ನೀಡದ ಕಾರಣ ಸ್ಟಾಲಿನ್‌ಗೆ ಅದರ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.
ಇತ್ತೀಚೆಗೆ, ಕಲ್ಲಕುರಿಚಿ ಶಾಲೆಯ ಘಟನೆಯ ಬಗ್ಗೆಹಾಗೂ ಸೆಂಥಿಲ್ ಬಾಲಾಜಿ ಮನೆ ಮೇಲೆ ಇಡಿ ದಾಳಿ ನಡೆಯಲಿರುವ ಬಗ್ಗೆ ಗುಪ್ತಚರ ವಿಭಾಗ ಸರ್ಕಾರಕ್ಕೆ ಎಚ್ಚರಿಕೆ ನೀಡಿರಲಿಲ್ಲ. ಆ ಸಮಯದಲ್ಲಿ, ಸ್ಟಾಲಿನ್ ಸಿಂಗಾಪುರದಲ್ಲಿದ್ದರು. ಈ ಹಿನ್ನೆಲೆ, ತನ್ನ ಸರ್ಕಾರವನ್ನು ಮತ್ತಷ್ಟು ಮುಜುಗರದಿಂದ ರಕ್ಷಿಸಲು ಡೇವಿಡ್ಸನ್ ಅವರನ್ನು ಡಿಜಿಪಿ ಕಚೇರಿಯಲ್ಲಿ ಬೇರೆ ಹುದ್ದೆ ನೀಡಿದ್ದಾರೆ.
ಇದನ್ನೂ ಓದಿ: From the India Gate: ಬಿಜೆಪಿ ಸರ್ಜಿಕಲ್ ಸ್ಟ್ರೈಕ್‌ಗೆ ಕಾಂಗ್ರೆಸ್ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!