From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala parties confusion for vande bharat telangana ktr kcr rajasthan father son mutiny ash

ಕೇರಳದಲ್ಲಿ ಬಿಜೆಪಿಯೇತರ ಪಕ್ಷಗಳಿಗೆ ಸಂದಿಗ್ಧತೆ
ಕೇರಳದಲ್ಲಿ ವಂದೇ ಭಾರತ್‌ ರೈಲಿಗೆ ಇತ್ತೀಚೆಗೆ ಚಾಲನೆ ಸಿಕ್ತು. ಆದರೆ, ಈ ವೇಳೆ ಕೇರಳದ ಎಲ್ಲಾ ಪ್ರಮುಖ ಬಿಜೆಪಿಯೇತರ ರಾಜಕೀಯ ಪಕ್ಷಗಳಿಗೆ ಇದನ್ನು ಸ್ವಾಗತಿಸಬೇಕೋ ಬೇಡವೋ. ಶ್ಲಾಘಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ಸಂದಿಗ್ಧತೆ ಇತ್ತಂತೆ. ಈ ಹಿನ್ನೆಲೆ ಕ್ರಿಕೆಟ್‌ನಲ್ಲಿ ದೂಸ್ರಾ ಬಾಲ್‌ ಎದುರಿಸುತ್ತಿರುವ ಬ್ಯಾಟರ್‌ನಂತೆ ಹಲವು ರಾಜಕೀಯ ಪಕ್ಷಗಳು ಏನು ಮಾಡುವುದು ಎಂಬ ಸುಳಿವೇ ಇರಲಿಲ್ವಂತೆ ಹಾಗೂ ಗೊಂದಲಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಏಕೆಂದರೆ, ವಂದೇ ಭಾರತ್ ಪರಿಚಯಿಸುವ ಕೇಂದ್ರ ಸರ್ಕಾರದ ನಿರ್ಧಾರ ಎಲ್ಲರಿಗೂ ಆಶ್ಚರ್ಯ ತಂದಿದೆಯಂತೆ. ಆದರೆ ಬಿಜೆಪಿ ಕಾರ್ಯಕರ್ತರು ಇದರಿಂದ ಗರಿಷ್ಠ ಮೈಲೇಜ್ ಪಡೆದು ರೈಲು ನಿಂತಿದ್ದ ಎಲ್ಲ ಪ್ರಮುಖ ನಿಲ್ದಾಣಗಳಲ್ಲಿ ಸ್ವಾಗತಿಸಿದ್ದಾರೆ. ಅಲ್ಲದೆ, ಶುಭ ವಿಷು ದಿನವಾದ್ದರಿಂದ ಕ್ಯಾಸಿಯಾ ಹೂವಿನ ಚಿನ್ನದ ಬಣ್ಣದ ದಳಗಳನ್ನು ಸುರಿಸಿದ್ದಾರೆ. ದಕ್ಷಿಣ ಮತ್ತು ಉತ್ತರ ಕೇರಳಕ್ಕೆ ಸಂಪರ್ಕ ಕಲ್ಪಿಸುವ ವೇಗದ ರೈಲಿನ ಅಗತ್ಯ ಹೆಚ್ಚುತ್ತಿರುವ ಕಾರಣ ಇತರ ಪಕ್ಷಗಳು ವಿರೋಧಿಸಲು ಸಾಧ್ಯವಾಗಲಿಲ್ಲ. 

ಇದನ್ನು ಓದಿ: From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

ಆದರೆ, ವಂದೇ ಭಾರತ್ ರೈಲನ್ನು ಸ್ವಾಗತಿಸಲು ಸಹ ಸಾಧ್ಯವಾಗಲಿಲ್ಲ. ಏಕೆಂದರೆ ಇದು ಕೇರಳಕ್ಕೆ ಪ್ರಧಾನಿ ಮೋದಿಯವರ ವಿಷು ಉಡುಗೊರೆಯನ್ನು ಅನುಮೋದಿಸಿದಂತಾಗುತ್ತದೆ. ಅಲ್ಲಿ ಬಿಜೆಪಿ ಕೆಲವು ಸ್ಥಾನಗಳನ್ನು ಗೆಲ್ಲಲು ಸಕಲ ಪ್ರಯತ್ನಗಳನ್ನು ಮಾಡುತ್ತಿದೆ.

ಸಿಪಿಎಂ ಮತ್ತು ಕಾಂಗ್ರೆಸ್ ನಾಯಕರು ಮೌನ ವಾಗಿದ್ದರು. ಒಟ್ಟಾರೆ ವಂದೇ ಭಾರತ್ ಅನೇಕ ರಾಜಕೀಯ ಮಹತ್ವಾಕಾಂಕ್ಷೆಗಳನ್ನು ಅಕ್ಷರಶಃ ಹಳಿತಪ್ಪಿಸಿದೆ.

ಇದನ್ನೂ ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ 
ಉಕ್ಕಿನ ರಾಡ್‌ಗಳನ್ನು ಒಡೆಯುವುದು ಅಥವಾ ಬಗ್ಗಿಸುವುದು ಖಂಡಿತವಾಗಿಯೂ ಸುಲಭವಲ್ಲ. ಬೀದಿ ಜಾದೂಗಾರರು ಕೆಲವೊಮ್ಮೆ ಇಂತಹ ಸಾಧನೆಯನ್ನು ಪ್ರದರ್ಶಿಸುತ್ತಾರೆ. ಆದರೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರ ಕೆ.ಟಿ. ರಾಮರಾವ್ ಅವರ ಇಂತಹ ಪ್ರಯತ್ನವು ಅವರ ರಾಜಕೀಯ ಅಹಂ ಮತ್ತು ಭಾರತ್ ರಾಷ್ಟ್ರ ಸಮಿತಿಯ ಅಹಂಕಾರವನ್ನು ಪಂಕ್ಚರ್ ಮಾಡಿದೆ.

ವೈಜಾಗ್ ಸ್ಟೀಲ್ ಪ್ಲಾಂಟ್ ಹಿಂತೆಗೆದುಕೊಳ್ಳುವ ತನ್ನ ಕ್ರಮವನ್ನು ಕೈಬಿಡುವಂತೆ ಕೇಂದ್ರವನ್ನು ಒತ್ತಾಯಿಸಿದ ಕೀರ್ತಿ ತನ್ನದು ಎಂದು ಕೆ.ಟಿ. ರಾಮರಾವ್‌ ಹೇಳಿದರು. ಕೇಂದ್ರವು ವೈಜಾಗ್ ಸ್ಟೀಲ್ ಪ್ಲಾಂಟ್‌ನ ತನ್ನ ಉದ್ದೇಶಿತ ಯೋಜನೆಯನ್ನು ಸ್ಥಗಿತಗೊಳಿಸಬಹುದು ಎಂದು ಕೇಂದ್ರ ಉಕ್ಕಿನ ರಾಜ್ಯ ಸಚಿವ ಫಗ್ಗನ್ ಸಿಂಗ್ ಕುಲಸ್ತೆ ಅವರು ಹೇಳಿಕೆ ನೀಡಿದ ನಂತರ, ಇದು ಕೆಸಿಆರ್‌ ನೀಡಿದ ಗಡುವಿನ ಫಲಿತಾಂಶ ಎಂದು ಕೆಟಿಆರ್‌ ಹೆಮ್ಮೆಪಟ್ಟುಕೊಂಡರು. ಅಲ್ಲದೆ, ಸರ್ಕಾರಿ ಸ್ವಾಮ್ಯದ ಸಿಂಗರೇಣಿ ಕಾಲೀರೀಸ್ ಕಂಪನಿ ಮೂಲಕ ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಸರ್ಕಾರ ಭಾಗವಹಿಸಲಿದೆ ಎಂದು ಕೆಸಿಆರ್ ಹೇಳಿದರು. 

ಇದನ್ನೂ ಓದಿ: From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!

ಆದರೆ ತಂದೆ-ಮಗನ ಜೋಡಿ ತಮ್ಮ ಎದೆಯನ್ನು ತಾವೇ ತಟ್ಟಿಕೊಂಡಿದ್ದು ಅಲ್ಪಕಾಲಿಕವಾಗಿತ್ತು. ಏಕೆಂದರೆ ಕೇಂದ್ರವು ಹೂಡಿಕೆ ಹಿಂತೆಗೆದುಕೊಳ್ಳುವ ಪ್ರಕ್ರಿಯೆಯೊಂದಿಗೆ ಮುಂದುವರಿಯುತ್ತದೆ ಎಂದು ಸ್ಪಷ್ಟಪಡಿಸಿತು.

ಅಪ್ಪ - ಮಗನ ನಡುವೆ ದಂಗೆ
ದೇಶದ ಅನೇಕ ಹಿರಿಯ ರಾಜಕಾರಣಿಗಳು ತಮ್ಮ ಸಿದ್ಧಾಂತಗಳು ಸಮಾನಾಂತರವಾಗಿ ಸಾಗಿದಾಗ ತಮ್ಮ ಬೆಳೆದ ಮಕ್ಕಳಿಂದ ಬಹಿರಂಗ ದಂಗೆಯನ್ನು ಎದುರಿಸಿದ್ದಾರೆ. ರಾಜಸ್ಥಾನದಲ್ಲಿ ಹಿರಿಯ ಕ್ಯಾಬಿನೆಟ್ ಸಚಿವರೊಬ್ಬರು ಈ ದುಸ್ಥಿತಿ ಎದುರಿಸುತ್ತಿದ್ದಾರೆ. ಅವರು ಏನು ಘೋಷಿಸಿದರೂ ಅದನ್ನು ಅವರ ಮಗ ವಿರೋಧಿಸುತ್ತಾರೆ ಮತ್ತು ಬಹಿರಂಗವಾಗಿ ಪ್ರತಿಭಟಿಸುತ್ತಾರೆ. 

ಇದನ್ನೂ ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಇತ್ತೀಚೆಗೆ, ಕ್ಯಾಬಿನೆಟ್‌ನಲ್ಲಿ ಅತ್ಯಂತ ಶಕ್ತಿಶಾಲಿಯಾಗಿರುವ ಸಚಿವರು ಪ್ರತಿಭಟನೆಗಳನ್ನು ಶಾಂತಗೊಳಿಸಲು ಭರತ್‌ಪುರದ ಬೇರೆ ಸ್ಥಳದಲ್ಲಿ ಬಾಬಾ ಸಾಹೇಬ್ ಮತ್ತು ಮಹಾರಾಜ ಸೂರಜ್‌ಮಲ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಆದರೆ ಮಗ ತಕ್ಷಣವೇ ಪ್ರತಿಮೆಗಳನ್ನು ಮೂಲತಃ ಯೋಜಿಸಿದ ಸ್ಥಳದಲ್ಲಿಯೇ ಸ್ಥಾಪಿಸಲಾಗುವುದು ಎಂದು ಘೋಷಿಸಿದರು. ಇದೀಗ ತಂದೆ ಮಗನ ವಿರುದ್ಧವೇ ಎಫ್‌ಐಆರ್ ದಾಖಲಿಸಿದ್ದಾರೆ.

ಆದರೆ ಪ್ರತಿಮೆ ಸ್ಥಳಾಂತರದ ಕ್ರಮದ ಬಗ್ಗೆ ಸ್ವಂತ ಮಗನಿಗೆ ಮನವರಿಕೆ ಮಾಡಿಕೊಡುವಲ್ಲಿ ಸಚಿವರು ವಿಫಲವಾಗಿರುವುದರಿಂದ ಮತದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ನಿಜವಾದ ``ಗೃಹ~ ಸಚಿವರಾಗಿರುವ ತಾಯಿಯಿಂದ ಮಗ ಅಧಿಕಾರ ಸೆಳೆಯುತ್ತಿದ್ದಾನೆ ಎನ್ನುತ್ತವೆ ಕುಟುಂಬದ ಆಪ್ತ ಮೂಲಗಳು!

ಇದನ್ನೂ ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

Latest Videos
Follow Us:
Download App:
  • android
  • ios