From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala cm us cuba visit dk shivakumar meets ys sharmila ips ifs officer marriage story ash

ಬಂಡವಾಳಶಾಹಿ ಕಾಮ್ರೇಡ್‌!
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದು, ಈ ಸಂದರ್ಭದಲ್ಲಿ ಮ್ಯಾನ್‌ಹ್ಯಾಟನ್ ಕಾರ್ಯಕ್ರಮವೊಂದರಲ್ಲಿ ಅವರ ಕುರ್ಚಿಯ ಬಳಿಯ ಸ್ಥಳಕ್ಕೆ ನೂರು ಸಾವಿರ ಡಾಲರ್ ಹಣ ಪ್ರಾಯೋಜಕತ್ವ ನೀಡ್ಬೇಕಂತೆ. ಇದು ಗೋಲ್ಡ್ ಕಾರ್ಡ್ ಪ್ರಾಯೋಜಕತ್ವದ ಮೊದಲ ಬಹುಮಾನವಾಗಿದ್ರೆ, ಬೆಳ್ಳಿ (50,000 ಡಾಲರ್‌) ಮತ್ತು ಕಂಚಿನ (25,000 ಡಾಲರ್‌) ಪ್ರಾಯೋಜಕತ್ವದ ಆಯ್ಕೆಯೂ ಇದೆ. 

ಪಿಣರಾಯಿ ವಿಜಯನ್ ಅವರು ಉದ್ದೇಶಿಸಲಿರುವ ಸಾರ್ವಜನಿಕ ಕಾರ್ಯಕ್ರಮವನ್ನು ಆರ್ಥಿಕವಾಗಿ ಬೆಂಬಲಿಸಲು ಭಾರಿ ಪ್ರಾಯೋಜಕತ್ವವನ್ನು ಸಂಗ್ರಹಿಸುವ ಈ ಕ್ರಮವನ್ನು ಸಮರ್ಥಿಸಲು ಕೇರಳದ ಕಾಮ್ರೇಡ್‌ಗಳು ಹೆಣಗಾಡುತ್ತಿದ್ದಾರೆ. ಅಮೆರಿಕದ ಸಮಾಜದಲ್ಲಿ ಇಂತಹ ನಿಧಿ ಸಂಗ್ರಹಿಸುವ ಔತಣಕೂಟಗಳು ಅಥವಾ ಘಟನೆಗಳು ಸಾಮಾನ್ಯವಾಗಿದ್ದರೂ, ಪ್ರತಿ ನಿಮಿಷವೂ ಸಮಾಜವಾದಿ ಮತ್ತು ಶ್ರಮಜೀವಿಗಳ ತತ್ವಗಳ ಮೇಲೆ ಪ್ರತಿಜ್ಞೆ ಮಾಡುವ ಕಮ್ಯುನಿಸ್ಟ್ ನಾಯಕನ ಕಾರ್ಯಕ್ರಮದಲ್ಲಿ ಈ ರೀತಿ ಆಗುತ್ತಿರುವುದು ವಿಚಿತ್ರ. ಮುಖ್ಯಮಂತ್ರಿ ಜತೆ ಸಂಪುಟದ ಪ್ರಮುಖ ಸಹೋದ್ಯೋಗಿಗಳು ಆಗಮಿಸಲಿದ್ದು, ಪ್ರಾಯೋಜಕರ ಪಟ್ಟಿ ಹೊರಬೀಳುವ ನಿರೀಕ್ಷೆಯಿದೆ.

ಇದನ್ನು ಓದಿ: From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

ದೊಡ್ಡ ವಿಪರ್ಯಾಸವೆಂದರೆ ಪಿಣರಾಯಿ ವಿಜಯನ್ ಅಮೆರಿಕ ಪ್ರವಾಸದ ಬಳಿಕ ಕ್ಯೂಬಾಗೂ ಭೇಟಿ ನೀಡುತ್ತಿದ್ದಾರೆ. ಕ್ಯೂಬಾದಲ್ಲಿ, ಕೇರಳ ಸಿಎಂ ಮತ್ತು ತಂಡವು ಇತರ ವಿಷಯಗಳ ಜೊತೆಗೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಬಗ್ಗೆ ಅಧ್ಯಯನ ಮಾಡುತ್ತದೆ. ವಾಸ್ತವವಾಗಿ, ಬಂಡವಾಳಶಾಹಿ ಮತ್ತು ಸಮಾಜವಾದದ ನಡುವಿನ ವಿರೋಧಾಭಾಸ.

ಯಥಾ ರಾಜ ತಥಾ ಪ್ರಜಾ..
ಪ್ರಜಾ ತನ್ನ ರಾಜನನ್ನು ಶ್ರದ್ಧೆಯಿಂದ ಅನುಸರಿಸಬೇಕು. ಮತ್ತು ಕೇರಳದ ಎಡಪಂಥೀಯ ಟ್ರೇಡ್ ಯೂನಿಯನ್ ನಾಯಕ ಇದೇ ರೀತಿ ಮಾಡಿದ್ದಾರೆ. ಕಮ್ಯೂನಿಸ್ಟ್‌ ನಾಯಕ ಹಾಗೂ ಪೆಟ್ರೋಲಿಯಂ ಮತ್ತು ಗ್ಯಾಸ್ ಕಾರ್ಮಿಕರ ಒಕ್ಕೂಟದ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಕೆ.ಅನಿಲ್ ಕುಮಾರ್ ಇತ್ತೀಚೆಗೆ 50 ಲಕ್ಷ ರೂ. ಮೌಲ್ಯದ ಮಿನಿ ಕೂಪರ್‌ ಖರೀದಿಸಿದ್ರು. ಕಾರಿನ ಕೀ ಹಸ್ತಾಂತರದ ಫೋಟೋ ವೈರಲ್ ಆಗಿದ್ದು, ಈ ಕಾರಣದಿಂದ ಸಿಪಿಎಂ ಮತ್ತು ಅದರ ಟ್ರೇಡ್ ಯೂನಿಯನ್ ಸಿಐಟಿಯು ಮುಜುಗರಕ್ಕೊಳಗಾಗಿದೆ.

ಇದನ್ನೂ ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!

ಆದರೆ, ಇದನ್ನು ಸಮರ್ಥಿಸಿಕೊಂಡಿದ್ದ ಅನಿಲ್‌ ಕುಮಾರ್‌, ಐಷಾರಾಮಿ ಕಾರನ್ನು ತನ್ನ ಹೆಂಡತಿ ಬ್ಯಾಂಕ್ ಸಾಲದಿಂದ ಖರೀದಿಸಿದ್ದಾಳೆ ಎಂದು ಹೇಳಿಕೊಂಡಿದ್ದಾರೆ. ಆದರೆ ಕಾಮ್ರೇಡ್‌ನ ಸಂಬಂಧಿಕರು 50 ಲಕ್ಷ ರೂ. ಮೌಲ್ಯದ ಮಿನಿ ಕೂಪರ್ ಅನ್ನು ಏಕೆ ಖರೀದಿಸಿದರು (ಮತ್ತು, ಸಹಜವಾಗಿ, ಹೇಗೆ) ಎಂಬ ಪ್ರಶ್ನೆ, ಟ್ರೋಲ್‌ಗಳು ಹೆಚ್ಚಾಗಿದೆ. ಕುತೂಹಲಕಾರಿಯಾಗಿ, ಹೊಸ ಕಾರು ಈಗಾಗಲೇ ಅವರ ಗ್ಯಾರೇಜ್‌ನಲ್ಲಿ ನಿಲುಗಡೆ ಮಾಡಲಾದ ಐಷಾರಾಮಿ ಕಾರುಗಳ ಸಮೂಹವನ್ನು ಸೇರುತ್ತದೆ. ಇತ್ತೀಚೆಗೆ ತನ್ನ ಗ್ಯಾರೇಜ್ ಅನ್ನು ವಿಸ್ತರಿಸಲು ಪಕ್ಕದ ಸೈಟನ್ನು ಖರೀದಿಸಿದ್ದಾರೆ ಎಂದೂ ಹೇಳಲಾಗುತ್ತದೆ.

ವಿಪರ್ಯಾಸವೆಂದರೆ, ಪಕ್ಷವು ಅವರಿಂದ ಅಧಿಕೃತವಾಗಿ ವಿವರಣೆಯನ್ನು ಕೇಳಿಲ್ಲ. 

ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!

ರಾಣಿ ಜೇನು
ತೆಲಂಗಾಣದಲ್ಲಿ ತನ್ನ ಅಸ್ತಿತ್ವ ತೋರಿಸಿಕೊಳ್ಳಲು ವೈ.ಎಸ್. ಶರ್ಮಿಳಾ ಅವರ ಪ್ರಯತ್ನಗಳು ಸಾಕಷ್ಟು ಜೋರಾಗಿ ಮತ್ತು ಸ್ಪಷ್ಟವಾಗಿವೆ; ಇತ್ತೀಚೆಗೆ ಅವರು ಪೋಲೀಸ್‌ಗೆ ಜೋರಾಗಿ ಕಪಾಳಕ್ಕೆ ಹೊಡೆದಿದ್ದು, ಇದಕ್ಕೆ ಒಂದು ಉದಾಹರಣೆ ಎನ್ನಬಹುದು. ಅಂದಹಾಗೆ, ಆಂಧ್ರ ಪ್ರದೇಶ ಸಿಎಂ ಜಗನ್ಮೋಹನ್‌ರೆಡ್ಡಿ ಅವರ ಸಹೋದರಿಯೇ ವೈ.ಎಸ್‌. ಶರ್ಮಿಳಾ. ವೈಎಸ್‌ಅರ್‌ ತೆಲಂಗಾಣ ಪಕ್ಷವನ್ನುಸ್ಥಾಪಿಸಿದ್ದಾರೆ. 

ಶರ್ಮಿಳಾ ಅವರು ಇತ್ತೀಚೆಗೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ವದಂತಿಗಳನ್ನು ಹುಟ್ಟುಹಾಕಿದೆ. ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದ ಮೇಲೆ ಶರ್ಮಿಳಾ ಕಣ್ಣು ನೆಟ್ಟಿದೆ ಎಂದೂ ಹೇಳಲಾಗ್ತಿದೆ. 

ಇದನ್ನೂ ಓದಿ: From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

ಪಿಎಸ್‌ಸಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ವಿರೋಧಿಸಿ ಎಸ್‌ಐಟಿ ಕಚೇರಿಯಲ್ಲಿ ಧರಣಿ ನಡೆಸುವಂತಹ ನಿರ್ಧಾರಗಳ ಹಿಂದೆ ಈ ಮಹತ್ವಾಕಾಂಕ್ಷೆ ಇದೆ ಎಂದು ಹಲವರು ಭಾವಿಸುತ್ತಾರೆ. ತೆಲಂಗಾಣದಲ್ಲಿ ಆಕೆಯನ್ನು ಶಕ್ತಿ ಕೇಂದ್ರವಾಗಿ ಬೆಳೆಸಲು ಕಾಂಗ್ರೆಸ್ ಬಯಸಿದ್ದರೂ, ಅದಕ್ಕೆ ಸಮಯ ಇನ್ನೂ ಪಕ್ವವಾಗಿಲ್ಲ ಎಂದು ಎಐಸಿಸಿ ಭಾವಿಸಿದೆ.

ತೆಲಂಗಾಣದಲ್ಲಿ ಶರ್ಮಿಳಾ ಅವರು ತಮ್ಮ ತಂದೆ ಮತ್ತು ಸಂಯುಕ್ತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಬಿಟ್ಟು ಹೋಗಿರುವ ಸೌಹಾರ್ದತೆಯ ಮೇಲೆ ತಮ್ಮ ಪಕ್ಷವನ್ನು ಕಟ್ಟಬೇಕೆಂದು ಕಾಂಗ್ರೆಸ್ ಬಯಸಿದೆ. 2024 ರ ಲೋಕಸಭಾ ಚುನಾವಣೆಯ ನಂತರ ಶರ್ಮಿಳಾ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುತ್ತಾರೆಯೇ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.

ಇದನ್ನೂ ಓದಿ: From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

ಐಪಿಎಸ್‌ - ಐಎಫ್‌ಎಸ್‌ ಲವ್‌ ಮ್ಯಾರೇಜ್‌ಗೆ ಬ್ರೇಕ್‌!
ರಾಜಸ್ಥಾನದಲ್ಲಿ ಇಬ್ಬರು ಅಧಿಕಾರಿಗಳ ನಡುವೆ ಪ್ರೇಮ ವಿವಾಹವಾಗಿದ್ದು, ಆದರೆ ಇವರ ವಿವಾಹ ಅಂತ್ಯವಾಗುವ ಲಕ್ಷಣ ಮೂಡುತ್ತಿದೆ. ಐಪಿಎಸ್ ಅಧಿಕಾರಿ ಪತ್ನಿ ತನ್ನ ಐಎಫ್‌ಎಸ್ ಅಧಿಕಾರಿ ಪತಿಗೆ ವಿಚ್ಛೇದನ ನೋಟಿಸ್ ನೀಡಿದ್ದಾರೆ ಎಂದು ಹೇಳಲಾಗಿದೆ. ಆದರ್ಶ ಅಧಿಕಾರಶಾಹಿ ದಂಪತಿ ಎಂದು ಆರಾಧಿಸುತ್ತಿದ್ದ ಅವರ ಬ್ಯಾಚ್ ಮೇಟ್‌ಗಳನ್ನು ಇದು ಬೆಚ್ಚಿಬೀಳಿಸಿದೆಯಂತೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಇಬ್ಬರೂ ನಿಯೋಜನೆಗೊಂಡಿದ್ದರು, ಹಾಗೂ ಹೊಂದಾಣಿಕೆ ಸಮಸ್ಯೆಗಳಿದ್ದವು ಎನ್ನಲಾಗಿದೆ. 

ಇಲ್ಲಿ ಪತ್ನಿಯನ್ನು ದಬಾಂಗ್ ಅಧಿಕಾರಿ ಎಂದು ಕರೆಯಲಾಗುತ್ತದೆ, ಅಂದರೆ ಶಕ್ತಿಯುತ ವ್ಯಕ್ತಿತ್ವ.  ಆದರೆ IFS ಅಧಿಕಾರಿ ಸೌಮ್ಯ ಮತ್ತು ಸಹಕಾರಿ ವ್ಯಕ್ ಎನ್ನಲಾಗಿದ್ದರೂ, ಇವರಿಬ್ಬರ ನಡುವಿನ ವಿಚ್ಛೇದನ ಸುದ್ದಿ ಸಾರ್ವಜನಿಕರಿಗೆ ಆಹಾರದ ವಿಷಯವಾಗಿದೆ. ಆದರೆ ಈ ದಂಪತಿ ಬೇರೆಯಾಗಲು ನಿರ್ಧರಿಸಲು ನಿಜವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

Latest Videos
Follow Us:
Download App:
  • android
  • ios