Asianet Suvarna News Asianet Suvarna News

From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip rajasthan cm quarantined bjp surgical strike tamil nadu aiadmk ash
Author
First Published Apr 9, 2023, 12:06 PM IST

ಸರ್ಜಿಕಲ್ ಸ್ಟ್ರೈಕ್
ಅನಿಲ್. ಕೆ ಆ್ಯಂಟನಿ ಬಿಜೆಪಿಗೆ ಕಾಲಿಟ್ಟಿರುವುದು ಕಾಂಗ್ರೆಸ್‌ಗೆ ದಿಗ್ಭ್ರಮೆ ಮೂಡಿಸಿದೆ. ಅಲ್ಲದೆ, ದೇಶದ ಭವಿಷ್ಯದ ಅಭಿವೃದ್ಧಿಯನ್ನು ಬಿಜೆಪಿಯಿಂದ ಮಾತ್ರ ಬರೆಯಬಹುದು ಎಂದು ಅನಿಲ್ ಬಹಿರಂಗವಾಗಿ ಒಪ್ಪಿಕೊಂಡಿರುವುದು ಹೆಚ್ಚಿನ ಯುವಕರನ್ನು ಕೇಸರಿ ಪಡೆಗೆ ಆಕರ್ಷಿಸುವುದು ಖಚಿತ. ಇದಲ್ಲದೆ, ಈ ಕ್ರಮವು ಚರ್ಚ್‌ನೊಂದಿಗಿನ ಬಿಜೆಪಿಯ ರಾಜಕೀಯ ರಸಾಯನಶಾಸ್ತ್ರವನ್ನು ವೇಗಗೊಳಿಸುವ ವೇಗವರ್ಧಕವೆಂದು ಪರಿಗಣಿಸಲಾಗಿದೆ.

ಆದರೆ ಇದು ಕಾಂಗ್ರೆಸ್‌ಗಿಂತಲೂ ಎಡಪಕ್ಷಗಳಿಗೆ ಆಘಾತ ತಂದಿದೆ ಎನ್ನಲಾಗಿದೆ. ಈ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ ಮೂಲಕ ಈ ಬೆಳವಣಿಗೆಯನ್ನು ಮರೆಮಾಚುವ ಯತ್ನ ನಡೆಸ್ತಿದ್ದಾರೆ. ಅನಿಲ್‌ ಆಂಟನಿ ಅವರ ತಂದೆ ಎ ಕೆ ಆಂಟನಿ ಅವರನ್ನು ಕೇಂದ್ರ ಸರ್ಕಾರವು ಹೆದರಿಸಿದೆ ಎಂಬ ಪೋಸ್ಟ್‌ ಹರಿದಾಡುತ್ತಿದೆ. ಆಂಟನಿ ಅವರು ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಶಸ್ತ್ರಾಸ್ತ್ರ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸುವುದಾಗಿ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆ  ಅನಿಲ್ ಬಿಜೆಪಿ ಸೇರಿದ್ದಾರೆ ಎಂಬುದು ಎಡಪಕ್ಷಗಳ ಬೆಂಬಲಿಗರ ವಾದ.

ಇದನ್ನು ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

ರಾಜಸ್ಥಾನದಲ್ಲಿ ಮಿಂಚಿದ ರಾಣಿ..!
ರಾಜಸ್ಥಾನದಲ್ಲಿ ರಾಜಕೀಯ ಪೋಸ್ಟರ್‌ನಲ್ಲಿ ರಾಣಿಗೆ ಪ್ರಾಮುಖ್ಯತೆ ಹೆಚ್ಚಾಗಿದೆಯಂತೆ. ಕ್ವೀನ್ ಆಫ್ ಹಾರ್ಟ್ಸ್ ನಿಜವಾಗಿಯೂ ಪ್ರಬಲ ರಾಜಕೀಯ ಅಂಶವಾಗಿದೆ. ರಾಜಸ್ಥಾನದ ಮೂಲೆ ಮೂಲೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಪೋಸ್ಟರ್‌ಗಳಲ್ಲಿ ಹಿರಿಯ ನಾಯಕಿಗೆ ಅಸಮಂಜಸವಾದ ಪ್ರಾಮುಖ್ಯತೆ ನೀಡಿರುವುದು ಇದಕ್ಕೆ ಕಾರಣ. ಅಂದ ಹಾಗೆ, ಈ ರಾಣಿ ಯಾರು ಅಂತೀರಾ..? ರಾಜಸ್ಥಾನ ಮಾಜಿ ಸಿಎಂ, ಬಿಜೆಪಿ ನಾಯಕಿ ವಸುಂಧರಾ ರಾಜೆ.. 

ಈ ವಿನ್ಯಾಸವು ವಸುಂಧರಾ ರಾಜೆಯನ್ನು ರಾಷ್ಟ್ರೀಯ ನಾಯಕರಿಗಿಂತ ಹೆಚ್ಚಾಗಿ ತೋರಿಸಿವೆ. ಇನ್ನು, ಇದಕ್ಕಿಂತಲೂ ಸಾಂವಿಧಾನಿಕ ಸ್ಥಾನವನ್ನು ಅಲಂಕರಿಸಿರುವ ರಾಷ್ಟ್ರೀಯ ನಾಯಕರೊಬ್ಬರ ಫೋಟೋ. ಸಾಂವಿಧಾನಿಕ ಸ್ಥಾನಗಳಿಗೆ ಬಡ್ತಿ ಪಡೆದ ನಾಯಕರ ಮುಖಗಳನ್ನು ಆಯಾ ರಾಜಕೀಯ ಪಕ್ಷಗಳು ಪ್ರಚಾರ ಸಾಮಗ್ರಿಗಳಲ್ಲಿ ಬಳಸುವುದಿಲ್ಲ ಎಂಬುದು ರಾಜಕೀಯ ರೂಢಿಯಾಗಿದೆ. ಈ ಹಿನ್ನೆಲೆ ವೈರಲ್ ಆದ ಪೋಸ್ಟರ್ ಬಗ್ಗೆ ಕಾಂಗ್ರೆಸ್ ಈಗಾಗಲೇ ಬಿಜೆಪಿಯಿಂದ ವಿವರಣೆ ಕೇಳಿದೆ.

ಇದನ್ನೂ ಓದಿ: From the India Gate: ವಯನಾಡ್‌ನಲ್ಲಿ ಕಣಕ್ಕಿಳೀತಾರಾ ಪ್ರಿಯಾಂಕಾ ಗಾಂಧಿ..? ತಮಿಳುನಾಡಲ್ಲಿ ಬಿಜೆಪಿಯೇ ಪ್ರಮುಖ ವಿಪಕ್ಷ..!

ಉದ್ದೇಶಪೂರ್ವಕವಾಗಿ ಕ್ವಾರಂಟೈನ್‌ ಆದ ರಾಜಸ್ಥಾನ ಸಿಎಂ..!
ಕೋವಿಡ್‌ ಆರಂಭವಾದಾಗಿನಿಂದಲೂ ಕ್ವಾರಂಟೈನ್‌ ಎನ್ನುವ ಪದ ಕೇಳಿದ್ರೆ ಅನೇಕರು ಬೆಚ್ಚಿ ಬೀಳ್ತಾರೆ. ಕೊರೊನಾ ಸೋಂಕಿಗೆ ಒಳಗಾದ ನಂತರ ಅನೇಕ ರಾಜಕೀಯ ನಾಯಕರು ಸಹ ಕ್ವಾರಂಟೈನ್‌ ಆಗಿದ್ದಾರೆ. ಆದರೀಗ, ರಾಜಸ್ಥಾನದ ಮುಖ್ಯಮಂತ್ರಿ ಐಸೊಲೇಷನ್‌ಗೊಳಗಾಗಿದ್ದು, ಇದಕ್ಕೆ ಕೊರೋನಾ ಕಾರಣವೆಂದು ನಂಬಲು ಹಲವರು ಸಿದ್ಧರಿಲ್ಲ.

ಆರೋಗ್ಯ ಹಕ್ಕು ಮಸೂದೆಯನ್ನು ಮಂಡಿಸುವ ಸರ್ಕಾರದ ನಿರ್ಧಾರದ ನಂತರ ರಾಜಸ್ಥಾನದಲ್ಲಿ ವೈದ್ಯರಿಂದ ಭಾರಿ ಪ್ರತಿಭಟನೆ ವ್ಯಕ್ತವಾಯಿತು. ಮುಷ್ಕರ ನಿರತ ವೈದ್ಯರು ಬೀದಿಗಿಳಿದ ಹಿನ್ನೆಲೆ ಮುಖ್ಯಮಂತ್ರಿಗಳು ಮಾತುಕತೆ ನಡೆಸಿ ವೈದ್ಯರ 8 ಷರತ್ತುಗಳಿಗೆ ಒಪ್ಪಿಕೊಂಡರು. ನಂತರ, ವೈದ್ಯರು ಮುಷ್ಕರ ಹಿಂಪಡೆದರು. 

ಇದನ್ನೂ ಓದಿ: From the India Gate: ಅಧಿಕಾರಿ ಸಸ್ಪೆಂಡ್‌, ಮೇಲಿನವರು ಸೇಫ್‌: ತೃತೀಯ ರಂಗ ಬಲಗೊಳಿಸಲು ಮತ್ತೆ ‘ದೀದಿ’ ಯತ್ನ..!

ಆದರೆ ಇದಾದ ತಕ್ಷಣ, ಮುಖ್ಯಮಂತ್ರಿಗಳು 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಲು ಸಲಹೆ ನೀಡಿದ ನಂತರ ಅಜ್ಞಾತವಾಗಿ ಹೋದರು. ಈ ಹಿನ್ನೆಲೆ ಆರೋಗ್ಯ ಹಕ್ಕು ಮಸೂದೆಗೆ ಇನ್ನೂ ತಿದ್ದುಪಡಿ ಸಿಗದ ಹಿನ್ನೆಲೆ ಮತ್ತು ಸಿಎಂ ಜೊತೆಗಿನ ಮಾತುಕತೆಯ ನಂತರ ಎಂಟು ತಿದ್ದುಪಡಿಗಳ ಬಗ್ಗೆಯೂ ಈವರೆಗೆ ಯಾವುದೇ ಫಾಲೋ ಅಪ್‌ ಮಾಡದ ಹಿನ್ನೆಲೆ ವೈದ್ಯರು ಕಂಗಾಲಾಗಿ ಹೋಗಿದ್ದಾರೆ.

ಪಳನಿಸ್ವಾಮಿಗೆ ಲಿಟ್ಮಸ್‌ ಪರೀಕ್ಷೆ

ತಮಿಳುನಾಡಲ್ಲಿ ಎಲೆ ಒಣಗುತ್ತಿದೆ. ಅರೆ, ಇದೇನಿದು ಅಂತೀರಾ..? ತಮಿಳುನಾಡು ಮಾಜಿ ಸಿಎಂ ಪಳನಿಸ್ವಾಮಿ ಅವರ ನೇತೃತ್ವದ ಎಐಎಡಿಎಂಕೆ ಪಕ್ಷ ದುರ್ಬಲವಾಗುತ್ತಿರುವ ಆತಂಕ ಮೂಡಿದ್ದು, ಇದು ಪಳನಿಸ್ವಾಮಿಯಲ್ಲೂ ಕಳವಳ ಉಂಟಾಗಿದೆ. ಇನ್ನು, ರಾಜಕೀಯದಲ್ಲಿ ಅವರ ಮ್ಯಾಜಿಕ್‌ ನಡೆಯುತ್ತಿಲ್ಲ ಎಂದು ಕಾರ್ಯಕರ್ತರು ಸಹ ತಲೆಕೆಡಿಸಿಕೊಂಡಿದ್ದಾರೆ. 

ಇದನ್ನೂ ಓದಿ: From the India Gate: ಬಿಎಸ್‌ವೈ ಚೀಟಿ ಅಭ್ಯಾಸದ ಬಗ್ಗೆ ನಿಮಗೆಷ್ಟು ಗೊತ್ತು..? ಯುಪಿ ಸಿಎಂ ಎದುರು ರಾಜಿಯಾದ ಅಖಿಲೇಶ್‌..!

ತನ್ನ ಪ್ರಬಲ ನಾಯಕನ ಮರಣದ ನಂತರ ಚುಕ್ಕಾಣಿಯಿಲ್ಲದೆ ತೇಲುತ್ತಿರುವ ಪಕ್ಷವು ಒಂದರ ಹಿಂದೆ ಒಂದರಂತೆ ಹಿನ್ನಡೆ ಅನುಭವಿಸುತ್ತಿದೆಯಾದರೂ, 2024 ರಲ್ಲಿ ಪುನಶ್ಚೇತನಕ್ಕಾಗಿ ಕಾರ್ಯಕರ್ತರು ಆಶಿಸುತ್ತಿದ್ದಾರೆ. ಇತ್ತೀಚಿನ ಯಾವುದೇ ಚುನಾವಣೆಗಳಲ್ಲಿ ಪಕ್ಷವು ಯಾವುದೇ ಮಹತ್ವದ ಪ್ರಭಾವ ಬೀರಿಲ್ಲ. ಫಲನಿಸ್ವಾಮಿ ದೃಢ ನಿರ್ಧಾರ ತೆಗೆದುಕೊಳ್ಳಲು ಯಾವಾಗಲೂ ಹಿಂಜರಿಯುತ್ತಿದ್ದರು. ಆದರೀಗ ಅವರೊಬ್ಬರೇ ನಿರ್ಧಾರ ತೆಗೆದುಕೊಳ್ಳುವವರಾಗಿದ್ದು, ಅವರ ಪಕ್ಷವನ್ನು ಅಧಿಕಾರಕ್ಕೆ ತರುವುದು ಅವರ ಜವಾಬ್ದಾರಿಯಾಗಿದೆ.

ಇದನ್ನೂ ಓದಿ: From the India Gate: ಕಾಂಗ್ರೆಸ್‌ ಒಗ್ಗಟ್ಟಿನ ಮಂತ್ರದ ವಾಸ್ತವ ಹೀಗಿದೆ; ‘ಭಜರಂಗಿ’ಗೆ ನೋಟಿಸ್‌ ಕಳಿಸಿದ ಸರ್ಕಾರ..!

Follow Us:
Download App:
  • android
  • ios