ತೆಲಂಗಾಣದಲ್ಲಿ ಡಿಕೆ ‘ಶಿವ’ ತಾಂಡವ; ಕೈಗೊಂಬೆಯಾದ್ರು ಖರ್ಗೆ: ತಮಿಳ್ನಾಡು ರಾಜಕೀಯಕ್ಕೆ ಧುಮುಕಲು ದಳಪತಿ ರೆಡಿ

ಒಂದಿಲ್ಲೊಂದು ರಾಜಕೀಯ ಬೆಳವಣಿಗೆಗಳು ಆಗಾಗ್ಗೆ ತೆರೆ ಹಿಂದೆ ನಡೆಯುತ್ತಲೇ ಇರುತ್ತದೆ. ಈ ಪೈಕಿ ಅನೇಕ ಬೆಳವಣಿಗೆಗಳು ಬೆಳಕಿಗೆ ಬರೋದೇ ಇಲ್ಲ, ಕೇವಲ ಗುಸುಗುಸು ಪಿಸುಪಿಸು ಎಂಬಂತೆ ಕೇಳಿಬರುತ್ತಿರುತ್ತದೆ. ದೇಶಾದ್ಯಂತ ಇತ್ತೀಚಿನ ಇಂತಹ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ..

from the india gate political gossip kerala rajasthan telangana dk shivakumar mallikarjun kharge ash

ಕೆಂಪು ಸೈನ್ಯದಲ್ಲಿ ದಂಗೆ
ಕೇರಳದ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಆಂತರಿಕ ದಂಗೆ ಎದುರಿಸುತ್ತಿದೆ. ಕೆಲವು ಉನ್ನತ ನಾಯಕರ ತಪ್ಪುಗಳು ಮತ್ತು ದುಷ್ಕೃತ್ಯಗಳ ಬಗ್ಗೆ ಸುದ್ದಿ ಮಾಡಲು ಅನೇಕ ನಿಜವಾದ ``ಕಾಮ್ರೇಡ್‌'' ಗಳು ಪಕ್ಷದ ಸಾಮಾಜಿಕ ಮಾಧ್ಯಮ ಪುಟಗಳನ್ನು ಬಳಸುತ್ತಿದ್ದಾರೆ. ಚೆಂಬಡ ಕಾಯಂಕುಲಂ, ಕಾಯಂಕುಲಂ ವಿಪ್ಲವಂ, ಮುಂತಾದ ಪಕ್ಷದ ಪರ ಫೇಸ್‌ಬುಕ್ ಪುಟಗಳಲ್ಲಿ ಸಂಬಂಧಪಟ್ಟ ಕಾಮ್ರೇಡ್‌ಗಳು ನೀಡಿದ ಸುಳಿವುಗಳಿಂದ ಮುಖ್ಯವಾಹಿನಿಯ ಮಾಧ್ಯಮಗಳು ಈ ಸುದ್ದಿಗಳನ್ನು ವರದಿ ಮಾಡಿವೆ.

ಇತ್ತೀಚೆಗೆ ಎಸ್‌ಎಫ್‌ಐ ಮುಖಂಡ ನಿಖಿಲ್ ಥಾಮಸ್, ಪಕ್ಷದ ಸದಸ್ಯರ ಸಲಹೆಯ ಮೇರೆಗೆ ಎಂ. ಕಾಂ ಪ್ರವೇಶವನ್ನು ನಿರ್ವಹಿಸಲು ನಕಲಿ ಬಿ. ಕಾಂ ಪದವಿ ಪ್ರಮಾಣಪತ್ರವನ್ನು ಬಳಸಿರುವುದು ಮಾಧ್ಯಮದಲ್ಲಿ ವರದಿ ಬರುವ ಮುನ್ನ ಮೊದಲು ಪಕ್ಷದ ಎಫ್‌ಬಿ ಪುಟದಲ್ಲಿ ಬಂದಿತ್ತು.

ಇದನ್ನು ಓದಿ: From The India Gate: ಡಿಎಂಕೆ ವಾಷಿಂಗ್ ಮಷೀನ್‌ಗೆ ಸ್ವಚ್ಛವಾದ ಶಾಸಕ, ತಮಿಳ್ನಾಡಲ್ಲಿ IAS vs IPS ರಾಜಕೀಯ ತಂತ್ರಗಾರಿಕೆ!

ಅದೇ ರೀತಿ, ಸ್ಥಳೀಯ ಸಮಿತಿಯ ಸದಸ್ಯರೊಬ್ಬರ ವಿಡಿಯೋ ಕಾಲ್ ‘ಕಥೆ' ಕೂಡ ಮೊದಲು ಪಕ್ಷದ ಸಾಮಾಜಿಕ ಮಾಧ್ಯಮ ಪುಟದಲ್ಲಿ ವರದಿಯಾಗಿತ್ತು. ಈ ಕಾಮ್ರೇಡ್ ಅನ್ನು ನಂತರ ಪಕ್ಷದಿಂದ ಹೊರಹಾಕಲಾಗಿದೆ. ಸೈಬರ್‌ಸ್ಪೇಸ್‌ನಲ್ಲಿ ಇಂತಹ ದಂಗೆಯನ್ನು ಎದುರಿಸುತ್ತಿರುವ ಪಕ್ಷವು ಈಗ ಡಿಜಿಟಲ್ ನೈರ್ಮಲ್ಯದ ಕುರಿತು ಕಾಮ್ರೇಡ್‌ಗಳಿಗೆ ತರಬೇತಿ ನೀಡಲು ಸಾಮಾಜಿಕ ಮಾಧ್ಯಮ ತಜ್ಞರನ್ನು ತೊಡಗಿಸಿಕೊಂಡಿದೆ.

ಶಿವ ತಾಂಡವ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜಕೀಯ ಗಮನ ಈಗ ತೆಲಂಗಾಣದತ್ತ ನೆಟ್ಟಿದೆ. ತೆಲಂಗಾಣದಲ್ಲಿ ರಾಷ್ಟ್ರೀಯ ನಾಯಕತ್ವವನ್ನು ಮೈಗೂಡಿಸಿಕೊಂಡಿರುವ ಡಿಕೆಶಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನೇ ಕೈಗೊಂಬೆಯನ್ನಾಗಿ ಮಾಡಿದ್ದಾರೆ.

ಇದನ್ನೂ ಓದಿ: From the india gate: ರಾಣಿ ಜೇನು ಭೇಟಿಯಾದ ಡಿಕೆಶಿ, ಕೇರಳದಲ್ಲಿ ಯಥಾ ರಾಜ ತಥಾ ಪ್ರಜಾ!

ಇತ್ತೀಚೆಗಷ್ಟೇ ಮಾಣಿಕ್‌ ರಾವ್‌ ಠಾಕ್ರೆ ಅವರನ್ನು ತೆಲಂಗಾಣದ ಉಸ್ತುವಾರಿಯನ್ನಾಗಿ ಖರ್ಗೆ ಮಾಡಿದ್ದರು. ರಾಜ್ಯದ ಉಸ್ತುವಾರಿ ಹೊತ್ತಿದ್ದ ಅವರನ್ನು ಗೋವಾಕ್ಕೆ ಸ್ಥಳಾಂತರಿಸಲಾಯಿತು. ಆದರೆ ಡಿಕೆಶಿಯನ್ನು ತಮ್ಮ ಮಾರ್ಗದರ್ಶಕರಾಗಿ ಕಾಣುವ ತೆಲಂಗಾಣ ನಾಯಕರು ಠಾಕ್ರೆ ಅವರನ್ನು ಸಂಪರ್ಕಿಸುವುದಿಲ್ಲ.

ಇನ್ನು, ಟಿ.ಪಿ.ಸಿ.ಸಿ ಮುಖ್ಯಸ್ಥ ರೇವಂತ್ ರೆಡ್ಡಿ ನಾಯಕತ್ವ ವಿರೋಧಿಸುತ್ತಿರುವ ಅತೃಪ್ತ ಸಂಸದ ಕೋಮಟಿರೆಡ್ಡಿ ವೆಂಕಟರೆಡ್ಡಿ ಡಿ.ಕೆ.ಶಿ ಅವರನ್ನು ಭೇಟಿ ಮಾಡಿದ್ದರು. ತಮ್ಮ ಸಹೋದರ ರಾಜಗೋಪಾಲ್ ರೆಡ್ಡಿ ಅವರನ್ನು ಮತ್ತೆ ಕಾಂಗ್ರೆಸ್‌ಗೆ ಕರೆತರಲು ಕೋಮಟಿರೆಡ್ಡಿ ಡಿಕೆಶಿ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದು ವೀಕ್ಷಕರ ಅಭಿಪ್ರಾಯ.

ಇದನ್ನೂ ಓದಿ: From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

ರಾಜಗೋಪಾಲ್ ರೆಡ್ಡಿ ಅವರು ಬಿಜೆಪಿ ಸೇರಲು ಪಕ್ಷಕ್ಕೆ ಮತ್ತು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಅವರ ನಡೆ ವಿಫಲವಾಯಿತು. ಇದರ ಬೆನ್ನಲ್ಲೇ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಲು ಪ್ರಯತ್ನ ಪಡ್ತಿದ್ದಾರೆ. ರೇವಂತ್ ರೆಡ್ಡಿ ಅಡಿ ಕೆಲಸ ಮಾಡಲು ವಿರೋಧಿಸುತ್ತಿರುವ ಈ ಸಹೋದರರು ರಾಜಗೋಪಾಲ್ ರೆಡ್ಡಿ ಅವರನ್ನು ಮರಳಿ ಸೇರಿಸಿಕೊಳ್ಳಲು ಡಿಕೆಶಿ ಮೊರೆ ಹೋಗಿದ್ದಾರೆ.

2024ರ ಕಾರ್ಯತಂತ್ರವನ್ನು ನಿರ್ಧರಿಸಲು ಆಂಧ್ರ ಸಿಎಂ ಜಗನ್ ಸಹೋದರಿ ಶಿವಕುಮಾರ್ ಮತ್ತು ಶರ್ಮಿಳಾ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಇದರೊಂದಿಗೆ ತೆಲಂಗಾಣ ಘಟಕದಲ್ಲಿ ರೇವಂತ್ ರೆಡ್ಡಿ ಮತ್ತು ಠಾಕ್ರೆ ತಮ್ಮ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.

ಇದನ್ನೂ ಓದಿ: From the India Gate: ಇದೇ ಭವಾನಿ ರೇವಣ್ಣ ಶಕ್ತಿ; 2000 ಕೋಟಿ ರೂ. ಭರವಸೆಗಾಗಿ ತಲೆಮರೆಸಿಕೊಂಡ ಸಚಿವರು!

ಫೇಸ್ ಆಫ್
ಲಂಚದ ಸುಳಿಗೆ ಸಿಲುಕಿ ಕೇರಳ ಕೆಪಿಸಿಸಿ ಅಧ್ಯಕ್ಷ ಕೆ ಸುಧಾಕರನ್ ಬಂಧನದ ನಂತರ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಿದೆ. ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಮಾಡಿದೆ.  ಹರಿಪ್ಪಾಡ್‌ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರ ಒಂದು ಗುಂಪು, ರಾಜ್ಯ ಸರ್ಕಾರದ ಕಾರಿನೊಂದಿಗೆ ಪೊಲೀಸ್ ಜೀಪ್ ಅನ್ನು ನೋಡಿದೆ.

ಈ ಹಿನ್ನೆಲ, ರಾಜ್ಯದ ಸಚಿವರನ್ನು ಪೊಲೀಸರು ಬೆಂಗಾವಲು ಮಾಡುತ್ತಿದ್ದಾರೆ ಎಂದು ಭಾವಿಸಿ, ಕಾರಿನ ಮುಂದೆ ನಿಂತು ಘೋಷಣೆಗಳನ್ನು ಕೂಗಿದರು. ಅವರಲ್ಲಿ ಕೆಲವರು ಸುಧಾಕರನ್‌ನನ್ನು ಏಕೆ ಬಂಧಿಸಲಾಯಿತು ಎಂಬುದನ್ನು ವಿವರಿಸಲು ``ಸಚಿವ’’ರನ್ನು ಒತ್ತಾಯಿಸಿದರು.

ಇದನ್ನೂ ಓದಿ: From the India Gate: ಕೇರಳದಲ್ಲಿ 'ದೋಸೆ' ರಾಜಕೀಯ; ಬಿಜೆಪಿ ಸಂಸದರಿಗೆ ಡಬಲ್‌ ಡ್ಯೂಟಿಯದ್ದೇ ದೊಡ್ಡ ಚಿಂತೆ!

ಆದರೆ, ಪ್ರತಿಭಟನಾಕಾರರ ಆಘಾತ ಮತ್ತು ಆಶ್ಚರ್ಯಕ್ಕೆ, ರಾಜ್ಯದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಬೇರೆ ಯಾರೂ ಅಲ್ಲ, ತಮ್ಮ ವಿರೋಧ ಪಕ್ಷದ ನಾಯಕ ವಿ ಡಿ ಸತೀಶ್‌ ಎಂದು ಅವರು ಅರಿತುಕೊಂಡರು. ಇದರಿಂದ ಮುಜುಗರಕ್ಕೊಳಗಾದ ಕಾರ್ಯಕರ್ತರು ತಬ್ಬಿಬ್ಬಾದರು. 

ನಾನ್ ರೆಡಿ

ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ನಟ ವಿಜಯ್ ಅಭಿನಯದ ಲಿಯೋ ಚಿತ್ರದ ''ನಾನ್ ರೆಡಿ'' (ನಾನು ಸಿದ್ಧ) ಹಾಡು ನಟ ವಿಜಯ್ ಅವರ ರಾಜಕೀಯ ಪ್ರವೇಶವನ್ನು ಖಚಿತಪಡಿಸುವ ಸಾಹಿತ್ಯವನ್ನು ಹೊಂದಿದೆ. ಯುವ ಸಭೆಗಳನ್ನು ಆಯೋಜಿಸಲು ವಿಜಯ್ ಅಭಿಮಾನಿಗಳ ಸಂಘಗಳು ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿದ್ದು, ಇದು ಸನ್ನಿಹಿತವಾದ ಘೋಷಣೆಯ ಪೂರ್ವಭಾವಿಯಾಗಿ ಅನೇಕರು ನೋಡುತ್ತಾರೆ. ಈ ಸಭೆಗಳಲ್ಲಿ ನಟ ವಿಜಯ್ ಸಹ ರಾಜಕೀಯದ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: From the India Gate: ವಂದೇ ಭಾರತ್‌ ರೈಲು ಸ್ವಾಗತಿಸಲು ಸಂದಿಗ್ಧತೆ; ಪಂಕ್ಚರ್‌ ಆದ ತೆಲಂಗಾಣ ಸಿಎಂ ಹಾಗೂ ಪುತ್ರ!

10 ಮತ್ತು 12ನೇ ತರಗತಿಯ ಉನ್ನತ ಶ್ರೇಣಿಯ ವಿದ್ಯಾರ್ಥಿಗಳನ್ನು ಸನ್ಮಾನಿಸಲು ಇತ್ತೀಚೆಗೆ ಆಯೋಜಿಸಲಾದ ಸಭೆಯಲ್ಲಿ ವಿಜಯ್ ಅವರು ಅಂಬೇಡ್ಕರ್, ಪೆರಿಯಾರ್ ಮತ್ತು ಕಾಮರಾಜ್ ಬಗ್ಗೆ ಹೆಚ್ಚು ಓದುವಂತೆ ಮನವಿ ಮಾಡಿದರು. ಹಾಗೂ, “ಹೊಸ ನಾಯಕರನ್ನು ಆಯ್ಕೆ ಮಾಡುವ ನಾಳಿನ ಮತದಾರರು ನೀವು. ಆದರೆ ದಯವಿಟ್ಟು ಹಣ ಬಲದ ಆಮಿಷಕ್ಕೆ ಒಳಗಾಗಬೇಡಿ. ನಿಮ್ಮಲ್ಲಿ ಯಾರೂ ಹಣ ಪಡೆದು ಮತ ಹಾಕಬೇಡಿ,’’ ಎಂದರು.

ಮುಖ್ಯವಾಹಿನಿಯ ರಾಜಕೀಯ ಪಕ್ಷಗಳು ವಿಜಯ್ ಅವರನ್ನು ಎಂದಿಗೂ ಲಘುವಾಗಿ ಪರಿಗಣಿಸುವುದಿಲ್ಲ. 2026 ರ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರು ರಾಜಕೀಯಕ್ಕೆ ಧುಮುಕುತ್ತಾರೆ ಮತ್ತು ಅವರು ಅಸಾಧಾರಣ ಶಕ್ತಿಯಾಗುತ್ತಾರೆ ಎಂಬುದು ಹಲವರ ಅಭಿಪ್ರಾಯ.

ಇದನ್ನೂ ಓದಿ: From the India Gate: ಬಿಜೆಪಿ ಸರ್ಜಿಕಲ್‌ ಸ್ಟ್ರೈಕ್‌ಗೆ ಕಾಂಗ್ರೆಸ್‌ ದಿಗ್ಭ್ರಮೆ; ರಾಜಸ್ಥಾನದಲ್ಲಿ ಅಜ್ಞಾತವಾದ ಸಿಎಂ..!
 
ಆ 30 ನಿಮಿಷಗಳು
ಕಾಂಗ್ರೆಸ್‌ನ ಇಬ್ಬರು ದಿಗ್ಗಜರ ನಡುವಿನ ಇತ್ತೀಚಿನ ಸಭೆಯು ಪಕ್ಷದಲ್ಲಿ ಬದಲಾವಣೆ ತರಲು ಎಲ್ಲವನ್ನೂ ಮಾಡುತ್ತಿರುವ ಸಚಿನ್‌ ಪೈಲಟ್‌ ಹೊಟ್ಟೆಯಲ್ಲಿ ಚಿಟ್ಟೆಗಗಳನ್ನು ಬಿಟ್ಟಂತಾಗಿದೆ. ಆದರೆ ರಾಜ್ಯವನ್ನು ಮೇಲ್ವಿಚಾರಣೆ ಮಾಡುವ ರಾಜಸ್ಥಾನದ ದೊಡ್ಡ ನಾಯಕ (ಅಶೋಕ್‌ ಗೆಹ್ಲೋಟ್‌) ಮತ್ತು ದೆಹಲಿಯ ಹಿರಿಯರ ನಡುವಿನ ಅರ್ಧ ಗಂಟೆಯ ಸಭೆಯ ನಂತರ, ಎಲ್ಲಾ ವಿರೋಧಿ ಚಳುವಳಿಗಳು ಶೀಘ್ರದಲ್ಲೇ ಮಕಾಡೆ ಮಲಗಲಿವೆ ಎಂಬ ಊಹಾಪೋಹಗಳು ಇವೆ.

ಸಭೆಯ ಕುರಿತು ಯಾವುದೇ ವಿವರಗಳು ಹೊರಹೊಮ್ಮಿಲ್ಲವಾದರೂ, ಸಚಿನ್‌ ಪೈಲಟ್‌ ಅಸ್ಪಷ್ಟವಾದ್ದು, ರಾಜ್ಯದ ಹಿರಿಯ ನಾಯಕ ಎಂದಿಗಿಂತಲೂ ಹೆಚ್ಚು ಆತ್ಮವಿಶ್ವಾಸದಿಂದ ಕಾಣುತ್ತಾರೆ. 30 ನಿಮಿಷಗಳ ಸಭೆಯಲ್ಲಿ ಏನೆಲ್ಲಾ ರಣತಂತ್ರ ರೂಪಿಸಲಾಗಿದೆ ಎಂಬುದು ಮುಂಬರುವ 30 ದಿನಗಳಲ್ಲಿ ಬಹಿರಂಗವಾಗಲಿದೆ.

ಇದನ್ನು ಓದಿ: From the India Gate: ಮಲಯಾಳಂ ನಟನ ಇನ್ನೋಸೆಂಟ್‌ ರಾಜಕೀಯ; ತೆಲಂಗಾಣದಲ್ಲಿ ಉಪ್ಪಿನಕಾಯಿಯಾದ ‘ಕಮಲ’..!

Latest Videos
Follow Us:
Download App:
  • android
  • ios