Asianet Suvarna News Asianet Suvarna News

ಮಾಜಿ ಸಂಸದನ ಕೊಲೆ ಪ್ರಕರಣ: ಸಿಬಿಐನಿಂದ ಆಂಧ್ರ ಸಿಎಂ ಜಗನ್ ಚಿಕ್ಕಪ್ಪನ ಬಂಧನ

ಮಾಜಿ ಸಂಸದ  ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ ಅವರ  ಚಿಕ್ಕಪ್ಪ ವೈಎಸ್‌ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ.

Farmer MP Vivekananda reddy murder case CBI arrest Andhra pradesh cm jagan mohan reddy uncle bhaskar reddy akb
Author
First Published Apr 16, 2023, 10:51 AM IST

ವಿಶಾಖಪಟ್ಟಣ: ಮಾಜಿ ಸಂಸದ  ವಿವೇಕಾನಂದ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್ ರೆಡ್ಡಿ ಅವರ  ಚಿಕ್ಕಪ್ಪ ವೈಎಸ್‌ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಿದ್ದಾರೆ. ಕೊಲೆಯಾಗಿದ್ದ  ವಿವೇಕಾನಂದ ರೆಡ್ಡಿ ಕೂಡ ಹಾಗೂ ಆಂಧ್ರ ಪ್ರದೇಶದ ಸಿಎಂ ಜಗನ್‌ಮೋಹನ್ ರೆಡ್ಡಿ ಅವರ ಚಿಕ್ಕಪ್ಪನಾಗಿದ್ದು, ಆಂಧ್ರದ ಮಾಜಿ ಸಿಎಂ ರಾಜಶೇಖರ್‌ ರೆಡ್ಡಿ  ಅವರ ಸಹೋದರನಾಗಿದ್ದರು. 

2019ರ ಮಾರ್ಚ್‌ 15 ರಂದು ವಿವೇಕಾನಂದ ರೆಡ್ಡಿ ಆಂಧ್ರಪ್ರದೇಶದ ಪುಲಿವೆಂದುಲದಲ್ಲಿರುವ (Pulivendula) ತಮ್ಮ ನಿವಾಸದಲ್ಲೇ ಕೊಲೆಯಾಗಿದ್ದರು.  ರಾಜ್ಯ ವಿಧಾನಸಭಾ ಚುನಾವಣೆಗೂ ಕೆಲ ದಿನಗಳ ಹಿಂದೆ ಈ ಘಟನೆ ನಡೆದಿತ್ತು.  ರಾಜ್ಯದ ಅಪರಾಧ ತನಿಖಾ ದಳದ ವಿಶೇಷ ತನಿಖಾ ತಂಡ ಈ ಪ್ರಕರಣದ ಪ್ರಾಥಮಿಕ ವಿಚಾರಣೆ ನಡೆಸಿತ್ತು. ನಂತರ 2020ರ ಜುಲೈನಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಲಾಗಿತ್ತು. 

510 ಕೋಟಿ ಆಸ್ತಿಯೊಂದಿಗೆ ಆಂಧ್ರದ ಜಗನ್ ದೇಶದ ಅತ್ಯಂತ ಶ್ರೀಮಂತ ಸಿಎಂ: ದೀದೀ ಆಸ್ತಿ ಎಷ್ಟು?

ಸಿಬಿಐ ಚಾರ್ಜ್‌ಶೀಟ್ ಪ್ರಕಾರ,  ಕೊಲೆಯಾದ ವಿವೇಕಾನಂದ ರೆಡ್ಡಿ (Vivekananda Reddy) ಅವರು ಕಡಪಾ ಲೋಕಸಭೆಯಿಂದ ಹಾಲಿ ಸಂಸದನಾಗಿರುವ ಅವಿನಾಶ್ ರೆಡ್ಡಿ (ಅವಿನಾಶ್‌ ರೆಡ್ಡಿ ಈಗ ಬಂಧಿತನಾಗಿರುವ ಭಾಸ್ಕರ್‌ ರೆಡ್ಡಿ ಅವರ ಪುತ್ರ) ಬದಲಿಗೆ ತನಗೆ ಅಥವಾ ವೈಎಸ್ ಶರ್ಮಿಳಾ (ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ) ಅಥವಾ ವೈಎಸ್ ವಿಜಯಮ್ಮ (ಜಗನ್ ಮೋಹನ್ ರೆಡ್ಡಿ ಅವರ ತಾಯಿ) ಅವರಿಗೆ  ಟಿಕೆಟ್ ಬಯಸಿದ್ದರು. 

ಕಡಪಾದ ಕಚೇರಿಯಿಂದ ಭಾಸ್ಕರ್ ರೆಡ್ಡಿ (YS Bhaskar Reddy) ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120ಬಿ ಪಿತೂರಿ, 302 ಕೊಲೆ , 201 ತನ್ನ ವಿರುದ್ಧದ ಸಾಕ್ಷ್ಯನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ. 

ಚುನಾವಣೆ ಹೊಸ್ತಿಲಲ್ಲಿ 3000 ದೇಗುಲ ನಿರ್ಮಾಣಕ್ಕೆ ಮುಂದಾದ ಜಗನ್

Follow Us:
Download App:
  • android
  • ios