ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಧುರಂಧರ್: ದ ರಿವೆಂಜ್' ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದಕ್ಷಿಣ ಭಾರತದ ಅಭಿಮಾನಿಗಳಿಗೆ ಭಾರಿ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ.

ರಣವೀರ್ ಸಿಂಗ್ ‘ದುರಂಧರ 2’ಗೆ ಬಿಡುಗಡೆ ಮುನ್ನವೇ ವಿಘ್ನ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚೆನ್ನೈ/ಹೈದರಾಬಾದ್: ಬಾಲಿವುಡ್‌ನ ಎನರ್ಜಿಟಿಕ್ ಸ್ಟಾರ್ ರಣವೀರ್ ಸಿಂಗ್ (Ranveer Singh) ಅಭಿನಯದ ಬಹುನಿರೀಕ್ಷಿತ ಆಕ್ಷನ್ ಚಿತ್ರ 'ಧುರಂಧರ್: ದ ರಿವೆಂಜ್' (Dhurandhar: The Revenge) ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ದಕ್ಷಿಣ ಭಾರತದ ಅಭಿಮಾನಿಗಳಿಗೆ ಭಾರಿ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಸಿನಿಮಾದ ಪೇಯ್ಡ್ ಪ್ರೀಮಿಯರ್ ಶೋಗಳು ಕೊನೆಯ ಕ್ಷಣದಲ್ಲಿ ರದ್ದಾಗಿವೆ.

ಅನಿರೀಕ್ಷಿತ ಟ್ವಿಸ್ಟ್ ನೀಡಿದ ತಾಂತ್ರಿಕ ಎಡವಟ್ಟು:

ಈ ಮೊದಲು ಚಿತ್ರತಂಡವು ಭಾರಿ ಪ್ರಚಾರದೊಂದಿಗೆ ದಕ್ಷಿಣದ ರಾಜ್ಯಗಳಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಿತ್ತು. ಆದರೆ, ಪ್ರಾದೇಶಿಕ ಭಾಷೆಗಳಾದ ತಮಿಳು ಮತ್ತು ತೆಲುಗು ಆವೃತ್ತಿಯ ಕಂಟೆಂಟ್ (ಡಿಜಿಟಲ್ ಕೀ ಅಥವಾ ಹಾರ್ಡ್ ಡಿಸ್ಕ್) ಸಕಾಲಕ್ಕೆ ಚಿತ್ರಮಂದಿರಗಳಿಗೆ ಲಭ್ಯವಾಗದ ಕಾರಣ ಈ ಕಠಿಣ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೋ ಆರಂಭಕ್ಕೆ ಕೇವಲ ಕೆಲವು ಗಂಟೆಗಳ ಮೊದಲು ಈ ಬದಲಾವಣೆ ಮಾಡಲಾಗಿದ್ದು, ರಣವೀರ್ ಅಭಿಮಾನಿಗಳಲ್ಲಿ ಭಾರಿ ಆಕ್ರೋಶ ಮತ್ತು ಬೇಸರ ಮೂಡಿಸಿದೆ.

ಹಿಂದಿ ಆವೃತ್ತಿಯೇ ಗತಿ:

ಪ್ರಾದೇಶಿಕ ಭಾಷೆಯ ಡಬ್ಬಿಂಗ್ ಆವೃತ್ತಿಗಳು ಲಭ್ಯವಿಲ್ಲದ ಕಾರಣ, ಈಗ ಆಯಾ ರಾಜ್ಯಗಳಲ್ಲಿ ಮೂಲ ಹಿಂದಿ ಆವೃತ್ತಿಯನ್ನೇ ಪ್ರದರ್ಶಿಸಲು ವಿತರಕರು ಮುಂದಾಗಿದ್ದಾರೆ. "ಕೊನೆಯ ಕ್ಷಣದ ಬದಲಾವಣೆಯಿಂದಾಗಿ ತಮಿಳು ಮತ್ತು ತೆಲುಗು ವರ್ಷನ್‌ಗಳ ಬದಲಿಗೆ ಮೂಲ ಹಿಂದಿ ಸಿನಿಮಾವನ್ನೇ ಪ್ರದರ್ಶಿಸಲಾಗುವುದು," ಎಂದು ಚಿತ್ರಮಂದಿರಗಳ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಭಾಷೆಯಲ್ಲಿ ರಣವೀರ್ ಅವರ ಆಕ್ಷನ್ ಅಬ್ಬರ ನೋಡಲು ಕಾದಿದ್ದ ಸಿನಿಪ್ರೇಮಿಗಳಿಗೆ ಇದು ದೊಡ್ಡ ಶಾಕ್ ನೀಡಿದೆ.

ಭರ್ಜರಿ ಟ್ರೈಲರ್ ಮೂಲಕ ಸಿನಿರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ

'ದುರಂಧರ 2' ಚಿತ್ರವು ತನ್ನ ಭರ್ಜರಿ ಟ್ರೈಲರ್ ಮೂಲಕ ಸಿನಿರಂಗದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ದಕ್ಷಿಣ ಭಾರತದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂತಹ ತಾಂತ್ರಿಕ ಎಡವಟ್ಟು ಸಂಭವಿಸಿರುವುದು ಚಿತ್ರದ ಆರಂಭಿಕ ಗಳಿಕೆಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಈಗಾಗಲೇ ಟಿಕೆಟ್ ಬುಕ್ ಮಾಡಿರುವ ಪ್ರೇಕ್ಷಕರಿಗೆ ಹಣ ವಾಪಸ್ ನೀಡಲಾಗುತ್ತದೆಯೇ ಅಥವಾ ಅವರು ಹಿಂದಿ ಆವೃತ್ತಿಯನ್ನೇ ವೀಕ್ಷಿಸುತ್ತಾರೆಯೇ ಎಂಬ ಗೊಂದಲ ಸದ್ಯ ಮಾರುಕಟ್ಟೆಯಲ್ಲಿದೆ. ಒಟ್ಟಿನಲ್ಲಿ, ಬಿಡುಗಡೆಯ ಮೊದಲ ದಿನವೇ ‘ದುರಂಧರ’ ಚಿತ್ರಕ್ಕೆ ಭಾಷೆಯ ತೊಡಕು ಎದುರಾಗಿರುವುದು ಸಿನಿವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.