Asianet Suvarna News Asianet Suvarna News

ಚುನಾವಣೆ ಹೊಸ್ತಿಲಲ್ಲಿ 3000 ದೇಗುಲ ನಿರ್ಮಾಣಕ್ಕೆ ಮುಂದಾದ ಜಗನ್

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಹಿಂದುತ್ವ ಪಠಣ ಆರಂಭಿಸಿದ್ದು, ರಾಜ್ಯಾದ್ಯಂತ 3000 ದೇವಾಲಯಗಳ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.

Andhra Pradesh Jagans govt decision to build 3000 temples TTD supports Jagans work akb
Author
First Published Mar 2, 2023, 6:08 AM IST

ಅಮರಾವತಿ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್‌. ಜಗನ್ಮೋಹನ ರೆಡ್ಡಿ ಹಿಂದುತ್ವ ಪಠಣ ಆರಂಭಿಸಿದ್ದು, ರಾಜ್ಯಾದ್ಯಂತ 3000 ದೇವಾಲಯಗಳ ಸ್ಥಾಪನೆಗೆ ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.

ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ (Y.S. Jagan Mohan reddy) ಅವರ ಸೂಚನೆಯಂತೆ ಹಿಂದೂ ಧರ್ಮದ ರಕ್ಷಣೆಗಾಗಿ ರಾಜ್ಯದ ಎಲ್ಲ ಭಾಗಗಳಲ್ಲಿ ಹಿಂದೂ ದೇವಾಲಯಗಳನ್ನು (Hindu Temple) ನಿರ್ಮಿಸಲು ಮುಂದಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಕೊಟ್ಟು ಸತ್ಯನಾರಾಯಣ್‌ (Kottu Sathyanarayana) ತಿಳಿಸಿದ್ದಾರೆ.
ಈ ಕಾರ್ಯಕ್ಕೆ ಕೈ ಜೋಡಿಸಿರುವ ತಿರುಮಲ ತಿರುಪತಿ ದೇವಸ್ಥಾನಂ (TTD) ಸಮಿತಿಯ ಶ್ರೀ ವಾಣಿ ಟ್ರಸ್ಟ್‌ , ಪ್ರತಿ ದೇವಸ್ಥಾನ ನಿರ್ಮಾಣಕ್ಕೆ 10 ಲಕ್ಷ ರು. ನೀಡುವುದಾಗಿ ತಿಳಿಸಿದೆ. ಈಗಾಗಲೇ 1330 ದೇಗುಲಗಳ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಇನ್ನೂ 1,465 ದೇವಸ್ಥಾನಗಳನ್ನು ಪಟ್ಟಿಮಾಡಲಾಗಿದೆ. ಶಾಸಕರ ಕೋರಿಕೆಯ ಮೇರೆಗೆ 200 ದೇವಾಲಯಗಳನ್ನು ಹೆಚ್ಚುವರಿಯಾಗಿ ನಿರ್ಮಿಸಲಾಗುತ್ತದೆ.

ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

ಇನ್ನು ದೇವಾಲಯಗಳ ನಿರ್ಮಾಣವನ್ನು ಇತರ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಪೂರ್ಣಗೊಳಿಸಲಾಗುವುದು. ದತ್ತಿ ಇಲಾಖೆಯ (endowment department) ಅಡಿಯಲ್ಲಿ ದೇವಾಲಯ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಪ್ರತಿ 25 ದೇವಸ್ಥಾನಗಳಿಗೆ ಒಬ್ಬ ಸಹಾಯಕ ಎಂಜಿನೀಯರ್‌ನ್ನು ನೇಮಿಸಲಾಗಿದೆ ಎಂದು ಸತ್ಯನಾರಾಯಣ್‌ ತಿಳಿಸಿದ್ದಾರೆ.

ಕೆಲ ದೇವಾಲಯಗಳ ಜೀರ್ಣೋದ್ಧಾರಕ್ಕಾಗಿ ಮತ್ತು ನಿರ್ವಹಣೆಗಾಗಿ ಮೀಸಲಿರಿಸಲಾದ 270 ಕೋಟಿ ರು. ಸಿಜಿಎಫ್‌ ನಿಧಿಯಲ್ಲಿ 238 ಕೋಟಿ ಬಿಡುಗಡೆಗೊಳಿಸಲಾಗಿದೆ. ಧೂಪ ದೀಪಂ ಯೋಜನೆಯಲ್ಲಿ ಪ್ರತಿ ದೇವಸ್ಥಾಗಳಿಗೆ 5 ಸಾವಿರ ರು.ಗಳಂತೆ 28 ಕೋಟಿ ಮೀಸಲಿರಿಸಲಾಗಿದೆ. ಈ ಯೋಜನೆಯಡಿಯಲ್ಲಿ 2019 ರಲ್ಲಿ ಕೇವಲ 1,561 ದೇವಸ್ಥಾನಗಳು ನೋಂದಣಿಗೊಂಡಿದ್ದವು. ಈಗ ಈ ಸಂಖ್ಯೆ 5 ಸಾವಿರಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಆಂಧ್ರಪ್ರದೇಶದಲ್ಲಿ 2024ರ ಜೂನ್‌ ವೇಳೆಗೆ ಚುನಾವಣೆ ನಡೆಯಲಿವೆ.

ಭದ್ರಾ ಮೇಲ್ದಂಡೆ ಯೋಜನೆ ಕುರಿತು ಆಂಧ್ರ ಕ್ಯಾತೆಗೆ ಕೋಟೆನಾಡಿನ ರೈತರು ಆಕ್ರೋಶ

Follow Us:
Download App:
  • android
  • ios