Asianet Suvarna News Asianet Suvarna News

510 ಕೋಟಿ ಆಸ್ತಿಯೊಂದಿಗೆ ಆಂಧ್ರದ ಜಗನ್ ದೇಶದ ಅತ್ಯಂತ ಶ್ರೀಮಂತ ಸಿಎಂ: ದೀದೀ ಆಸ್ತಿ ಎಷ್ಟು?

ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹನ್ ರೆಡ್ಡಿ ಅವರು ದೇಶದ ಒಟ್ಟು 29 ರಾಜ್ಯಗಳ ಸಿಎಂಗಳಲ್ಲಿಯೇ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದಾರೆ. 510 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅವರು ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದಾರೆ. 

Andhra pradesh cm jagan mohan reddy richest cm of the nation telanga cm has highest criminal cases akb
Author
First Published Apr 13, 2023, 10:56 AM IST

ವಿಶಾಖಪಟ್ಟಣ:  ಆಂಧ್ರ ಪ್ರದೇಶ ಸಿಎಂ ಜಗನ್‌ಮೋಹನ್ ರೆಡ್ಡಿ ಅವರು ದೇಶದ ಒಟ್ಟು 29 ರಾಜ್ಯಗಳ ಸಿಎಂಗಳಲ್ಲಿಯೇ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದಾರೆ. 510 ಕೋಟಿ ಮೌಲ್ಯದ ಆಸ್ತಿಯೊಂದಿಗೆ ಅವರು ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದು, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮಾತ್ರ ಸಿಎಂ ಆಗಿದ್ದರೂ ಕೋಟ್ಯಾಧಿಪತಿಯಾಗದೇ ಉಳಿದ ದೇಶದ ಏಕೈಕ ಮುಖ್ಯಮಂತ್ರಿ ಎನಿಸಿದ್ದಾರೆ. ಎಡಿಆರ್ ಸರ್ವೇ ಈ ಮಾಹಿತಿ ನೀಡಿದೆ. ಪಶ್ಚಿಮ ಬಂಗಾಳದ ಸಿಎಂ ಕೇವಲ  15 ಲಕ್ಷ ರೂ. ಮೊತ್ತದ ಆಸ್ತಿಯನ್ನು ಹೊಂದಿರುವ ಮೂಲಕ ದೇಶದ ಬಡ ಸಿಎಂ ಆಗಿದ್ದಾರೆ. 

ಹಾಗೆಯೇ ತೆಲಂಗಾಣ ಸಿಎಂ ಕೆ.ಸಿ. ಚಂದ್ರಶೇಖರ್‌ ರಾವ್ (KCR) ಅವರು,  ಅತೀ ಹೆಚ್ಚು ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವ ಹಾಗೂ ಅತೀ ಹೆಚ್ಚು ಸಾಲವನ್ನು ಹೊಂದಿರುವ ಸಿಎಂ ಆಗಿದ್ದಾರೆ. ಕೇರಳ ಸಿಎಂ ಪಿಣರಾಯಿ ವಿಜಯನ್ 1.2 ಕೋಟಿ ಹಾಗೂ ಹರ್ಯಾಣ ಸಿಎಂ (Haryana cm) ಮನೋಹರ್ ಲಾಲ್‌ ಕಟ್ಟರ್‌ (M L Khattar) 1.3 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.  28 ರಾಜ್ಯಗಳ ಹಾಗೂ 2 ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಅಫಿಡವಿಟ್‌ ಅನ್ನು ವಿಶ್ಲೇಷಿಸಿ ಈ ಸಮೀಕ್ಷೆ ನಡೆಸಲಾಗಿದ್ದು,  29 ಸಿಎಂಗಳ  ಸರಾಸರಿ ಆಸ್ತಿ 34 ಕೋಟಿ ರೂನಷ್ಟಿದೆ. 13 ಸಿಎಂಗಳು ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ.  

ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!

ಒಟ್ಟು 30 ಮುಖ್ಯಮಂತ್ರಿಗಳ ಪೈಕಿ 29 ಮಂದಿ ಅಂದರೆ ಶೇಕಡಾ 97 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.  ಜಗನ್ ನಂತರದ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಸಿಎಂ ಪೇಮಾ ಖಂಡು ಅವರಿದ್ದು,  ಅವರು 163 ಕೋಟಿ ಮೊತ್ತದ ಆಸ್ತಿ ಹೊಂದಿದ್ದಾರೆ. ಹಾಗೆಯೇ ಒಡಿಶಾ ಸಿಎಂ ನವೀನ್ ಪಟ್ನಾಯಕ್ 63 ಕೋಟಿ ಮೊತ್ತದ ಆಸ್ತಿಯನ್ನು ಹೊಂದಿದ್ದಾರೆ. ಹಾಗೆಯೇ ತೆಲಂಗಾಣ ಸಿಎಂ ಕೆಸಿಆರ್ ಆಸ್ತಿ 23 ಕೋಟಿಯಾಗಿದೆ. ಒಡಿಶಾ ಸಿಎಂ ಪಟ್ನಾಯಕ್ ಅವರ 63.9 ಕೋಟಿ ಮೌಲ್ಯದ ಆಸ್ತಿಯಲ್ಲಿ 63.6 ಕೋಟಿಯಷ್ಟು ಆಸ್ತಿ ಸ್ಥಿರಾಸ್ಥಿಯಾಗಿದೆ. 

ಕಳೆದ ವರ್ಷ ಆಂಧ್ರ (Andhra Pradesh) ಸಿಎಂ ಜಗನ್ ಸಲ್ಲಿಸಿದ್ದ ಆಸ್ತಿ ಅಫಿಡವಿಟ್‌ನಲ್ಲಿ ಜಗನ್ ಆಸ್ತಿ ಮೌಲ್ಯ 373 ಕೋಟಿಯಾಗಿತ್ತು.  ಹೀಗಾಗಿ 2022ರಲ್ಲೂ ಅವರೇ ದೇಶದ ಅತ್ಯಂತ ಶ್ರೀಮಂತ ಸಿಎಂ ಎನಿಸಿದ್ದರು. ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ ಒಂದೇ ವರ್ಷಕ್ಕೆ ಅವರ ಆಸ್ತಿ 137 ಕೋಟಿ ರೂಪಾಯಿ ಹೆಚ್ಚಾಗಿದೆ. ಹಾಗೆಯೇ ತೆಲಂಗಾಣ ಸಿಎಂ ಕೆಸಿಆರ್ ಅವರ ಆಸ್ತಿ ಮೌಲ್ಯ 13.7 ಕೋಟಿ ಇತ್ತು. ಆದರೆ ಬಿಹಾರ ಸಿಎಂ ನಿತೀಶ್‌ ಕುಮಾರ್ (Nithish Kumar) ಅವರ ಆಸ್ತಿ ಮೌಲ್ಯ ಕೇವಲ 56 ಲಕ್ಷ ರೂಪಾಯಿಯಾಗಿದ್ದು, ಇವರು ಕೂಡ ದೇಶದ ಬಡ ಸಿಎಂ ಎನಿಸಿದ್ದಾರೆ. ಹಾಗೆಯೇ ನಮ್ಮ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಅವರ ಆಸ್ತಿ 8.9 ಕೋಟಿ ರೂಪಾಯಿಯಾಗಿದೆ. 

ಅಂದು ಮರದ ನೆರಳಲ್ಲಿಓದಿ ಶಿಕ್ಷಣ ಪಡೆದ ಹುಡುಗ ಇಂದು 50 ಸಾವಿರ ಕೋಟಿ ರೂ.ಒಡೆಯ!

Follow Us:
Download App:
  • android
  • ios