Asianet Suvarna News Asianet Suvarna News

ENBA Awards 2023 ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ 9 ಎನ್ಬಾ ಪ್ರಶಸ್ತಿ ಗರಿ!

ಪ್ರತಿಷ್ಠಿತ ENBA ಪ್ರಶಸ್ತಿಯಲ್ಲಿ ಈ ಬಾರಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಸಿಂಹಪಾಲು. ಬರೋಬ್ಬರಿ 9 ಪ್ರಶಸ್ತಿಗಳನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಪಡೆದುಕೊಂಡಿದೆ. ನೇರ ದಿಟ್ಟ ನಿರಂತರ ಪತ್ರಿಕೋದ್ಯಮದ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಏಷ್ಯಾನೆಟ್ ಸುವರ್ಣನ್ಯೂಸ್ ಮುಡಿಗೇರಿಸಿಕೊಂಡು ಪ್ರಶಸ್ತಿಗಳ ವಿವರ ಇಲ್ಲಿದೆ.
 

ENBA Awards 2023 Asianet Suvarna news bags prestigious 9 National awards ckm
Author
First Published Aug 27, 2023, 10:44 PM IST

ನವದೆಹಲಿ(ಆ.27) ಕನ್ನಡಿಗರ ವಿಶ್ವಾಸಾರ್ಹ ಸುದ್ದಿ ಮಾಧ್ಯಮ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರಶಸ್ತಿ ಅರಸಿಕೊಂಡು ಬಂದಿದೆ. ನಿರ್ಭೀತ ಪತ್ರಿಕೋದ್ಯಮ, ಜನಪರ ಕಾರ್ಯಕ್ರಮಗಳನ್ನ ಸರಣಿ, ಸಾಮಾಜಿಕ ಕಳಕಳಿ, ತನಿಖಾ ವರದಿ ಸೇರಿದಂತೆ ಸಂಪೂರ್ಣ ಸುದ್ದಿ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವಿಶಿಷ್ಠ ಛಾಪು ಮೂಡಿಸಿರುವ ಏಷ್ಯಾನೆಟ್ ಸುವರ್ಣನ್ಯೂಸ್  ENBA ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 2 ಬಂಗಾರ, 5 ಬೆಳ್ಳಿ ಹಾಗೂ 2 ಕಂಚಿನ ಪ್ರಶಸ್ತಿಯನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ಮುಡಿಗೇರಿಸಿದೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರಶಸ್ತಿ ವಿತರಿಸಲಾಯಿತು. 

ಮಾಧ್ಯಮ ಕ್ಷೇತ್ರದಲ್ಲಿ ಜನರ ಪ್ರೀತಿ ವಿಶ್ವಾಸ ಹಾಗೂ ಸಾಧನೆ ಶಿಖರವೇರಿರುವ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಈ ಬಾರಿ ಪ್ರಶಸ್ತಿಗಳ ಸುರಿಮಳೆಯಾಗಿದೆ. ಪ್ರತಿ ವರ್ಷ ಏಷ್ಯಾನೆಟ್ ಸುವರ್ಣನ್ಯೂಸ್ ENBA(exchange4media News Broadcasting Awards) ಪ್ರಶಸ್ತಿಗೆ ಪಾತ್ರವಾಗುವ ಮೂಲಕ ಜವಾಬ್ದಾರಿಯನ್ನೂ ಹೆಚ್ಚಿಸಿಕೊಂಡಿದೆ.  ಮುರುಘಾ ಶ್ರೀ ಅತ್ಯಾಚಾರ ಪ್ರಕರಣ ವರದಿ ಬೆಸ್ಟ್ ಕರೆಂಟ್ ಅಫೈರ್ಸ್ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ಅತ್ಯುತ್ತಮ ನಿರೂಪಕ, ನ್ಯೂಸ್ ಹವರ್, ಬಿಗ್ 3, ಸಿನಿಮಾ ಹಂಗಾಮ, ಪ್ರೈಮ್ ನ್ಯೂಸ್ ಸೇರಿದಂತ 9 ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಏಷ್ಯಾನೆಟ್ ಸುವರ್ಣನ್ಯೂಸ್ ಸಂಪಾದಕ ಅಜಿತ್ ಹನಮಕ್ಕನವರ್ ಪ್ರಶಸ್ತಿ ಸ್ವೀಕರಿಸಿದರು.  

ಏಷ್ಯಾನೆಟ್ ಸುವರ್ಣನ್ಯೂಸ್‌ನ ನ್ಯೂಸ್ ಹವರ್‌ಗೆ ENBA ಅತ್ಯುತ್ತಮ ಪ್ರೈಮ್ ಟೈಮ್ ಶೋ ಪ್ರಶಸ್ತಿ!...

9 ವಿಭಾಗದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್ ENBA ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.1. BEST EARLY PRIME SHOW - ಸಿನಿಮಾ ಹಂಗಾಮಾ - ಸಂಜೆ 6.30
2. BEST LATE PRIME  TIME SHOW - ಪ್ರೈಮ್ ನ್ಯೂಸ್ - ರಾತ್ರಿ 10 ಗಂಟೆ
3. BEST BREAK FAST SHOW - ಬಿಗ್ 3  - ಬೆಳಗ್ಗೆ 9 ಗಂಟೆ
4. BEST IN DEPTH SERIES - ಕವರ್ ಸ್ಟೋರಿ - ಶನಿವಾರ ರಾತ್ರಿ 9.30ಕ್ಕೆ
5. BEST NEWS COVERAGE - ಯಾದಗಿರಿಗೆ ನೀರಿಗಗಿ 2,054 ಕೋಟಿ ಹಣ ಬಿಡುಗಡೆ
6. BEST ANCHOR - ಅಜಿತ್ ಹನಮಕ್ಕನವರ್
7. BEST CURRENT AFFAIRS - LEFT RIGHT AND CENTRE ಮುರುಘಾ ಶ್ರೀ ಅತ್ಯಾಚಾರ ಪ್ರಕರಣ - ಸಂಜೆ 7 ಗಂಟೆಗೆ
8. BEST PRIME SHOW - ನ್ಯೂಸ್ ಅವರ್ - ರಾತ್ರಿ 8.30ಕ್ಕೆ
9. BEST CAMPAIN FOR SOCIAL CAUSE - ಸೇವ್ ವೈಲ್ಡ್ ಲೈಫ್

ENBA ಪ್ರಶಸ್ತಿ ಪಡೆದ ಕಾರ್ಯಕ್ರಮಗ ಪೈಕಿ ಸಿನಿಮಾ ಹಂಗಾಮಾ, ತಾರೆಯರ ರಂಗೀನ್ ಲೋಕದ  ತಾಜಾ ಸುದ್ದಿಗಳನ್ನು ಮಾಹಿತಿ ಮನರಂಜನೆಯ ಜೊತೆಗೆ ಬಿತ್ತರಿಸುವ ಕಾರ್ಯಕ್ರಮವಾಗಿದೆ. ಪ್ರತಿನಿತ್ಯ ಸಂಜೆ 6.30ರಿಂದ 7 ಗಂಟೆಗೆಯವರೆಗೆ ಪ್ರಸಾರವಾಗುವ  ಕಾರ್ಯಕ್ರಮ ಸಿನಿಮಾ ಹಂಗಾಮ  ಸು. 13 ವರ್ಷಗಳಿಂದ ಪ್ರಸಾರವಾಗುತ್ತಿರುವ ಸಿನಿಮಾ ಸೆಲೆಬ್ರೆಟಿಗಳು ಸಹ ತಪ್ಪದೇ ವೀಕ್ಷಿಸೋ ಜನಪ್ರಿಯ ಸಿನಿಮಾ ಕಾರ್ಯಕ್ರಮ. 

ಪ್ರೈಮ್ ನ್ಯೂಸ್ ಅತೀ ಮಹತ್ವದ ಸುದ್ದಿಗಳ ಗುಚ್ಛ. ಇಡೀ ದಿನ ರಾಜ್ಯ, ದೇಶ, ವಿದೇಶದಲ್ಲಿ ನಡೆದ ಮಹತ್ವದ ಡೆವಲಪ್ಮೆಂಟ್ಗಳನ್ನು ಒಂದೆಡೆ ಕಟ್ಟಿಕೊಡುವ ನ್ಯೂಸ್ ಸುದ್ದಿಕಾರ್ಯಕ್ರಮವಾಗಿದೆ. ಬೆಳಗ್ಗೆ 9 ಗಂಟೆ, ಬಿಗ್3 ಕಾರ್ಯಕ್ರಮ ಪ್ರಸಾರ ಆಗುತ್ತೆ. ಇದೊಂದು ಸಾಮಾಜಿಕ ಕಳಕಳಿಯಳ್ಳ ಪ್ರೋಗ್ರಾಂ. ಜಿಲ್ಲಾಮಟ್ಟ, ತಾಲೂಕು, ಹಳ್ಳಿಗಳ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಒದ ಗಿಸುವುದು ಆಗಿದೆ. ಕುಡಿಯೋ ನೀರಿನ ಸಮಸ್ಯೆ, ಶಾಲಾ ಕಟ್ಟಡಗಳ ದುರಸ್ಥಿ, ಅರ್ಧಂಬರ್ಧ ಆಗಿರೋ ಸರ್ಕಾರಿ ಕ ಟ್ಟಡ, ಅನಾರೋಗ್ಯದಲ್ಲಿ ಇದ್ದವರಿಗೆ ಜನರಿಂದ ಸಹಾಯ, ಡಾಕ್ಟರ್, ಇಂಜಿನಿಯರ್, ಆಗೋಕೆ ಹಣಕ್ಕಾಗಿ ಪರ ದಾಡೋ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ಪ್ರಸಾರ ಮಾಡಿ ದಾನಿಗಳಿಂದ ನೆರವು ಕೊಡಿಸೋದು ಸೇರಿದಂತೆ ಹಲವು ಜನಪರ ಕಾರ್ಯಕ್ರಮಗಳ ಸರಣಿ ಇದಾಗಿದೆ.

ENBA Awards 2023 ಪ್ರೈಮ್ ನ್ಯೂಸ್ ವಿಭಾಗದಲ್ಲಿ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ENBA ಪ್ರಶಸ್ತಿ!

ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ನಂದಿಹಳ್ಳಿ ಜೆ. ಗ್ರಾಮದ ಕುಡಿಯೋ ನೀರಿನ ಬಗ್ಗೆ ವರದಿ ಪ್ರಸಾರ ಮಾಡಲಾಗಿತ್ತು. ರಾಜ್ಯ ಸರ್ಕಾರ ಈ ವರದಿಗೆ ಸ್ಪಂದಿಸಿ ಬರೋಬ್ಬರಿ 2,054 ಕೋಟಿ ಮಂಜೂರು ಮಾಡಿದೆ. ಈ ವರದಿಗೆ ಇದೀಗ ಪ್ರಶಸ್ತಿ ಹಿರಿಮೆ ಸೇರಿಕೊಂಡಿದೆ.

ಕಳದ ವರ್ಷ ಏಷ್ಯಾನೆಟ್ ಸುವರ್ಣನ್ಯೂಸ್ ನಾಲ್ಕು ENBA ಪ್ರಶಸ್ತಿ ಗೆದ್ದುಕೊಂಡಿತ್ತು. ಜಯಪ್ರಕಾಶ್ ಶೆಟ್ಟಿ (Anchor Jaya Prakash shetty)- ಅತ್ಯುತ್ತಮ ನಿರೂಪಕ (ಚಿನ್ನ), ಬೆಸ್ಟ್​ ಕರೆಂಟ್ ಅಫೇರ್ಸ್​​ ವಿಭಾಗದಲ್ಲೂ ಚಿನ್ನದ ಗರಿ, ಬೆಸ್ಟ್ ನ್ಯೂಸ್ ಕವರೇಜ್​ ವಿಭಾಗದಲ್ಲೂ ಗೋಲ್ಡ್​​ ಅವಾರ್ಡ್ ಹಾಗೂ 
ಸುವರ್ಣ ನ್ಯೂಸ್​ ‘ಕವರ್ ಸ್ಟೋರಿ’ಗೆ ಬೆಳ್ಳಿಯ ಗರಿ ಸಂದಿತ್ತು.
 

Follow Us:
Download App:
  • android
  • ios