Asianet Suvarna News Asianet Suvarna News

ಜಿಮ್‌ನಲ್ಲಿ ವರ್ಕೌಟ್ ಮಾಡ್ತಿದ್ದಾಗಲೇ ಕುಸಿದು ಬಿದ್ದು ಯುವಕ ಸಾವು: ವೀಡಿಯೋ ವೈರಲ್

ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ. 

A thirty two year old man died after collapsing while working out in the gym at Varanasi akb
Author
First Published May 3, 2024, 11:59 AM IST

ವಾರಾಣಾಸಿ: ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ವಾರಾಣಾಸಿಯಲ್ಲಿ ನಡೆದಿದೆ. ಯುವಕನ ಕೊನೆಯ ಕ್ಷಣಗಳು ಜಿಮ್‌ನಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾದಲ್ಲಿ  ಸೆರೆ ಆಗಿದ್ದು, ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಕಾಣಿಸುವಂತೆ ನೆಲಕ್ಕೆ ಕುಸಿಯುವ ಮೊದಲು ಯುವಕ ಸುಸ್ತಾದಂತೆ ಕಾಣುತ್ತಿದ್ದು, ತನ್ನ ಎರಡು ಕೈಗಳನ್ನು ತಲೆಗೆ ಒತ್ತಿ ಹಿಡಿದುಕೊಂಡಿದ್ದಾನೆ. ಇದಾಗಿ ಕ್ಷಣಗಳಲ್ಲಿ ಆತ ಕೆಳಗೆ ಕುಸಿದು ಬಿದ್ದಿದ್ದಾನೆ. ಆತನ ಪಕ್ಕದಲ್ಲಿಯೇ ಕೆಲವರು ಓಡಾಡುತ್ತಿರುವುದು ಮತ್ತೆ ಕೆಲವರು ವರ್ಕೌಟ್ ಮಾಡ್ತಿರುವುದು ವೀಡಿಯೋದಲ್ಲಿ ಸೆರೆ ಆಗಿದೆ.  ಆದರೆ ಆತ ಬೀಳುತ್ತಿದ್ದಂತೆ ಜಿಮ್‌ನಲ್ಲಿದ್ದ ಇತರರು ಕೂಡ ಆತನ ಬಳಿ ಬಂದು ಸೇರಿ ಆತನಿಗೆ ಉಪಚಾರ ಮಾಡುತ್ತಾರೆ. ಕುಡಿಯಲು ನೀರು ಕೊಡುತ್ತಾರೆ. ಅಲ್ಲದೇ ಮತ್ತೆ ಕೆಲವರು ಆತನ ತಲೆಗೆ ಹಾಗೂ ಬೆನ್ನಿಗೆ ಮಸಾಜ್ ಮಾಡಿದ ಬಳಿಕ ಕೂಡಲೇ ಆತನನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.  ಆದರೆ ಆಸ್ಪತ್ರೆಗೆ ಬರುವಷ್ಟರಲ್ಲೇ ಆತ ಪ್ರಾಣ ಬಿಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ.

Puneeth Rajkumar : ಅಪ್ಪು ನಿಧನಕ್ಕೆ ಕೋವಿಡ್ ಲಸಿಕೆ ಕಾರಣವಾಯ್ತಾ? ಫೋಟೋ ಶೇರ್‌ ಮಾಡಿ ಫ್ಯಾನ್ಸ್ ಮತ್ತೆ ಆಕ್ರೋಶ!

ಮೃತ ಯುವಕನ್ನು ದೀಪಕ್ ಗುಪ್ತಾ ಎಂದು ಗುರುತಿಸಲಾಗಿದೆ. 32 ವರ್ಷದ ದೀಪಕ್, ಫಿಟ್‌ನೆಸ್ ಉತ್ಸಾಹಿಯಾಗಿದ್ದು, ಕಳೆದೊಂದು ದಶಕದಿಂದ ದಿನವೂ ಜಿಮ್‌ಗೆ ಬರುತ್ತಿದ್ದ. ಇದರ ಜೊತೆಗೆ ಹಲವು ದೇಹಧಾರ್ಡ್ಯ ಸ್ಪರ್ಧೆಯಲ್ಲಿಯೂ ಆತ ಭಾಗವಹಿಸಿದ್ದಲ್ಲದೇ ಗೆಲುವು ಸಾಧಿಸಿದ್ದ. ಆದರೆ ಈಗ ಆತನ ಹಠಾತ್ ಸಾವು ಜಿಮ್‌ಗೆ ತೆರಳುವವರಲ್ಲಿ ಆತಂಕ ಮೂಡಿಸಿದೆ.  ಆದರೆ ಈ ಸಾವಿಗೆ ಖಚಿತ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಹೀಗೆ ಜಿಮ್‌ನಲ್ಲಿ ಕುಸಿದು ಪ್ರಾಣ ಬಿಟ್ಟ ಪ್ರಕರಣ ಇದೇನು ಮೊದಲಲ್ಲ,  ಕೋವಿಡ್ ನಂತರ ಇಂತಹ ಹಲವು ಪ್ರಕರಣಗಳು ನಡೆದು ಹೋಗಿವೆ. ಈ ಮಧ್ಯೆ ಕೋವಿಶೀಲ್ಡ್ ಲಸಿಕೆಯಲ್ಲಿ ಹಾನಿಕಾರಕ ಅಂಶಗಳಿವೆ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಕೋವಿಶೀಲ್ಡ್ ಪಡೆದ ಅನೇಕರಲ್ಲಿ ಆತಂಕ ಹೆಚ್ಚಾಗಿದೆ. 

ಕೋವಿಶೀಲ್ಡ್‌ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ಡಾ.ರಮಣ್‌ ಗಂಗಾಖೇಡ್ಲರ್‌

Latest Videos
Follow Us:
Download App:
  • android
  • ios