ಕೋವಿಶೀಲ್ಡ್ ಪಡೆದ ಬಳಿಕ ಮಕ್ಕಳ ಸಾವು: ಬ್ರಿಟನ್ ಫಾರ್ಮಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಪೋಷಕರು
ತನ್ನ ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ಇದೆ ಎಂದು ಬ್ರಿಟನ್ ಫಾರ್ಮಾ ಸಂಸ್ಥೆ ಆಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡ ಬೆನ್ನಲ್ಲಿಯೇ ಈಗ ದಂಪತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿದ್ದು, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
ನವದೆಹಲಿ: ತನ್ನ ಕೋವಿಶೀಲ್ಡ್ ಲಸಿಕೆಯಿಂದ ಸೈಡ್ ಎಫೆಕ್ಟ್ ಇದೆ ಎಂದು ಬ್ರಿಟನ್ ಫಾರ್ಮಾ ಸಂಸ್ಥೆ ಆಸ್ಟ್ರಾಜೆನಿಕಾ ಕಂಪನಿ ಒಪ್ಪಿಕೊಂಡ ಬೆನ್ನಲ್ಲಿಯೇ ಈಗ ದಂಪತಿಯೊಬ್ಬರು ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ತಮ್ಮ ಪುತ್ರಿ ಸಾವಿಗೀಡಾಗಿದ್ದಾಳೆ ಎಂದು ಆರೋಪಿಸಿದ್ದು, ಆಸ್ಟ್ರಾಜೆನಿಕಾ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ.
ತನ್ನ ಸಂಸ್ಥೆಯ ಕೋವಿಶೀಲ್ಡ್ ಲಸಿಕೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಪ್ಲೇಟ್‌ಲೆಟ್ ಇಳಿಕೆಗೆ ಕಾರಣವಾಗುವ ಅಪರೂಪದ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಹುದು ಎಂದು ಅಸ್ಟ್ರಾಜೆನಿಕಾ ಫಾರ್ಮಾ ಸಂಸ್ಥೆಯೂ ಯುಕೆಯ ನ್ಯಾಯಾಲಯದ ದಾಖಲೆಗಳಲ್ಲಿ ಒಪ್ಪಿಕೊಂಡ ನಂತರ ದಂಪತಿಗೆ ತಮ್ಮ ಮಕ್ಕಳ ಹಠಾತ್ ಸಾವು ಕೂಡ ಇದೇ ಕಾರಣದಿಂದ ಸಂಭವಿಸಿರಬಹುದು ಎಂಬ ಅನುಮಾನ ಮೂಡಿದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದ್ದಾರೆ.
ಬ್ರಿಟನ್‌ನ ಅತ್ಯಂತ ದೊಡ್ಡ ಫಾರ್ಮಾ ಕಂಪನಿ ಎನಿಸಿರುವ ಅಸ್ಟ್ರಾಜೆನೆಕಾ ಕೋವಿಡ್ ಸಂದರ್ಭದಲ್ಲಿ ಕೋವೀಶೀಲ್ಡ್ ಚುಚ್ಚುಮದ್ದನ್ನು ತಯಾರಿಸಿ ವಿಶ್ವಕ್ಕೆ ಹಂಚಿತ್ತು. ಭಾರತದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII)ದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್ ಹೆಸರಿನಲ್ಲಿ ತಯಾರಿಸಲಾಗಿತ್ತು. ಆದರೆ ಈ ಬಗ್ಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಇನ್ನಷ್ಟೇ ಪ್ರತಿಕ್ರಿಯಿಸಬೇಕಿದೆ.
ಕೋವಿಶೀಲ್ಡ್ ಆತಂಕದ ನಡುವೆ ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ದಾಖಲಿಸ್ತು Excellent safety record!
ವೇಣುಗೋಪಾಲನ್ ಎಂಬುವವರು ಈ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಲು ಮುಂದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ದಾಖಲೆಗಳ ಜೊತೆ ತಮ್ಮ 20 ವರ್ಷದ ಮಗಳನ್ನು ಕೋವೀಶೀಲ್ಡ್ ಪಡೆದ ನಂತರ ಕಳೆದುಕೊಂಡ ನೋವನ್ನು ಅವರು ತೋಡಿಕೊಂಡಿದ್ದಾರೆ. 2021ರಲ್ಲಿ ಇವರ ಪುತ್ರಿ 20 ವರ್ಷದ ಕಾರುಣ್ಯ ಕೋವಿಶೀಲ್ಡ್ ಪಡೆದ ಬಳಿಕ ಸಾವನ್ನಪ್ಪಿದ್ದರು. ಅಸ್ಟೋಜೆನಿಕ್ ಸಂಸ್ಥೆಯೂ ಬಹಳ ತಡವಾಗಿ ಹಲವವರು ಜೀವ ಕಳೆದುಕೊಂಡ ನಂತರ ತನ್ನ ಲಸಿಕೆಯ ಲೋಪದೋಷಗಳನ್ನು ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ರಕ್ತ ಹೆಪ್ಪುಗಟ್ಟುವಿಕೆಯ ಕಾರಣ ನೀಡಿ 15 ಯುರೋಪಿಯನ್ ದೇಶಗಳು ಕೋವಿಶೀಲ್ಡ್ ಬಳಕೆಗೆ ನಿಷೇಧ ಹೇರಿದ ಬಳಿಕವಾದರೂ ಸೆರಂ ಇನ್ಸ್‌ಟಿಟ್ಯೂಟ್ ಈ ಲಸಿಕೆಯ ಪೂರೈಲೆಯನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇದರಿಂದ ತೊಂದರೆಗೊಳಗಾಗಿ ತಮ್ಮವರನ್ನು ಕಳೆದುಕೊಂಡ ಅನೇಕ ಪೋಷಕರು ನ್ಯಾಯಾಲಯಗಳಲ್ಲಿ ಹೋರಾಟ ಮಾಡಿದ್ದರು ಅವರಿಗೆ ನ್ಯಾಯ ಸಿಕ್ಕಿಲ್ಲ ಎಂದು ವೇಣುಗೋಪಾಲನ್ ಹೇಳಿದ್ದಾರೆ.
ನ್ಯಾಯಕ್ಕಾಗಿ ಮತ್ತು ಸಾರ್ವಜನಿಕ ಆರೋಗ್ಯದ ಹೆಸರಿನಲ್ಲಿ ನಡೆಸಲಾದ ಈ ದುಷ್ಕೃತ್ಯ ಮರುಕಳಿಸುವುದನ್ನು ತಡೆಯಲು ಸಾಕಷ್ಟು ಪರಿಹಾರಗಳನ್ನು ಪಡೆಯದಿದ್ದರೆ, ನಮ್ಮ ಮಕ್ಕಳ ಸಾವಿಗೆ ಕಾರಣವಾದ ಯಾರೇ ಆದರೂ ಎಲ್ಲ ಅಪರಾಧಿಗಳ ವಿರುದ್ಧ ನಾವು ಹೊಸ ಪ್ರಕರಣಗಳನ್ನು ದಾಖಲಿಸುತ್ತೇವೆ. ಈಗಾಗಲೇ ಈ ಲಸಿಕೆಯಿಂದ ಜೀವ ಕಳೆದುಕೊಂಡ ಸಂತ್ರಸ್ತರ 8 ಕುಟುಂಬಗಳು ನಮ್ಮ ಸಂಪರ್ಕದಲ್ಲಿದ್ದಾರೆ. ನಾವೆಲ್ಲರೂ ಒಂದೇ ಅದ ಭಾವನೆಯನ್ನು ಹೊಂದಿದ್ದೇವೆ ಎಂದು ವೇಣುಗೋಪಾಲನ್ ಬರೆದುಕೊಂಡಿದ್ದಾರೆ.
ಕೋವಿಶೀಲ್ಡ್ ಪಡೆದ 10 ಲಕ್ಷ ಜನರಲ್ಲಿ 8 ಮಂದಿಗೆ ಮಾತ್ರ ಅಡ್ಡಪರಿಣಾಮ ಸಂಭವ: ಡಾ.ರಮಣ್ ಗಂಗಾಖೇಡ್ಲರ್
ಸೆರಮ್ ಇಸ್ಟಿಟ್ಯೂಟ್‌ನ ಅದರ್ ಪೂನಾವಾಲಾ ಅವರು ತಾವು ಮಾಡಿದ ಪಾಪಗಳಿಗೆ ಉತ್ತರ ನೀಡಬೇಕು. ಅವರ ತಪ್ಪಿನಿಂದ ಬಲಿಯಾದ ಜೀವಗಳಿಗೆ ಉತ್ತರ ನೀಡಬೇಕು ಎಂದು ಗೋವಿಂದನ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ಜೊತೆಗೆ ಈ ಲಸಿಕೆಗೆ ಅನುಮೋದನೆ ನೀಡಿದ ಸರ್ಕಾರಿ ಅಧಿಕಾರಿಗಳ ಬಗ್ಗೆಯೂ ಅವರು ಆಕ್ರೋಶ ಹೊರಹಾಕಿದ್ದಾರೆ.
ಹಾಗೆಯೇ 2021ರಲ್ಲಿ ರಚನಾ ಗಂಗು ಎಂಬುವವರು ಕೂಡ ತಮ್ಮ 18 ವರ್ಷದ ಮಗಳನ್ನು ಕಳೆದುಕೊಂಡಿದ್ದು, ಗೋವಿಂದನ್ ಅವರು ಈ ಹಿಂದೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ ಈ ಬಗ್ಗೆ ತನಿಖೆ ಮಾಡಲು ಮೆಡಿಕಲ್ ಬೋರ್ಡ್ ರಚಿಸುವಂತೆ ಕೇಳಿದ್ದರು. ಅಲ್ಲದೇ ವ್ಯಾಕ್ಸಿನ್‌ನ ಪರಿಣಾಮವನ್ನು ಪತ್ತೆ ಮಾಡಲು ಆದಷ್ಟು ಬೇಗ ಪ್ರೋಟ್ರೋಕಾಲ್ ಸ್ಥಾಪಿಸಿ ಎಂದು ಮನವಿ ಮಾಡಿದ್ದರು. ಅಸ್ಟ್ರಾಜೆನಿಕಾ ಸಂಸ್ಥೆ ಈಗಾಗಲೇ ಯುಕೆಯಲ್ಲಿ ಕಾನೂನು ಸಮರ ಎದುರಿಸುತ್ತಿದೆ. ವ್ಯಾಕ್ಸಿನ್ ಬಳಿಕ 51ಕ್ಕೂ ಹೆಚ್ಚು ಜನ ಜೀವ ಕಳೆದುಕೊಂಡಿದ್ದಾರೆ ಇವರ ವ್ಯಾಕ್ಸಿನ್ ಹಲವು ಪ್ರಕರಣಗಳಲ್ಲಿ ಅನೇಕರ ಸಾವಿಗೆ ಹಾಗೂ ಆರೋಗ್ಯ ಸಮಸ್ಯೆಗೆ ಕಾರಣವಾಗಿದೆ ಎಂದು ದೂರು ದಾಖಲಾಗಿದೆ.