ಚಲಿಸುವ ರೈಲಿನಲ್ಲಿ ಪತ್ನಿಗೆ ತ್ರಿವಳಿ ತಲಾಖ್ ಕೊಟ್ಟು, ಥಳಿಸಿ ಪರಾರಿಯಾದ ವ್ಯಕ್ತಿ!
ಚಲಿಸುವ ರೈಲಿನಲ್ಲಿ ವ್ಯಕ್ತಿ, ಪತ್ನಿಗೆ ತ್ರಿವಳಿ ತಲಾಖ್ ನೀಡಿ ಆಕೆಯನ್ನು ಥಳಿಸಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 28 ವರ್ಷದ ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ ಜೊತೆಗೆ ಪ್ರಯಾಣಿಸುತ್ತಿದ್ದಾಗ ಝಾನ್ಸಿ ಜಂಕ್ಷನ್‌ಗೆ ಸ್ವಲ್ಪ ಮೊದಲು ಆಕೆಗೆ ಥಳಿಸಿ ತಲಾಖ್ ನೀಡಿ ರೈಲಿನಿಂದ ಇಳಿದಿದ್ದಾನೆ.
ಚಲಿಸುವ ರೈಲಿನಲ್ಲಿ ವ್ಯಕ್ತಿ, ಪತ್ನಿಗೆ ತ್ರಿವಳಿ ತಲಾಖ್ ನೀಡಿ ಆಕೆಯನ್ನು ಥಳಿಸಿ ಪರಾರಿಯಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. 28 ವರ್ಷದ ಮೊಹಮ್ಮದ್ ಅರ್ಷದ್ ತನ್ನ ಪತ್ನಿ ಅಫ್ಸಾನಾ (26) ಅವರೊಂದಿಗೆ ಪ್ರಯಾಣಿಸುತ್ತಿದ್ದಾಗ ಝಾನ್ಸಿ ಜಂಕ್ಷನ್‌ಗೆ ಸ್ವಲ್ಪ ಮೊದಲು ತಲಾಖ್ ನೀಡಿ ರೈಲಿನಿಂದ ಇಳಿದಿದ್ದಾನೆ. ಮಾತ್ರವಲ್ಲ ಪರಾರಿಯಾಗುವ ಮುನ್ನ ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ. ಏಪ್ರಿಲ್ 29ರಂದು ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ತಕ್ಷಣ ಅಫ್ಸಾನಾ ಸರ್ಕಾರಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದರು. ಕೊನೆಗೂ ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಲಾಗಿದೆ.
ಭೋಪಾಲ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ಕಂಪ್ಯೂಟರ್ ಎಂಜಿನಿಯರ್ ಅರ್ಷದ್, ಈ ವರ್ಷ ಜನವರಿ 12 ರಂದು ರಾಜಸ್ಥಾನದ ಕೋಟಾ ಮೂಲದ ಪದವೀಧರ ಅಫ್ಸಾನಾ ಅವರನ್ನು ವಿವಾಹವಾಗಿದ್ದರು. ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಯವಾಗಿ ಇವರಿಬ್ಬರ ಮದುವೆ ನಡೆದಿತ್ತು. ದಂಪತಿಗಳು ಕಳೆದ ವಾರ ಪುಖ್ರಾಯನ್‌ನಲ್ಲಿರುವ ಅರ್ಷದ್ ಅವರ ಪೂರ್ವಜರ ಮನೆಗೆ ಭೇಟಿ ನೀಡಿದಾಗ, ಅರ್ಷದ್ ಈಗಾಗಲೇ ಮದುವೆಯಾಗಿರುವುದನ್ನು ಅಫ್ಸಾನಾ ತಿಳಿದುಕೊಂಡಳು.
ಸಹೋದರನಿಗೆ ಕಿಡ್ನಿ ದಾನ ಮಾಡಿದ ಪತ್ನಿ: ವಿದೇಶದಿಂದ್ಲೇ ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ನೀಡಿದ ಪತಿ!
ಈ ಬಗ್ಗೆ ಆತನನ್ನು ಕೇಳಿದಾಗ ಆತ ಮತ್ತು ಆತನ ತಾಯಿ ವರದಕ್ಷಿಣೆಗಾಗಿ ಕಿರುಕುಳ ನೀಡಲು ಪ್ರಾರಂಭಿಸಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಇತ್ತೀಚಿಗೆ ರೈಲಿನಲ್ಲಿ ಜೊತೆಯಾಗಿ ಇಬ್ಬರೂ ಪ್ರಯಾಣಿಸುವವರೆಗೂ ಹೀಗೆ ಹಿಂಸೆ ಮುಂದುವರೆದಿತ್ತು. ಝಾನ್ಸಿ ಜಂಕ್ಷನ್‌ಗೆ ಸ್ವಲ್ಪ ಮೊದಲು ಅರ್ಷದ್ ಪತ್ನಿಗೆ ತಲಾಖ್ ನೀಡಿ ರೈಲಿನಿಂದ ಇಳಿದಿದ್ದಾನೆ. ಮಾತ್ರವಲ್ಲ ಪರಾರಿಯಾಗುವ ಮುನ್ನ ಪತ್ನಿಗೆ ಚೆನ್ನಾಗಿ ಥಳಿಸಿದ್ದಾನೆ.
ಮಹಿಳೆಯ ದೂರಿನ ಆಧಾರದ ಮೇಲೆ ಆಕೆಯ ಪತಿ ಅರ್ಷದ್, ಅವರ ತಾಯಿಯ ಚಿಕ್ಕಪ್ಪ ಅಖೀಲ್, ತಂದೆ ನಫೀಸುಲ್ ಹಸನ್ ಮತ್ತು ತಾಯಿ ಪರ್ವೀನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸರ್ಕಲ್ ಆಫೀಸರ್ (ಸಿಒ) ಪ್ರಿಯಾ ಸಿಂಗ್ ತಿಳಿಸಿದ್ದಾರೆ. 'ವಿಷಯವನ್ನು ತನಿಖೆ ಮಾಡಲಾಗುವುದು ಮತ್ತು ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಮಾಹಿತಿ ನೀಡಿದ್ದಾರೆ.
ಬ್ಯೂಟಿ ಪಾರ್ಲರ್‌ನಲ್ಲಿ ಐಬ್ರೋ ಮಾಡಿಸಿಕೊಂಡಿದ್ದಕ್ಕೆ ತ್ರಿವಳಿ ತಲಾಕ್ ನೀಡಿದ ಪತಿ!
ಪತ್ನಿ ಅನುಮತಿ ಕೇಳದೆ ಐಬ್ರೋ ಮಾಡಿಸಿಕೊಂಡಿದ್ದಾಳೆ ಎಂದು ಕೋಪಗೊಂಡ ಪತಿ ಆಕೆಗೆ ವಿಡಿಯೋ ಕಾಲ್‌ನಲ್ಲೇ ತಲಾಖ್ ನೀಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿತ್ತು. ಐಬ್ರೋ ಮಾಡಿಸಿದ ಕಾರಣಕ್ಕೆ ಆಕೆಗೆ ಮೂರು ಬಾರಿ ನಿಷೇಧಿತ ತಲಾಖ್ ಹೇಳಿದ ಪತಿ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಪ್ರಯಾಗ್‌ರಾಜ್ ನಿವಾಸಿಯಾಗಿರುವ ಮಹಮ್ಮದ್ ಸಲೀಂ ಸದ್ಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಆತನ ಪತ್ನಿ ಗುಲ್ಸಾಬಾ ಕಾನ್ಪುರದಲ್ಲಿ ವಾಸವಿದ್ದಾಳೆ. ಹೀಗಿರುವಾಗ ಗುಲ್ಸಾಬಾ ಜತೆ ಸಲೀಂ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ ಆಕೆ ಐಬ್ರೋ ಮಾಡಿಸಿದ್ದನ್ನು ನೋಡಿ ತಲಾಖ್ ನೀಡಿದ್ದ. ತ್ರಿವಳಿ ತಲಾಖ್‌ನಂಥ ಪಿಡುಗಿನಿಂದ ಮುಸ್ಲಿಂ ಮಹಿಳೆಯರು ತೊಂದರೆಗೆ ಒಳಗಾಗುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇವೆ.