Asianet Suvarna News Asianet Suvarna News

ಸೆ.8ರಿಂದ 10ರವವರೆಗೆ ರಾಹುಲ್‌ ಅಮೆರಿಕ ಪ್ರವಾಸ: ವಿವಿಧ ವಿವಿಗಳ ವಿದ್ಯಾರ್ಥಿಗಳ ಜತೆ ಸಂವಾದ

ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೆ.8ರಿಂದ 10ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿವಿಧ ವಿವಿಗಳಲ್ಲಿ ವಿದ್ಯಾರ್ಥಿಗಳ ಜತೆ ಅವರು ಸಂವಾದ ನಡೆಸಲಿದ್ದಾರೆ.

Congress leader Rahul Gandhi America tour from September 8 to 10 will Interaction with students of various universities akb
Author
First Published Sep 1, 2024, 11:32 AM IST | Last Updated Sep 1, 2024, 12:16 PM IST

ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಸೆ.8ರಿಂದ 10ರ ವರೆಗೆ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿವಿಧ ವಿವಿಗಳಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಲಿದ್ದಾರೆ. ಶನಿವಾರ ಈ ಬಗ್ಗೆ ಹೇಳಿಕೆ ನೀಡಿರುವ ಕಾಂಗ್ರೆಸ್‌ ಸಾಗರೋತ್ತರ ಘಟಕದ ಅಧ್ಯಕ್ಷ ಸ್ಯಾಮ್‌ ಪಿತ್ರೋಡಾ, ‘ಸೆ.8ರಂದು ಅಮೆರಿಕದ ಡಲ್ಲಾಸ್‌ಗೆ ಕಿರು ಭೇಟಿ ನೀಡಲಿರುವ ರಾಹುಲ್, ಸೆ.9 ಮತ್ತು 10ರಂದು ವಾಷಿಂಗ್ಟನ್‌ ಡಿಸಿಗೆ ತೆರಳಲಿದ್ದಾರೆ’ ಎಂದರು

‘ಡಲ್ಲಾಸ್‌ನಲ್ಲಿ ಟೆಕ್ಸಾಸ್ ವಿವಿ ವಿದ್ಯಾರ್ಥಿಗಳು, ಶೈಕ್ಷಣಿಕ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ನಂತರ ಸಮುದಾಯದ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಕೆಲ ತಂತ್ರಜ್ಞರನ್ನೂ ಭೇಟಿಯಾಗಿ, ರಾತ್ರಿ ಡಲ್ಲಾಸ್‌ನ ನಾಯಕರೊಂದಿಗೆ ಭೋಜನ ಸವಿಯಲಿದ್ದಾರೆ. ಮರುದಿನ ವಾಷಿಂಗ್ಟನ್‌ ಡಿಸಿಯಲ್ಲಿ ಚಿಂತಕರ ಚಾವಡಿ, ರಾಷ್ಟ್ರೀಯ ಪತ್ರಿಕಾ ಭವನದ ಪ್ರಮುಖರು ಸೇರಿದಂತೆ ಅನೇಕರೊಂದಿಗೆ ಮಾತುಕತೆ ನಡೆಸಲಿದ್ದಾರೆ’ ಎಂದರು.

ಮಹಿಳೆಯರ ಮೇಲಿನ ಅಪರಾಧ ತ್ವರಿತ ಇತ್ಯರ್ಥಕ್ಕೆ ಮೋದಿ ಕರೆ

ನವದೆಹಲಿ: ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣಗಳನ್ನು ನ್ಯಾಯಾಂಗವು ತ್ವರಿತವಾಗಿ ಇತ್ಯರ್ಥಪಡಿಸಿದರೆ ಮಹಿಳೆಯರಲ್ಲಿ ಹೆಚ್ಚಿನ ಸುರಕ್ಷತಾ ಭಾವನೆ ಮೂಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೋಲ್ಕತಾದಲ್ಲಿ ನಡೆದ ವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮೇಲಿನ ದೌರ್ಜನ್ಯಗಳು ಹಾಗೂ ಮಕ್ಕಳನ್ನು ಗುರಿಯಾಗಿಸಿ ನಡೆಯುವ ಅಪರಾಧ ಪ್ರಕರಣಗಳು ಅತ್ಯಂತ ಕಳವಳಕಾರಿ ಸಂಗತಿಗಳಾಗಿವೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯಗಳು ತ್ವರಿತವಾಗಿ ತೀರ್ಪುಗಳನ್ನು ನೀಡಿದರೆ ದೇಶದ ಅರ್ಧದಷ್ಟು ಜನಸಂಖ್ಯೆಗೆ ತಮ್ಮ ಸುರಕ್ಷತೆಯ ಬಗ್ಗೆ ಆತ್ಮವಿಶ್ವಾಸ ಮೂಡುತ್ತದೆ ಎಂದು ತಿಳಿಸಿದ್ದಾರೆ.

ಮಾರ್ಷಲ್ಸ್ ಆರ್ಟ್ಸ್‌ನಲ್ಲಿ ರಾಹುಲ್ ಗಾಂಧಿ ಖದರ್ ನೋಡಿ! ಎದುರಾಳಿಯನ್ನ ಸೋಲಿಸಿದ ವಿಡಿಯೋ ವೈರಲ್!

ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಉಪಸ್ಥಿತಿಯಲ್ಲಿ ಶನಿವಾರ ಜಿಲ್ಲಾ ನ್ಯಾಯಾಧೀಶರ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ಕೃತ್ಯಗಳನ್ನು ತಡೆಯಲು ಸಾಕಷ್ಟು ಕಠಿಣ ಕಾಯ್ದೆಗಳನ್ನು ತರಲಾಗಿದೆ. 2019ರಲ್ಲೇ ಈ ಕೇಸುಗಳ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಅವುಗಳ ಮೂಲಕ ನ್ಯಾಯ ಸಿಗುವಂತಾಗಲು ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯ ಜೊತೆಗೆ ಸಮನ್ವಯದ ಅಗತ್ಯವಿದೆ ಎಂದು ಹೇಳಿದರು.

ಸಂವಿಧಾನದ ರಕ್ಷಕ ನ್ಯಾಯಾಂಗ:

ನ್ಯಾಯಾಂಗವನ್ನು ಸಂವಿಧಾನದ ರಕ್ಷಕ ಎಂದು ಗೌರವಿಸಲಾಗುತ್ತದೆ. ನಮ್ಮ ದೇಶದ ಸುಪ್ರೀಂಕೋರ್ಟ್‌ ಯಾವತ್ತೂ ಈ ಜವಾಬ್ದಾರಿಯನ್ನು ಪಾಲಿಸಿದೆ. ಆದ್ದರಿಂದಲೇ ಭಾರತೀಯರು ಯಾವತ್ತೂ ಸುಪ್ರೀಂಕೋರ್ಟ್‌ನಲ್ಲಿ ಅಪನಂಬಿಕೆಯನ್ನು ವ್ಯಕ್ತಪಡಿಸಿಲ್ಲ. ತುರ್ತುಸ್ಥಿತಿಯಂತಹ ಸಮಯದಲ್ಲೂ ಜನರ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ನ್ಯಾಯಾಂಗ ಮಾಡಿದೆ ಎಂದು ಮೋದಿ ಶ್ಲಾಘಿಸಿದರು.

WATCH: 'ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ..' : ರಾಹುಲ್ ಗಾಂಧಿ

Latest Videos
Follow Us:
Download App:
  • android
  • ios