Asianet Suvarna News Asianet Suvarna News

WATCH: 'ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ..' : ರಾಹುಲ್ ಗಾಂಧಿ

'ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

Have outlasted marriage pressure for 20-30 years rahul to Kashmiri women students rav
Author
First Published Aug 27, 2024, 6:27 AM IST | Last Updated Aug 27, 2024, 6:33 AM IST

ನವದೆಹಲಿ (ಆ.27):  'ನಾನು 20-30 ವರ್ಷಗಳಿಂದ ಮದುವೆ ಆಗಬೇಕು ಎಂಬ ಒತ್ತಡ ಸಹಿಸುತ್ತಿದ್ದೇನೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಕಾಶ್ಮೀರದ ಶ್ರೀನಗರದಲ್ಲಿ ವಿದ್ಯಾರ್ಥಿನಿಯರ ಜತೆ ಸಂವಾದ ನಡೆಸಿ ರಾಹುಲ್‌ ಅವರು ‘ನೀವು ಮದುವೆಯಾಗುವ ಒತ್ತಡ ಎದುರಿಸುತ್ತಿದ್ದೀರಾ?’ ಎಂದು ವಿದ್ಯಾರ್ಥಿಗಳಿಗೆ ಕೇಳಿದರು. ಆಗ ವಿದ್ಯಾರ್ಥಿಗಳು ಇದೇ ಪ್ರಶ್ನೆಯನ್ನು ರಾಹುಲ್‌ಗೆಕೇಳಿದಾಗ ‘ಕಳೆದ 20-30 ವರ್ಷಗಳಿಂದ ನನ್ನ ಮೇಲೆ ಮದುವೆಯಾಗಲು ಒತ್ತಡ ಹೇರಲಾಗುತ್ತಿದೆ. ನಾನು ಆ ಬಗ್ಗೆ ಯೋಚಿಸುತ್ತಿಲ್ಲವಾದರೂ, ಮದುವೆಯಾದರೆ...’ ಎಂದು ಮಾತನ್ನು ಅರ್ಧಕ್ಕೇ ತುಂಡರಿಸಿದರು.

‘ನಿಮ್ಮ ಮದುವೆಗೆ ನಮಗೂ ಆಹ್ವಾನಿಸಿ’ ಎಂಬ ಹುಡುಗಿಯರ ಮನವಿಗೆ ರಾಹುಲ್ ನಗುತ್ತ, ‘ಖಂಡಿತ’ ಎಂದರು. ಈ ವಿಡಿಯೋವನ್ನು ಅವರು ತಮ್ಮ ಯೂಟ್ಯೂಬ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಮದ್ವೆಯಾಗಲು ರೆಡಿ, ಆದ್ರೆ ಒಂದು ಕಂಡೀಷನ್;ಸಂಚಲನ ಸೃಷ್ಟಿಸಿದ ಶೆರ್ಲಿನ್ ಚೋಪ್ರಾ!

ಸೋಮವಾರದಂದು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಅವರ ಸಂವಾದದಲ್ಲಿ, ಗಾಂಧಿ ಅವರನ್ನು ಮದುವೆಯಾಗಲು ಒತ್ತಡದ ಬಗ್ಗೆ ಕೇಳುತ್ತಿರುವುದನ್ನು ಕಾಣಬಹುದು ಮತ್ತು ಅವರು ಮತ್ತೆ ಅವರನ್ನು ಪ್ರಶ್ನಿಸುತ್ತಾರೆ. "ನಾನು 20-30 ವರ್ಷಗಳಿಂದ ಆ ಒತ್ತಡವನ್ನು ಮೀರಿಸಿದ್ದೇನೆ" ಎಂದು 54 ವರ್ಷದ ನಾಯಕ ನಗುತ್ತಾ ಪ್ರತಿಕ್ರಿಯಿಸುತ್ತಾನೆ.

ರಾಹುಲ್ ಗಾಂಧಿಯವರ ಮದುವೆಯ ಸುತ್ತ ಸಾಕಷ್ಟು ಊಹಾಪೋಹಗಳ ಹರಿದಾಡಿವೆ. ಚರ್ಚೆಗಳ ನಡೆದಿವೆ. ಕೆಲವರು ರಾಹುಲ್ ವಿದೇಶಿ ಯುವತಿಯನ್ನು ಆಗಿದ್ದಾರೆ ಎನ್ನುತ್ತಿದ್ದಾರೆ. ಇನ್ನು ಕೆಲವರು, ಈಗಾಗಲೇ ರಾಹುಲ್ ಗಾಂಧಿಯವರಿಗೆ ಮಕ್ಕಳಿದ್ದಾರೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಹೇಳಿದ್ದಾರೆ. ಆದರೆ ಅದರ ನಡುವೆ ಇದೀಗ ಮದುವೆ ವಿಚಾರವಾಗಿ ಗಾಂಧಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದ ವೇಳೆ. ಫ್ರೀವೀಲಿಂಗ್ ಚಾಟ್‌ನಲ್ಲಿ, ಚರ್ಚೆಯು ಮದುವೆಯ ಕಡೆಗೆ ತಿರುಗುತ್ತದೆ. ನೀವು ಮದುವೆಯಾಗಲು ಯೋಜಿಸುತ್ತಿದ್ದೀರಾ ಎಂದು ಕೇಳಿದಾಗ, ಗಾಂಧಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Latest Videos
Follow Us:
Download App:
  • android
  • ios