ಬಿಜೆಪಿ ಮಹತ್ವದ ಘೋಷಣೆ ಮಾಡಿದೆ. ಪ್ರಮುಖ ರಾಜ್ಯಗಳ ಉಸ್ತುವಾರಿ ಹಾಗೂ ಸಹ ಉಸ್ತುವಾರಿ ನಾಯಕರ ಪಟ್ಟಿ ಘೋಷಣೆ ಮಾಡಿದೆ. ಕರ್ನಾಟಕದ ಜವಾಬ್ದಾರಿ ಹರೀಶ್ ದ್ವಿವೇದಿಗೆ ನೀಡಲಾಗಿದೆ. ಇಲ್ಲಿದೆ ಸಂಪೂರ್ಣ ಲಿಸ್ಟ್
ನವದೆಹಲಿ (ಸೆ.23) ಬಿಜೆಪಿ ಹಲವು ಬದಲಾವಣೆಗಳಾಗುತ್ತಿದೆ. ನಿತಿನ್ ನಬಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಹಲವು ತಂಡಗಳನ್ನು ಬದಲಾಯಿಸಿದೆ. ಇತ್ತೀಚೆಗೆ ಬಿಜೆಪಿ ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ಜವಾಬ್ದಾರಿಗಳಿಗೆ ಹೊಸ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಉಸ್ತುವಾರಿ ಹಾಗೂ ಸಹ ಉಸ್ತುವಾರಿ ಪಟ್ಟಿ ಬಿಡುಗಡೆ ಮಾಡಲಾಗಿದೆ. 28 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉಸ್ತುವಾರಿಗಳ ನೇಮಕ ಮಾಡಲಾಗಿದೆ.
ಕರ್ನಾಟಕಕ್ಕೆ ಹರೀಶ್ ದ್ವಿವೇದಿ
ಕರ್ನಾಟಕದ ಬಿಜೆಪಿ ಉಸ್ತುವಾರಿ ಬದಲಾಯಿಸಲಾಗಿದೆ. ಕರ್ನಾಟಕದ ಉಸ್ತುವಾರಿ ಜವಾಬ್ದಾರಿಯನ್ನು ಹರೀಶ್ ದ್ವಿವೇದಿಗೆ ನೀಡಲಾಗಿದೆ. ಸಹ ಉಸ್ತುವಾರಿಯಾಗಿ ಕಸಂ ವೆಂಕಟೇಶ್ವರಲು ನೇಮಕ ಮಾಡಿದ್ದಾರೆ. ಉತ್ತರ ಪ್ರದೇಶ ಬಸ್ತಿ ಲೋಕಸಭಾ ಸಂಸದ ಹರೀಶ್ ದ್ವಿವೇದಿಗೆ ಮಹತ್ತರ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಚುನಾವಣೆ ಸೇರಿದಂತೆ ಹಲವು ಚುನಾವಣೆಗಳು ಸಮೀಪಿಸುತ್ತಿದೆ. ಹೀಗಾಗಿ ಉಸ್ತುವಾರಿ ಜವಾಬ್ದಾರಿ ಪ್ರಮುಖವಾಗಿದೆ.
ಕೇರಳ ಬಿಜೆಪಿ ಉಸ್ತುವಾರಿ ಬದಲಾಯಿಸಲಾಗಿದೆ. ಪ್ರೊ ಎಂ ನಾಗರಾಜ್‌ಗೆ ಕೇರಳ ಉಸ್ತುವಾರಿ ನೇಮಕಗೊಂಡರೆ, ಸಹ ಉಸ್ತುವಾರಿಯಾಗಿ ಎಂ ವೆಂಕಟೇಶನ್‌ಗೆ ನೀಡಲಾಗಿದೆ. ಇನ್ನು ಸ್ಮೃತಿ ಇರಾನಿಗೆ ಹರ್ಯಾಣ ರಾಜ್ಯ ಉಸ್ತುವಾರಿ ನೀಡಲಾಗಿದೆ. ಒಡಿಸ್ಸಾ ಉಸ್ತುವಾರಿ ಜವಾಬ್ದಾರಿಯನ್ನು ಡಿ ಪುರಂದೇಶ್ವರ್‌ಗೆ ನೀಡಲಾಗಿದೆ.
ಬಿಜೆಪಿ ಉಸ್ತುವಾರಿ ನಾಯಕರ ಪಟ್ಟಿ
- ಅಂಡಮಾನ್ ಮತ್ತು ನಿಕೋಬಾರ್; ಜಯ ಪ್ರಕಾಶ್, ದೆಹಲಿ
- ಅರುಣಾಚಲ ಪ್ರದೇಶ; ಡಾ. ದೇವೇಶ್ ಕುಮಾರ್, ಬಿಹಾರ
- ಆಂಧ್ರ ಪ್ರದೇಶ; ಡಾ. ಅರವಿಂದ ಭದೌರಿಯಾ
- ಆಂಧ್ರ ಪ್ರದೇಶ ಸಹ ಪ್ರಭಾರಿ; ಶ್ರೀಮತಿ ವನತಿ ಶ್ರೀನಿವಾಸನ್
- ಅಸ್ಸಾಂ; ಮಂಗಲ್ ಪಾಂಡೆ
- ಅಸ್ಸಾಂ ಸಹ ಪ್ರಭಾರಿ; ಶ್ರೀಮತಿ ಫಾಂಗ್ನೋನ್ ಕೊನ್ಯಾಕ್
- ಅಸ್ಸಾಂ ಸಹ ಪ್ರಭಾರಿ; ಮನೋಜ್ ಟಿಗ್ಗಾ
- ಬಿಹಾರ; ಹರೀಶ್ ದ್ವಿವೇದಿ
- ಬಿಹಾರ ಸಹ ಪ್ರಭಾರಿ; ಶ್ರೀಮತಿ ಸಂಗೀತಾ ಯಾದವ್
- ಬಿಹಾರ ಸಹ ಪ್ರಭಾರಿ; ರೋಹನ್ ಗುಪ್ತಾ
- ಚಂಡೀಗಢ; ಮಹೇಂದ್ರ ಪಾಂಡೆ
- ಛತ್ತೀಸ್‌ಗಢ; ಶ್ರೀಮತಿ ಸ್ಮೃತಿ ಇರಾನಿ
- ಛತ್ತೀಸ್‌ಗಢ ಸಹ ಪ್ರಭಾರಿ; ಸಿದ್ಧಾರ್ಥ ಶಂಭು
- ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯು; ಶ್ರೀಮತಿ ವರ್ಷಾಬೆನ್ ನರೇಂದ್ರಭಾಯಿ ದಳಾಲ್
- ದೆಹಲಿ; ಡಾ. ವಿನಯ್ ಸಹಸ್ರಬುದ್ಧೆ
- ದೆಹಲಿ ; ಜಾಮ್‌ಯಾಂಗ್ ತ್ಸೆರಿಂಗ್ ನಮ್‌ಗ್ಯಾಲ್
- ದೆಹಲಿ ; ಶ್ರೀಮತಿ ದರ್ಶನಾಬೆನ್ ಜರ್ದೋಶ್
- ಗೋವಾ ; ಡಾ. ಭಾರತಿ ಪ್ರವೀಣ್ ಪವಾರ್
- ಗೋವಾ ; ಅನಿಲ್ ಆಂಟೋನಿ
- ಗುಜರಾತ್ ; ತರುಣ್ ಚುಘ್
- ಗುಜರಾತ್ ; ಅಜಯ್ ಮಹಾವರ್
- ಗುಜರಾತ್ ; ಗೋಮತಿ ಸಾಯಿ
- ಹರಿಯಾಣ ; ಶ್ರೀಮತಿ ಸ್ಮೃತಿ ಇರಾನಿ
- ಹರಿಯಾಣ ; ಡಾ. ಭೋಲಾ ಸಿಂಗ್
- ಹಿಮಾಚಲ ಪ್ರದೇಶ ; ಶ್ರೀಕಾಂತ್ ಶರ್ಮಾ
- ಹಿಮಾಚಲ ಪ್ರದೇಶ ; ದರ್ಶನಾ ಸಿಂಗ್
- ಜಮ್ಮು ಮತ್ತು ಕಾಶ್ಮೀರ ;ಡಾ. ಸತೀಶ್ ಪೂನಿಯಾ
- ಜಮ್ಮು ಮತ್ತು ಕಾಶ್ಮೀರ ; ರೀನಾ ಕಶ್ಯಪ್
- ಜಾರ್ಖಂಡ್ ; ಗಜೇಂದ್ರ ಪಟೇಲ್
- ಜಾರ್ಖಂಡ್ ; ಸೌರಭ್ ಸಿಂಗ್
- ಜಾರ್ಖಂಡ್ ; ನಿವೇದಿತಾ ಸಿಂಗ್
- ಕರ್ನಾಟಕ ; ಹರೀಶ್ ದ್ವಿವೇದಿ
- ಕರ್ನಾಟಕ ; ಡಾ. ಕಸಮ್ ವೆಂಕಟೇಶ್ವರಲು
- ಕೇರಳ ;ಪ್ರೊ. ಎಂ. ನಾಗರಾಜ
- ಕೇರಳ ; ಎಂ. ವೆಂಕಟೇಶನ್
- ಲಡಾಖ್ ; ರಾಜ್‌ಕುಮಾರ್
- ಲಕ್ಷದ್ವೀಪ ; ಜಾರ್ಜ್ ಕುರಿಯನ್


