09:28 PM (IST) Mar 10

ಆಪ್ ಗೆಲುವು ಸಾಧಿಸುತ್ತಿದ್ದಂತೆ ಟ್ವಿಟರ್, ಫೇಸ್ ಬುಕ್ ನಲ್ಲಿ ಝೆಲೆನ್ಸ್ಕಿ ಟ್ರೆಂಡಿಂಗ್!

ಪಂಜಾಬ್ ಚುನಾವಣಾ ಫಲಿತಾಂಶ (Punjab Election Result) ಪ್ರಕಟವಾಗುತ್ತಿದ್ದಂತೆ ಆಮ್ ಆದ್ಮಿ ಪಕ್ಷದ (Aam Admi Party) ಭಗವಂತ್ ಮಾನ್ (Bhagwant Mann) ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಪಂಜಾಬ್ ಚುನಾವಣೆಗಳ ಆರಂಭಿಕ ಸೂಚನೆಯಲ್ಲಿಯೇ ಆಪ್ ಪರವಾದ ಒಲವು ತೋರಲು ಆರಂಭಿಸಿದಾಗ, ಪಂಜಾಬ್ ಚುನಾವಣೆಯೊಂದಿಗೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಝೆಲೆನ್ಸ್ಕಿ (Volodymyr Zelensky) ಕೂಡ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಎನಿಸಿದ್ದರು.

ಉಕ್ರೇನ್ ಅಧ್ಯಕ್ಷ, ಪಂಜಾಬ್ ಚುನಾವಣೆ, ಭಗವಂತ್ ಮಾನ್.. ಎಲ್ಲಿಂದೆಲ್ಲಿಯ ಸಂಬಂಧ!

09:27 PM (IST) Mar 10

5 ವರ್ಷಗಳ ಆಡಳಿತ, ಯೋಗಿ ಆ ಒಂದು ಕಾರ್ಯಕ್ಕೆ ಯುಪಿ ಜನತೆ ಕೊಟ್ಟ ಗೆಲುವಿನ ಗಿಫ್ಟ್‌!

'ಹೋಮ್ ಮಿನಿಸ್ಟರ್ ಯೋಗಿ'..! ಸೋಜಗ ಅನ್ನಿಸಿದರು ಉತ್ತರ ಪ್ರದೇಶದ ಚುನಾವಣಾ ಫಲಿತಾಂಶದ ಹಿಂದಿರು ಗೆಲುವಿನ ಗುಟ್ಟು ಇದೆ.. ಯಶಸ್ವಿ ಮುಖ್ಯಮಂತ್ರಿ ಅನ್ನೋ ಪದಗಳಿಗೆ ಇನ್ನಷ್ಟು ಮೆರುಗು ತಂದಿದ್ದು ಹೋಮ್ ಮಿನಿಸ್ಟರ್ ಯೋಗಿಯೇ..

ಗೆದ್ದವನೇ ಮಹಾಶೂರ ಎನ್ನುವಂತೆ ಗೆದ್ದವರು ಮತ್ತು ಗೆದ್ದಿತ್ತಿನ ಬಾಲ ಹಿಡಿದವರು ಉತ್ತರ ಪ್ರದೇಶದಲ್ಲಿ ಮೊದಲು ಕೈ ಹಾಕುತ್ತಿದ್ದದ್ದು ಪೊಲೀಸ್ ಠಾಣೆಗೆ. ಪೊಲೀಸರಿಗೆ ಒಂದು ಕಾನೂನು ಇರಬೇಕು ಆ ಕಾನೂನಿನ ಹೆಸರಿನಲ್ಲಿ ನಾವು ದುಡ್ಡು ಮಾಡಬೇಕು ಎನ್ನವ ರಾಜಕಾರಣಿಗಳೇ ಇಲ್ಲಿ ಅಧಿಕ. ಬೆಹನ್ ಜೀ ಕಾಲದಲ್ಲಿ ಗೂಂಡಾಗಿರಿ ಒಂದು ಹಂತಕ್ಕೆ ನಿಯಂತ್ರಣ ಕ್ಕೆ ಬಂದಿತ್ತು. ನಂತರ ಬಂದ ಅಖಿಲೇಶ್ ಯಾದವ್ ಅವರ ಕಾಲದಲ್ಲಿ ಕೈ ಮೀರಿತು.

'ಹೋಮ್ ಮಿನಿಸ್ಟರ್ ಯೋಗಿ'..! ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ರಹಸ್ಯ 

09:25 PM (IST) Mar 10

'ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿಗರೇ', ಮುಲಾಯಂ ಸೊಸೆ ಅಪರ್ಣಾ ಘೋಷಣೆ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಇದೀಗ ಸಂಪೂರ್ಣ ಸ್ಪಷ್ಟವಾಗಿದೆ. ಭಾರತೀಯ ಜನತಾ ಪಕ್ಷ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ನೇರ ಸ್ಪರ್ಧೆಯಲ್ಲಿ ಸೋಲಿಸಿತು. ಭಾರತೀಯ ಜನತಾ ಪಕ್ಷ ಸರ್ಕಾರ ರಚಿಸಲಿದ್ದು, ಸಮಾಜವಾದಿ ಪಕ್ಷ ಎರಡನೇ ಸ್ಥಾನದಲ್ಲಿದೆ. ಹೀಗಿರುವಾಗ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಹಾಗೂ ಇತ್ತೀಚೆಗಷ್ಟೇ ಬಿಜೆಪಿ ಸೇರಿದ ಅಪರ್ಣಾ ಯಾದವ್ ಬಿಜೆಪಿ ಗೆಲುವಿನ ಸಂಭ್ರಮದಲ್ಲಿದ್ದಾರೆ. ಬಿಜೆಪಿ ಕಚೇರಿಗೆ ಆಗಮಿಸಿದ ಅಪರ್ಣಾ ಯಾದವ್, ಇದಕ್ಕಿಂತ ಉತ್ತಮ ಸರ್ಕಾರ ಮತ್ತು ಉತ್ತಮ ವ್ಯವಸ್ಥೆ ಇರಲು ಸಾಧ್ಯವಿಲ್ಲ ಎಂದು ಹೇಳಿದರು. ಇದರೊಂದಿಗೆ ಘೋಷವಾಕ್ಯವನ್ನು ನೀಡುತ್ತಾ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿ ಕಾರ್ಯಕರ್ತರು ಎಂದು ಹೇಳಿದ್ದಾರೆ.

ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಎಲ್ಲರೂ ಬಿಜೆಪಿ ಕಾರ್ಯಕರ್ತರು

08:43 PM (IST) Mar 10

ಯುಪಿಯಲ್ಲಿ ಬಿಜೆಪಿ ಗೆಲುವು ಜಾತಿ ರಾಜಕಾರಣ ನಡೆಸುವವರಿಗೆ ದೊಡ್ಡ ಪಾಠ: ಮೋದಿ ಗುದ್ದು!

ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಕೊಂಡರೆ, ಪಂಚರಾಜ್ಯ ವಿಧಾನಸಭಾ ಚುನಾವಣೆ ಸೆಮಿಫೈನಲ್ ಎನ್ನಲಾಗಿದೆ. ಹೀಗಿರುವಾಗ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಹೀಗಿ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳು ಬಿಜೆಪಿ ತೆಕ್ಕೆಗೆ ಸೇರಿವೆ. ಗೋವಾ ಕೂಡಾ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು, ಇದೊಂದು ಐತಿಹಾಸಿಕ ಗೆಲುವೆಂದೇ ಪರಿಗಣಿಸಲಾಗಿದೆ. ಹೀಗಿರುವಾಗ ಇಡೀ ಕೆಸರಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಭಿನ್ನ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಇದು ಮೋದಿ-ಯೋಗಿ ಜೋಡಿಯ ಕಮಾಲ್ ಎನ್ನಲಾಗಿದೆ.

ಜಾತಿ ರಾಜಕಾರಣ ನಡೆಸುವವರಿಗೆ ಮೋದಿ ಗುದ್ದು

08:15 PM (IST) Mar 10

ಚನಿ to ಧಮಿ, ಪಂಚ ರಾಜ್ಯ ಚುನಾವಣೆಯಲ್ಲಿ ಹಾಲಿ, ಮಾಜಿ ಸಿಎಂಗೆ ಸೋಲಿನ ಕಹಿ!

ಪಂಚ ರಾಜ್ಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಅಧಿಕೃತ ಪ್ರಕಟಣೆ ಬಾಕಿ ಇದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿ ಗೆಲುವು ಸಾಧಿಸಿದರೆ, ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿನ ಸಂಭ್ರಮ ಆಚರಿಸಿದೆ. ಇನ್ನು ಉತ್ತರಖಂಡ, ಮಣಿಪುರ ಹಾಗೂ ಗೋವಾದಲ್ಲೂ ಬಿಜೆಪಿ ಮುನ್ನಡೆ ಸಾಧಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಕೆಲ ಘಟಾನುಘಟಿ ನಾಯಕರಿಗೆ ಸೋಲಾಗಿದೆ. ಇದರಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನಿ, ಉತ್ತರಖಂಡ ಸಿಎಂ ಫುಷ್ಕರ್ ಸಿಂಗ್ ಧಮಿ ಪ್ರಮುಖರು.

ದೊಡ್ಡವರೆಲ್ಲಾ ಸೋತರಲ್ಲ..ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಕಂಡ ಬಲಿಷ್ಠ ನಾಯಕರು

08:13 PM (IST) Mar 10

ಭಗವಂತನ ಇಚ್ಛೆ ತಿಳಿಸಿದ ಮಾನ್, ಪ್ರಮಾಣವಚನ ರಾಜಭವನದಲ್ಲಿ ಬೇಡ, ಹಾಗಿದ್ರೆ ಮತ್ತೆಲ್ಲಿ..!

ಪಂಜಾಬ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ (Punjab Chief Minister elect Bhagwant Mann), ತಮ್ಮ ಮೊಟ್ಟಮೊದಲ ವಿಜಯೋತ್ಸವ ಭಾಷಣದಲ್ಲಿಯೇ (Victory Speech )ಅದ್ಭುತ ನಿರ್ಧಾರ ಮಾಡುವ ಮೂಲಕ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಗೂ ಮುನ್ನ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ (Arvind Kejiriwal) ಖಲೀಸ್ತಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರೊಬ್ಬ ಭಯೋತ್ಪಾದಕ ಸ್ನೇಹಿ ಎನ್ನುವ ಆರೋಪಗಳನ್ನು ಆಪ್ ಎದುರಿಸಿತ್ತು. ಆದರೆ, ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Admni Party) ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲಿಯೇ ಧುರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಭಗವಂತ್ ಮಾನ್, ಪ್ರಮಾಣವಚನ ಸಮಾರಂಭವು ಪಂಜಾಬ್ ನ ರಾಜಭವನದ ಬದಲಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ (Nawanshahr ) ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ (Khatkarkalan ) ನಡೆಯಲಿದೆ ಎಂದು ಘೋಷಣೆ ಮಾಡಿದರು.
ಪಂಜಾಬ್ ನಿಯೋಜಿತ ಮುಖ್ಯಮಂತ್ರಿಯ ಸ್ಪೆಷಲ್ ಘೋಷಣೆ, ಏನೆಲ್ಲಾ ಹೇಳಿದ್ರು..!

08:08 PM (IST) Mar 10

ಮೈತ್ರಿ ಇಲ್ಲದೆ 20 ಕ್ಷೇತ್ರದಲ್ಲಿ ಗೆಲುವು, ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚಿಸಲು ಮ್ಯಾಜಿಕ್ ನಂಬರ್ 21. ಈಗಾಗಲೇ ಮೂವರು ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಗೋವಾ ಜನತೆಗೆ ಧನ್ಯವಾದ ಸಲ್ಲಿಸಿದ್ದಾರೆ. ಇದೇ ವೇಳೆ ಗೆಲುವಿನ ಕ್ರೆಡಿಟ್ ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ.

ಗೋವಾ ಸರ್ಕಾರ ರಚನೆಗೆ ಬಿಜೆಪಿ ಮಹೂರ್ತ ಫಿಕ್ಸ್!

07:21 PM (IST) Mar 10

ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

ಪಂಚ ರಾಜ್ಯಗಳ ಚುನಾವಣೆಯಲ್ಲಿ (Assembly Elections 2022) ಭಾರಿ ಕುತೂಹಲ ಕೆರಳಿಸಿದ್ದ ಮತ್ತೊಂದು ರಾಜ್ಯ ಪಂಜಾಬ್. ಆಡಳಿತರೂಢ ಕಾಂಗ್ರೆಸ್ ನೆಲಕ್ಕಪ್ಪಳಿಸಿದರೆ, ಆಮ್ ಆದ್ಮಿ ಪಾರ್ಟಿ ಅತೀ ದೊಡ್ಡ ಪಕ್ಷವಾಗಿ ಅಧಿಕಾರದ ಗದ್ದುಗೆ ಏರುತ್ತಿದೆ. ಈ ಬೆನ್ನಲ್ಲೇ ಮಾತನಾಡಿದ ಪಕ್ಷದ ವರಿಷ್ಠ ಮತ್ತು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ಅವರ ಕನಸು ಇಂದು ನನಸಾಗಿದೆ. ಪಂಜಾಬ್‌ನ ಜನರು ಈ ಬಾರಿ ಆಡಳಿತ ವ್ಯವಸ್ಥೆಯನ್ನು ಬದಲಾಯಿಸಿದ್ದಾರೆ, ಆಮ್‌ ಆದ್ಮಿ ಪಾರ್ಟಿ ದೇಶದಲ್ಲಿ ವ್ಯವಸ್ಥೆಯನ್ನು ಬದಲಾಯಿಸಿದೆ ಎಂದು ಹೇಳಿದ್ದಾರೆ.

ಅಷ್ಟಕ್ಕೂ ಕೇಜ್ರಿವಾಲ್ ಹೇಳಿದ್ದೇನು?

06:53 PM (IST) Mar 10

ಮೋದಿ ನಂಬಿ ಮತ ನೀಡಿದವರಿಗೆ ಧನ್ಯವಾದ ಎಂದ ಕೇಂದ್ರ ಸಚಿವ ನಾರಾಯಣಸ್ವಾಮಿ

ಪಂಚರಾಜ್ಯ ಚುನಾವಣೆಯ 4 ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಸಚಿವ ನಾರಾಯಣಸ್ವಾಮಿ (central minister narayanasamy) ಪ್ರಧಾನಿ ಮೋದಿಯವರನ್ನು ನಂಬಿ ಮತ ನೀಡಿದ ಎಲ್ಲರಿಗೂ ಧನ್ಯವಾದ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಪಂಜಾಬ್ ನಲ್ಲಿ ಆಮ್‌ಆದ್ಮಿ ಪಾರ್ಟಿ (aam aadmi party) ಪಂಜಾಬ್‌ನಲ್ಲಿ ಬಹಳ ದೊಡ್ಡ ಗೆಲುವು ಕಂಡಿದ್ದು , ಈ ಬಗ್ಗೆ ಮಾತನಾಡಿದ ನಾರಾಯಣಸ್ವಾಮಿ ಖಂಡಿತವಾಗಿಯೂ ಎಎಪಿ ತನ್ನ ಕಾರ್ಯಚಟುವಟಿಕೆಯಲ್ಲಿ ಬದಲಾವಣೆಯನ್ನು ತಂದಿದೆ.

"

05:50 PM (IST) Mar 10

'ಪಂಚರಾಜ್ಯಗಳಲ್ಲಿ 4 ರಾಜ್ಯಗಳ ಗೆಲುವಿಗೆ ಮೋದಿ ವರ್ಚಸ್ಕೇ ಕಾರಣ'

ರೇಣುಕಾಚಾರ್ಯ ಹೇಳಿಕೆ. ದೇಶದಲ್ಲಿ ನರೇಂದ್ರ ಮೋದಿ ವರ್ಚಸ್ಸು, ಜನತೆಯ ಅಭಿಮಾನ ಈ ಯಶಸ್ಸಿಗೆ ಚುನಾವಣೆ ಜಯಗಳಿಸೋಕೆ ಕಾರಣ. ಕಾಂಗ್ರೆಸ್ ಮುಖಂಡರನ್ನ ಬ್ಯಾಟರಿ ಹಾಕಿ ಹುಡುಕಬೇಕು. ಅವರು ಎಲ್ಲಿಯೂ ಕಾಣ್ತಾನೆ ಇಲ್ಲ. ಎಲೆಕ್ಷನ್ ರಿಸಲ್ಟ್ ಬಂದ ಕೂಡಲೇ ನಾಪತ್ತೆಯಾಗಿದ್ದಾರೆ. ಪಂಜಾಬಿನಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ರು, ಆದ್ರೆ ಈ ಬಾರಿ ಪತ್ತೇನೆ ಇಲ್ಲ. ನಮ್ಮ ರಾಜ್ಯದ ನಾಯಕರು ಗೋವಾ ಹೋಗಿ ಕೂತ ಕೊಂಡಿದ್ದಾರೆ. ಇಲ್ಲಿ ಪಾದಯಾತ್ರೆ ಅಂತ ನಾಟಕ ಮಾಡಿ ಈಗ ಗೋವಾ ಹೋಗಿದಾರೆ. ಈ ಎಲೆಕ್ಷನ್ ರಿಸಲ್ಟ್ ನೋಡಿದ್ರೆ, ಕರ್ನಾಟಕದಲ್ಲೂ 2023 ರಲ್ಲಿ ಬಿಜೆಪಿ ಬರೋದು ಪಕ್ಕಾ ಅಂತ ಕನ್ಫರ್ಮ್ ಆಗಿದೆ. ಆಮ್ ಆದ್ಮಿ ಪಾರ್ಟಿ ಸುಳ್ಳು ಭರವಸೆ ನೀಡಿ ಪಂಜಾಬ್ ನಲ್ಲಿ ವಿನ್ ಆಗಿದ್ದಾರೆ ಅಷ್ಟೆ. ಕಾಂಗ್ರೆಸ್ ನವರ ಕತೆ ಏನು ಅಂತ ಕೇಳಿ, ಅವರ ಅಡ್ರೆಸ್ ಇಲ್ಲವೇ ಇಲ್ಲ. ಉತ್ತರ ಪ್ರದೇಶದಲ್ಲಿ ಅವರು ಧೂಳಿಪಟ ಆಗಿದ್ದಾರೆ. ನಿರಾಣಿ ಯಾವ ಕಾರಣಕ್ಕೆ ಡೆಲ್ಲಿಗೆ ಹೋಗಿದ್ದಾರೆ ಗೊತ್ತಿಲ್ಲ. ಆದ್ರೆ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಸಧ್ಯಕ್ಕಿಲ್ಲ.

05:24 PM (IST) Mar 10

'ಒಂದು ಕಾಲದಲ್ಲಿ ಕಾಂಗ್ರೆಸ್ ಪಾರ್ಟಿ ವಿದ್ಯುತ್ ಕಂಬ ನಿಲ್ಲಿಸಿದ್ರೂ ಗೆಲ್ತಾರೆ ಅಂತಿತ್ತು, ಇಂದು ಸೋನಿಯಾ,ರಾಹುಲ್ ನಿಂತ್ರು ಗೆಲ್ಲೋದಿಲ್ಲ'

ಒಂದು ಕಾಲದಲ್ಲಿ ಕಾಂಗ್ರೆಸ್ ಪಾರ್ಟಿ ವಿದ್ಯುತ್ ಕಂಬ ನಿಲ್ಲಿಸಿದ್ರು, ಗೆಲ್ತಾರೆ ಅಂತಿತ್ತು. ಇಂದು ಸೋನಿಯಾ,ರಾಹುಲ್ ನಿಂತ್ರು ಗೆಲ್ಲೋದಿಲ್ಲ.ನೀರಿಗಾಗಿ ಪಾದಯಾತ್ರೆ ಮಾಡಿದ್ರು.ಈಗ ಅವರೇ ನೀರು ಕುಡಿಯುವ ಸಮಯ ಬಂದಿದೆ. ಗೋವಾಕ್ಕೆ ಸರ್ಕಾರ ಮಾಡಲು ರಾಜ್ಯದಿಂದ ಬ್ಯಾಗ್ ತುಂಬಿ ಹೋದ್ರು.ಈಗ ಖಾಲಿ ಬ್ಯಾಗ್ ತರ್ತಾ ಇದ್ದಾರೆ. ಡಬಲ್ ಇಂಜಿನ್ ಸರ್ಕಾರ ಇದ್ದಲ್ಲಿ ಬಿಜೆಪಿ ಗೆದ್ದಿದೆ.ಮೊದಲು ಕ್ರಿಸ್ತ ಪೂರ್ವ, ಕ್ರಿ.ಶ ಅಂತಿದ್ರು. ಇನ್ನು ಮೋದಿ ಪೂರ್ವ, ಮೋದಿ ಬಳಿಕ ಎನ್ನುವ ಕಾಲ ಬರ್ತದೆ ಈಗ ಮೋದಿ ಯುಗ ಆರಂಭವಾಗಿದೆ.

"

05:21 PM (IST) Mar 10

ಕರ್ನಾಟಕದಲ್ಲಿಯೂ ಕಾಂಗ್ರೆಸ್ ಮುಳುಗುತ್ತೆ: ಬೊಮ್ಮಾಯಿ

ಉಜ್ವಲ್ ಯೋಜನೆ ಸೇರಿ ಎಲ್ಲಾ ಯೋಜನೆಗಳು ಮೋದಿಯವರನ್ನು ಯಾವತ್ತು ಕೈಬಿಡೋಕೆ ಸಾಧ್ಯವಿಲ್ಲ. 2024ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ‌. ಈಗ ಆಪ್ ಗೆದ್ದಿರಬಹುದು. ಕರ್ನಾಟಕದ ಜನರಿಗೆ ಸಮ್ಮಿಶ್ರ ಸರ್ಕಾರದ ಆಡಳಿತ ವೈಫಲ್ಯ ಗೊತ್ತಿದೆ. ಕಳೆದ ಎರಡು ವರ್ಷ ಕೋವಿಡ್ ಪ್ರಭಾವ ಇದ್ರು ಕೂಡ ಕೆಲಸ ಮಾಡಿದ್ದು ಯಡಿಯೂರಪ್ಪ ನೇತೃತ್ವದ ಸರ್ಕಾರ ಮತ್ತು ಕಾರ್ಯಕರ್ತರ ಶ್ರಮ. ಅತ್ಯಂತ ಹೆಚ್ಚು ಕಿಟ್ ಹಂಚಿರುವ ಪಕ್ಷ ಇದ್ರೆ ಅದು ಬಿಜೆಪಿ. ರಾಜ್ಯದಲ್ಲಿ ಪಕ್ಷದ ಸಂಘಟನೆ ಆನೆ ಬಲದಂತೆ ಮುನ್ನುಗ್ಗುತ್ತಿದೆ. ಕಾಂಗ್ರೆಸ್ ನೋಂದಣಿ ಮಾಡಬೇಕು ಎಂದರೆ ಟಿವಿ ಫ್ರಿಡ್ಜ್ ಹಂಚುತ್ತಿದ್ದಾರೆ. ಅದು ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಕೊಡೊದು ತಗೊಳ್ಳೋದು,ಅವರಿಗೆ ಹಿಂದಿನಿಂದ ಗೊತ್ತಿದೆ. ಅಧಿಕಾರಕ್ಕೆ ಬಂದ್ರೆ ಕೊಟ್ಟಿದ್ದರ ಡಬಲ್ ತಗೊಳ್ಳತ್ತೆ. ಕಾಂಗ್ರೆಸ್ ಮುಳುಗಿ ಹೋಗಿದೆ. ಮುಂದೆ ರಾಜ್ಯದಲ್ಲಿ ಮುಳುಗಿ ಹೋಗತ್ತೆ. ರಾಜ್ಯದ ಕಾಂಗ್ರೆಸ್ ನಾಯಕರು ಸರ್ಕಾರ ಮಾಡೋಕೆ ಗೋವಾ ಹೋಗಿದ್ದಾರೆ. ಆದ್ರೆ ಅವರ ಕಾಲಗುಣ ಸರಿಯಿಲ್ಲ ಎಂದು ಪರೋಕ್ಷವಾಗಿ ಡಿಕೆಶಿಗೆ ವ್ಯಂಗ್ಯ ಮಾಡಿದ ಸಿಎಂ.

05:07 PM (IST) Mar 10

ಕಾಂಗ್ರೆಸ್ ಸೋಲಿನಲ್ಲಿಯೂ ಗೆಲುವಿನ ಲೆಕ್ಕಚಾರ ಹಾಕುಕ್ತಿದೆ ಕಾಂಗ್ರೆಸ್

"

05:00 PM (IST) Mar 10

ದೇಶದಲ್ಲಿ ಕಾಂಗ್ರೆಸ್ ಮುಳುಗುತ್ತಿರೋ ಹಡಗು: ಶ್ರೀರಾಮುಲು

ಇಷ್ಟು ದಿನಗಳ ಕಾಲ‌ ಕಾಂಗ್ರೆಸ್ ಪಕ್ಷ ಅಂದ್ರೆ ದೊಡ್ಡ ಪಕ್ಷ ಅಂತಿದ್ವಿ. ಆದ್ರೆ ಕಾಂಗ್ರೆಸ್ ದೇಶದಲ್ಲಿ ಮುಳುಗುತ್ತಿರೋ ಹಡಗು. ಪಂಚರಾಜ್ಯ ಚುನಾವಣಾ ಫಲಿತಾಂಶ ನೋಡಿದ್ರೆ ಮುಳುಗುತ್ತಿತ್ತು ಅಂತ ಹೇಳ್ತಿದ್ವೋ, ಆದ್ರೆ ಈಗಾಗಲೇ ಮುಳುಗಿ ಹೋಗಿರೋ‌ ಪಕ್ಷ. ಬಿಜೆಪಿಗೆ ನಾಡಿನ, ದೇಶದ ಜನರು ಮ್ಯಾನ್ಡೇಟರಿ ನೀಡಿದ್ದಾರೆ. ಸಂಬಂಧಿಸಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸ್ತೇನೆ. ದೇಶದಲ್ಲಿ ಕಾಂಗ್ರೆಸ್ ಧೂಳೀಪಟ ಆಗ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕೂಡ ಧೂಳಿ ಪಟ ಆಗಬೇಕು.ಹಾಗಾಗಿ ಸಿಎಂ ಬೊಮ್ಮಾಯಿ, ಅಧ್ಯಕ್ಷ ಕಟೀಲ್ ನೇತೃತ್ವದಲ್ಲಿ ಚುನಾವಣೆ ಹೋಗ್ತೀವಿ. ನಮ್ಮ ನಾಯಕ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸ್ತೇವೆ.ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ.

04:50 PM (IST) Mar 10

ಪಂಜಾಬ್‌ ಪೂರ್ತಿ ಗುಡಿಸಿದ ಪೊರಕೆ... ಭಗವಂತ್ ಮಾನ್ ರೂಪದಲ್ಲಿ ಬಂದ ಪುಟ್ಟ ಬಾಲಕ

ಪಂಜಾಬ್ ಅಸೆಂಬ್ಲಿ ಚುನಾವಣೆ 2022 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಪ್ರಚಂಡ ಗೆಲುವಿನತ್ತ ಮುನ್ನಡೆಯುತ್ತಿದ್ದಂತೆ, ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಂಜಾಬ್‌ನಾದ್ಯಂತ ಸಂಭ್ರಮಾಚರಣೆ ನಡೆಸಿದರು. ದೆಹಲಿಯ ಎಎಪಿ ಕಾರ್ಯಕರ್ತರು ಕೂಡ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಂಭ್ರಮಾಚರಣೆ ಆರಂಭಿಸಿದರು. ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್.

ಹೇಗಿದ್ದಾನೆ ಈ ಬಾಲಕ?

04:48 PM (IST) Mar 10

ಉತ್ತರಾಖಂಡ ಗೆಲುವಿನ ಕ್ರೆಡಿಟ್ ಪ್ರಧಾನಿ ಮೋದಿಗೆ : ಪ್ರಹ್ಲಾದ್ ಜೋಶಿ

 ತೀವ್ರ ಕುತೂಹಲ ಕೆರಳಿಸಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ 273 ಸ್ಥಾನ ಗೆದ್ದು ಬಹುಮತ ಪಡೆದಿದೆ. ಗೋವಾದಲ್ಲಿ 18, ಉತ್ತರಾಖಂಡದಲ್ಲಿ 44 ಸ್ಥಾನ ಪಡೆದಿದೆ. 

ಉತ್ರರಖಾಂಡವನ್ನು ಜೋಶಿಯವರು ಗೆಲ್ಲಿಸಿದ್ದು ಹೇಗೆ?

"

04:46 PM (IST) Mar 10

ಮೊಬೈಲ್ ರಿಪೇರಿ ಶಾಪ್ ಮಾಲೀಕ ಆಪ್ ಆಭ್ಯರ್ಥಿ ಮುಂದೆ ಸೋತ ಹಾಲಿ ಸಿಎಂ ಚರಣ್‌ಜಿತ್ ಸಿಂಗ್ ಚನಿ!

ಪಂಜಾಬ್‌ನಲ್ಲಿ ಕಾಂಗ್ರೆಸ್ ಪರಿಸ್ಥಿತಿ ಶೋಚನೀಯವಾಗಿದೆ. ಎಷ್ಟು ಹದಗೆಟ್ಟಿದೆ ಎಂದರೆ ಕಾಂಗ್ರೆಸ್‌ನ ಸಿಎಂ, ಪಕ್ಷದ ಅಧ್ಯಕ್ಷ ಸೇರಿ ಅದೆಂತಾ ಘಟಾನುಘಟಿ ನಾಯಕನಾದರೂ ಸರಿ, ಸಾಮಾನ್ಯರ ಮುಂದೆ ಸೋಲಿಗೆ ಎದೆಯೊಡ್ಡಬೇಕಾದ ಪರಿಸ್ಥಿತಿ ಬಂದೊದಗಿದೆ. ಕಾಂಗ್ರೆಸ್ ನಾಯಕ, ಹಾಲಿ ಸಿಎಂ ಚರಣಜಿತ್ ಸಿಂಗ್ ಪರಿಸ್ಥಿತಿ ಇದೆ ಆಗಿದೆ. ಬದೌರ್ ಹಾಗೂ ಚಮ್ಕೌರ್ ಸಾಹೀಬ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚರಣ್‌ಜಿತ್ ಸಿಂಗ್ ಚನಿ ಎರಡೂ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. ಅದರಲ್ಲೂ ಬದೌರ್ ಕ್ಷೇತ್ರದಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿರುವ ಆಪ್ ಆಭ್ಯರ್ಥಿ ಲಭಾ ಸಿಂಗ್ ವಿರುದ್ಧದ ಸೋಲು ಇದೀಗ ಭಾರಿ ಚರ್ಚೆಯಾಗುತ್ತಿದೆ.

ಯಾರು ಈ ಲಭಾ ಸಿಂಗ್

04:42 PM (IST) Mar 10

ಬಿಜೆಪಿ ಗೆದ್ದರೂ ಸಿಎಂಗೆ ಸೋಲು: 6,900 ಮತಗಳ ಅಂತರದಿಂದ ಮುಗ್ಗರಿಸಿದ ಧಾಮಿ!

 ಬಹು ನಿರೀಕ್ಷಿತ ಪಂಚರಾಜ್ಯ ಚುನಾವಣಾ ಫಲಿತಾಂಶ ಬಹುತೇಕ ಅನಾವರಣಗೊಂಡಿದೆ. ಉತ್ತರ ಪ್ರದೇಶದಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಬಿಜೆಪಿಯಲ್ಲಿ ಸಂಭ್ರಮ ಮನೆ ಮಾಡಿದೆ. ಇನ್ನು ಇತ್ತ ಉತ್ತರಾಖಂಡ್‌ನಲ್ಲೂ ಬಿಜೆಪಿ ಗೆಲುವಿನ ನಗು ಬೀರಿದೆ. ಆರಂಭಿಕ ಟ್ರೆಂಡ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡು ಬಂದಿತ್ತಾದರೂ ಬಳಿಕ ಬಿಜೆಪಿ ಗೆಲುವಿನತ್ತ ದಾಪುಗಾಲು ಇಟ್ಟಿತ್ತು. ಆದರೀಗ ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಅಲ್ಲಿನ ಮುಖ್ಯಮಂತ್ರಿ ಪುಷ್ಕರ್ ಧಾಮಿ ಸೋಲನುಭವಿಸಿದ್ದಾರೆ.

ಸಿಎಂ ಪುಷ್ಕರ್ ಧಾಮಿಗೆ ಸೋಲು

04:41 PM (IST) Mar 10

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ

ಉತ್ತರಪ್ರದೇಶದಲ್ಲಿ ಕಮಲ ಮತ್ತೆ ಅರಳಿದೆ. ಸಿಎಂ ಯೋಗಿ ಆದಿತ್ಯನಾಥ್ ಪ್ರಚಂಡ ಬಹುಮತದೊಂದಿಗೆ ಮತ್ತೆ ಅಧಿಕಾರಿಕ್ಕೆ ಬಂದಿದ್ದಾರೆ. ದೇಶಾದ್ಯಂತ ಬಿಜೆಪಿ ಬೆಂಬಲಿಗರು ಗೆಲುವಿನ ಸಂಭ್ರಮ ಆಚರಿಸುತ್ತಿದ್ದು, ಪುಟ್ಟ ಮಗುವೊಂದು ಸಿಎಂ ಯೋಗಿ ಆದಿತ್ಯನಾಥ್‌ ರೂಪದಲ್ಲಿ ಕಂಗೊಳಿಸುತ್ತಿದೆ. ಯೋಗಿಯಂತೆ ಈ ಪಟ್ಟ ಮಗುವಿನ ತಲೆ ಕೂದಲನ್ನು ಪೂರ್ತಿಯಾಗಿ ತೆಗೆಯಲಾಗಿದ್ದು, ಸನ್ಯಾಸಿಯಂತೆ ಕೇಸರಿ ವಸ್ತ್ರದಲ್ಲಿ ಮಗು ಮಿಂಚುತ್ತಿದೆ. ಒಂದೂವರೆ ವರ್ಷದ ಈ ಮಗುವಿನ ಹೆಸರು ನವ್ಯ. ಬಿಜೆಪಿ ಅಭಿಮಾನಿಗಳಾಗಿರುವ ಈ ಮಗುವಿನ ಪೋಷಕರು ಯೋಗಿಯಂತೆ ಈ ಮಗುವಿಗೆ ವೇಷ ಹಾಕಿಸಿದ್ದಾರೆ.ತನ್ನ ತಂದೆಯೊಂದಿಗ ಲಖ್ನೋದ ಬಿಜೆಪಿ ಕಚೇರಿಗೆ ಆಗಮಿಸಿದ ಈ ಮಗು ಕೈಯಲ್ಲಿ ಬುಲ್ಡೋಜರ್‌ನ ಆಟದ ಸಾಮಾನು ಹಿಡಿದುಕೊಂಡಿತ್ತು.

04:36 PM (IST) Mar 10

ಕಾಂಗ್ರೆಸ್‌ಗೆ ಜ್ಞಾನೋದಯ ಆಗುವ ಫಲಿತಾಂಶ: ಎಚ್‌ಡಿಕೆ

ನೂರಾರು ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್‌ಗೆ ಜ್ಞಾನೋದಯ ಆಗುವ ಫಲಿತಾಂಶ ಇದು. ಬಿಜೆಪಿಗೆ ಫೈಟ್‌ ಕೊಡಲು ಪ್ರಾದೇಶಿಕ ಪಕ್ಷಗಳು ಸಮರ್ಥ ಎನ್ನುವನ್ನು ಈ ಫಲಿತಾಂಶ ಹೇಳಿದೆ: ಎಚ್‌ಡಿಕೆ 

"