Asianet Suvarna News Asianet Suvarna News

UP Election Results: ಯುಪಿಯಲ್ಲಿ ಬಿಜೆಪಿ ಗೆಲುವು ಜಾತಿ ರಾಜಕಾರಣ ನಡೆಸುವವರಿಗೆ ದೊಡ್ಡ ಪಾಠ: ಮೋದಿ ಗುದ್ದು!

* ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಬಹುದೊಡ್ಡ ಗೆಲುವು
* ಗೆಲುವಿನ ಬೆನ್ನಲ್ಲೇ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತು
* ಕಾಂಗ್ರೆಸ್ ಸೇರಿ ವಿಪಕ್ಷಗಳಿಗೆ ಜಾತಿ ವಿಚಾರವಾಗಿ ಗುದ್ದು ಕೊಟ್ಟ ಮೋದಿ

UP Election Results 2022 BJP win lesson for opposition vote for good governance transparency pod
Author
Bangalore, First Published Mar 10, 2022, 8:38 PM IST

ನವದೆಹಲಿ(ಮಾ.10): ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಕೊಂಡರೆ, ಪಂಚರಾಜ್ಯ ವಿಧಾನಸಭಾ ಚುನಾವಣೆ ಸೆಮಿಫೈನಲ್ ಎನ್ನಲಾಗಿದೆ. ಹೀಗಿರುವಾಗ ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಹೀಗಿ ಪಂಚರಾಜ್ಯ ಚುನಾವಣೆಯಲ್ಲಿ ಮೂರು ರಾಜ್ಯಗಳು ಬಿಜೆಪಿ ತೆಕ್ಕೆಗೆ ಸೇರಿವೆ. ಗೋವಾ ಕೂಡಾ ಬಿಜೆಪಿ ಪಾಲಾಗುವುದು ಬಹುತೇಕ ಖಚಿತವಾಗಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ದು, ಇದೊಂದು ಐತಿಹಾಸಿಕ ಗೆಲುವೆಂದೇ ಪರಿಗಣಿಸಲಾಗಿದೆ. ಹೀಗಿರುವಾಗ ಇಡೀ ಕೆಸರಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು ಭಿನ್ನ, ವಿಭಿನ್ನವಾಗಿ ಆಚರಿಸುತ್ತಿದ್ದಾರೆ. ಇದು ಮೋದಿ-ಯೋಗಿ ಜೋಡಿಯ ಕಮಾಲ್ ಎನ್ನಲಾಗಿದೆ.

ಈಗಾಗಲೇ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆಲುವಿನ ಖುಷಿಯನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ ಎಂದಿರುವ ಯೋಗಿ, ಗೆಲುವಿಗೆ ಕೊಟ್ಟ ಸಹಕಾರಕ್ಕೆ ತಲೆಬಾಗಿ ನಮಿಸಿದ್ದಾರೆ. ಸದ್ಯ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಪ್ರಧಾನ ಕಾರ್ಯಾಲಯಕ್ಕೆ ತಲುಪಿದ್ದು, ಇಲ್ಲಿ ಬಿಜೆಪಿ ಗೆಲುವಿನ ವಿಚಾರವಾಗಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.

UP Election Results: ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಏನು? ಶಾಕಿಂಗ್ ಫಲಿತಾಂಶ ಬಯಲು!

ಮೋದಿ ಭಾಷಣದ ಹೈಲೈಟ್ಸ್:

ಇದು ಉತ್ಸವದ ದಿನ, ಇದು ಪ್ರಜಾಪ್ರಭುತ್ವದ ಉತ್ಸವದ ದಿನ ಈ ಮತದಾನದಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದ. ಅವರ ನಿರ್ಣಯಕ್ಕೆ ಮತದಾರರಿಗೆ ಆಭಾರಿಯಾಗಿದ್ದೇನೆ. ವಿಶೇಷವಾಗಿ ನಮ್ಮ ತಾಯಿ, ಸಹೋದರಿಯರು, ಯುವಜನತೆ ಹೇಗೆ ಬಿಜೆಪಿಗೆ ಸಮರ್ಥನೆ ನೀಡಿದ್ದಾರೋ ಅದು ಬಹುದೊಡ್ಡ ಸಂದೇಶವಾಗಿದೆ.

ಬೃಹತ್ ಸಂಖ್ಯೆಯಲ್ಲಿ ಮತದಾರರು ಇದರಲ್ಲಿ ಭಾಹಗವಹಿಸಿ ಬಿಜೆಪಿ ಜಯ ನಿಶ್ಚಿತಗೊಳಿಸಿದರು. ಅನೇಕ ಕಾರ್ಯಕಜರ್ತರು ಈ ಬಾರಿ ಹೊಳಿ ಮಾರ್ಚ್ 10ಕ್ಕೇ ಆರಂಭವಾಗುತ್ತದೆ ಎಂದು ನನಗೆ ಭರವಸೆ ನೀಡಿದ್ದರು. ಅವರು ಈ ಭರವಸೆ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಬಿಜೆಪಿಯ ಎಲ್ಲಾ ಕಾರ್ಯಕರ್ತರಿಗೆ ಮೆಚ್ಚುಗೆ ಸೂಚಿಸುತ್ತೇನೆ. ಅವರು ಹಗಲಿರುಳೆನ್ನದೇ ಈ ಚುನಾವಣೆಗಾಗಿ ಶ್ರಮ ಹಾಕಿದ್ದಾರೆ.

ನಮ್ಮ ಕಾರ್ಯಕರ್ತರು ಜನತಾ ಜನಾರ್ದನನ ವಿಶ್ವಾಸ ಗಳಿಸಲು ಯಶಸ್ವಿಯಾಗಿದ್ದಾರೆ. ಇದೇ ರೀತಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾಗೂ ಧನ್ಯವಾದ ಹಾಗೂ ಶುಭ ಕೋರುತ್ತೇನೆ. ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿ ಎನ್‌ಡಿಗೆ ಜಯ ತಂದುಕೊಟ್ಟಿದ್ದಾರೆ. ಉತ್ತರ ಪ್ರದೇಶದಲ್ಲಿ ಐದು ವರ್ಷ ಪೂರೈಸಿದ ಸಿಎಂ ಮತ್ತೆ ಆಯ್ಕೆಯಾಗುತ್ತಿರುವುದು ಇದೇ ಮೊದಲ ಉದಾಹರಣೆ. ಇಲ್ಲಿ ಇತಿಹಾಸ ಸೃಷ್ಟಿಯಾಗಿದೆ.
 
ಮೂರು ರಾಜ್ಯ, ಯುಪಿ, ಗೋವಾ ಹಾಗೂ ಮಣಿಪುರದಲ್ಲಿ ಸರ್ಕಾರವಿಲ್ಲದಿದ್ದರೂ ಬಿಜೆಪಿ ಮತದಾನದಲ್ಲಿ ವೃದ್ಧಿಯಾಗಿದೆ. ಗೋವಾದಲ್ಲಿ ಜನರು ಮೂರನೇ ಬಾರಿ  ತಮ್ಮ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ಮೂರನೇ ಅವಧಿಯಲ್ಲಿ ಬಿಜೆಪಿನ ಮೇಲೆ ಇಲ್ಲಿನ ಜನರು ನಂಬಿಕೆ ಇಟ್ಟಿದ್ದಾರೆ. 

Election Result 2022 ಚನಿ to ಧಮಿ, ಪಂಚ ರಾಜ್ಯ ಚುನಾವಣೆಯಲ್ಲಿ ಹಾಲಿ, ಮಾಜಿ ಸಿಎಂಗೆ ಸೋಲಿನ ಕಹಿ!

ಉತ್ತರಾಖಂಡದಲ್ಲೂ ಎರಡನೇ ಅವಧಿಗೆ ಬಿಜೆಪಿಯನ್ನು ಆಯ್ಕೆ ಮಾಡಿದ್ದಾರೆ.  ಬಿಜೆಪಿಗೆ ಇಂದು ನಾಲ್ಕೂ ದಿಕ್ಕಿನಿಂದ ಆಶೀರ್ವಾದ ಸಿಕ್ಕಿದೆ. ಒಂದು ಗುಡ್ಡಗಾಡು ರಾಜ್ಯ, ಮತ್ತೊಂದು ಸಮುದ್ರ ತಟ, ಮತ್ತೊಂದು ಪೂರ್ವ ಗಡಿ, ಮತ್ತೊಂದು ಮಾ ಗಂಗೆ ಇರುವ ನಾಡು ಬಿಜೆಪಿ ಪಾಲಾಗಿದೆ. ಬಿಜೆಪಿಯ ನೀತಿ, ನೀಯತ್ತು ಹಾಗೂ ನಿರ್ಣಯದ ಮೇಲೆ ಜನರು ನಂಬಿಕೆ ಇಟ್ಟಿದ್ದಾರೆ.

ಚುನಾವಣಾ ಫಲಿತಾಂಶ ಬಿಜೆಪಿಯ ಆಡಳಿತಕ್ಕೆ ಮತ್ತಷ್ಟು ಬಲ ಕೊಟ್ಟಿದೆ. ಮೊದಲು ಜನರು ತಮ್ಮದೇ ಹಕ್ಕುಗಳಿಗಾಗಿ ಸರ್ಕಾರದ ಬಾಗಿಲು ತಟ್ಟಿ ಸುಸ್ತಾಗುತ್ತಿದ್ದರು. ಹಲವಾರು ಬಾರಿ ಲಂಚ ಕೊಟ್ಟು ಸೌ;ಲಭ್ಯ ಪಡೆದುಕೊಳ್ಳಬೇಕಿತ್ತು. ಬಡವರು ಹೈರಾಣಾಗುತ್ತಿದ್ದರು. ಆದರೆ ಇಂದು ಬಡವರಿಗೆ ತಮ್ಮ ಹಕ್ಕು ಸಿಗುತ್ತಿದೆ. ಯಾವುದೇ ಸಮಸ್ಯೆ, ಅಡ್ಡಿ ಇಲ್ಲದೇ ಬಿಜೆಪಿ ಆಡಳಿತ ಅವಧಿಯಲ್ಲಿ ಅವರಿಗೆ ಇದು ಸಿಗುತ್ತಿದೆ.

ಬಿಜೆಪಿ ಪ್ರತಿಯೊಬ್ಬ ಬಡವನಿಗೆ ಸರ್ಕಾರದ ಸೌಲಭ್ಯಗಳು ಸಿಗುವುದನ್ನು ಖಚಿತಪಡಿಸುತ್ತದೆ. ಬಡವರಿಗೆ ಅವರ ಹಕ್ಕು ಸಿಗುವವರೆಗೆ ನಾನು ಸುಮ್ಮನೆ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ.

ಎರಡು ದಶಕಗಳಿಗೂ ಹೆಚ್ಚು ಕಾಲ ಸರ್ಕಾರದ ಮುಖ್ಯಸ್ಥನಾಗಿ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸರ್ಕಾರ, ಆಡಳಿತದಲ್ಲಿ ಎಷ್ಟು ಸಮಸ್ಯೆ ಇರುತ್ತದೆ ಎಂದು ನನಗೆ ಗೊತ್ತಿದೆ. ಹೀಗಿದ್ದರೂ ನಾನು ತೆಗೆದುಕೊಂಡ ಧೈರ್ಯ ಬಹುಶಃ ಯಾರೂ ತೆಗೆದುಕೊಂಡಿರಲಿಲಕ್ಕಿಲ್ಲ. ನಾನು ಈ ಬಗ್ಗೆ ಸ್ವಾತಂತ್ರ್ಯ ದಿನದಂದು ಉಲ್ಲೇಖಿಸಿದ್ದೆ. ನಾನಂದು ಬಿಜೆಪಿಗೆ ಎಲ್ಲೆಲ್ಲಿ ಸೇವೆ ಮಾಡುವ ಅವಕಾಶ ಸಿಗುತ್ತದೋ ಅಲ್ಲೆಲ್ಲಾ ನಮ್ಮ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದೆ. ಬಡವರ ಬಗ್ಗೆ ಕಾಳಜಿ ಇದ್ದರೆ ಇಂತಹ ನಿರ್ಧಾರ ತೆಗೆದುಕೊಳ್ಳಿಲು ಭಲ ಸಿಗುತ್ತದೆ. ಪ್ರತಿ ಬಡವರನ್ನು ತಲುಪುವ ನಿರ್ಧಾರವೇ ಇದಕ್ಕೆ ಕಾರಣ.

ಪಂಜಾಬ್‌ನಲ್ಲಿ ಆಪ್ ಕ್ಲೀನ್ ಸ್ವೀಪ್: ವಿಜಯೋತ್ಸವದಲ್ಲಿ ಕೇಜ್ರಿ ಆಡಿದ ಮಾತಿನ ಸತ್ಯಾಸತ್ಯತೆ ಏನು?

ಇಂದು ನಾನು ನಮ್ಮ ದೇಶದ ತಾಯಿ, ಸಹೀದರಿಯರಿಗರೆ ವಿಧಶೇಷವಾಗಿ ನಮಿಸುತ್ತೇಢನೆ. ಈ ಚುನಾವಣೆಯಲ್ಲಿ ಅವರ ಕೊಡುಗೆ ಪ್ರಮುಖ. ಬಿಜೆಪಿಗೆ ಇವರು ಇಷ್ಟು ಪ್ರೀತಿ, ಆಶೀರ್ವಾದ ಕೊಟ್ಟಿರುವುದು ನಮ್ಮ ಸೌಭಾಗ್ಯ. ಎಲ್ಲೆಲ್ಲಿ ಮಹಿಳೆಯರು ಪುರುಷರು ಪುರುಷರಿಗಿಂತ ಹೆಚ್ಚು ಮತ ಹಾಕಿದ್ದಾರೋ ಅಲ್ಲಲ್ಲಿ ಬಿಜೆಪಿಗೆ ಭರ್ಜರಿ ಜಯ ಸಿಕ್ಕಿದೆ. ನಮ್ಮ ಈ ಸ್ತ್ರೀ ಶಕ್ತಿ ಬಿಜೆಪಿಯ ಗೆಲುವಿನ ಸಾರಥಿಗಗಳಾಗಿದ್ದಾರೆ. 

ನಾನು ಗುಜರಾತ್‌ನಲ್ಲಿದ್ದಾಗ ಅನೇಕರು ಮೋದೀಜಿ ನಿಮಗೆ ನಿಮ್ಮ ಬಗ್ಗೆ ಕಾಳಜಿ ಯಾಕಿಲ್ಲ ಎಂದು ಪ್ರಶ್ನಿಸುತ್ತಿದ್ದೆ. ಆಗ ನಾನು ಕೋಟಿ ಕೋಟಿ ತಾಯಂದಿರ, ಸ್ತ್ರೀಯರ ಸುರಕ್ಷೆ ಸಿಕ್ಕಿದೆ ಎನ್ನುತ್ತಿದ್ದೆ. ಕೋಟ್ಯಾನುಗಟ್ಟಲೇ ದೇಶದ ಹೆಣ್ಮಕ್ಕಳು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ. ನಮ್ಮ ಸರ್ಕಾರ ಅವರ ಎಲ್ಲಾ ಗತ್ಯಗಳನ್ನು ಪೂರೈಸುತ್ತದೆ ಎಂಬ ನಂಬಿಕೆ ಇದೆ.

ದೇಶದ ಅಭಿವೃದ್ಧಿಗೆ ಹಳೆಯ ವಿಚಾರಗಳನ್ನು ಬದಿಗಿಟ್ಟು ಹೊಸದಾಗಿ ಯೋಚನೆ ಮಾಡಿ. ಜ್ಞಾನಿಗಳು ಯುಪಿ ಜನತೆಯನ್ನು ಜಾತಿ ವಿಚಾರದಲ್ಲಿ ನೋಡುತ್ತಿದ್ದರು. ಹೀಗೆ ಮಾಡಿ ಅವರು ಆ ಜನರ, ನಾಗರಿಕರ ಹಾಗೂ ಇಡೀ ಉತ್ತರ ಪ್ರದೇಶಕ್ಕೆ ಅವಮಾನಿಸುತ್ತಿದ್ದರು. ಅನೇಕ ಮಂದಿ ಇಲ್ಲಿ ಜಾತಿಯೇ ನಡೆಯುವುದು ಎಂದು ಅವಮಾನಿಸುತ್ತಿದ್ದರು.

ಆದರೆ ಯುಪಿ ಜನತೆ ಕಳೆದ ಎರಡೂ ವಿಧಾನಸಭಾ ಚುನಾವಣೆಯಲ್ಲಿ ಪ್ರತೀ ಬಾರಿ ಇಲ್ಲಿ ಕೇವಲ ಅಭಿವೃದ್ಧಿ, ವಿಕಾಸದ ರಾಜಕೀಯಕ್ಕೆ ಮತ ಕೊಟ್ಟಿದ್ದಾರೆ. ಇಲ್ಲಿನ ಜನತೆ ಜಾತಿ ವಿಚಾರದಲ್ಲಿ ಒಡಕು ಮುಡಿಸುವವರಿಗೆ ಬಹಳ ದೊಡ್ಡ ಪಾಠ ಕಲಿಸಿದ್ದಾರೆ. ಜಾತಿ ದೇಶವನ್ನು ಒಗ್ಗೂಡಿಸಲು ಇರಬೇಕು, ಒಡೆಯಲು ಅಲ್ಲ ಎಂದು ಅವರು ಪಾಠ ಕಲಿಸಿದ್ದಾರೆ.

ನಾನಿಂದು ಪಂಜಾಬ್ ಬಿಜೆಪಿ ಕಾರ್ಯಕರ್ತರಿಗೂ ವಿಶೇಷವಾಗಿ ಪ್ರಶಂಸಿಸುತ್ತೇನೆ. ಅವರು ಬಹಳ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸಿ ಬಿಜೆಪಿ ಧ್ವಜ ನೆಟ್ಟಿದ್ದಾರೆ. ಮುಂದಿನ ವರ್ಷಗಳಲ್ಲಿ ಪಂಜಾಬ್‌ನಲ್ಲೂ ಬಿಜೆಪಿ ಶಕ್ತಿಯಾಗಿ ಮೇಲೆ ಬರುವುದನ್ನು ನಾನಿಂದು ನೋಡಬಲ್ಲೆ. ಗಡಿ ರಾಜ್ಯವಾದ ಪಂಜಾಬ್‌ನಲ್ಲಿ ಮುಂದೆಯೂ ಬಿಜರೆಪಿ ಸೇವೆ ನೀಡಲಿದೆ. ಮುಂದಿನ ಐದು ವರ್ಷದಲ್ಲಿ ಬಿಜೆಪಿ ಪ್ರತೀ ಕಾರ್ಯಕರ್ತ ಶ್ರಮಿಸುತ್ತಾನೆಂಬ ವಿಶ್ವಾಸ ಪಂಜಾಬ್ ಜನತೆಗೆ ನಿಡುತ್ತೇನೆ.

UP Elections: ಯೋಗಿ ಸಂಪುಟ ಬಿಟ್ಟು ಎಸ್‌ಪಿಗೆ ಸೇರಿದ್ದ ಸ್ವಾಮಿಗೆ ಹೀನಾಯ ಸೋಲು!

ಇಡೀ ವಿಶ್ವವೇ ಶತಕದ ಮಹಾಮಾರಿ ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಚುನಾವಣೆ ನಡೆದಿದೆ. ಇಡೀ ವಿಶ್ವವೇ ಕಳೆದ ನೂರು ವರ್ಷದಲ್ಲಿ ಇಂತಹ ಸಂಕಟ ಎದುರಿಸಿರಲಿಲ್ಲ. ಸಾಲದೆಂಬಂತೆ ಉಕ್ರೇನ್ ಯುದ್ಧವೂ ಇದಕ್ಕೆ ಸೇರಿತು. ಈ ಸವಾಲುಗಳನ್ನು ಎದುರಿಸಲು ಭಾರತ ಇಟ್ಟ ಹೆಜ್ಜೆ, ತೆಗೆದುಕೊಂಡ ನಿರ್ಧಾರ, ಬಡವರ ಅಭಿವೃದ್ಧಿಗೆ ತೆಗೆದುಕೊಮಡ ನಿರ್ಧಾರ ಎಲ್ಲವೂ ಭಾರತವನ್ನು ಮುಂದುವರೆಯಲು ಶಕ್ತಿ ತುಂಬಿತು. ನಮ್ಮ ನೀತಿ ಭೂಮಿಗೆ ಸಂಬಂಧಿಸಿದ್ದು ಹೀಗಾಗಿ ನಾವು ಮುಂದುವರೆದೆವು. ನಿಷ್ಠೆ ನಮ್ಮಲ್ಲಿತ್ತು. ಎಲ್ಲೆಲ್ಲಿ ಡಬಲ್ ಇಂಜಿನ್ ಸರ್ಕಾರವಿತ್ತೋ ಅಲ್ಲಲ್ಲಿ ಜನರ ಡಬಲ್ ಕಾಳಜಿ ವಹಿಸಲಾಯ್ತು. ಡಬಲ್ ಅಭಿವೃದ್ಧಿಯಾಯ್ತು. 

ಯುದ್ಧ ಬೇರೆ ದೇಶದಲ್ಲಿ ನಡೆಯುತ್ತಿದ್ದರೂ ನಮ್ಮ ಜನರು, ವಿದ್ಯಾರ್ಥಿಗಳು ಅಲ್ಲಿದ್ದಾರೆ. ನಾವು ವಿಭಿನ್ನವಾಗಿ ಆ ದೇಶಗಳೊಂದಿಗೆ ಸಂಬಂಧ ಹೊಂದಿದ್ದೇವೆ. ನಾವು ಆಮದು ಮಾಡಿಕೊಳ್ಳುವ ಕಲ್ಲಿದ್ದಲು, ತೈಲ ಹೀಗೆ ಎಲ್ಲವೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಲ್ಪನೆಗೂ ಮೀರಿ ಏರಿಕೆಯಾಗುತ್ತದೆ. ಯುದ್ಧದಿಂದಾಗಿ ಹಣದುಬ್ಬರ ಕಂಡು ಬರುತ್ತದೆ. ವಿಶ್ವವೇ ಕಠಿಣ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಕಠಿಣ ಸಂದರ್ಭದಲ್ಲಿ ಈ ಬಾರಿಯ ಬಜೆಟ್ ಮೇಲೆ ಕಣ್ಣು ಹಾಯಿಸಿದರೆ ಬಾರತ ಆತ್ಮನಿರ್ಭರದಡಿ ಮುಂದುವರೆಯುತ್ತಿದೆ. ಇದಲಕ್ಕೆ ಬಜೆಟ್ ಮತ್ತಷ್ಟು ಬಲ ತುಂಬಿದೆ.

ವಿಶ್ವದೆಲ್ಲೆಡೆ ನಿರ್ಮಾಣದವಾದ ಈ ಪರಿಸರದಿಂದ, ಭಾರತದ ಜನತೆ ಅದರಲ್ಲೂ ವಿಶೇಷವಾಗಿ ಯುಪಿಯಂತಹ ರಾಜ್ಯಗಳು ತಮ್ಮ ದೂರದೃಷ್ಟಿಯ ಪರಿಚಯ ನೀಡಿದೆ. ಭಾರತದ ಮತದಾರರು ಯಾವ ರೀತಿ ಸ್ಥಿರ ಸರ್ಕಾರವನ್ನು ಆಯ್ಕೆ ಮಾಡಿದೆಯೋ ಪ್ರಜಾಪ್ರಭುತ್ವ ಅವರ ರಕ್ತದಲ್ಲಿದೆ ಎಂದು ಸಾಬೀತುಪಡಿಸುತ್ತದೆ.

ಆದರೆ ಇಂದು ಈ ಸಮಯದಲ್ಲಿ ನಾನು ದೇಶದೆದುರು ನನ್ನ ಕೆಲ ಕಾಳಜಿಯನ್ನು ಮುಂದಿಡುತ್ತೇನೆ. ನಾಗರಿಕರು ಜವಾಬ್ದಾಯಿಂದ ತಮ್ಮ ಕಾರ್ಯ ನಿರ್ವಹಿಸಬೇಕು. ದೇಶದ ಸಮಾನ್ಯ ನಾಗರಿಕ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ನಿರಂತರ ರಾಜಕೀಯ ಮಾಡುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡಲು ಯತ್ನಿಸಿದರು. ಲಸಿಕೆ ವಿಚಾರವಾಗಿ ಇಡೀ ವಿಶ್ವವೇ ಭೇಷ್ ಎನ್ನುತ್ತಿರುವಾಗ ಅವರು ಟೀಕಿಸಿದರು. 

ಮತ್ತೆ ಕೇಸರಿಯಾದ ಉತ್ತರ... ಸಿಎಂ ಯೋಗಿ ವೇಷ ಧರಿಸಿದ ಪುಟಾಣಿ...

ನಮ್ಮ ವಿದ್ಯಾರ್ಥಿಗಳು ಅಲ್ಲಿ ಸಿಕ್ಕಾಕೊಂಡಾಗ ದೇಶದ ಮನೋಬಲ ಕುಸಿಯುವಂತೆ ಮಾಡಿದರು. ಅವರ ಮಾತುಗಳು ವಿದ್ಯಾರ್ಥಿಗಳಲ್ಲಿ ಅಸುರಕ್ಷತೆ ಭಾವ ಮೂಡಿಸಿತು, ಕುಟುಂಬದವರ ಚಿಂತೆ ಹೆಚ್ಚಿಸಿತು. ಅಲ್ಲದೇ ಆಪರೇಷನ್ ಗಂಗಾವನ್ನೂ ಟೀಕಿಸಲು ಹಿಂದೆ ಸರಿಯಲಿಲ್ಲ. 

ಪ್ರತಿ ಯೋಜನೆ, ಕಾರ್ಯ, ಕ್ಷೇತ್ರವಾರು, ಜಾತಿವಾರು ಬಣ್ಣ ನೀಡುವ ಯತ್ನ ಭಾರತದ ಯಜ್ವಲ ಭವಿಷ್ಯಕ್ಕೆ ಚಿಂತೆಗೀಡು ಮಾಡುವ ವಿಚಾರ

ಈ ಚುನಾವಣೆಯಲ್ಲಿ ನಾನು ನಿರಂತರವಾಗಿ ಅಭಿವೃದ್ಧಿಯ ಮಾತನಾಡಿದೆ. ಬಿಜೆಪಿ ದೂರದೃಷ್ಟಿ ನಾನು ಜನರ ಮುಂದಿಟ್ಟಿದೆ. ಹೀಗಿದ್ದರೂ ಕುಟುಂಬ ರಾಜಕಾರಣದ ಬಗ್ಗೆ ಆತಂಕ ವ್ಯಲ್ತಪಡಿಸಿದ್ದೆ. ನನಗೆ ಒಂದಯ ಕುಟುಂಬದ ಮೇಲೆ ಕೋಪ ಇಲ್ಲ ಆದರೆ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ಇದೆ. ಹೇಗೆ ಈ ಕುಟುಂಬ ರಾಜಕಾರಣ ಅವನತಿಯತ್ತ ಕೊಂಡೊಯ್ಯುತ್ತದೆ ಎಂದೂ ಹೇಲಿದೆ. ಜನರು ಇದನ್ನು ಅರ್ಥೈಸಿಕೊಂಡು ಮತ ಚಲಾಯಿಸಿದ್ದಾರೆ.

ಭಾರತದಂತಹ ಪ್ರಜಾಪ್ರಭುತ್ವದಲ್ಲಿ  ಒಂದಲ್ಲ ಒಂದು ದಿನ ಭಾರತದಲ್ಲಿ ಕುಟುಂಬ ರಾಜಕಾರಣವನ್ನು ದೇಶದ ಜನರು ಕೊನೆಗೊಳಿಸುತ್ತಾರೆ. ಇದನ್ನು ಬರೆದಿದೆ. ಈ ಚುನಾವಣೆಯಲ್ಲಿ ದಸೇಶದ ಜನರು ಜಾಗೃತರಾಗಿ ಮತ ಚಲಾಯಿಸಿದ್ದಾರೆ. 

ಭ್ರಷ್ಟಾಚಾರ ವಿರುದ್ಧ ಕಾರ್ಯಾಚರಣೆ ನಿಲ್ಲಿಸುವ ಹುನ್ನಾರವೂ ನಡೆದಿದೆ. ಭ್ರಷ್ಟಾಚಾರ ನಡೆಸುವವರಿಗೆ ತಕ್ಕ ಶಿಕ್ಷೆಯಾಗಬೇಕು. ಭ್ರಷ್ಟಾಚಾರಿಗಳ ವಿರುದ್ಧ ನಮ್ಮ ದೇಶದ ಜಬರಲ್ಲಿ ಬಹಳ ಕೋಪ ಇರುತ್ತದೆ. ಆದರೆ ಅನೇಕ ಮಂದಿ ದೇಶ ಕೊಳ್ಳೆ ಹೊಡೆಯುವ ಯತ್ನ ಮಾಡುತ್ತಾರೆ. ಆದರೆ ನಮ್ಮ ಸರ್ಕಾರ ಇವುಗಳಿಂದ ಮುಕ್ತವಾಗಿರುತ್ತದೆ ಎಂಬ ಭರವಸೆ ನೀಡಿ ಅಧಿಕಾರಕ್ಕೇರಿದೆವು. ನಾವು ಇಂದು ಕೊಟ್ಟ ಬರವಸೆಯಂತೆ ನಡೆದುಕೊಂಡಿದ್ದೇವೆ. ಇಂದು ಭ್ರಷ್ಟಾಚಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ನಾವು ಕೊಟ್ಟ ಭರವಸೆ ಉಳಿಸುತ್ತಿದ್ದೇವೆ.

ಸ್ವತಂತ್ರ ಸಂಸ್ಥೆಗಳು ಕಾರ್ಯಾಚರಣೆ ನಡೆಸಿದರೆ ಭ್ರಷ್ಟಚಾರಿಗಳು ಈ ಸಂಸ್ಥೆಗಳ ಹೆಸರನ್ನೇ ಕೆಡಿಸುತ್ತಿವೆ. ಈ ಸಂಸ್ಥೆಗಳ ಮೇಲೆ ಒತ್ತಡ ಹೇರುತ್ತಿವೆ. ಇವರಿಗೆ ದೇಶದ ಕಾನೂನು ವ್ಯವಸ್ಥೆ ಮೇಲೂ ನಂಬಿಕೆ ಇಲ್ಲ. ಯುಪಿ ಜನರ ಪ್ರೀತಿ ಹಾಗೂ ಆಶೀರ್ವಾದದಿಂದ ನಾನು ಯುಪಿಗನಾಗಿದ್ದೇನೆ,. ನನ್ನ ಸಂಸದೀಯ ಕ್ಷೇತ್ರ ಬನಾರಸ್ ಇದೂ ಒಂದು ಕಾರಣ. ಜಾತಿ ರಾಜಕಾರಣದಿಣದ ದೂರವಿದ್ದು ಅಭಿವೃದ್ಧಿಗೆ ಒತ್ತು ನೀಡಲು ನಾವೆಲ್ಲರೂ ಯತ್ನಿಸಬೇಕು. ಯುಪಿ ನಮಗೆ ಈ ಪಾಠ ಹೇಳಿಕೊಟ್ಟಿದೆ.

ಇದೇ ವೇಳೆ ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಸೇರಿದಂತೆ ಹಲವು ಘಟಾನುಘಟಿ ನಾಯಕರು ವೇದಿಕೆ ಮೇಲಿದ್ದರು. 

ಉತ್ತರ ಪ್ರದೇಶದ ಫಲಿತಾಂಶವೇನು?

403 ವಿಧಾನಸಭಾ ಕ್ಷೇತ್ರಗಳಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ ಬರೋಬ್ಬರಿ 270 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನು ಭಾರೀ ಸ್ಪರ್ಧೆಯೊಡ್ಡಿದ ಸಮಾಜವಾದಿ ಪಕ್ಷ 128 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ರಾಜ್ಯದ ಎರಡನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಈ ಹಿಂದೆ ಯುಪಿಯ ಪ್ರಮುಖ ಪಕ್ಷಗಳಾಗಿದ್ದ, ಸರ್ಕಾರ ರಚಿಸಿ ಅಧಿಕಾರ ನಡೆಸಿ ರಾರಾಜಿಸಿದ್ದ ಕಾಂಗ್ರೆಸ್ 02 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಬಿಎಸ್‌ಪಿ 01 ಸ್ಥಾನ ಗಳಿಸಿದೆ. ಈ ಮೂಲಕ ಅತೀ ಕಳಪೆ ಪ್ರದರ್ಶನ ನೀಡಿದೆ.

Follow Us:
Download App:
  • android
  • ios