Election Result 2022 ಭಗವಂತನ ಇಚ್ಛೆ ತಿಳಿಸಿದ ಮಾನ್, ಪ್ರಮಾಣವಚನ ರಾಜಭವನದಲ್ಲಿ ಬೇಡ, ಹಾಗಿದ್ರೆ ಮತ್ತೆಲ್ಲಿ..!
ರಾಜಭನವದಲ್ಲಿ ನಡೆಯೋದಿಲ್ಲ ಪ್ರಮಾಣವಚನ
ಸ್ವಾತಂತ್ರ್ಯ ಸೇನಾನಿ ಭಗತ್ ಸಿಂಗ್ ಹುಟ್ಟೂರಿನಲ್ಲಿ ನಡೆಯಲಿದೆ ಕಾರ್ಯಕ್ರಮ
ಸರ್ಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿ ಚಿತ್ರ ಕಡ್ಡಾಯವಿಲ್ಲ
ಚಂಡೀಗಢ (ಮಾ.10): ಪಂಜಾಬ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ (Punjab Chief Minister elect Bhagwant Mann), ತಮ್ಮ ಮೊಟ್ಟಮೊದಲ ವಿಜಯೋತ್ಸವ ಭಾಷಣದಲ್ಲಿಯೇ (Victory Speech )ಅದ್ಭುತ ನಿರ್ಧಾರ ಮಾಡುವ ಮೂಲಕ ಜನರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಗೂ ಮುನ್ನ ಪಕ್ಷದ ಮುಖಂಡ ಅರವಿಂದ್ ಕೇಜ್ರಿವಾಲ್ (Arvind Kejiriwal) ಖಲೀಸ್ತಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಅವರೊಬ್ಬ ಭಯೋತ್ಪಾದಕ ಸ್ನೇಹಿ ಎನ್ನುವ ಆರೋಪಗಳನ್ನು ಆಪ್ ಎದುರಿಸಿತ್ತು.
ಆದರೆ, ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (Aam Admni Party) ಕ್ಲೀನ್ ಸ್ವೀಪ್ ಮಾಡಿದ ಬೆನ್ನಲ್ಲಿಯೇ ಧುರಿಯಲ್ಲಿ ವಿಜಯೋತ್ಸವ ಭಾಷಣ ಮಾಡಿದ ಭಗವಂತ್ ಮಾನ್, ಪ್ರಮಾಣವಚನ ಸಮಾರಂಭವು ಪಂಜಾಬ್ ನ ರಾಜಭವನದ ಬದಲಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮವಾದ ನವಾನ್‌ಶಹರ್ (Nawanshahr ) ಜಿಲ್ಲೆಯ ಖಟ್ಕರ್‌ಕಲನ್‌ನಲ್ಲಿ (Khatkarkalan ) ನಡೆಯಲಿದೆ ಎಂದು ಘೋಷಣೆ ಮಾಡಿದರು.
ಭಗವಂತ್ ಮಾನ್ ಗುರುವಾರ ಈ ಘೋಷಣೆ ಮಾಡಿದ ಬೆನ್ನಲ್ಲಿಯೇ ಪ್ರೇಕ್ಷಕರಿಂದ ಹರ್ಷೋದ್ಘಾರ ಮಾಡಿದರು. ಅದರೊಂದಿಗೆ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ತಾವು ಭಯೋತ್ಪಾದಕ ಸ್ನೇಹಿ ಪಕ್ಷವಲ್ಲ ಎನ್ನುವ ಉತ್ತರವನ್ನು ಮಾರ್ಮಿಕವಾಗಿ ನೀಡಿದ್ದಾರೆ. ಇದೇ ವೇಳೆ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ವಾಡಿಕೆಯಂತೆ ಮುಖ್ಯಮಂತ್ರಿಗಳ ಫೋಟೋ ಇರುವುದಿಲ್ಲ ಎಂದು ಘೋಷಿಸಿದರು.
"ಪ್ರಮಾಣ ಸ್ವೀಕಾರ ಸಮಾರಂಭವು ರಾಜಭವನದಲ್ಲಿ ನಡೆಯುವುದಿಲ್ಲ, ಆದರೆ ಖಟ್ಕರ್‌ಕಾಲನ್‌ನಲ್ಲಿ ನಡೆಯಲಿದೆ. ದಿನಾಂಕವನ್ನು ನಂತರ ಪ್ರಕಟಿಸಲಾಗುವುದು" ಎಂದು ಅವರು ಧುರಿಯಲ್ಲಿ ತಮ್ಮ ವಿಜಯ ಭಾಷಣದಲ್ಲಿ ಹೇಳಿದರು, ಇದೇ ಕ್ಷೇತ್ರದಲ್ಲಿ ಅವರು 58,000 ಕ್ಕೂ ಹೆಚ್ಚು ಮತಗಳಿಂದ ಜಯಗಳಿಸಿದ್ದಾರೆ. ಅದರೊಂದಿಗೆ "ಯಾವುದೇ ಸರ್ಕಾರಿ ಕಚೇರಿಯಲ್ಲಿ ( government offices ) ಮುಖ್ಯಮಂತ್ರಿಯವರ ಚಿತ್ರವಿರುವುದಿಲ್ಲ, ಬದಲಿಗೆ ಭಗತ್ ಸಿಂಗ್ ( Bhagat Singh ) ಮತ್ತು ಬಿಆರ್ ಅಂಬೇಡ್ಕರ್ ( BR Ambedkar ) ಅವರ ಚಿತ್ರಗಳು ಇರುತ್ತವೆ" ಎಂದು ಮಾನ್ ಘೋಷಣೆ ಮಾಡಿದರು.
ಆಮ್ ಆದ್ಮಿ ಪಕ್ಷದ ಗೆಲುವಿನ ಪ್ರಮಾಣವನ್ನು ಹೇಳಿದ ಅವರು, ಸೋತಿರುವ ಸೋಲು ಕಂಡಿರುವ ಪಂಜಾಬ್ ನ ದೊಡ್ಡ ನಾಯಕರ ಹೆಸರುಗಳನ್ನು ಹೇಳಿದರು. "ಬಡೆ (ಪ್ರಕಾಶ್ ಸಿಂಗ್) ಬಾದಲ್ ಸಾಹಿಬ್ ಸೋತಿದ್ದಾರೆ, ಸುಖಬೀರ್ (ಬಾದಲ್) ಜಲಾಲಾಬಾದ್‌ನಿಂದ ಸೋತಿದ್ದಾರೆ, ಕ್ಯಾಪ್ಟನ್ ಪಟಿಯಾಲದಿಂದ ಸೋತಿದ್ದಾರೆ, ಸಿಧು ಮತ್ತು ಮಜಿಥಿಯಾ ಕೂಡ ಸೋಲುತ್ತಿದ್ದಾರೆ, (ಚರಂಜಿತ್ ಸಿಂಗ್) ಚನ್ನಿ ಎರಡೂ ಸ್ಥಾನಗಳಲ್ಲಿ ಸೋತಿದ್ದಾರೆ.
Election Result 2022 ಮಾಜಿ ಕಾಮಿಡಿಯನ್ ಭಗವಂತ್ ಸಿಂಗ್ ಮಾನ್ ಪಂಜಾಬ್ ನೂತನ ಸಿಎಂ!
ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಆದ್ಯತೆಯ ಕ್ಷೇತ್ರಗಳೆಂದರೆ, ಶಾಲೆಗಳು, ಆರೋಗ್ಯ, ಉದ್ಯಮ, ಕೃಷಿಯನ್ನು ಲಾಭದಾಯಕವಾಗಿಸುವುದು, ಮಹಿಳೆಯರ ಸುರಕ್ಷತೆ ಮತ್ತು ಕ್ರೀಡಾ ಮೂಲಸೌಕರ್ಯಗಳನ್ನು ಸುಧಾರಿಸುವುದು ಎಂದರು. "ಒಂದು ತಿಂಗಳೊಳಗೆ ಪಂಜಾಬ್‌ನಲ್ಲಿ ಬದಲಾವಣೆಯನ್ನು ನೀವು ಕಾಣಲು ಪ್ರಾರಂಭಿಸುತ್ತೀರಿ" ಎಂದು ಇದೇ ವೇಳೆ ಭರವಸೆ ನೀಡಿದರು.
Election Result ಕಾಮಿಡಿಯನ್‌ಗೆ ಸಿಎಂ ಪಟ್ಟ, ಕಾಮಿಡಿ ಶೋ ಜಡ್ಜ್‌ಗೆ ಸೋಲಿನ ಆಘಾತ!
ಒಗ್ಗಟ್ಟಿನಿಂದ ಕೆಲಸ ಮಾಡಲು ಜನರಲ್ಲಿ ಮನವಿ ಮಾಡಿದ ಅವರು, ಎಎಪಿಗೆ ಮತ ಹಾಕದವರು ಆತಂಕಪಡುವ ಅಗತ್ಯವಿಲ್ಲ, ಏಕೆಂದರೆ ಸರ್ಕಾರವು ಸಮಾಜದ ಎಲ್ಲಾ ವರ್ಗಗಳಿಗಾಗಿ ಕೆಲಸ ಮಾಡುತ್ತದೆ. ಗುರುವಾರದ ಮೊದಲ ಆರು ಗಂಟೆಗಳ ಮತ ಎಣಿಕೆಯ ನಂತರ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ 117 ವಿಧಾನಸಭಾ ಸ್ಥಾನಗಳ ಪೈಕಿ 91 ರಲ್ಲಿ ಮುನ್ನಡೆ ಸಾಧಿಸುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ರಾಜ್ಯದ ಜನತೆಗೆ ಪಂಜಾಬ್ ಕ್ರಾಂತಿಯ ಬಗ್ಗೆ ಅಭಿನಂದಿಸಿದ್ದಾರೆ.