ಲಂಡನ್[ಜು.10]: ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರಿಂದ ಪಂದ್ಯ ಮೀಸಲು ದಿನವಾದ ಇಂದಿಗೆ ಮುಂದೂಡಲ್ಪಟ್ಟಿದೆ.  ಮೊದಲು ಬ್ಯಾಟ್ ಮಾಡಿರುವ ಕಿವೀಸ್ 46.1 ಓವರ್’ಗಳಲ್ಲಿ 5 ವಿಕೆಟ್ ಕಳೆದುಕೊಂಡು 211 ರನ್ ಬಾರಿಸಿದೆ. 

ಇಂಡೋ-ಕಿವೀಸ್ ಸೆಮಿಫೈನಲ್; ಮಳೆಯಿಂದ ಪಂದ್ಯ ಜು.10ಕ್ಕೆ ಮುಂದೂಡಿಕೆ!

ಇದೀಗ ಪಂದ ಮೀಸಲು ದಿನಕ್ಕೆ ಮುಂದೂಲ್ಪಟ್ಟಿರುವುದರಿಂದ ಭಾರತಕ್ಕೆ ಲಾಭವೇನು ಎನ್ನುವ ಕುತೂಹಲ ಜೋರಾಗಿದೆ. ಇದಕ್ಕೆ ಉತ್ತರವನ್ನು ಸುವರ್ಣನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

ಇಂಡೋ-ಕಿವೀಸ್ ಸೆಮಿಫೈನಲ್: ಓವರ್ ಕಡಿತಗೊಂಡ್ರೆ ಭಾರತದ ಟಾರ್ಗೆಟ್ ವಿವರ!
ಒಂದು ವೇಳೆ ಮಂಗಳವಾರವೇ ಪಂದ್ಯ ಆರಂಭಗೊಂಡು ಭಾರತಕ್ಕೆ 20 ಓವರ್ ಗಳ ಇನಿಂಗ್ಸ್ ಸಿಕ್ಕಿದ್ದರೆ ಡೆಕ್ವರ್ಥ್ ಲೂಯಿಸ್ ನಿಯಮದಂತೆ ಗೆಲ್ಲಲು 148 ರನ್ ಗಳಿಸಬೇಕಿತ್ತು. ನಿರಂತರವಾಗಿ ಮಳೆ ಸುರಿದ್ದಿದ್ದರಿಂದ ಪಿಚ್ ಮತ್ತು ಔಟ್ ಫೀಲ್ಡ್’ನಲ್ಲಿ ತೇವಾಂಶವಿದ್ದ ಕಾರಣ, ಭಾರತೀಯ ಬ್ಯಾಟ್ಸ್’ಮನ್’ಗಳಿಗೆ ಬ್ಯಾಟ್ ಮಾಡಲು ಕಷ್ಟವಾಗುತ್ತಿತ್ತು. ನ್ಯೂಜಿಲೆಂಡ್ ಪ್ರಚಂಡ ವೇಗಿಗಳು ಬೌನ್ಸಿ ಪಿಚ್’ನಲ್ಲಿ ವಾತಾವರಣದ ಲಾಭ ಪಡೆದು ಟೀಂ ಇಂಡಿಯಾ ಬ್ಯಾಟ್ಸ್’ಮನ್ ಗಳನ್ನು ಕಾಡುವ ಸಾಧ್ಯತೆಯಿತ್ತು. ಹೀಗಾಗಿ ಪಂದ್ಯ ಮೀಸಲು ದಿನಕ್ಕೆ ಮುಂದೂಡಲ್ಪಿಟ್ಟಿರುವುದು ಕೊಹ್ಲಿ ಪಡೆಗೆ ಲಾಭವಾಗಲಿದೆ.

ಕೊಹ್ಲಿ ನಾಯಕತ್ವ ಪ್ರಶ್ನಿಸಿದ ಗಂಭೀರ್‌ ವಿರುದ್ಧ ಫ್ಯಾನ್ಸ್ ಗರಂ!

ವಿಶ್ವಕಪ್ ಟೂರ್ನಿಯಲ್ಲಿ ಹಲವು ಲೀಗ್ ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು. ಆದರೆ ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಿಗೆ ಮೀಸಲು ದಿನಗಳನ್ನು ನೀಡಲಾಗಿದೆ. ಒಂದು ವೇಳೆ ಮೀಸಲು ದಿನದಲ್ಲೂ ಮಳೆ ಕಾಡಿದರೆ, ಅಗ್ರಕ್ರಮಾಂಕದಲ್ಲಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಫೈನಲ್ ಪ್ರವೇಶಿಸಲಿವೆ. ಫೈನಲ್ ಮೀಸಲು ದಿನದಲ್ಲೂ ಮಳೆ ಕಾಡಿದರೆ, ಉಭಯ ತಂಡಗಳು ಪ್ರಶಸ್ತಿ ಹಂಚಿಕೊಳ್ಳಲಿವೆ.