ವಿಶ್ವಕಪ್ ಫೈನಲ್ ಗೆಲುವು ನ್ಯಾಯವಲ್ಲ; ಇಂಗ್ಲೆಂಡ್ ನಾಯಕ ವಿಷಾದ!
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದ ಇಂಗ್ಲೆಂಡ್ ಟ್ರೋಫಿ ಗೆದ್ದುಕೊಂಡಿದೆ. ಗರಿಷ್ಠ ಬೌಂಡರಿ ಆಧಾರದಲ್ಲಿ ಗೆಲುವು ನಿರ್ಧರಿಸಿದ ಐಸಿಸಿ ನಿಮಯಕ್ಕೆ ತೀವ್ರ ವಿರೋಧ್ಯ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೌನ ಮುರಿದಿದ್ದಾರೆ.
ಲಂಡನ್(ಜು.20): ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ ಅತೀ ಹೆಚ್ಚು ಬಾರಿ ಚರ್ಚೆಯಾಗಿದೆ. ಸೂಪರ್ ಓವರ್‌ನಲ್ಲೂ ಪಂದ್ಯ ಟೈ ಆಗಿತ್ತು. ಹೀಗಾಗಿ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ಘೋಷಿಸಲಾಗಿತ್ತು. ಇದು ಭಾರಿ ವಿವಾದಕ್ಕೂ ಕಾರಣವಾಗಿದೆ. ಐಸಿಸಿ ನಿಯಮದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು. ಇಷ್ಟೇ ಅಲ್ಲ ಉಭಯ ತಂಡಕ್ಕೆ ಟ್ರೋಫಿ ಹಂಚಬೇಕಿತ್ತು ಅನ್ನೋ ವಾದವೂ ಎದ್ದಿತ್ತು. ಇದೀಗ ವಿಶ್ವಕಪ್ ಫೈನಲ್ ಪಂದ್ಯದ ಗೆಲುವಿನ ಕುರಿತು ಸ್ವತಃ ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಮೌನ ಮುರಿದಿದ್ದಾರೆ.
ಇದನ್ನೂ ಓದಿ: ಓವರ್ ಥ್ರೋನ 4 ರನ್ ಬೇಡ ಎಂದಿದ್ದ ಸ್ಟೋಕ್ಸ್!
ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ಸಮಬಲದ ಪ್ರದರ್ಶನ ನೀಡಿದೆ. ಪ್ರತಿ ಹಂತದಲ್ಲೂ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಸರಿಸಮಾನ ಹೋರಾಟ ನೀಡಿದೆ. ಹೀಗಾಗಿ ಫಲಿತಾಂಶ ನ್ಯಾಯಸಮ್ಮತವಲ್ಲ ಎಂದು ಮಾರ್ಗನ್ ಹೇಳಿದ್ದಾರೆ. ಇದು ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯ, ಗೆಲುವಿಗಾಗಿ ಉಭಯ ತಂಡಗಳು ಅತ್ಯುತ್ತಮ ಹೋರಾಟ ನಡೆಸಿದೆ. ಆದರೆ ರಿಲಸ್ಟ್ ತೃಪ್ತಿ ತಂದಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಸ್ಫೂರ್ತಿ ಕಾಪಾಡಲು ಐಸಿಸಿ ಫೇಲ್?
ಐಸಿಸಿಯ ಓವರ್ ಥ್ರೋ ಹಾಗೂ ಗರಿಷ್ಠ ಬೌಂಡರಿ ಆಧಾರದಲ್ಲಿ ಗೆಲುವು ನಿಯಮಗಳಿಗೆ ಟೀಕೆ ವ್ಯಕ್ತವಾಗಿದೆ. ಕ್ರಿಕೆಟಿಗರೇ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಶೀಘ್ರದಲ್ಲಿ ಐಸಿಸಿ ಟೆಕ್ನಿಕಲ್ ಕಮಿಟಿ ಸಭೆ ಸೇರಲಿದೆ. ಐಸಿಸಿ ನಿಯಮಗಳ ಕುರಿತು ಪರಾಮರ್ಶೆ ನಡೆಸಲಿದೆ.