ಇಂಡೋ-ಕಿವೀಸ್ ಸೆಮಿಫೈನಲ್: ಓವರ್ ಕಡಿತಗೊಂಡ್ರೆ ಭಾರತದ ಟಾರ್ಗೆಟ್ ವಿವರ!
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದೆ. ಓವರ್ ಕಡಿತಗೊಳಿಸಿ ಪಂದ್ಯ ಆರಂಭಗೊಂಡರೆ ಭಾರತದ ಟಾರ್ಗೆಟ್ ವಿವರ ಇಲ್ಲಿದೆ.
ಮ್ಯಾಂಚೆಸ್ಟರ್(ಜು.09): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ಮಳೆಯಿಂದ ತಾತ್ಕಾಲಿಕ ಸ್ಥಗಿತಗೊಂಡಿದೆ. ಬಿಡದೆ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಆರಂಭ ವಿಳಂಬವಾಗೋ ಸಾಧ್ಯತೆ ಹೆಚ್ಚಿದೆ. ಹೀಗಾದಲ್ಲಿ ಓವರ್ ಕಡಿತಗೊಳ್ಳಲಿದೆ. ಒಂದು ವೇಳೆ ಪಂದ್ಯ ಆಯೋಜಿಸಲು ಮಳೆ ಅನುವು ಮಾಡಿಕೊಡದಿದ್ದರೆ, ನಾಳೆ (ಜು.10) ಮೀಸಲು ದಿನಕ್ಕೆ ಮುಂದೂಡಲಾಗುತ್ತೆ.
ಇದನ್ನೂ ಓದಿ: ಭಾರತ -ನ್ಯೂಜಿಲೆಂಡ್ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡ್ಡಿ!
ಮೀಸಲು ದಿನದಲ್ಲಿ ಪಂದ್ಯ ಆರಂಭಗೊಳ್ಳುವುದಾದರೆ 20 ಓವರ್‌ಗಳ ಪಂದ್ಯ ಆಗಿರುತ್ತೆ. ಇಷ್ಟೇ ಅಲ್ಲ ಭಾರತಕ್ಕೆ 148 ರನ್ ಟಾರ್ಗೆಟ್ ಸಿಗುವ ಸಾಧ್ಯತೆ ಇದೆ. ಇಂದು ನ್ಯೂಜಿಲೆಂಡ್‌ಗೆ ಬ್ಯಾಟಿಂಗ್ ಮುಂದುವರಿಸಲು ಅವಕಾಶ ಸಿಗದೆ ಪಂದ್ಯದ ಓವರ್ ಕಡಿತಗೊಂಡರೆ ಟೀಂ ಇಂಡಿಯಾ ಟಾರ್ಗೆಟ್ ವಿವರ ಇಲ್ಲಿದೆ.
ಓವರ್ ಕಡಿತಗೊಂಡರೆ ಭಾರತದ ಟಾರ್ಗೆಟ್
46 ಓವರ್ ಪಂದ್ಯವಾದರೆ 237 ರನ್ ಟಾರ್ಗೆಟ್
40 ಓವರ್ ಪಂದ್ಯವಾದರೆ 223 ರನ್ ಟಾರ್ಗೆಟ್
35 ಓವರ್ ಪಂದ್ಯವಾದರೆ 209 ರನ್ ಟಾರ್ಗೆಟ್
30 ಓವರ್ ಪಂದ್ಯವಾದರೆ 192 ರನ್ ಟಾರ್ಗೆಟ್
25 ಓವರ್ ಪಂದ್ಯವಾದರೆ 172 ರನ್ ಟಾರ್ಗೆಟ್
20 ಓವರ್ ಪಂದ್ಯವಾದರೆ 148 ರನ್ ಟಾರ್ಗೆಟ್