ಮುಂಬೈ(ಜು.09): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ವಿಶ್ವಕಪ್ ಟೂರ್ನಿಯ ವಿಶ್ಲೇಷಣೆ ವೇಳೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾಯಕತ್ವ ಪ್ರಶ್ನಿಸಿದ್ದಾರೆ. ಗಂಭೀರ್ ಹೇಳಿಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: ಪೂನಂ ಹಿಂದಿಕ್ಕಿದ ಶರ್ಲಿನ್, ವಿಶ್ವಕಪ್ ಗೆಲುವಿಗೆ ಎದೆಯಾಳದ ಹಾರೈಕೆ!

ಖಾಸಹಿ ವಾಹಿನಿಯ ವಿಶ್ವಕಪ್ ಚರ್ಚೆಯಲ್ಲಿ ಪಾಲ್ಗೊಂಡ ಗಂಭೀರ್, ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ಕೊಹ್ಲಿ ಯಶಸ್ಸು ಸಾಧಿಸಲು ಕಾರಣ, ಎಂ.ಎಸ್.ಧೋನಿ ಹಾಗೂ ರೋಹಿತ್ ಶರ್ಮಾ. ಬ್ಯಾಟ್ಸ್‌ಮನ್ ಆಗಿ ಕೊಹ್ಲಿ ವಿಶ್ವಕಾಪ್ ಟಾಪ್ 4 ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ನಾಯಕತ್ವದಲ್ಲಿ ಧೋನಿ ಹಾಗೂ ರೋಹಿತ್ ಶರ್ಮಾ, ಕೊಹ್ಲಿಗಿಂತ ಮುಂದಿದ್ದಾರೆ ಎಂದು ಹೇಳಿದರು.

 

ಇದನ್ನೂ ಓದಿ: ಬುಮ್ರಾ ಬೌಲಿಂಗ್ ಶೈಲಿ ಅನುಕರಿಸಿದ ವಿರಾಟ್ ಕೊಹ್ಲಿ!

ಕೊಹ್ಲಿ ಉತ್ತಮ ನಾಯಕನಾಗಿದ್ದರೆ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆಪ್ರಸಸ್ತಿ ಗೆಲ್ಲಿಸಿಕೊಡಬೇಕಿತ್ತು. ಆದರೆ ಕೊಹ್ಲಿಗೆ ಸಾಧ್ಯವಾಗಿಲ್ಲ ಎಂದು ಗಂಭೀರ್ ಚರ್ಚೆಯಲ್ಲಿ ಹೇಳಿದ್ದಾರೆ. ಗಂಭೀರ್ ಹೇಳಿಕೆಗೆ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.