ವೆಲ್ಲಿಂಗ್ಟನ್[ಜು.18]: ವಿಶ್ವಕಪ್ ಕ್ರಿಕೆಟ್ ಫೈನಲ್ ಇತಿಹಾಸದಲ್ಲೇ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದು ಎನಿಸಿದ್ದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಸೂಪರ್ ಓವರ್ ಕೂಡಾ ಟೈ ಆಗಿದ್ದರಿಂದ ಇನ್ನಿಂಗ್ಸ್’ವೊಂದರಲ್ಲಿ ಅತಿ ಹೆಚ್ಚು ಬೌಂಡರಿ ಬಾರಿಸಿದ ಆಧಾರದಲ್ಲಿ ಇಂಗ್ಲೆಂಡ್ ತಂಡವನ್ನು ಚಾಂಪಿಯನ್ ಎಂದು ತೀರ್ಮಾನಿಸಲಾಯಿತು.

ವಿಶ್ವಕಪ್ ಇತಿಹಾಸದಲ್ಲೇ ರೋಚಕ ಪಂದ್ಯ; ಸೂಪರ್ ಓವರ್‌ನಲ್ಲಿ ಇಂಗ್ಲೆಂಡ್ ಚಾಂಪಿಯನ್!

ಇನ್ನು ಸೂಪರ್ ಓವರ್ ವೇಳೆ ನ್ಯೂಜಿಲೆಂಡ್ ಆಲ್ರೌಂಡರ್ ಜೇಮ್ಸ್ ನೀಶಮ್ ಸಿಕ್ಸರ್ ಸಿಡಿಸಿದ ಬೆನ್ನಲ್ಲೇ ಅವರ ಬಾಲ್ಯದ ಕೋಚ್ ಡೇವಿಡ್ ಜೇಮ್ಸ್ ಗೋರ್ಡನ್ ಹೃದಯಾಘಾತದಿಂದ ಕೊನೆಯುಸಿರೆಳೆದ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕ್ರಿಕೆಟ್ ಕಾಶಿ ಎನಿಸಿರುವ ಲಾರ್ಡ್ಸ್ ಮೈದಾನದಲ್ಲಿ ಜುಲೈ 14ರಂದು ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಹಾಗೂ ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 8 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಇಂಗ್ಲೆಂಡ್ ಕೂಡಾ 241 ರನ್ ಬಾರಿಸಿ ಆಲೌಟ್ ಆಗುವುದರೊಂದಿಗೆ ಪಂದ್ಯ ಟೈ ಆಗಿತ್ತು. 

ವಿಶ್ವಕಪ್ 2019: ಅಪರೂಪದ ವಿಶ್ವದಾಖಲೆ ಬರೆದ ಸಾಧಕರಿವರು..!

ಥ್ರಿಲ್ ಹೆಚ್ಚಿಸಿದ ಆ ಸೂಪರ್ ಓವರ್: 

ಸೂಪರ್ ಓವರ್’ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ 15 ರನ್ ಬಾರಿಸಿತ್ತು. ಗುರಿ ಬೆನ್ನತ್ತಿದ ಮಾರ್ಟಿನ್ ಗಪ್ಟಿಲ್ ಹಾಗೂ ಜೇಮ್ಸ್ ನೀಶಮ್ಸ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಜೋಪ್ರಾ ಆರ್ಚರ್ ಹಾಕಿದ ಎರಡನೇ ಎಸೆತವನ್ನು ಸಿಕ್ಸರ್’ಗಟ್ಟುವಲ್ಲಿ ನೀಶಮ್ ಯಶಸ್ವಿಯಾಗಿದ್ದರು. ಇದನ್ನು ನೋಡುತ್ತಿದ್ದಂತೆ ಕೊನೆಯುಸಿರೆಳೆದರು ಎಂದು ಕೋಚ್ ಮಗಳಾದ ಲಿಯೋನಿ ತಿಳಿಸಿದ್ದಾರೆ.

ಕೋಚ್ ನಿಧನಕ್ಕೆ ಜೇಮ್ಸ್ ನೀಶಮ್ ಸಾಮಾಜಿಕ ಜಾಲತಾಣವಾದ ಟ್ವಿಟರ್’ನಲ್ಲಿ ನುಡಿನಮನ ಸಲ್ಲಿಸಿದ್ದಾರೆ. 

ಕೋಚ್ ಡೇವಿಡ್ ಜೇಮ್ಸ್ ಗೋರ್ಡನ್ ಆಲ್ರೌಂಡರ್ ಜೇಮ್ಸ್ ನೀಶಮ್ ಮಾತ್ರವಲ್ಲದೇ, ವೇಗಿ ಲೂಕಿ ಫರ್ಗ್ಯೂಸನ್’ಗೂ ಶಾಲಾ ಹಂತದಲ್ಲಿ ಕೋಚ್ ಆಗಿ ಮಾರ್ಗದರ್ಶನ ಮಾಡಿದ್ದರು.