ವಿಶ್ವಕಪ್ ಟೂರ್ನಿಯ ಕ್ಷಣಕ್ಷಣದ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ

ಲಂಡನ್(ಜು.05): ಐಸಿಸಿ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ಪಾಕಿಸ್ತಾನ ಪ್ರವೇಶಿಸಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲದಿದ್ದರೂ, ಅಂಕಿ ಅಂಶದ ಆಧಾರದಲ್ಲಿ ಅವಕಾಶವಿದೆ. ಶುಕ್ರವಾರ ಬಾಂಗ್ಲಾದೇಶ ವಿರುದ್ಧ ಕಣಕ್ಕಿಳಿಯಲಿರುವ ಪಾಕಿಸ್ತಾನ, ನೆಟ್ ರನ್‌ರೇಟ್ ಆಧಾರದಲ್ಲಿ ಸೆಮೀಸ್ ಗೇರಲು 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಬೇಕಿದೆ. ಅದಕ್ಕೆ ಕೊನೆ ಪಕ್ಷ 308 ರನ್‌ಗಳಿಂದ ಗೆಲ್ಲಲೇಬೇಕಿದೆ.  

ಕಿವೀಸ್ ಮಣಿಸಿದ ಇಂಗ್ಲೆಂಡ್: ಆದ್ರೆ ಟ್ರೋಲ್ ಆಗಿದ್ದು ಮಾತ್ರ ಪಾಕಿಸ್ತಾನ..!

ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ ಕನಿಷ್ಠ 308 ರನ್ ಗಳಿಸಬೇಕು. ಬಳಿಕ ಬಾಂಗ್ಲಾವನ್ನು ಸೊನ್ನೆಗೆ ಆಲೌಟ್ ಮಾಡಬೇಕು. ಇಲ್ಲವೇ 350 ರನ್ ಗಳಿಸಿ, ಬಾಂಗ್ಲಾ ವಿರುದ್ಧ 311 ರನ್‌ಗಳಿಂದ ಗೆಲ್ಲಬೇಕು. ಇನ್ನೊಂದು ಸಾಧ್ಯತೆ ಎಂದರೆ 400ರನ್ ಗಳಿಸಿ, 316 ರನ್‌ಗಳಿಂದ ಗೆಲ್ಲಬೇಕು. ಪ್ರಾಯೋಗಿಕವಾಗಿ ಇದ್ಯಾವುದೂ ಸಾಧ್ಯವಿಲ್ಲ.

ವಿಶ್ವಕಪ್ 2019 ಒಂದೂ ಜಯ ಕಾಣದೆ ಆಫ್ಘನ್ ಗುಡ್ ಬೈ..!

ಬದ್ಧವೈರಿ ಭಾರತ ವಿರುದ್ಧ ಸೋಲುಂಡ ಬಳಿಕ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ಹಾಗೂ ಆಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿತು. ಆದರೆ ಇಂಗ್ಲೆಂಡ್ ಸತತ 2 ಗೆಲುವು ಸಾಧಿಸಿದ್ದರಿಂದ ಅಂಕಪಟ್ಟಿಯಲ್ಲಿ ಪಾಕಿಸ್ತಾನ, 5ನೇ ಸ್ಥಾನದಲ್ಲಿ ಉಳಿಯಬೇಕಾಯಿತು. ಮತ್ತೊಂದೆಡೆ ಬಾಂಗ್ಲಾದೇಶ ಸಹ ಸೆಮೀಸ್ ಕನಸು ಕಾಣುತಿತ್ತು. ಆದರೆ ಭಾರತ ವಿರುದ್ಧ ಸೋಲುತ್ತಿದ್ದಂತೆ ತಂಡದ ಕನಸು ಭಗ್ನಗೊಂಡಿತು. ಪಾಕಿಸ್ತಾನಕ್ಕೆ ಹೋಲಿಸಿದರೆ ಬಲಿಷ್ಠ ತಂಡಗಳ ಎದುರು ಬಾಂಗ್ಲಾದೇಶ ಹೋರಾಟದ ಪ್ರದರ್ಶನ ನೀಡಿದೆ. ಹೀಗಾಗಿ, ಈ ಪಂದ್ಯದಲ್ಲಿ ಬಾಂಗ್ಲಾದೇಶವೇ ಗೆಲುವು ಸಾಧಿಸಿದರೆ ಅಚ್ಚರಿಯಿಲ್ಲ.

ಪಾಕಿಸ್ತಾನ ಸೆಮೀಸ್ ಪ್ರವೇಶಕ್ಕೆ ಇನ್ನೂ ಇದೆ ಚಾನ್ಸ್...! ಇನ್ಷ ಅಲ್ಲ

ಪಾಕ್ ಗೆ ಮುಳುವಾದ ವಿಂಡೀಸ್ ವಿರುದ್ಧದ ಸೋಲು:

ಪಾಕಿಸ್ತಾನ ತಾನಾಡಿದ ಮೊದಲ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಕೇವಲ 105 ರನ್‌ಗೆ ಆಲೌಟ್ ಆಗಿ ಹೀನಾಯ ಸೋಲು ಅನುಭವಿಸಿತ್ತು. ಆ ಸೋಲಿನಿಂದಾಗಿ ತಂಡದ ನೆಟ್ ರನ್‌ರೇಟ್ ಪಾತಾಳಕ್ಕೆ ಕುಸಿದಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಆಸ್ಟ್ರೇಲಿಯಾ, ಭಾರತ ವಿರುದ್ಧವೂ ಸೋಲುಂಡ ಪಾಕಿಸ್ತಾನ ನೆಟ್ ರನ್‌ರೇಟ್ ವಿಚಾರದಲ್ಲಿ ಹಿಂದೆ ಉಳಿಯಿತು.